- Saturday
- March 14th, 2026
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನಾಧರಿತ ಧಾರವಾಹಿ 'ಮಹಾನಾಯಕ' ರಾಘವೇಂದ್ರ ಹುಣಸೂರು ಅವರ ನೇತೃತ್ವದಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು. ಈಗಾಗಲೇ ಕರ್ನಾಟಕದಾದ್ಯಂತ ಸಂಚಲನಮೂಡಿಸಿದೆ. ನಾಡಿನಾದ್ಯಂತ ಅಂಬೇಡ್ಕರ್ ಅಭಿಮಾನಿಗಳು 'ಮಹಾನಾಯಕ' ಧಾರವಾಹಿಯನ್ನು ಮನೆ ಮನೆಗೆ ತಲುಪಿಸಿ ಎಲ್ಲರೂ ಅಂಬೇಡ್ಕರ್ ಅವರ ಜೀವನವನ್ನು ಅರಿಯಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ. ಬಹುಶಃ ಇತಿಹಾಸದಲ್ಲೇ ಮೊದಲ ಬಾರಿಗೆ...
ಕಲ್ಲುಗುಂಡಿ ದಬ್ಬಡ್ಕ ರಸ್ತೆಯಲ್ಲಿ ಏಣಿಯಾರು ಎಂಬಲ್ಲಿ ಬರೆ ಕುಸಿತ ಉಂಟಾಗಿ, ರಸ್ತೆಯಲ್ಲಿ ಬಂಡೆಕಲ್ಲು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಅ.4 ರಂದು ಊರುಬೈಲು ಶ್ರೀ ಭಗವಾನ್ ಸಂಘದ ಸದಸ್ಯರು, ಸ್ಥಳೀಯ ಸದಸ್ಯ ಸಚಿನ್ ಕೆದಂಬಾಡಿರವರ ನಾಯಕತ್ವದಲ್ಲಿ ಶ್ರಮದಾನ ಮಾಡಿ, ಬಂಡೆಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಈ ಕಾರ್ಯ...
ಕರ್ನಾಟಕ ರಸ್ತೆ ಸಾರಿಗೆ ನಿಗಮ ಪುತ್ತೂರು ಘಟಕದಿಂದ ಈ ಮೊದಲು ಬೆಳಿಗ್ಗೆ 8-10,9-30,ಅದಲ್ಲದೇ ಮಧ್ಯಾಹ್ನ 1.15 ಸಾಯಂಕಾಲ 4.15,ಮತ್ತು5-45ಕ್ಕೆ ಪುತ್ತೂರು ಬೆಳ್ಳಾರೆ , ಪಂಜಿಗಾರು, ಕಲ್ಲಪಣೆ, ಪೊಟ್ರೆಗೆ ಸಾರಿಗೆ ವ್ಯವಸ್ಥೆ ಇದ್ದು, ಲಾಕ್ಡೌನ್ ಸಮಯದಿಂದ ಸಾರಿಗೆ ವ್ಯವಸ್ಥೆ ನಿಲ್ಲಿಸಿದ್ದು ಆ ನಂತರ ಲಾಕ್ಡೌನ್ ಸಡಿಲಿಕೆ ಆದರೂ ಕೂಡ ಕೊಡಿಯಾಲ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೇ ಶಾಲಾ...
ಪ್ರಭಾಕರ್ ಎಂಬವರು ಸುಳ್ಯ ತಾಲೂಕಿನ ಕಲ್ಲುಗುಂಡಿಯ ಕೂಲಿಶೆಡ್ ನಲ್ಲಿ ಬಾಡಿಗೆ ರೂಮ್ ಮಾಡಿಕೊಂಡು ಸುಮಾರು 40 ವರ್ಷಗಳಿಂದ ಸುಳ್ಯ ತಾಲೂಕಿನ ವಿವಿಧೆಡೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರೂಮಿನಲ್ಲಿ ಒಬ್ಬನೇ ವಾಸಿಸುತ್ತಿದ್ದು ,ತಮ್ಮ ,ಕುಟುಂಬಸ್ಥರು ದೂರದ ಕೇರಳ ರಾಜ್ಯದ ಆಲಪುಯದಲ್ಲಿ ವಾಸಿಸುತ್ತಿದ್ದರು. ಪ್ರಭಾಕರ್ ರವರು ಆಗಿಂದಾಗ ಕೇರಳದ ತಮ್ಮ ಊರಿಗೆ ಹೋಗಿ ಬಟ್ಟೆಗಳನ್ನು ಮಾರಾಟಕ್ಕೆ ತಂದು...
