- Sunday
- March 8th, 2026
ಸುಳ್ಯ ನಗರ ಪಂಚಾಯತ್ ಅವರಣದಲ್ಲಿ ಕಳೆದ ಒಂದು ವರ್ಷಗಳಿಂದ ಕಸದ ರಾಶಿಯ ಪರ್ವತವೇ ಎದ್ದು ನಿಂತಿದ್ದು ಇದರ ವರ್ಗಾವಣೆಗಾಗಿ ಸಾರ್ವಜನಿಕರಿಂದ ಹಲವಾರು ರೀತಿಯ ಪ್ರತಿಭಟನೆಗಳು ಪತ್ರಿಕೆಗಳಲ್ಲಿ ಬೇಕಾದಷ್ಟು ಲೇಖನಗಳು ಪ್ರಕಟಗೊಳ್ಳುತ್ತಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳ ಕಣ್ಣು ತೆರೆಸುವಲ್ಲಿ ಇವೆಲ್ಲವೂ ವಿಫಲವಾಗಿದೆ .ಇದರ ಮಧ್ಯೆ ಜೂನ್ 17ರಂದು ನಗರ ಪಂಚಾಯತಿಯ ಕಾಂಗ್ರೆಸ್ ಮತ್ತು ಸ್ವತಂತ್ರ ಪಕ್ಷದಿಂದ ಆಯ್ಕೆಗೊಂಡ...
ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಬಿ ಆವರಿಗೆ ಹೆಡ್ ಕಾನ್ ಸ್ಟೇಬಲ್ ಆಗಿ ಮುಂಭಡ್ತಿ ದೊರೆತು ಪುತ್ತೂರು ಮಹಿಳಾ ಠಾಣೆಗೆ ವರ್ಗಾಣೆಗೊಂಡ ಹಿನ್ನಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು . ಪಿ.ಎಸ್.ಐ ಹರೀಶ್ ಕುಮಾರ್ , ಎಸ್.ಐ ರತ್ನಕುಮಾರ್ ಸನ್ಮಾನಿಸಿದರು . ಈ ಸಂದರ್ಭದಲ್ಲಿ ಎ.ಎಸ್.ಐ ಶಿವರಾಮ್...
ಕಳೆದ ಎರಡು ವರ್ಷಗಳಿಂದ ಸುಳ್ಯದ ಶಾಂತಿನಗರ ಪರಿಸರದಲ್ಲಿ ಸುಂದರ ಹಾಗೂ ಲಕ್ಷ್ಮಿ ಎಂಬುವರ ಮನೆಯೊಂದು ಸಂಪೂರ್ಣವಾಗಿ ಗೋಡೆಗಳು ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿ ನಿಂತಿದ್ದವು. ಇದೇ ಮನೆಯಲ್ಲಿ ಸುಂದರ ಹಾಗೂ ಲಕ್ಷ್ಮಿ ಎಂಬ ದಂಪತಿಗಳು ವಾಸಿಸುತ್ತಿದ್ದು ಸುಂದರ ತನ್ನ ಕಾಲಿನ ಅನಾರೋಗ್ಯದಿಂದ ಸಂಪೂರ್ಣವಾಗಿ ಹಾಸಿಗೆಯಲ್ಲಿ ಇದ್ದರು. ಹೆಂಡತಿ ಲಕ್ಷ್ಮಿ ಬೀಡಿಕಟ್ಟಿ ತಮ್ಮ ಕುಟುಂಬದ ಜೀವನವನ್ನು ಸಾಗಿಸುತ್ತಿದ್ದರು....
ಭಾರತ ಚೀನಾ ಗಡಿಯ ಭಾಗದಲ್ಲಿ ಚೀನಾ ಸೈನಿಕರು ನಮ್ಮ ಗಡಿ ದಾಟಿ ಬಂದಾಗ ನಮ್ಮ ಸೈನಿಕರು ಅದಕ್ಕೆ ಅವಕಾಶ ಕೊಡದೆ ಇದ್ದಾಗ ಚಕಮಕಿ ನಡೆದು ನಮ್ಮ ದೇಶದ 20 ಸೈನಿಕರು ನಿಧನ ಹೊಂದಿರುವುದು ಬೇಸರದ ಸಂಗತಿ . ಅವರ ಅತ್ಮಕ್ಕೆ ಶಾಂತಿ ಸಿಗಲಿ . ಚೀನಾದ ದುರಹಂಕಾರವನ್ನು ಕೇಂದ್ರ ಸರಕಾರವು ಕೂಡಲೆ ಮಟ್ಟ ಹಾಕಬೇಕು ....
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮದ ಪೂರ್ವ ತಯಾರಿ ಕುರಿತು ಬೆಳ್ಳಾರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸಭೆ ಇಂದು ಬೆಳ್ಳಾರೆ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಯವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ವೀಕ್ಷಕರಾದ ಕೃಷ್ಣಪ್ಪ ಪಿ,...
