Ad Widget

ಕುಸುಮ ಸಾರಂಗದ ವತಿಯಿಂದ ವಾಟ್ಸಾಪ್ ಮುಖಾಂತರ ವಿವಿಧ ಸ್ಪರ್ಧೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜ್ ಸುಬ್ರಹ್ಮಣ್ಯ ದ ರಂಗ ಘಟಕ ಕುಸುಮ ಸಾರಂಗವೂ ಕಳೆದ 27 ವರ್ಷಗಳಿಂದ ಬೇರೆ ಬೇರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕಲಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ‌ಕೊರೋನ ಸಂಕಷ್ಟದ ಸಮಯದಲ್ಲಿ ಆಸಕ್ತ ಪ್ರತಿಭೆಗಳಿಗಾಗಿ ಸಾಮಾಜಿಕ ಜಾಲತಾಣದ ಮೂಲಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ನಗದು ಬಹುಮಾನ ಮತ್ತು...

ಆನ್ ಲೈನ್ ದಾಖಲಾತಿ ಆರಂಭಿಸಿದ ಪ್ರಥಮ ದರ್ಜೆ ಕಾಲೇಜು

ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜು 2020-21 ನೇ ಸಾಲಿನ ಪ್ರಥಮ ಪದವಿ ವಿಧ್ಯಾರ್ಥಿಗಳಿಗೆ ಆನ್‌ ಲೈನ್ ದಾಖಲಾತಿಗಾಗಿ ಆರಂಭವಾಗಿದ್ದು ಲಾಕ್ ಡೌನ್ ವೇಳೆಯಲ್ಲಿ  ಪ್ರಥಮ ಹೆಜ್ಜೆಯಿರಿಸಿದೆ. ಪ್ರವೇಶಾತಿಯನ್ನು ಬಯಸುವ ಅಭ್ಯರ್ಥಿಗಳು ಇಲ್ಲಿ ನೀಡಿರುವ ಗೂಗಲ್ ಲಿಂಕ್  ಉಪಯೋಗಿಸಿ ಆನ್ ಲೈನ್ ಅರ್ಜಿ  ಭರ್ತಿಗೊಳಿಸುವುದು.  ಭರ್ತಿಗೊಳಿಸಿದ ಮಾತ್ರಕ್ಕೆ ಪ್ರವೇಶಾತಿ ಅಂಗೀಕಾರವಾಗಿದೆ ಎಂದು ಭಾವಿಸತಕ್ಕದ್ದಲ್ಲ. ಈ ಮಾಹಿತಿಯನ್ನು...
Ad Widget

ಪಿಯುಸಿಯಲ್ಲಿ 567 ಅಂಕ ಪಡೆದ ಶ್ರದ್ಧಾ ಉಳುವಾರು

ಪಿ.ಯು.ಸಿ ಫಲಿತಾಂಶದದಲ್ಲಿ ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಕಾಮರ್ಸ್ ವಿಭಾಗದ ವಿದ್ಯಾರ್ಥಿನಿ ಶ್ರದ್ಧಾ . ಯು ಒಟ್ಟು 567 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ . ಈಕೆ ಉಳುವಾರು ಪುರುಷೋತ್ತಮ ಭಾರತಿ ದಂಪತಿ ಪುತ್ರಿ . ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು ಕಲಿಕೆಯೊಂದಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾಳೆ .

ಕುಡಿದ ಮತ್ತಿನಲ್ಲಿ ತಾಯಿಯ ಮೇಲೆ ಹಲ್ಲೆ – ವಿಡಿಯೋ ವೈರಲ್

ಬೆಳ್ತಂಗಡಿ ತಾಲೇೂಕಿನ ಸವಣಾಲು ಗ್ರಾಮದ ಹಲಸಿನಕಟ್ಟೆ ಐದುಸೆನ್ಸ್ ನಿವಾಸಿ ವಯೇೂವೃದ್ದ ಮಹಿಳೆ ಶ್ರೀಮತಿ ಅಪ್ಪಿ ಶೆಡ್ತಿಯವರ ಮೇಲೆ ಅವರ ಮೊಮ್ಮಗ ಪ್ರದೀಪ ಶೆಟ್ಟಿ ಹಾಗೂ ಮಗ ಶ್ರೀನಿವಾಸ ಶೆಟ್ಟಿ ಕಂಠಪೂರ್ತಿ ಕುಡಿದು ಅಮಾನೂಷವಾಗಿ ವಯೋವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಒಂದು ಅಮಾನವೀಯ ಘಟನೆ ಇಂದು ನಡೆದಿದ್ದು , ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ...

