Ad Widget

ಗುತ್ತಿಗಾರು : ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ“ಇಂದಿನ ಮಕ್ಕಳ ಭವಿಷ್ಯದ ನಿರ್ಮಾಣ ಯೋಗ್ಯ ಸಂಸ್ಕಾರದಿಂದಲೇ ಆಗಲಿ” : ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ

ಮಕ್ಕಳಿಗೆ ಮನೆಯ ವಾತಾವರಣದಲ್ಲಿ ಸಂಸ್ಕಾರದ ಅಭ್ಯಾಸಗಳೊಂದಿಗೆ ಪೂರಕ ವಿಚಾರಧಾರೆಗಳನ್ನು ಕಲಿಸುವ ನಿಟ್ಟಿನಲ್ಲಿ ಮಯೂರ ಬಾಲಾಲಯ ಇದರ ಆಶ್ರಯದಲ್ಲಿ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ರವರ ನೇತೃತ್ವದಲ್ಲಿ ಏ.12 ರಿಂದ ಏ.20 ರವರೆಗೆ 09 ದಿವಸಗಳ ಕಾಲ ನಡೆದ “ಮಕ್ಕಳ ಬೇಸಿಗೆ ಶಿಬಿರ” ಕಾರ್ಯಕ್ರಮದ ಸಮಾರೋಪ ಸಮಾರಂಭವು ಏ.20 ರಂದು ನಡೆಯಿತು.ಸಮಾರೋಪ ಸಮಾರಂಭದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ...

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಸಂಪನ್ನ

ಕಡಬ ತಾಲೂಕಿನ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏ.19 ರಿಂದ ಏ.20 ರವರೆಗೆ ವಾರ್ಷಿಕ ಜಾತ್ರೋತ್ಸವವು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.ಏ.19 ಶನಿವಾರದಂದು ಬೆಳಿಗ್ಗೆ ಭಕ್ತಾದಿಗಳಿಂದ ಹಸಿರು ಕಾಣಿಕೆ ಸಮರ್ಪಣೆ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ಪ್ರಾಸಾದ ಶುದ್ಧಿ, ವಾಸ್ತುಹೋಮ, ವಾಸ್ತುಬಲಿ, ಪುಣ್ಯಾಹ ವಾಚನ, ರಾತ್ರಿ ಸ್ಥಳೀಯರಿಂದ ಸಾಂಸ್ಕೃತಿಕ...
Ad Widget

60 ದಿನ ಪೂರೈಸಿದ ಭಾವ ತೀರ ಯಾನ – ಚಲನಚಿತ್ರ ವೀಕ್ಷಣೆಗೆ ಎ.22 ರಂದು ಬೆಳಿಗ್ಗೆ 11 ಗಂಟೆಗೆ ಕೊನೆಯ ಅವಕಾಶ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 60 ನೇ ದಿನ ಪೂರೈಸಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.22 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಚಿತ್ರದ ಕೊನೆಯ ಪ್ರದರ್ಶನ ಕಾಣಲಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡಬಲ್ಲ ಈ ಚಲನಚಿತ್ರ ವಿಕ್ಷೀಣೆ...

ಮರಕತ ದೇವಸ್ಥಾನದಲ್ಲಿ ಕೆ.ಎಸ್.ಎಸ್. ಕಾಲೇಜಿನ ರೆಡ್ ಕ್ರಾಸ್ ಘಟಕದಿಂದ ಶ್ರಮದಾನ

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ 22 ಮತ್ತು 23ರಂದು ಶ್ರೀ ದೇವಿಯ ಜಾತ್ರೋತ್ಸವ ಹಾಗೂ ದೈವಗಳ ನೇಮ ಉತ್ಸವ ನಡೆಯಲಿದೆ. ಇದರ ಅಂಗವಾಗಿ ಶ್ರಮದಾನ ನಡೆಯುತ್ತಿದ್ದು, ಎ.20 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಶ್ರಮದಾನ ನಡೆಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯವರು ಹಾಗೂ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಣ್ಯೇಶ್ವರ ಮಹಾವಿದ್ಯಾಲಯ ಆಂತರಿಕ ಗುಣಮಟ್ಟ ಇದರ ಸಹಯೋಗದೊಂದಿಗೆ ರಾಷ್ಟ್ರೀbಯ ಹಬ್ಬ ಆಚರಣೆ ಘಟಕದ ವತಿಯಿಂದ ದಿನಾಂಕ 17/04/25 ರಂದು ಅಂಬೇಡ್ಕರ್ ಜಯಂತಿಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ .ಟಿ ವಹಿಸಿದರು. ಅತಿಥಿಗಳು ಅಂಬೇಡ್ಕರ್ ರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನುಗೈದರು. ವಿದ್ಯಾರ್ಥಿಗಳು ಅಂಬೇಡ್ಕರ ಹಾಡುಗಳನ್ನು ಗೀತ ಗಾಯನದ ಮೂಲಕ...

