- Wednesday
- September 16th, 2026
ಸುಳ್ಯ: ಪ್ರಜಾಧ್ವನಿ ಕರ್ನಾಟಕ, ಪ್ರಜ್ಞಾವಂತ ಭಾರತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಮತ್ತು ಸಂವಾದ ಕಾರ್ಯಕ್ರಮವು ಆ. 11 ರಂದು ಶಾರದಾ ಹೈ ಸ್ಕೂಲ್ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಗಣ್ಯ ಅತಿಥಿಗಳು ಜ್ಯೋತಿ...
ಸುಳ್ಯ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ.) ವತಿಯಿಂದ ಜ್ಞಾನದೀಪ ಗೌರವ ಶಿಕ್ಷಕರ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವು ಆ.11 ರಂದು ಸುಳ್ಯ ಯೋಜನಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ವೆಂಕಪ್ಪ ಗೌಡರವರು ಉದ್ಘಾಟಿಸಿ ಬಡವರ ಮಕ್ಕಳು ಮಾತ್ರ ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದು. ಅವರಿಗಾಗಿ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ...
“ಮಕ್ಕಳಿಗೆ ಅಂಕಗಳಿಗಿಂತ ಬದುಕುವ ವಿವೇಕ ಹಾಗೂ ಆತ್ಮವಿಶ್ವಾಸ ಮುಖ್ಯವಾಗಿದ್ದು, ಪೋಷಕರು ಮಕ್ಕಳನ್ನು ಕೇವಲ ಪರೀಕ್ಷೆಗೆ ಸಿದ್ಧಪಡಿಸದೆ ಜೀವನಕ್ಕೆ ಸಿದ್ಧಪಡಿಸಬೇಕು” ಎಂದು ತರಬೇತುದಾರ ಲೋಕೇಶ್ ಪೀರನಮನೆ ಹೇಳಿದರು. ಬಂಗ್ಲೆಗುಡ್ಡೆ ಸ.ಹಿ.ಪ್ರಾ ಶಾಲಾ ವಠಾರದಲ್ಲಿ ಆ.09ರಂದು ಕೊಲ್ಲಮೊಗ್ರು ಕೆ.ವಿ.ಜಿ ಪ್ರೌಢಶಾಲೆಯ 9ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರಿಗಾಗಿ ಆಯೋಜಿಸಲಾಗಿದ್ದ “ಅನುಬಂಧ” ಎಂಬ ವಿಶೇಷ ಸಮನ್ವಯ...
ಪುತ್ತೂರು: ಸೇನಾ ನೇಮಕಾತಿಗಳು ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯು ಅಗ್ನಿಪಥ್, ಪೊಲೀಸ್ ಕಾನ್ಸ್ಟೇಬಲ್ (PC) ಮತ್ತು ಅರಣ್ಯ ಇಲಾಖೆಯ ವಾಚರ್ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉಚಿತ ದೈಹಿಕ ಸಾಮರ್ಥ್ಯ/ಫಿಟ್ನೆಸ್ ತರಬೇತಿಯನ್ನು ಪ್ರಾರಂಭಿಸಿದೆ. ನೇಮಕಾತಿ ಪ್ರಕ್ರಿಯೆಯ ದೈಹಿಕ ಪರೀಕ್ಷೆಗೆ ಪೂರ್ವ ತಯಾರಿ ನಡೆಸುತ್ತಿರುವವರು ಹಾಗೂ ಭವಿಷ್ಯದ ಸಶಸ್ತ್ರ...
ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅದ್ಯಕ್ಷರಾದ ಎಸ್.ಸಂಶುದ್ದೀನ್ ಅವರು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ(ಬಿ) ಇದರ ಅದ್ಯಕ್ಷರಾದ ಡಾ। ರೇಣುಕಾ ಪ್ರಸಾದ್ ಮತ್ತು ಡಾ। ಜ್ಯೊತಿ ಆರ್ ಪ್ರಸಾದ್ ದಂಪತಿಗಳನ್ನು ಭೇಟಿಯಾಗಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಿತ್ಯಾನಂದ ಮುಂಡೋಡಿ, ಜ್ಞಾನೇಶ್, ಚಂದ್ರಶೇಖರ ನಂಜೆ, ಹರೀಶ್ ಬಂಟ್ವಾಳ್, ಕೆ.ಟಿ ವಿಶ್ವನಾಥ, ಶಾಫಿ ಕುತ್ತಮೊಟ್ಟೆ ಸೇರಿದಂತೆ...
