Ad Widget

ಮೂಡಬಿದ್ರೆ ಎರಡು ತಂಡಗಳ ಮಧ್ಯೆ ಮಾರಾಮಾರಿ ಸುಳ್ಯ ಮೂಲದ ಓರ್ವ ಸಾವು

ಅಲೆಕ್ಕಾಡಿ ಕುಕ್ಕಟ್ಟೆ ಅಬ್ದುಲ್ ಲತೀಫ್ ಅವರು ಮೂಡಬಿದರೆಯಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.ಇವರು ಮೂಡಬಿದರೆಯಲ್ಲಿ ಜ್ಯುವೆಲ್ಲರಿ ಅಂಗಡಿಯನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.ಮುಲ್ಕಿ ವಿಜಯ ಬ್ಯಾಂಕ್ ಹತ್ತಿರ ಎರಡು ತಂಡಗಳ ನಡುವೆ ನಡೆದ ಮಾರಾಮಾರಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ ಘಟನೆಗೆ ಸಂಬಂಧಿಸಿದಂತೆ ಇನ್ನು ಇಬ್ಬರು ತೀವ್ರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಮರ ಸುದ್ದಿ ವೆಬ್ಸೈಟ್ ವರದಿಗೆ ಸ್ಪಂದಿಸಿದ ಬಿಎಸ್ ಎನ್ ಎಲ್

ಕೊಲ್ಲಮೊಗ್ರ ಬಿಎಸ್ ಎನ್ ಎಲ್ ಟವರ್ ಬಗ್ಗೆ ಕಳೆದ ವಾರ ಅಮರ ಸುದ್ದಿ ವೆಬ್ಸೈಟ್ ವರದಿ ಪ್ರಕಟಿಸಿ ನಿದ್ದೆಯಲ್ಲಿದ್ದ ಅಧಿಕಾರಿಗಳನ್ನು ಎಚ್ಚರಿಸಿತ್ತು. ಈ ಬಗ್ಗೆ ಯುವ ಮುಂದಾಳು ಉದಯ ಶಿವಾಲ ಪ್ರಧಾನಮಂತ್ರಿ ಕಛೇರಿ ಗೆ ಪತ್ರ ಬರೆದು ಒತ್ತಾಯಿಸಿದ್ದು ಅಲ್ಲದೇ ಎಲ್ಲಾ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಬೆನ್ನು ಬಿಡದೇ ಸತತ ಪ್ರಯತ್ನಿಸಿದ್ದರು. ದಿನ ಮುಂದೂಡುತ್ತಿದ್ದ ಅಧಿಕಾರಿಗಳು...
Ad Widget

ಪೈಲಾರು ವಿಶ್ವ ಪರಿಸರ ದಿನಾಚರಣೆ

ಫ್ರೆಂಡ್ಸ್ ಕ್ಲಬ್ ಪೈಲಾರು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಯನ್ನುಆಚರಿಸಲಾಯಿತು.ಮನೆ-ಮನೆಯಲ್ಲಿ ಗಿಡ ನೆಡುವುದರ ಮೂಲಕ ವೃಕ್ಷಾರೋಹಣ-2020 ನ್ನು ಆರಂಭಿಸಲಾಯಿತು. ನಿವೃತ್ತ ಎ ಎಸ್ ಐ ಕೇಶವ ಅರಂಬೂರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಗೌರವ ಸಲಹೆಗಾರರಾದ ಮುರಾರಿ ಕಡಪಳ,ಆನಂದ ಕಂಜರ್ಪಣೆ,ಪುಷ್ಪರಾಜ್ ಗುಡ್ಡೆಮನೆ,ತೇಜಸ್ವಿ...

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಟೌನ್: ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ SKSSF ಸುಳ್ಯ ಟೌನ್ ಶಾಖೆಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮ ಅರಂಬೂರು ಮದ್ರಸ ವಠಾರದಲ್ಲಿ ನಡೆಯಿತು.ಸುಳ್ಯ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಜಾಕ್ ಕರಾವಳಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸುಳ್ಯ ಟೌನ್ ಅಧ್ಯಕ್ಷ ಆಶಿಕ್ ಸುಳ್ಯ, ಸುಳ್ಯ ಮದ್ರಸ ಮೇನೇಜ್ಮೆಂಟ್ ಪ್ರ. ಕಾರ್ಯದರ್ಶಿ ಬಶೀರ್ ಯು.ಪಿ, ಜಿಲ್ಲಾ ಕೌನ್ಸಿಲ್ ಸದಸ್ಯ ಶಹೀದ್ ಪಾರೆ,ಸುಳ್ಯ ವಲಯ...

