- Thursday
- May 15th, 2025

ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಟಿ.ಬಿ ಸೆಕ್ಷನ್ ನಲ್ಲಿ ಕಳೆದ 15 ವರುಷದಿಂದ ಕೆಲಸ ನಿರ್ವಹಿಸುತ್ತಿರುವ ಹರಿಪ್ರಸಾದ್ ಹಾಲೆಮಜಲು ಲಾಕ್ಡೌನ್ ಪ್ರಾರಂಭವಾದಗಿನಿಂದಲೂ ಇವತ್ತಿನ ವರೆಗೆ ಕೊರೋನಾ ವಾರಿಯರ್ಸ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಿಪಿಇ ಕಿಟ್ (personal protection equipment kit)ಆಳವಡಿಸಿಕೊಂಡು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರದೇಶಗಳಿಂದ ಬರುವ ಪ್ರಯಾಣಿಕರ ಮತ್ತು ವೆನ್ಲಾಕ್ ಆಸ್ಪತ್ರೆಗೆ ಬರುವ ಕೋರಾನಾ ರೋಗಿಗಳ ತಪಾಸಣೆ ಕಾರ್ಯದಲ್ಲಿ...

ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕಾಪು ಎಂಬಲ್ಲಿಂದ ಪೆರುವೋಡಿ ಶ್ರೀ ವಿಷ್ಣು ಮೂರ್ತಿದೇವಸ್ಥಾನಕ್ಕೆ ಹೋಗುವ ರಸ್ತೆಗೆ ಡಾಮರೀಕರಣ ಮಾಡಲಾಗಿದ್ದು, ಕಾಮಗಾರಿ ತೀರಾ ಕಳಪೆಯಾಗಿದೆ. ಸರಿಯಾದ ಗುಣಮಟ್ಟ ಕಾಪಾಡದೆ, ಅಧಿಕಾರಿಗಳು, ಗುತ್ತಿಗೆದಾರರು ಅನುದಾನ ದುರುಪಯೋಗ ನಡೆಸಿದ್ದಾರೆ. ಸುಮಾರು 17 ಲಕ್ಷ ರೂಪಾಯಿಯ ಅನುದಾನದಲ್ಲಿ ಈ ರಸ್ತೆಯ ಡಾಮರೀಕರಣ ಮಾಡಲಾಗಿದ್ದು, ಕಾಮಗಾರಿ ಮುಗಿದ ಹದಿನೇಳೇ ದಿನದಲ್ಲಿ ಕಾಮಗಾರಿ ಕರ್ಮಕಾಂಡ...

ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲ ಮನ್ನಾಕ್ಕಾಗಿ, ಹಾಗೂ ವಸೂಲಿಗಾರರ ದಬ್ಬಾಳಿಕೆ ವಿರೋಧಿಸಿ ಜುಲೈ 4 ರಂದು ಸುಳ್ಯ ತಾಲೂಕು ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು. ಸುಳ್ಯ ತಾಲೂಕು ಪರಿಸರದ ಸಾಲ ಸಂತ್ರಸ್ತ ಮಹಿಳೆಯರು ಪ್ರತಿಭಟನೆ ಯಲ್ಲಿ ಭಾಗವಹಿಸುವಂತೆ ಸಂಘಟಕರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಬಿಎಂ ಭಟ್...

ಕೋವಿಡ್ 19 ರ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಧಾರ್ಮಿಕ ಕೇಂದ್ರಗಳ ದ್ವಾರಗಳನ್ನು ಮುಚ್ಚಲ್ಪಟ್ಟು ಕಳೆದ ಎರಡೂವರೆ ತಿಂಗಳಿನಿಂದ ಪೂಜಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್ 8 ರಿಂದ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಪೂಜಾ ಆರಾಧನೆಗೆ ಅವಕಾಶ ನೀಡಲಾಯಿತು.ಇದೀಗ ಕೊರೋಣ ಮಹಾಮಾರಿಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜೂನ್ 26ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ಎಲ್ಲಾ ಧಾರ್ಮಿಕ...