ಸುಳ್ಯ ನಗರ ಪಂಚಾಯತ್ ತ್ಯಾಜ್ಯವಿಲೇವಾರಿ ಬಾಬ್ತು ಸಂಗ್ರಹಿಸುವ ಮೊತ್ತಕ್ಕೆ ಆರ್ ಟಿಐ ಕಾರ್ಯಕರ್ತ ಡಿ.ಯಂ ಶಾರಿಖ್ ತೀವ್ರ ಅಸಮಾಧಾನಗೊಂಡು ಈಗ ಸಾಂಕ್ರಾಮಿಕ ರೋಗ ಹರಡುತ್ತಿದ್ದು ವರ್ತಕರು ಯಾವುದೇ ತರದ ವ್ಯಾಪಾರ-ವಹಿವಾಟು ಕಳೆದ ಎಪ್ರಿಲ್ ತಿಂಗಳಿನಿಂದ ಇಲ್ಲದೆ ಕಂಗಾಲಾಗಿರುವ ಸಂದರ್ಭದಲ್ಲಿ ವರ್ತಕರಿಂದ ತ್ಯಾಜ್ಯ ವಿಲೇವಾರಿ ಬಗ್ಗೆ ಸಂಗ್ರಹಿಸುವ ಮೊತ್ತ ಮತ್ತುದ ಖಂಡನೀಯ. ವರ್ತಕರಿಗೆ ಈ ಸಂದರ್ಭದಲ್ಲಿ ಗಾಯದ...
ಸರ್ಕಾರದ ಆದೇಶದಂತೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ನಡೆಯುವ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳ ಪ್ರಯಾಣದ ಅನುಕೂಲಕ್ಕಾಗಿ ಕ.ರಾ.ರ.ಸಾ.ನಿಗಮವು ಸುಳ್ಯ , ಸುಬ್ರಹ್ಮಣ್ಯ , ಬೆಳ್ಳಾರೆ ವಲಯಗಳಲ್ಲಿ ಕಲ್ಪಿಸಲಾಗುವ ಬಸ್ಸುಗಳ ವಿವರಗಳನ್ನು ನೀಡಿದೆ.
ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಭಾರತೀಯ ಕರ್ನಲ್ ಮತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಚೀನಾದ ಈ ಕುಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಕೇಂದ್ರ ಸರಕಾರವು ದೇಶದ ಗಡಿಗಳನ್ನು ಭದ್ರಪಡಿಸಲು ಚಾಣಕ್ಯನೀತಿ ಮತ್ತು ಗೆರಿಲ್ಲಾಯುದ್ಧತಂತ್ರದ ಮೂಲಕ ಚೀನಾಗೆ ಕಠೋರವಾದ ಪ್ರತ್ಯುತ್ತರ ನೀಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು...
ಕನಕಮಜಲು ಗ್ರಾಮ ಪಂಚಾಯತಿ ಮತ್ತು ಯುವಜನ ವಿಕಾಸ ಕೇಂದ್ರ ಯುವಕಮಂಡಲ ಕನಕಮಜಲು ಇದರ ಜಂಟೀ ಆಶ್ರಯದಲ್ಲಿ ಹಣ್ಣಿನ ಗಿಡಗಳು ಮತ್ತು ಹಲಸಿನ ಹಣ್ಣಿನ ಖಾದ್ಯಗಳ ಕುರಿತು ಮಾಹಿತಿ ಶಿಬಿರವು ಜೂ.16ರಂದು ಜರುಗಿತು. ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀಧರ ಕುತ್ಯಾಳ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ನಮ್ಮ ಪರಿಸರದಲ್ಲಿ...
ಪ್ರಸ್ತುತ ಸಂದಿಗ್ಧ ಘಟ್ಟದಲ್ಲಿ ಮದ್ರಸ ಶಿಕ್ಷಣ ಮೊಟಕುಗೊಂಡದ್ದನ್ನು ಪರಿಹರಿಸಲು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮತ್ತು ಎಸ್ ಕೆ ಐ ಎಂ ವಿ ಬಿ ನಿರ್ದೇಶಿಸಿದ ಸಮಸ್ತ ಆನ್ಲೈನ್ ತರಗತಿಯನ್ನು ಯಶಸ್ವಿಗೊಳಿಸಲು ಸುಳ್ಯ ರೇಂಜ್ ಮದ್ರಸ ಮೇನೇಜ್ಮೆಂಟ್ ಅಸೋಸಿಯೇಶನ್ ಕರೆ ನೀಡಿತು. ಸುಳ್ಯದ ಪರಿವಾರಕಾನದ ಗ್ರಾಂಡ್ ಪರಿವಾರ್ ಹಾಲ್'ನಲ್ಲಿ ನಡೆದ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮದ...
Loading posts...
All posts loaded
No more posts