ಕಲ್ಚರ್ಪೆ ಬೈಕ್ ಗೆ ಗುದ್ದಿದ ಕಾರು ಪರಾರಿ

ಬೈಕ್ ಸವಾರನಿಗೆ ಕಾರು ಗುದ್ದಿ ಪರಾರಿ ಬೈಕ್ ಸವಾರ ಗಂಭೀರ ಸ್ವರೂಪದ ಗಾಯಗೊಂಡ ಘಟನೆ ಕಲ್ಚೆರ್ಪೆಯಲ್ಲಿ ನಡೆದಿದೆ ಗಾಯ ಗೊಂಡ ಬೈಕ್ ಸವಾರ ಪೆರಾಜೆ ಗ್ರಾಮದ ಪೀಚೆ ಮನೆ ಯಶೋಧರ ಎಂದು ತಿಳಿದು ಬಂದಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ

ಸಂಪಾಜೆ ವಿಶ್ವ ಪರಿಸರ ದಿನಾಚರಣೆ

ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದ ಮುಂಭಾಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್.ಜಿ. ಕೆ. ಹಾಗೂ ಸಂಪಾಜೆ ಕ್ರಷಿ ಪತ್ತಿನ ಸಂಘದ ನಿರ್ದೇಶಕಿ ಸುಮತಿ ಶಕ್ತಿವೇಲು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಪಂಚಾಯತ್ ಸಿಬ್ಬಂದಿಗಳಾದ ಭರತ್ ಕೆ.ಎಸ್. ಗೋಪಮ್ಮ.ಮಲ್ಲಿಕಾ,...

ಹೆಡ್ ಕಾನ್ ಸ್ಟೇಬಲ್ ಆಗಿ ರಮೇಶ್ ಬಿ. ಭಡ್ತಿ

ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಬಿ . ಅವರು ಹೆಡ್ ಕಾನ್‌ಸ್ಟೇಬಲ್ ಆಗಿ ಮುಂಭಡ್ತಿಗೊಂಡು ಪುತ್ತೂರು ಮಹಿಳಾ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಅವರು ಅಬಕಾರಿ ಮತ್ತು ಲಾಟರಿ ಸ್ಕ್ವಾಡ್, ಬಂದರ್ ಪೊಲೀಸ್ ಠಾಣೆ ( ಉತ್ತರ ಮಂಗಳೂರು ) ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು...

ಹಳೆಗೇಟು ಫ್ಯಾಮಿಲಿ ನರ್ಸರಿ ಶುಭಾರಂಭ

ಹಳೆಗೇಟು ಪೆಟ್ರೋಲ್ ಬಂಕ್ ಮುಂಬಾಗ ಎಸ್ ಎಂ ಶಂಸುದ್ದೀನ್ ರವರ ಮಾಲಕತ್ವದಲ್ಲಿ ಫ್ಯಾಮಿಲಿ ನರ್ಸರಿ ಜೂನ್ 5ರಂದು ಶುಭಾರಂಭಗೊಂಡಿತು. ಲಭ್ಯವಿರುವ ಗಿಡ ನಮ್ಮಲ್ಲಿ ಎಲ್ಲಾ ತರಹದ ಹೂವಿನ ಗಿಡಗಳು ತೆಂಗು ಅಡಿಕೆ ಗಿಡಗಳು ಹಣ್ಣಿನ ಗಿಡಗಳು ಔಷಧಿ ಗಿಡಗಳು ಹೋಲ್ಸೇಲ್ ಮತ್ತು ರಖಂ ದರದಲ್ಲಿ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದರು.

ಇಂದಿನ ಕ್ಯಾಂಪ್ಕೊ ಧಾರಣೆ

ಕ್ಯಾಂಪ್ಕೊ ನಿಯಮಿತ ಮಂಗಳೂರು ಇದರ ಸುಳ್ಯ ಶಾಖೆಯ ಇಂದಿನ ಧಾರಣೆ ಹೀಗಿದೆ 05.06.2020 ಶುಕ್ರವಾರಹೊಸ ಅಡಿಕೆ 255 - 300ಹಳೆ ಅಡಿಕೆ 265 - 320ಡಬಲ್ ಚೋಲ್ 265 - 320ಫಠೋರ 200 - 245ಉಳ್ಳಿಗಡ್ಡೆ 110 - 150ಕರಿಗೋಟು 110 - 140ಕಾಳುಮೆಣಸು 250 - 300ಕೊಕ್ಕೋ (ಒಣ) 150 - 175ಹಸಿ ಕೊಕ್ಕೊ...

ಜಯನಗರ ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಸ್ ಎಸ್ ಎಫ್ ರಾಜ್ಯದಾದ್ಯಂತ ಹಮ್ಮಿಕೊಂಡಂತಹ ಕಾರ್ಯಕರ್ತರ ಮನೆಯಲ್ಲಿ ನಾಳೆಗೊಂದು ನೆರವು ಸಸಿ ನೆಡುವ ಕಾರ್ಯಕ್ರಮಕ್ಕೆ ಮೊಗರ್ಪಣೆ ಎಸ್ಎಸ್ಎಫ್ ವತಿಯಿಂದ ಚಾಲನೆ ನೀಡಲಾಯಿತು.ಪ್ರಥಮವಾಗಿ ಸುಳ್ಯ ಎಸ್ಎಸ್ಎಫ್ ಡಿವಿಜನ್ ಸದಸ್ಯರಾದ ಶಮೀರ್ ಡಿ ಎಚ್ ರವರ ಜಯನಗರ ನಿವಾಸದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಮಿತಿಯ...
Loading posts...

All posts loaded

No more posts

error: Content is protected !!