- Saturday
- September 12th, 2026
ಕಲಾಮಾಯೆ ಸಾಂಸ್ಕೃತಿಕ ವಿದ್ಯಾ ಸಂಸ್ಥೆ(ರಿ.) ಏನೆಕಲ್ಲು ಇದರ ಆಶ್ರಯದಲ್ಲಿ ಐದನೇ ವರ್ಷದ ಕೃಷ್ಣೋತ್ಸವ- 2026 ಶ್ರೀಕೃಷ್ಣ ವೇಷ ಸ್ಪರ್ಧಾ ಕಾರ್ಯಕ್ರಮ ದಿನಾಂಕ 30 ಆಗಸ್ಟ್ 2026 ಆದಿತ್ಯವಾರ ಶ್ರೀ ಆದಿಶಕ್ತಿ ಭಜನಾ ಮಂದಿರ(ರಿ.) ಏನೆಕಲ್ ಸಭಾಭವನದಲ್ಲಿ ನಡೆಯಲಿದೆ. ಕಲಾಮಾಯೆ ಸಂಸ್ಥೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ತನ್ನ ಹತ್ತನೇ ವರ್ಷದ ದಶ ಸಂಭ್ರಮವನ್ನು ಆಚರಿಸಿಕೊಂಡಿದ್ದು ಇದೀಗ ಐದನೇ...
ಬೆಳ್ಳಾರೆಯ ಕೆಳಗಿನಪೇಟೆ ವೆಂಕಟರಮಣ ದೇವಸ್ಥಾನದ ಹತ್ತಿರವಿರುವ ನಾಗನಕಟ್ಟೆಯಲ್ಲಿ ನಾಗತಂಬಿಲ, ಹಾಲಾಭಿಷೇಕ, ಸಿಯಾಳಾಭಿಷೇಕ ಆ 17ರಂದು ನಡೆಯಿತು.ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ಆ.17ರಂದು ವಿಶೇಷ ಪೂಜೆ ನಡೆಯಿತು. ಅರ್ಚಕರಿಂದ ಶ್ರೀ ನಾಗ ದೇವರಿಗೆ ಹಾಲು ಹಾಗೂ ಸೀಯಾಳಾಭಿಷೇಕ ನೆರವೇರಿತು. ನೂರಾರು ಭಕ್ತಾಧಿಗಳು ಆಗಮಿಸಿ ಹಾಲು ಹಾಗೂ ಸೀಯಾಳವನ್ನು ಸೇವಾ ರೂಪದಲ್ಲಿ ಶ್ರೀ ದೇವರಿಗೆ ಅರ್ಪಿಸಿ ತೀರ್ಥ-ಪ್ರಸಾದವನ್ನು ಸ್ವೀಕರಿಸಿದರು. ದೇವಸ್ಥಾನದ ಸಿಬ್ಬಂದಿಗಳು ಸಹಕರಿಸಿದರು.
ಬೂಡು ಶ್ರೀ ಭಗವತಿ ದೇವಸ್ಥಾನದಲ್ಲಿ ಸೋಣ ತಿಂಗಳ ಸಂಕ್ರಮಣ ಪೂಜೆ ಆ. 17ರಂದು ನೆರವೇರಿತು. ಈ ಸಂದರ್ಭದಲ್ಲಿ ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಆಗಮಿಸಿ ಸೇವಾ ರೂಪದಲ್ಲಿ ದೇವರಿಗೆ ಕಾಣಿಕೆ ಅರ್ಪಿಸಿದರು. ನೂರಾರು ಭಕ್ತಾದಿಗಳು ಈ ಪೂಜೆಯಲ್ಲಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.
ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ದೇವರಮಾರು ನಾಗನಕಟ್ಟೆಯಲ್ಲಿ ನಾಗರಪಂಚಮಿ ಆಚರಣೆ ಶ್ರದ್ಧಾಭಕ್ತಿಯಿಂದ ನಡೆಯಿತು. ನಾಗರಪಂಚಮಿ ಅಂಗವಾಗಿ ನಾಗನಕಟ್ಟೆಯಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು. ನಾಗದೇವರಿಗೆ ಹಾಲು ಹಾಗೂ ಸಿಯಾಳಾಭಿಷೇಕ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.ನಾಗದೇವರ ಆರಾಧನೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಭಕ್ತಾದಿಗಳು ಶ್ರದ್ಧೆಯಿಂದ ಪಾಲ್ಗೊಂಡರು. ದೇವಸ್ಥಾನದ ಪ್ರಧಾನ...
ಕಂದ್ರಪ್ಪಾಡಿ ಶ್ರೀ ರಾಜ್ಯ ದೈವ ಮತ್ತು ಪುರುಷ ದೈವ ದೈವಸ್ಥಾನದ ನಾಗನಕಟ್ಟೆಯಲ್ಲಿ ಈ ದಿನ ನಾಗರಪಂಚಮಿಯ ಪ್ರಯುಕ್ತ ನಾಗದೇವರಿಗೆ ವಿಶೇಷ ಪೂಜೆ, ಹಾಲು, ಸೀಯಾಳ ಅಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಾಳಿಕಾ ಪ್ರಸಾದ್ ಮಂಡೋಡಿ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.
ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.17ರಂದು ನಾಗರ ಪಂಚಮಿ ಪ್ರಯುಕ್ತ ಆಶ್ಲೇಷ ಬಲಿ ಹಾಗೂ ನಾಗತಂಬಿಲ ನಡೆಯಿತು. ಬೆಳಿಗ್ಗೆ ಶ್ರೀ ದೇವಳದ ನಾಗ ಸನ್ನಿಧಿಯಲ್ಲಿ ನಾಗ ತಂಬಿಲ ಹಾಗೂ ಕ್ಷೀರಾಭಿಷೇಕ ನಡೆಯಲಿದ್ದು, ಬಳಿಕ ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಮಾಜಿ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ ಗೌಡ, ವ್ಯವಸ್ಥಾಪನಾ...
ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆ ಯಲ್ಲಿ ಆ.17ರಂದು ಹಾಲಿನ ಅಭಿಷೇಕ ಸಿಯಾಳ ಅಭಿಷೇಕ ಮಂಗಳಾರತಿಯು ಅರ್ಚಕ ಅಡೂರಿನ ಸತ್ಯ ನಾರಾಯಣ ಭಟ್ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ : ನಾಗಾರಾಧನೆಯ ಅತ್ಯಂತ ಪ್ರಸಿದ್ಧ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಕ್ಷೇತ್ರದ ಒಳಾಂಗಣದಲ್ಲಿರುವ ನಾಗ ದೇವರ ವಿಗ್ರಹಕ್ಕೆ ತನು ಅರ್ಪಿಸಲು ಮುಂಜಾನೆಯಿಂದಲೇ ಭಕ್ತರ ದಂಡು ಕ್ಷೇತ್ರದಲ್ಲಿ ಕಂಡು ಬಂದಿದೆ. ನಾಗರಪಂಚಮಿ ಹಿನ್ನಲೆಯಲ್ಲಿ ನಾಗನಿಗೆ ಹಾಲು ಮತ್ತು ಸೀಯಾಳವನ್ನು ಸಮರ್ಪಿಸುವ ಮೂಲಕ ಭಕ್ತರು ನಾಗನ ಕೃಪೆಗೆ ಪಾತ್ರರಾದರು. ನಾಗ ದೇವರಿಗೆ...
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಆ.17ರಂದು ನಾಗರಪಂಚಮಿ ಆಚರಣೆ ಮಾಡಲಾಯಿತು. ಆ ಪ್ರಯುಕ್ತ ಬೆಳಿಗ್ಗೆ ನಾಗತಂಬಿಲ ಸೇವೆ ಹಾಗೂ ಶ್ರೀ ಕ್ಷೇತ್ರದ ದೈವಗಳ ಚಾವಡಿಯಲ್ಲಿ ತಿಂಗಳ ಸಂಕ್ರಮಣ ಪೂಜೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು,...
Loading posts...
All posts loaded
No more posts
