- Thursday
- November 28th, 2024
ಕೊಡಗು ಜಿಲ್ಲೆ ಸಿದ್ದಾಪುರ ಬಳಿ ನೆಲ್ಲುದಿ ಕೇರಿ ನಲವತ್ತು ಎಕರೆ ಬರಡಿ ಕಾರ ಬಾಣೆ ಪ್ರದೇಶದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಮನೆಗಳು ಇದ್ದು ಈ ಪ್ರದೇಶಕ್ಕೆ ಮುಖ್ಯರಸ್ತೆಯಿಂದ ಸುಮಾರು ಎರಡು ಕಿಲೋಮೀಟರ್ ರಸ್ತೆಯು 80 ವರ್ಷಗಳಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿ ಕೊಂಡಿತ್ತು. ಈ ಗ್ರಾಮದಲ್ಲಿ ಪ್ರತಿಯೊಂದು ಕೆಲಸ ಕಾರ್ಯಕ್ಕೂ ಇಲ್ಲಿಯ ಜನತೆ ಈ ರಸ್ತೆಯನ್ನು ಅವಲಂಬಿಸಿಕೊಂಡು...
ಮಾಜಿ ಸಚಿವ ಬಿ ರಮಾನಾಥ ರೈ ರವರನ್ನು ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡರು ಆಗಸ್ಟ್ 1ರಂದು ಸಂಜೆ ಸುಳ್ಯ ಗ್ರಾಂಡ್ ಪರಿವಾರ್ ಉಡುಪಿ ಗಾರ್ಡನ್ ಹೋಟೆಲ್ ನಲ್ಲಿ ಭೇಟಿಯಾದರು.ಮಾಜಿ ಸಚಿವ ರಮಾನಾಥ ರೈ ಪಕ್ಷದ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಸುಳ್ಯ ಮಾರ್ಗವಾಗಿ ಬಂಟ್ವಾಳ ಕ್ಕೆ ಹಿಂತಿರುಗುವ ವೇಳೆ ಸುಳ್ಯದ ಪಕ್ಷದ ಮುಖಂಡರುಗಳು...
📝📝.........ಭಾಸ್ಕರ ಜೋಗಿಬೆಟ್ಟುಪ್ರಚಾರ ಪ್ರಸಾರ ಪ್ರಮುಖ್, ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ಸುತ್ತಲೂ ಭಜನೆಗಳು ಆರಂಭವಾಗಿದೆ , ಪ್ರತಿಯೊಂದು ಕಡೆ ಮನೆಗಳು ದೀಪಾಲಂಕರದಿಂದ ಕೂಡಿದೆ. ಕೇಸರಿ ಬಾವುಟಗಳು ರಾರಾಜಿಸುತ್ತಿವೆ ,ಭಕ್ತರ ಮನ ಮನದಲ್ಲಿ ರಾಮ ನಾಮ ಕೇಳಿ ಬರುತ್ತಿದೆ. ರಸ್ತೆಯ , ಮನೆಯ , ಕಂಪೌಂಡ್ ತಡೆಗೋಡೆಯ ಮೇಲೆ ಶ್ರೀ ರಾಮ ಚಂದ್ರನ ಚಿತ್ರವನ್ನು ಬಿಡಿಸಲಾಗಿದ್ದು...
ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಬಿ.ರಮಾನಾಥ ರೈಯವರು ಸಂಪಾಜೆ ಗ್ರಾಮದ ಗೂನಡ್ಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞ ಗೂನಡ್ಕರವರ ಕಚೇರಿಗೆ ಭೇಟಿ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈಯವರು" ಸಂಪಾಜೆ ಗ್ರಾಮವು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ..ಇದಕ್ಕೆ ಕಾರಣ ಇಲ್ಲಿನ ಕಾಂಗ್ರೆಸ್ ನಾಯಕರು ಮಾಡಿದ...
ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಕಡಬ ತಾಲೂಕು ಬಲ್ಯ ಗ್ರಾಮದ ಹೊಸಮಠದಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಶ್ರೀಕೃಷ್ಣ ಎಂ.ಆರ್. ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಸುಳ್ಯ ನಗರದ ಸುನಿಲ್ ಕೇರ್ಪಳ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಪ್ರಧಾನ...
ಕೊಲ್ಲಮೊಗ್ರ ಗ್ರಾಮದ ಚಾಳೆಪ್ಪಾಡಿ ಶಿವರಾಮ ಗೌಡರ ಧರ್ಮಪತ್ನಿ ಜಾನಕಿ (60) ಜು.31 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಕಿಶೋರ್, ಹರೀಶ, ಪ್ರಶಾಂತ, ಪುತ್ರಿ ಪ್ರಶಾಂತಿ ಹರ್ಷ ಜಾಲಮನೆ, ಸೊಸೆಯಂದಿರು, ಅಳಿಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಇಂದು ಸಂಜೆ ವಿದ್ಯಾರ್ಥಿಗಳ ಜತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಹೊಸ ಶೈಕ್ಷಣಿಕ ನೀತಿ ಹಾಗೂ ಇತರ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳ ಜತೆ ಮಾತನಾಡಲಿದ್ದಾರೆ. ಇದರ ಲೈವ್ ವೀಕ್ಷಿಸಲು ಈ ಲಿಂಕ್ ಬಳಸಿ https://youtu.be/A6WCUUu0X7k
ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿನ ಮುಖ್ಯಗುರುಗಳಾದ ಶ್ರೀ ಎಂ ಎಸ್ ಶಿವರಾಮ ಶಾಸ್ತ್ರಿಯವರು ತಮ್ಮ 35 ವರ್ಷಗಳ ಸುದೀರ್ಘ ಶಿಕ್ಷಣ ಸೇವೆಯಿಂದ ನಿವೃತ್ತರಾಗಿದ್ದು, ಅವರ ಬೀಳ್ಕೊಡುಗೆ ಕಾರ್ಯಕ್ರಮವು ದಿನಾಂಕ 31.07.2020ನೇ ಶುಕ್ರವಾರ ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಶ್ರೀ ನೆಟ್ಟಾರು ವೆಂಕಟ್ರಮಣ ಭಟ್ ವಹಿಸಿದ್ದರು. ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಅಣ್ಣಾ...
ಜಾಲ್ಸೂರು ಗ್ರಾಮದ ಕೆಮನಬಳ್ಳಿ ದಿ.ಶೀನಪ್ಪ ಗೌಡರ ಧರ್ಮಪತ್ನಿ ಅಮ್ಮಕ್ಕ ಕೆಮನಬಳ್ಳಿ(87) ಇಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.ಮೃತರು ಓರ್ವ ಪುತ್ರ, ಏಳು ಪುತ್ರಿಯರು,ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲಾ ಮುಖ್ಯಗುರು ಶ್ರೀ ಎಂ ಎಸ್ ಶಿವರಾಮ ಶಾಸ್ತ್ರಿಯವರು 35 ವರ್ಷಗಳ ಸುದೀರ್ಘ ಶಿಕ್ಷಣ ಸೇವೆಯಿಂದ ನಿವೃತ್ತರಾದರು. 1985ರಿಂದ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಸೇವೆಯನ್ನು ಆರಂಭಿಸಿದ ಇವರು ತದನಂತರ ಸುಮಾರು 13 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸಮರ್ಥ ಸೇವೆಯನ್ನು ಸಲ್ಲಿಸಿರುತ್ತಾರೆ. ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ, ಸಹೋದ್ಯೋಗಿಗಳ ಆತ್ಮೀಯ ಮಾರ್ಗದರ್ಶಕರಾಗಿ ಇವರ ಕಾರ್ಯ...
Loading posts...
All posts loaded
No more posts