ದೇವಚಳ್ಳ ಗ್ರಾಮದ ಮೆದು ನಿವಾಸಿಯಾದ ಮನ್ವಿತ್ ಎಂ.ಪಿ ಇವರು 2025-26 ನೇ ಸಾಲಿನ ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಯಲ್ಲಿ ಕಮ್ಮಾಜೆ ಶಾಲೆಗೆ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಪಿ.ಎಮ್.ಶ್ರೀ ಕೆ.ಪಿ.ಎಸ್ ಗುತ್ತಿಗಾರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪುರುಷೋತ್ತಮ.ಎಮ್ ಹಾಗೂ ಶ್ಯಾಮಲಾ ದಂಪತಿಗಳ ಪುತ್ರ.
ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆರ್.ಎಂ.ಎಸ್ ಪ್ರೌಢಶಾಲೆ ಸಂಪಾಜೆ ನಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ ಎ.ಜೆ 9ನೇ ಚತುರ್ಥ ಸ್ಥಾನ, ಪ್ರೀತನ್ ವಿನ್ಸ್ ಡಿ'ಸೋಜಾ 9ನೇ ಪಂಚಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಾಲಾ ಜೊತೆ ಕಾರ್ಯದರ್ಶಿ ರೆ.ಫಾ. ಆಲ್ವಿನ್...
ಆ.08ರಂದು ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ವತಿಯಿಂದ ನಡೆಸಿದ Codeyoung ಕಂಪೆನಿಯ ಸಂದರ್ಶನದಲ್ಲಿ 2027ನೇ ಸಾಲಿನ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಚಂದನ.ಪಿ, ದೃತಿಕ.ಬಿ, ಖುಷಿ ಕೆ.ಟಿ, ಕುಸುಮ.ಆರ್, ಮಾನ್ಯ ಪಿ.ವಿ, ಮನಸ್ವಿ ಕೊಚ್ಚಿ, ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸಫ ಫಾಥಿಮ ಒ.ಎಮ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ...
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ವತಿಯಿಂದ ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳಿಗೆ ಪ್ರೊಜೆಕ್ಟರ್ ಮತ್ತು ಟ್ರೈ ಪೋಲ್ ಸ್ಟ್ಯಾಂಡ್ ಸಹಿತ ಸ್ಕ್ರೀನ್ ನ್ನು ಕೊಡುಗೆಯಾಗಿ ನೀಡಿರುತ್ತಾರೆ. ವಿದ್ಯಾಬೋಧಿನೀ ಎಜುಕೇಶನ್ ಸೊಸೈಟಿ(ರಿ.) ಬಾಳಿಲ ಅಧ್ಯಕ್ಷರಾದ ರಾಧಾಕೃಷ್ಣರಾವ್.ಯು ಇವರ ಅಧ್ಯಕ್ಷತೆಯಲ್ಲಿ ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ...
ಸುಬ್ರಹ್ಮಣ್ಯ : ಕಡಬ ತಾಲೂಕಿನ ಕುಮಾರಸ್ವಾಮಿ ಪಿಯು ಕಾಲೇಜಿನ ವಿದ್ಯಾರ್ಥಿನಿ ನಿವೇದ್ಯಾ ಗಣೇಶ್ ಅವರು CUET ಪರೀಕ್ಷೆಯಲ್ಲಿ ಅರ್ಹತೆ ಪಡೆದು, ನವದೆಹಲಿಯಲ್ಲಿರುವ South Asian University(SAU)ಯ ಐದು ವರ್ಷದ Integrated BS-MS(Interdisciplinary Sciences) ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಈ ಕೋರ್ಸ್‌ನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಹಾಗೂ ಇತರೆ ವಿಜ್ಞಾನ ವಿಭಾಗಗಳ ಸಮಗ್ರ ಅಧ್ಯಯನದೊಂದಿಗೆ ಸಂಶೋಧನಾ...
Loading posts...
All posts loaded
No more posts