ಬೆಂಗಳೂರಿನಿಂದ ಬಂದವರಿಂದಲೇ ಕೊಡಗಿಗೆ ಕಂಟಕ – ಪೀಡಿತರ ಸಂಖ್ಯೆ 252 ಕ್ಕೆ ಏರಿಕೆ

ಬೆಂಗಳೂರಿನಿಂದ ಹಿಂದಿರುಗಿದ್ದವರಿಂದ 9 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇಂದು ಕೊಡಗಿನಲ್ಲಿ ಮತ್ತೆ 13 ಹೊಸ ಪ್ರಕರಣ ದಾಖಲಾಗಿದೆ. 13 ಪ್ರಕರಣಗಳ ಪೈಕಿ 9 ಜನರಿಗೆ ಬೆಂಗಳೂರಿನಿಂದ ಹಿಂದಿರುಗಿದ್ದವರಿಂದಲೇ ಹರಡಿದೆ. ಮಡಿಕೇರಿ ತಾಲ್ಲೂಕಿನ ಮರಗೋಡಿನ ಸೋಂಕಿತನಿಂದ ಐವರಿಗೆ ಸೋಂಕು ಹರಡಿದೆ. ಬೆಂಗಳೂರಿನಿಂದ ಹಿಂದಿರುಗಿದ್ದ ಮತ್ತೊಬ್ಬ ವ್ಯಕ್ತಿಯಿಂದ ಮೂವರಿಗೆ ಸೋಂಕು ತಗುಲಿದೆ. ಬೆಂಗಳೂರಿನಿಂದ ಹಿಂದಿರುಗಿದ್ದ ಮುತ್ತಾರುಮುಡಿ ಗ್ರಾಮದ...

ಅಚ್ರಪ್ಪಾಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಶಿಕ್ಷಣ ವ್ಯವಸ್ಥೆ ಆರಂಭ

ಕೊರೋನ ಭಯದಿಂದ ಅಲ್ಲೋಲ ಕಲ್ಲೋಲವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣದಿಂದ ವಂಚಿತವಾಗುತ್ತಿರುವ ಗ್ರಾಮೀಣ ಭಾಗದ ಮಕ್ಕಳ ಹಿತದೃಷ್ಟಿಯಿಂದ ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪೋಷಕರ ಅಪೇಕ್ಷೆ ಮೇರೆಗೆ ಶಾಲಾ ಶಿಕ್ಷಕಿ ಶ್ರೀಮತಿ ಶ್ವೇತಾ ಅವರಿಂದ ವಿಶೇಷ ಶಿಕ್ಷಣ ವ್ಯವಸ್ಥೆ ಆರಂಭವಾಗಿರುವುದು ಪ್ರಯೋಗ ಶೀಲ ಹಾಗೂ ಪ್ರಶಂಸನೀಯವಾಗಿದೆ. ಸದ್ಯಕ್ಕೆ ತರಗತಿ ಕಲಿಕೆ ಸಾಧ್ಯವಿಲ್ಲ ಆನ್ ಲೈನ್...

*ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿಲಿಲ್ಲ ಕಟ್ರೇಲಾ ಟ್ರೇಡರ್ಸ್ ಮಾಲಕರ ಸ್ಪಷ್ಟನೆ*

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು , ಜುಲೈ 16ರಂದು ಸಂಜೆ ಆರು ಗಂಟೆಯ ವೇಳೆ ಗಾಂಧಿನಗರದಲ್ಲಿ ಒಂದು ಅಂಗಡಿಯಲ್ಲಿ ವ್ಯಾಪಾರ ನಡೆಯುತ್ತಿದ್ದು ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಅಮರ ಸುದ್ದಿ ವೆಬ್ಸೈಟ್ ವರದಿ ಪ್ರಸಾರಮಾಡಿತ್ತು. ಇದಕ್ಕೆ ಕೂಡಲೇ ಕಾರ್ಯಪ್ರವೃತ್ತರಾದ ಸಂಬಂಧಪಟ್ಟ ಅಧಿಕಾರಿಗಳು  ಅಂಗಡಿ ಮಾಲಕರನ್ನು ಕರೆಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ ಎಂದು...

ಆಲೆಟ್ಟಿ – ಕೈೂಂಗಾಜೆ ತೋಟಕ್ಕೆ ಆನೆ ದಾಳಿ: ಅಪಾರ ಬೆಳೆ ಹಾನಿ

ಕಳೆದ ರಾತ್ರಿ ಸುಮಾರು 12 ಗಂಟೆ ವೇಳೆಗೆ ಆನೆಗಳ ಹಿಂಡು ಕೈೂಂಗಾಜೆಯ ಕೆಲ ಕೃಷಿಕರ ತೋಟಕ್ಕೆ ದಾಳಿ ಮಾಡಿ ಅಪಾರ ಪ್ರಮಾಣದ ಕೃಷಿ ಸಂಪತ್ತನ್ನು ಹಾಳು ಮಾಡಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕೋಲ್ಚಾರಿನ ಯುವಕರ ಸತತ ಪರಿಶ್ರಮದಿಂದ ಸುಮಾರು ಬೆಳಗ್ಗೆ ನಾಲ್ಕು ಗಂಟೆಗೆ ಆನೆಗಳ ಹಿಂಡನ್ನು ಕಾಡಿಗೆ ಓಡಿಸಲಾಯಿತು.

ವಾಚ್ ಬಾಬಚ್ಚನ ಮಗಳು – ತಾಲೂಕಿಗೇ ಮೊದಲು

✒️ ಅನ್ಸಾರ್ ಬೆಳ್ಳಾರೆ ವಾಚ್ ಬಾಬಚ್ಚ ಅಂದ್ರೆ ಸುಳ್ಯ ನಾಡಿನಾದ್ಯಂತ ಪರಿಚಿತರು.. ಅಪರಿಚಿತರು ಬಂದ್ರೆ ಪರಿಚಿತರಂತೆ ಮಾತನಾಡುವ ಮುಗ್ದತೆಯ ಮನಸ್ಸಿನವರು…ಇಂದು ಬಾಬಚ್ಚನ ಮಗಳು‌ ಕೇವಲ ಸುಳ್ಯ ಮಾತ್ರವಲ್ಲದೇ ತಾಲೂಕಿನಾದ್ಯಂತ ಪರಿಚಿತಳಾದಳು… ಎಸ್…ಈಕೆಯ ಹೆಸರು ಮರಿಯಂ ರಫಾನ..ಕುರುಂಜಿ ವೆಂಕಟ್ರಾಮಣ ಗೌಡ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ.. ಈ ವರ್ಷದ...

ಕಟ್ಟೆಕಾರ್ ಬಳಿ ಸಂಜೆವರೆಗೆ ತೆರೆದಿದ್ದ ಅಂಗಡಿ

ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸುಳ್ಯದಲ್ಲಿಯೂ ಸಹ ಇಂದು ಲಾಕ್ ಡೌನ್ ಹೇರಲಾಗಿತ್ತು. 11 ಗಂಟೆ ತನಕ ಅಗತ್ಯ ವಸ್ತುಗಳಿಗ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸುಳ್ಯ ಪೊಲೀಸ್ ಠಾಣೆ ಸಮೀಪದ ಅಂಗಡಿಯೊಂದು ಸಂಜೆ ಸುಮಾರು 6.30 ರ ತನಕ ಅರ್ಧ ಬಾಗಿಲು ತೆರೆದಿದ್ದು, ವ್ಯಾಪಾರ ವಹಿವಾಟು...
Loading posts...

All posts loaded

No more posts

error: Content is protected !!