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದಿಂದ ವಾಷ್ಠರ್ ಸಂಗೀತ ಸೌರಭ -2025 – ಸನ್ಮಾನ ಕಾರ್ಯಕ್ರಮ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ವಾಷ್ಠರ್ ಸಂಗೀತ ಸೌರಭ -2025 ಕಾರ್ಯಕ್ರಮವು ಇತ್ತೀಚಿಗೆ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನೆರವೇರಿತು. ವಾಷ್ಠರ್ ಸಂಗೀತ ಸೌರಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ...

ಗುತ್ತಿಗಾರು ಅಮರ ಸಂಜೀವಿನಿ ಒಕ್ಕೂಟಕ್ಕೆ ಜಿಲ್ಲಾಮಟ್ಟದ ಅತ್ಯುತ್ತಮ ಒಕ್ಕೂಟ ಪ್ರಶಸ್ತಿ

ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆಯ ಆಶ್ರಯದಲ್ಲಿ ಸಂಜೀವಿನಿ ಸ್ವ-ಸಹಾಯ ಗುಂಪುಗಳು ಉತ್ಪಾದಿಸುವ ಉತ್ಪನ್ನಗಳ ಜಿಲ್ಲಾ ಮಟ್ಟದ ಪ್ರದರ್ಶನ ಹಾಗೂ ಮಾರಾಟ ಮೇಳ ಮಂಗಳೂರು ತಾಲೂಕು ಪಂಚಾಯತ್ ಆವರಣದಲ್ಲಿ ಶನಿವಾರ ನಡೆಯಿತು. ಜಿಲ್ಲೆಯ ವಿವಿಧ ಸಂಜೀವಿನಿ ಒಕ್ಕೂಟಗಳ ಕಾರ್ಯಚಟುವಟಿಕೆಯನ್ನು ಗುರುತಿಸಿ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಗಿದ್ದು,...

59ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ – ಎ.20 ರಂದು ಬೆಳಿಗ್ಗೆ 11ಗಂಟೆಗೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 9ನೇ ವಾರದಲ್ಲಿ ಮುನ್ನಡೆಯುತ್ತಿದ್ದು, 59 ನೇ ದಿನಕ್ಕೆ ಕಾಲಿರಿಸಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.20, ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಮೆಟ್ಟಿನಡ್ಕ : ಕಾಂಕ್ರೀಟ್ ರಸ್ತೆ ಕಳಪೆ – ಸಾರ್ವಜನಿಕರ ಆಕ್ರೋಶ – ಗುತ್ತಿಗೆದಾರರಿಂದ ಸರಿಪಡಿಸುವ ಭರವಸೆ

ಗುತ್ತಿಗಾರು ಮೆಟ್ಟಿನಡ್ಕ ಕಂದ್ರಪ್ಪಾಡಿ ದೇವ ರಸ್ತೆಯಲ್ಲಿ ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಎರಡು ಕಡೆ ಕಳೆದ ಅಕ್ಟೋಬರ್ ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಇದೀಗ ಮೆಟ್ಟಿನಡ್ಕ ಬಳಿ ನಿರ್ಮಿಸಿದ್ದ ರಸ್ತೆಯಲ್ಲಿ ಕಾಂಕ್ರೀಟ್ ನಿಂದ ಜಲ್ಲಿ ಮೇಲೆದ್ದು ಬರುತ್ತಿದ್ದು ಕಳಪೆಯಾಗಿದೆ. ಇದೀಗ ರಸ್ತೆ ಕಳಪೆಯಾಗಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಸರಿಪಡಿಸಲು ಆಗ್ರಹಿಸಿದ್ದಾರೆ. ಈ ಬಗ್ಗೆ...

58ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ – ಎ.19 ರಂದು ಬೆಳಿಗ್ಗೆ 11ಗಂಟೆಗೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 9ನೇ ವಾರದಲ್ಲಿ ಮುನ್ನಡೆಯುತ್ತಿದ್ದು, 58 ನೇ ದಿನಕ್ಕೆ ಕಾಲಿರಿಸಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.19, ಶನಿವಾರ ಬೆಳಿಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.
Loading posts...

All posts loaded

No more posts

error: Content is protected !!