- Saturday
- March 7th, 2026
ಲಾಕ್ ಡೌನ್ ಅವಧಿ ಯನ್ನು ಸದುಪಯೋಗ ಪಡಿಸಿಕೊಂಡ ಮುಂಡೋಡಿಯ ಯುವ ತರುಣರು ಒಂದು ಉತ್ತಮ ಕಿರುಚಿತ್ರ ರಚಿಸಿದ್ದು ಇದೀಗ ಬಿಡುಗಡೆಗೊಂಡಿದೆ. ಇಲ್ಲೂ ಬಿಡುಗಡೆ ಕಾರ್ಯಕ್ರಮ ವನ್ನು ವಿಶೇಷವಾಗಿ ನಡೆಸಿದ್ದಾರೆ. ತಮ್ಮ ಕೃಷಿ ಚಟುವಟಿಕೆಯ ಮಧ್ಯೆಯೇ ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ತಮ್ಮ ತಮ್ಮ ಮನೆಯಿಂದಲೇ ಬಿಡುಗಡೆಗೊಳಿಸಿ ಯೂಟ್ಯೂಬ್ ನಲ್ಲಿ ಚಾಲನೆ ನೀಡಲಿದ್ದಾರೆ. ಇದರಿಂದ ಸಮಯ ಉಳಿತಾಯ, ಅಂತರ...
ಸುಳ್ಯ: ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಹಾಗೂ ಸ್ಥಳೀಯ ಪರಿಸರದಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಸುಳ್ಯದ ಪೊಲೀಸ್ ಠಾಣೆಗೆ ಮುನ್ನೆಚ್ಚರಿಕಾ ದೃಷ್ಟಿಯಿಂದ ಸಾರ್ವಜನಿಕರ ಒಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಠಾಣೆಯ ಹೊರಭಾಗದಲ್ಲಿ ದೂರು ದಾಖಲೆಗೆ ಅಗತ್ಯವಿರುವ ಒಂದು ಮೇಜನ್ನು ಇರಿಸಿ ಸಾರ್ವಜನಿಕರಿಗೆ ಅನುಕೂಲಕ್ಕೆ ಅನುವು ಮಾಡಿಕೊಡಲಾಗಿದೆ.
ವಿದ್ಯುತ್ ಬಿಲ್ಲಿನಲ್ಲಿ ಉಂಟಾದ ಗೊಂದಲದ ಬಗ್ಗೆ ಮೆಸ್ಕಾಂ ಅಧಿಕಾರಿಗಳು ನೀಡಿದ ಸ್ಪಷ್ಟನೆ ಮತ್ತು ಈ ಹಿಂದೆ ಸರ್ಕಾರದ ವತಿಯಿಂದ ಮೂರು ತಿಂಗಳ ಬಿಲ್ ರಿಯಾಯಿತಿ ನೀಡದಿರುವುದರ ಬಗ್ಗೆ ಆಮ್ ಆದ್ಮಿ ಪಕ್ಷದಿಂದ ಹೋರಾಟಕ್ಕೆ ಚಿಂತನೆಕರೋನಾ ವೈರಸ್ಸಿನ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಜನತೆಗೆ ರಾಜ್ಯ ಸರ್ಕಾರವು ಕಳೆದ ತಿಂಗಳ ಹಿಂದೆ ವಿದ್ಯುತ್ ಬಿಲ್ಲಿನಲ್ಲಿ ರಿಯಾಯಿತಿ ನೀಡುವುದಾಗಿ ಘೋಷಿಸಿದರು. ಆದರೆ...