ಕಳಂಜ ಗ್ರಾಮದ ಕಿಲಂಗೋಡಿ ಶಂಕರರಾವ್ ಜೂ೨೬ ರಂದು ನಿಧನರಾದರು ಅವರಿಗೆ 98 ವರ್ಷ ವಯಸ್ಸಾಗಿತ್ತು. ಇವರು ಪುತ್ತೂರು ಬಾಲವಲಿಕ್ಕರ್ ಸಂಘದ ಮಾಜಿ ಅಧ್ಯಕ್ಷರಾಗಿ, ಸಮಾಜದ ಪ್ರಮುಖರಾಗಿ, ಮುಗೇರು ದೇವಸ್ಥಾನದ ಆಡಳಿತ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಾಳಿದಲ್ಲಿರುವ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ನಾಳೆಯಿಂದ ಕರ್ನಾಟಕ ಕರಾವಳಿ ಭಾಗಗಳಲ್ಲಿ ಮುಂಗಾರು ಪುನಃ ಚುರುಕುಗೊಳ್ಳುವ ಮುನ್ಸೂಚೆನೆ ಇದೆ. ಇವತ್ತು ಕೇರಳ ಕರಾವಳಿ ಭಾಗಗಳಾದ್ಯಂತ ಉತ್ತಮ ಮಳೆಯ ಮುನ್ಸೂಚೆನೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(26.06.2020 ಶುಕ್ರವಾರ) ಅಡಿಕೆ ಧಾರಣೆಹೊಸ ಅಡಿಕೆ 275 - 325ಹಳೆ ಅಡಿಕೆ 275 - 340ಡಬಲ್ ಚೋಲ್ 275 - 340 ಫಠೋರ 220 - 270ಉಳ್ಳಿಗಡ್ಡೆ 110 - 170ಕರಿಗೋಟು 110 - 160 ಕಾಳುಮೆಣಸು ಧಾರಣೆಕಾಳುಮೆಣಸು 250 - 300 ಕೊಕ್ಕೋ ಧಾರಣೆಒಣ ಕೊಕ್ಕೋ :- 150...

ಎರಡು ವಾರದ ಹಿಂದೆ ಸುಳ್ಯ ಪೊಲೀಸ್ ಠಾಣೆಗೆ ಬಂದು ಕಟ್ಟೆಕಾರ್ ಅಂಗಡಿಯವರ ಮಗನ ಮೇಲೆ ದೂರು ನೀಡಿದ್ದ ಬೆಂಗಳೂರಿನ ಮಹಿಳೆ ಈಗ ಮಹಿಳಾ ಆಯೋಗದ ಆದೇಶ ಹಿಡಿದುಕೊಂಡು ಸುಳ್ಯಕ್ಕೆ ಬಂದಿದ್ದು ಪೊಲೀಸರು ಮತ್ತು ಸಿ.ಡಿ.ಪಿ.ಒ. ರವರು ಈಗ ಅವರನ್ನು ಕಟ್ಟೆ ಅಬ್ದುಲ್ಲರವರ ಮನೆಗೆ ಬಿಟ್ಟಿದ್ದಾರೆ. ಆದರೆ ಆಕೆಯನ್ನು ಮನೆ ಸೇರಿಸಲು ನಿರಾಕರಿಸಿರುವ ಕಟ್ಟೆ ಅಬ್ದುಲ್ಲ ಅವರ...

ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಅವಧಿ ಮುಗಿದಿದ್ದು ಕೊವಿಡ್ 19 ಲಾಕ್ ಡೌನ್ ನಿಂದಾಗಿ ಚುನಾವಣೆ ನಡೆಸಲು ವಿಳಂವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ. ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಗಳಿಗೆ ನೇಮಕ ಮಾಡಿರುವ ಅಧಿಕಾರಿಗಳ ವಿವರ ಇಲ್ಲಿದೆ.

ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.) ಇದರ ಆಶ್ರಯದಲ್ಲಿ 4 ನೇ ಹಂತದ ವೃಕ್ಷಾರೋಹಣ ಕಾರ್ಯಕ್ರಮವನ್ನು ಅಮರಪಡ್ನೂರಿನ ಶೇಣಿಯ ಸೂರೆಂಗಿ ಪರಿಸರದಲ್ಲಿ ಇಂದು ನಡೆಸಲಾಯಿತು. ಶ್ರೀ ಸುಬ್ರಾಯ ನಾಯ್ಕ್ ಸೂರೆಂಗಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ವೃಕ್ಷಾರೋಹಣದಲ್ಲಿ ಪಾಲ್ಗೊಂಡರು.ಸಂಘದ ಸದಸ್ಯರಾದ ಅವಿನ್ ಕೆರೆಮೂಲೆ, ತೇಜಸ್ ಮರ್ಗಿಲಡ್ಕ ,ನವೀನ ದರ್ಖಾಸು, ತೇಜಸ್ವಿ ಕಡಪಳ, ಮಹೇಶ್ ಶೇಣಿ , ಪ್ರಶಾಂತ್...

All posts loaded
No more posts