Ad Widget

ಮುಂಜಾಗ್ರತಾ ಕ್ರಮ ಅನುಸರಿಸಿಲ್ಲ ಎಂದು ಕಲ್ಲುಗುಂಡಿಯ ವೈನ್ ಶಾಪ್ ಗೆ ಪಂಚಾಯತ್ ನೋಟೀಸ್

ಕಲ್ಲುಗುಂಡಿಯ ಕವಿತಾ ವೈನ್ಸ್ ತನ್ನ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಪಾಡಲು ಸೂಚಿಸದಿರಿವುದು ಹಾಗೂ ಮಾಸ್ಕ್ ಧರಿಸದೇ ಗ್ರಾಹಕರು ಬರುತ್ತಿರುವುದನ್ನು ಗಮನಿಸಿದ ಗ್ರಾಮ ಪಂಚಾಯತ್ ನೋಟೀಸ್ ನೀಡಿದೆ. ಈ ನೋಟೀಸ್ ನಲ್ಲಿ ಸಮಯ ಪಾಲನೆ ಮಾಡದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪಂಚಾಯತ್ ಸೂಚನೆಯನ್ನು ನಿರ್ಲಕ್ಷಿಸಿರುವುದರಿಂದ ಪರವಾನಿಗೆಯನ್ನು ರದ್ದುಗೊಳಿಸುವ ಬಗ್ಗೆ ತೀರ್ಮಾನಿಸಲಾಗಿದೆ....

*ಸುಳ್ಯ ಗಾಂಧಿನಗರ ಶಾಲೆಯ ಆವರಣ ಗೋಡೆ ಕುಸಿತ*

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಇದರ ತಡೆಗೋಡೆ ಕುಸಿದಿದೆ. ಅದೃಷ್ಟವಶಾತ್ ಪರಿಸರದಲ್ಲಿ ಯಾವುದೇ ವಿದ್ಯಾರ್ಥಿಗಳು ಮಕ್ಕಳು ಇಲ್ಲದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ . ಸ್ಥಳಕ್ಕೆ ಆಗಮಿಸಿದ ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಹಾಗು  ಶಾಲಾ ಅಧ್ಯಾಪಕಿ ಭವಾನಿ ,  ನಳಿನಿ ಟೀಚರ್,  ಶಾಲಾ...
Ad Widget

ದ.ಕ.ಕೊರೋನಾ ಮಹಾಸ್ಫೋಟ | ಇಂದು 83 ಪಾಸಿಟಿವ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಜಿಲ್ಲೆಯಲ್ಲಿ ಇಂದು 83 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ. ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನ ಸೋಂಕು ಪೀಡಿತ ಮೂಡಬಿದ್ರೆ ನಿವಾಸಿಯೊಬ್ಬರು ಸಾವನ್ನಪ್ಪಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇದುವರೆಗೆ 26 ಮಂದಿ ಪ್ರಾಣ ಕಳೆದುಕೊಂಡಿದ್ದು,...

*ಸುಳ್ಯ ವರ್ತಕರ ಸಂಘದ ಸಭೆ-ಅಗಲಿದ ಹಿರಿಯ ವರ್ತಕ ಸುಂದರ ಸರಳಾಯ ,ಡಾ. ಸುಗುಣ, ಸುಂದರಿ ಯವರಿಗೆ ಶ್ರದ್ಧಾಂಜಲಿ*

ಸುಳ್ಯ ತಾಲೂಕು ವರ್ತಕರ ಸಂಘದ ಸಭೆ ಸುಳ್ಯ ಎಪಿಎಂಸಿ ಸಭಾಂಗಣದಲ್ಲಿ ಇಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಉಪಾಧ್ಯಕ್ಷ ಪ್ರಭಾಕರ್ ನಾಯರ್ ಕೋಶಾಧಿಕಾರಿ ಸುರೇಶ್ ಚಂದ್ರ ಕಮಿಲ ,ಉಪಸ್ಥಿತರಿದ್ದರು. ಸಭೆಯಲ್ಲಿ  ಇತ್ತೀಚಿಗೆ ಅಗಲಿದ ಹಿರಿಯ ವರ್ತಕ ಸುಂದರ ಸರಳಾಯ ,ಡಾಕ್ಟರ್...

ಗುತ್ತಿಗಾರು – ಸಂಜೆ 4 ರವರೆಗೆ ಮಾತ್ರ ಅಂಗಡಿ ತೆರೆಯಲು ವರ್ತಕರ ಸ್ವಯಂ ನಿರ್ಧಾರ

ಗುತ್ತಿಗಾರು - ಸಂಜೆ 4 ರವರೆಗೆ ಮಾತ್ರ ಅಂಗಡಿ ತೆರೆಯಲು ವರ್ತಕರ ಸ್ವಯಂ ನಿರ್ಧಾರಗುತ್ತಿಗಾರು ವರ್ತಕರ ಸಂಘ, ಗ್ರಾಮ ಪಂಚಾಯತ್ ಹಾಗೂ ಕೊರೊನಾ ತುರ್ತು ಕಾರ್ಯಪಡೆ ಜಂಟಿಯಾಗಿ ಜು.7 ರಂದು ಗಿರಿಜನ ಸಭಾಭವನದಲ್ಲಿ ಕೊರೊನಾ ತಡೆ ಜಾಗೃತಿ ಸಭೆ ಜರುಗಿತು.ಈ ಸಭೆಯಲ್ಲಿ ಒಮ್ಮತದ ನಿರ್ಧಾರ ಕ್ಕೆ ಬರಲಾಗಿ ನಾಳೆಯಿಂದಲೇ ಜು 8 ರಿಂದ ಜು 25ರವರೆಗೆ...