ಸರ್ವೆ ಹಾಸ್ಟೆಲ್ ನಲ್ಲಿ ಕಾರಂಟೈನ್ ನಲ್ಲಿದ್ದ ವ್ಯಕ್ತಿಗಳಲ್ಲಿ ಕೊರೊನ ಸೋಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಮುಂಬೈ ನಿಂದ ಕೆಲ ದಿನಗಳ ಹಿಂದೆ ಬಂದ ಇವರನ್ನು ಹಾಸ್ಟೆಲ್ ನಲ್ಲಿ ಕಾರಂಟೈನ್ ಮಾಡಲಾಗಿತ್ತು.ಒಂದೇ ಕುಟುಂಬದಲ್ಲಿ ಸೋಂಕು ದೃಡಪಟ್ಟಿದ್ದರಿಂದ ಗಂಡ ಹೆಂಡತಿ ಮತ್ತು ಮಗಳನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಲಾಕ್ ಡೌನ್ ವೇಳೆ ಕೆಲವರು ಸಂಕಷ್ಟದಲ್ಲಿ ಕೆಲವರು ಕೃಷಿ ಕೆಲಸ ಮಾಡಿ ಹಾಯಾಗಿದ್ದವರು ಇದ್ದಾರೆ. ಕೃಷಿಗೆ ಅವಕಾಶವಿದ್ದ ಹಲವರು ಸಮಯ ದುರುಪಯೋಗ ಮಾಡಿಲ್ಲ. ತರಕಾರಿ ಕೃಷಿ ಮಾಡಿ ತಮಗೆ ಬೇಕಾದ ವಸ್ತು ಬೆಳೆದರೂ ಇದ್ದಾರೆ.ತರಕಾರಿಗೆ ಪೇಟೆಗೆ ಹೋಗದೇ ಸಮಯ ಹಣ ಆರೋಗ್ಯ ಕಾಪಾಡಿದವರೂ ಇದ್ದಾರೆ. ಕೆಲವು ವಿದ್ಯಾರ್ಥಿಗಳು ಲಾಕ್ ಡೌನ್ ರಜೆಯ ಅವಧಿಯಲ್ಲಿ ಮನೆಯವರಿಗೆ ಸಹಕಾರ...
ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಭವ್ಯ ದೇವಾಲಯದ ನಿರ್ಮಾಣವು ಇಂದಿನಿಂದ (ಮೇ 26) ಅಧಿಕೃತವಾಗಿ ಪ್ರಾರಂಭವಾಗಿದೆ ಎಂದುರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಘೋಷಿಸಿದ್ದಾರೆ. ಮಹಂತ್ ನೃತ್ಯಗೋಪಾಲ್ ದಾಸ್ ಸದ್ಯ ರಾಮ್ಜನನ ಲಲ್ಲಾ ವಿಗ್ರಹವಿರುವ ಹೊಸದಾಗಿ ನಿರ್ಮಾಣವಾದ ತಾತ್ಕಾಲಿಕ ದೇವಾಲಯದ ರಚನೆಯಲ್ಲಿ ಪೂಜೆ ನಡೆಸಿದ ನಂತರ ಮಹಂತ್ ಈ ಘೋಷಣೆ ಮಾಡಿದ್ದಾರೆ....
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಅವರು, ಜೂ.7 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದಾರೆ. ಇದೇ ಸಂದರ್ಭ ಏಕ ಕಾಲದಲ್ಲಿ ರಾಜ್ಯದ ಸುಮಾರು 6,500 ಪ್ರದೇಶಗಳಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಯ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ವೀಕ್ಷಕ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ....
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಸ್ವತಃ ಹೋಮ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಮೇ.25ರಂದು ಬೆಳಗ್ಗೆ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಸಚಿವರು ಒಂದು ವಾರಗಳ ಕಾಲ ಸ್ವತಃ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ ಎಂದು ತಿಳಿದು ಬಂದಿದೆ.ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ನಿಟ್ಟಿನಲ್ಲಿ ಮಹತ್ವದ...
ಜಯನಗರ ನಿವಾಸಿ ಹಸೈನಾರ್ ಜಯನಗರ ಹಾಗೂ ಸಪಿಯ ದಂಪತಿಗಳ ಪುತ್ರ ಮೋಹಮ್ಮದ್ ಶಫೀಕ್ ರವರ ಹದಿಮೂರನೆಯ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಜಯನಗರ ಮನೆಯಲ್ಲಿ ಇಂದು (ಮೇ ೨೫) ಆಚರಿಸಲಾಯಿತು.
Loading posts...
All posts loaded
No more posts
