- Monday
- March 9th, 2026
33 ಕೆ.ವಿ ಪುತ್ತೂರು - ಕಡಬ ಏಕಮಾರ್ಗವನ್ನು ದ್ವಿ ಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಜೂ 23 ಮತ್ತು ಜೂ 30 ರಂದು ಪೂರ್ವಾಹ್ನ 10 ರಿಂದ ಅಪರಾಹ್ನ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33 / 11 ಕೆ.ವಿ ಕಡಬ , ನೆಲ್ಯಾಡಿ ಮತ್ತು ಸುಬ್ರಹ್ಮಣ್ಯ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಎಲ್ಲಾ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಗರಿಷ್ಠ ಸಾಧನೆ ತೋರಿದ ತಾಲೂಕಿನ ಮೂರು ಜನ ವಲಯ ಮೇಲ್ವಿಚಾರಕರಿಗೆ ಯೋಜನೆಯ ವತಿಯಿಂದ ಪ್ರಶಸ್ತಿ ಲಭಿಸಿದೆ. ಮುರಳೀಧರ ಬೆಳ್ಳಾರೆ ವಲಯ ಮೇಲ್ವಿಚಾರಕ ಮುರಳೀಧರರವರು ಉಳಿತಾಯ ಸಂಗ್ರಹಣೆ, ಮಾಸಿಕ ಪ್ರಗತಿ ನಿರ್ವಹಣೆ, ಸಂಘ ರಚನೆ, ಹೊರಬಾಕಿ ಸಾಲ ನೀಡಿಕೆ ಹಾಗೂ ವಸೂಲಾತಿ ಸೇರಿದಂತೆ ಯೋಜನೆಯ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ...
ಮುಂಬೈನಿಂದ ಗ್ರಾಮಕ್ಕೆ ಬಂದಿದ್ದ ಮಹಿಳೆ ಕೊರೊನಸೋಂಕು ಹಿನ್ನೆಲೆಯಲ್ಲಿ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮುಂಬೈನಿಂದ ಬಂದಿದ್ದ ಮಹಿಳೆ 14 ದಿನ ಕೊರಂಟೈನ್ ನಲ್ಲಿದ್ದು ಕೊಡಗಿಗೆ ಬಂದಿದ್ದರು. ಮುನ್ನೆಚ್ಚರಿಕೆಯಾಗಿ ಆರೋಗ್ಯ ಇಲಾಖೆಯಿಂದ ತಪಾಸಣೆ ಕೈಗೊಂಡಾಗ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿಆಲೂರು ಸಿದ್ದಾಪುರ ಗ್ರಾಮ ಸೀಲ್ ಡೌನ್ ಗೊಳ್ಳಲಿದೆ. ಗ್ರಾಮಸ್ಥರ ಆರೋಗ್ಯ ತಪಾಸಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಸೋಮವಾರ...
ಬೆಳ್ಳಾರೆಗೆ 108 ಅಂಬ್ಯುಲೆನ್ಸ್ ವಾಹನ ಇಲ್ಲದೇ ಒಂದು ವಾರದಿಂದ ಸಮಸ್ಯೆಯಾಗಿತ್ತು. ಈ ಬಗ್ಗೆ ಅಮರ ಸುದ್ದಿ ವರದಿ ಮಾಡಿತ್ತು. ಬಳಿಕ ಎಚ್ಚೆತ್ತ ಇಲಾಖೆ ಬೆಳ್ಳಾರೆಗೆ 108 ವಾಹನ ಹಾಗೂ ಸಿಬ್ಬಂದಿ ವ್ಯವಸ್ಥೆ ಮಾಡಿದೆ. 108 ಸಿಬ್ಬಂದಿಯಾಗಿ ಮುಪ್ಪೇರಿಯ ಗ್ರಾಮದ ಮುಗುಪ್ಪು ಮನೆ ದೀಪ್ತಿರಾಜ್ ರವರ ಪತ್ನಿ ದಕ್ಷಿಣಿ ಇವರನ್ನು ನೇಮಕ ಮಾಡಲಾಗಿದೆ. ಇವರು 3 ವರ್ಷ...
ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ನೇತೃತ್ವದಲ್ಲಿ ಮಹೋತ್ಸವ ಕಾರ್ಯಕ್ರಮ ಮಸೀದಿ ವಠಾರದಲ್ಲಿ ಜೂ.೨೨ ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆಯವರು ಪ್ರತಿವರ್ಷ ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರಯತ್ನಿಸಬೇಕೆಂದರು. ಸದರ್ ಉಸ್ತಾದ್ ಮಹಮೂದ್ ಸಖಾಫಿ ದುವಾ ನೆರವೇರಿಸಿದರು. ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ...
ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿ ದಿನೇ ದಿನೇ ಏರಿಕೆಯಾಗುತ್ತಿದೆ. ಇಂತಹ ಭೀತಿಯ ನಡುವೆಯೂ ಶಾಲಾ-ಕಾಲೇಜುಗಳು ಆಗಸ್ಟ್ ನಿಂದ ಆರಂಭಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದ್ರೇ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಶೇ.80ರಷ್ಟು ಪೋಷಕರು ಸದ್ಯಕ್ಕೆ ಶಾಲಾ-ಕಾಲೇಜು ಆರಂಭಿಸೋದು ಬೇಡ ಎಂಬುದಾಗಿ ಬಲವಾಗಿ ಅಭಿಪ್ರಾಯ ಪಟ್ಟ ಹಿನ್ನಲೆಯಲ್ಲಿ ರಾಜ್ಯದಲ್ಲಿ ದಸರಾ ರಜೆಯವರೆಗೂ ಶಾಲಾ-ಕಾಲೇಜು ಆರಂಭವಾಗುವುದಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಸದ್ಯದಲ್ಲಿಯೇ...
ಸುಳ್ಯನಗರ ಪಂಚಾಯತ್ ನ ಕೆರೆಮೂಲೆ ವಾರ್ಡಿನಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ವಾರ್ಡಿನ ಸದಸ್ಯರಾದ ಎಂ.ವೆಂಕಪ್ಪ ಗೌಡ ಅವರು ಇಂದು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್, ಗುತ್ತಿಗೆದಾರ ನಿತ್ಯಾನಂದ ಆಲೆಟ್ಟಿ, ಸ್ಥಳೀಯರಾದ ಮಸೂದ್, ನೌಶಾದ್ ಬಾರ್ಪಣೆ, ಕುಮಾರ್ ನಾಗಪಟ್ಟಣ, ಪ್ರತೀಶ್ ಸೋಣಂಗೇರಿ ಮತ್ತಿತರರು ಉಪಸ್ಥಿತರಿದ್ದರು.
ಕೊಡಗು ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮಡಿಕೇರಿ ತಾಲೂಕಿನ ಒಬ್ಬರಿಗೆ ಮತ್ತು ಮಹಾರಾಷ್ಟ್ರದಿಂದ ಆಗಮಿಸಿದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ 280 ರೋಗಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಪರೀಕ್ಷೆಯ ನಂತರ ಇಬ್ಬರಲ್ಲಿ ಸೋಂಕು ರುವುದಾಗಿ ತಿಳಿದುಬಂದಿದೆ...
ಕೋರೋನ ಸೋಂಕಿತ ಇದ್ದ ಶನಿವಾರಸಂತೆ ಪಕ್ಕದ ಶಿರಂಗಾಲ ಗ್ರಾಮ ಸಂಪೂರ್ಣ ಸೀಲ್ ಡೌನ್.ಗ್ರಾಮದ 120 ಮನೆ ವಾಸಿಗಳಿಗೆ ಆರೋಗ್ಯ ತಪಾಸಣೆ .ಗ್ರಾಮಕ್ಕೆ ತೆರಳುವ ರಸ್ತೆಗಳನ್ನು ಬಂದ್ ಮಾಡಿದ ತಹಸಿಲ್ದಾರ್ .ಪ್ರಸ್ತುತ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಶಿರಂಗಾಲ ಗ್ರಾಮದ ಸೋಂಕಿತ ಹಾಗೂ ಆತನ ಕುಟುಂಬದ ನಾಲ್ವರಿಗೆ ಚಿಕಿತ್ಸೆ.ತನ್ನ ಕುಟುಂಬದ ನಾಲ್ವರನ್ನು ಒಂದೇ ಕಾರಿನಲ್ಲಿ ಕರೆದುಕೊಂಡು ಮಡಿಕೇರಿ ಆಸ್ಪತ್ರೆಗೆ...
ಬೆಳ್ಳಾರೆ ಶ್ರೀ ಲಕ್ಷ್ಮಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ವತಿಯಿಂದ ಬೆಳ್ಳಾರೆ ಪ್ರಾ ಆರೋಗ್ಯ ಕೇಂದ್ರದ ಹಳೆ ಕಟ್ಟಡ ಪರಿಸರದ ಸ್ವಚ್ಚತಾ ಕಾರ್ಯ ಜೂ.22ರಂದು ನಡೆಯಿತು.ಪ್ರಾ.ಆ.ಕೇಂದ್ರಕ್ಕೆ 108 ಸೇವೆಗೆ ನೂತನ ಸಿಬ್ಬಂದಿ ಆಗಮನದ ಹಿನ್ನೆಲೆಯಲ್ಲಿ ಸ್ವಚ್ಚತ ಕಾರ್ಯ ಕೈಗೊಳ್ಳಲಾಯಿತು. ಈ ಕಾರ್ಯದಲ್ಲಿ ಅಧ್ಯಕ್ಷೆ ಶ್ರೀಮತಿ ಗೀತಾಪ್ರೇಮ್, ಕಾರ್ಯದರ್ಶಿ ಕವಿತ, ಎಂ.ಬಿ.ಕೆ,ಎಲ್.ಸಿ.ಆರ್.ಸಿ, ಮತ್ತು ಸಂಘದ ಸದಸ್ಯರು...
Loading posts...
All posts loaded
No more posts