ಕಟ್ಟ ದೇವಸ್ಥಾನದ ಆಡಳಿತಾಧಿಕಾರಿ ಯಾಗಿ ಪಿಡಿಓ ರವಿಚಂದ್ರ ಅಧಿಕಾರ ಸ್ವೀಕಾರ

ಕೊಲ್ಲಮೊಗ್ರ ಗ್ರಾಮದ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆಡಳಿತದ ಅವಧಿಯು ಕೊನೆಗೊಂಡಿದ್ದು, ನೂತನ ಆಡಳಿತಾಧಿಕಾರಿಯಾಗಿ ಕೊಲ್ಲಮೊಗ್ರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಎ ವಹಿಸಿಕೊಂಡಿರುವರು. ಈ ಸಂದರ್ಭದಲ್ಲಿ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕಟ್ಟ ಹಾಗೂ ಸದಸ್ಯರು,ಅರ್ಚಕರು, ಭಕ್ತಭಿಮಾನಿಗಳು ಉಪಸ್ಥಿತರಿದ್ದರು.

ಕೊಲ್ಲಮೊಗ್ರದ ಮಧುಶಂಕರ್‌ಗೆ ಪಿಎಚ್‌ಡಿ ಪದವಿ

ಮಣಿಪಾಲ ಸ್ಕೂಲ್ ಆಫ್ ಇನ್ಫಾರ್ಮೇಶನ್ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮಧುಶಂಕರ ಎಂ . ಅವರಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ( ಮಾಹೆ ) ಪಿಎಚ್‌ಡಿ ಪದವಿ ನೀಡಿದೆ . ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗ ಪ್ರಾಧ್ಯಾಪಕ ಮತ್ತು ಸಹ ನಿರ್ದೇಶಕ ಡಾ.ಸೋಮಶೇಖರ ಭಟ್ ಮತ್ತು ಮಣಿಪಾಲ ಸ್ಕೂಲ್ ಆಫ್...

ಪುತ್ತೂರು: ಆವರಣ ಗೋಡೆ ಕುಸಿದು ಮಹಿಳೆ ಮೃತ್ಯು

ಪುತ್ತೂರು : ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಅದರ ಅಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಪುತ್ತೂರಿನ ಪರ್ಲಡ್ಕ ಸಮೀಪ ಗೋಳಿತೊಟ್ಟು ಎಂಬಲ್ಲಿ ಇಂದು ನಡೆದಿದೆ . ಕೆಎಸ್‌ಆರ್‌ಟಿಸಿ ಬಸ್ಸು ಚಾಲಕ ಚಂದ್ರ ಶೇಖರ್ ರವರ ಪತ್ನಿ ವಸಂತಿ ( 49 ) ಮೃತಪಟ್ಟ ದುರ್ದೈವಿ. ಮನೆಯ ಹಿಬ್ಬಂದಿಯ ಜಗಲಿಯಲ್ಲಿ ಬೀಡಿ ಕಟ್ಟುತ್ತಿದ್ದಾಗ ಎದುರಿನ ಮನೆಯ ಅವರಣ...

ಸತತ 3 ನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಸಂತೋಷ್ ಕುಮಾರ್ ರೈ ಗೆ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಇದರ ಯೋಜನಾಧಿಕಾರಿಯಾದ ಸಂತೋಷ್ ಕುಮಾರ್ ರೈ ಯವರಿಗೆ ಸತತ 3 ನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.2019-20 ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಮಾಡಿದ ಉತ್ತಮ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಪ್ರಗತಿನಿಧಿ ವಿತರಣೆ 60 ಕೋಟಿ, ತಂಡಗಳ...

ಪೆರುವಾಜೆ: ವಿಶ್ವಕರ್ಮ ಪ್ರಗತಿ ಬಂಧು ತಂಡ ರಚನೆ

ಪೆರುವಾಜೆ ವಿಶ್ವಕರ್ಮ ಪ್ರಗತಿ ಬಂಧು ತಂಡ ರಚನೆಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ)ಬೆಳ್ಳಾರೆ ವಲಯದ ಪೆರುವಾಜೆ ಒಕ್ಕೂಟದ ಪೆರುವಾಜೆ ಎಂಬಲ್ಲಿ ನೂತನವಾಗಿ ವಿಶ್ವಕರ್ಮ ಪ್ರಗತಿ ಬಂಧು ತಂಡದ ಉದ್ಘಾಟನೆಯನ್ನು ವಲಯದ ಮೇಲ್ವಿಚಾರಕರಾದ ಮುರಳಿಧರ ಎ ನೆರವೇರಿಸಿದರು. ಸಂಘದ ಪ್ರಬಂಧಕರಾಗಿ ಧರ್ಮಪಾಲ ಸಂಯೋಜಕರಾಗಿ ಸುಜಿತ್ ಹಾಗೂ ಕೋಶಾಧಿಕಾರಿಯಾಗಿ ರಾಜೇಶ್ ಇವರು ಆಯ್ಕೆಯಾದರು. ಈ ಸಂದರ್ಭ...
Loading posts...

All posts loaded

No more posts

error: Content is protected !!