ಧರ್ಮ ಸಂಸ್ಕಾರ ಮಾನವ ಜನಾಂಗ ಗೊತ್ತುಪಡಿಸಿದ ಒಂದು ಆಧ್ಯಾತ್ಮಿಕ ವಿಚಾರವೆಂದು ಅಜ್ಜಾ ವರ ಚೈತನ್ಯ ಸೇವಾ ಆಶ್ರಮದ ಶ್ರೀ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.ಅವರ ಕೃತಿ "ಪರಿವರ್ತನೆ" ಅರೆಭಾಷೆಗೆ ಭಾಷಾಂತರಗೊಂಡಿದ್ದು ಅದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಮನೆಯ ಮಾತು ಸಂಸ್ಕಾರ ಅನ್ಯೋನ್ಯತೆ ಯನ್ನು ನಾವು ಯಾವತ್ತು ಕಡೆಗಣಿಸಬಾರದು. ಧರ್ಮ ನೀತಿ ಸಂಸ್ಕಾರ ಎಲ್ಲವೂ ಸಾಹಿತ್ಯಗಳಲ್ಲಿ...
ಕಳೆದ ವಾರವಷ್ಟೇ ಅಡ್ಡಬೈಲ್-ಬೀದಿಗುಡ್ಡೆ ಪರಿಸರದ ನಾಗರಿಕರು ಸಭೆ ನಡೆಸಿ ರಸ್ತೆಯ ಅಭಿವೃದ್ದಿಗಾಗಿ ಹೋರಾಟ ಸಮಿತಿ ರಚಿಸಿಕೊಂಡಿದ್ದರು. ನಂತರ ರಸ್ತೆಯ ತುರ್ತು ದುರಸ್ತಿ ಹಾಗು ಶಾಶ್ವತ ರಸ್ತೆ ಕಾಮಗಾರಿ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ಅಧ್ಯಕ್ಷರು, ಸುಳ್ಯ ಶಾಸಕರು ಮತ್ತು ಕಡಬ ತಹಶೀಲ್ದಾರರಿಗೆ ಅಂಚೆ ಮೂಲಕ ಮನವಿ ಪತ್ರವನ್ನು ರವಾನಿಸಿದ್ದರು. ಗ್ರಾಮ ಪಂಚಾಯತ್...
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ,ಕೇಂದ್ರ ಸಮಿತಿ ಹುಬ್ಬಳ್ಳಿ , ಜಿಲ್ಲಾ ಮಹಿಳಾ ಘಟಕ ಧಾರವಾಡ , ಗಾಂಧೀ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ರಾಜ್ಯ ಮತ್ತು ಅಂತರ್ರಾಜ್ಯ ಮಟ್ಟದಲ್ಲಿ ಲೇಖನ ಸ್ಪರ್ಧೆಯನ್ನು ಆಯೋಜಿಸಿತ್ತು."ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ವದೇಶಿ ಆಂದೋಲನದ ಪ್ರಸ್ತುತತೆ" ಎಂಬ ವಿಷಯಾಧಾರಿತ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ದಕ್ಷಿಣ ಕನ್ನಡದ ,ಕಡಬ...
ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ವತಿಯಿಂದ ಹಳೆಗೇಟು ಬಸ್ ತಂಗುದಾಣದ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಅ.4 ರಂದು ಸಂಜೆ ನಡೆಯಿತು. ಟ್ರಸ್ಟ್ ಅಧ್ಯಕ್ಷ ರಾದ ಜಯಪ್ರಕಾಶ್ ರೈ, ಶಶಿಧರ ಎಂ ಜೆ, ಮುಸ್ತಫಾ ಕೆ ಎಂ, ಗೋಕುಲ್ ದಾಸ್, ವಿಜೇಶ್ ಹಿರಿಯಡ್ಕ, ಶಾಫಿ ಕುತ್ತಮೊಟ್ಟೆ, ಭವಾನಿ ಶಂಕರ್ ಕಲ್ಮಡ್ಕ, ಮಧುಸೂದನ ಬೂಡು, ನಂದರಾಜ್ ಸಂಕೇಶ,...
ಜೈ ಭೀಮ್ ಯುವ ವೇದಿಕೆ ಸುಳ್ಯ ಸಂಘಟನೆಯ ಸಭೆ ಅ 4 ರಂದು ಗಾಂಧಿನಗರ ನಾವೂರು ಶ್ರೀ ಮಹಾಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಡಾ.ಬಿಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂ ಹಾರವನ್ನು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು . ಸಂಘಟನೆಯ ಮುಖಂಡ ಚಂದ್ರ ಶೇಖರ ಆಲೆಟ್ಟಿ ಸಂಘಟನೆಯ ಬಗ್ಗೆ ಹಾಗೂ ಡಾ.ಬಿಆರ್.ಅಂಬೇಡ್ಕರ್ ಅವರ ಬಗ್ಗೆ ಮಾಹಿತಿಯನ್ನು ನೀಡಿದರು...
ಸುಳ್ಯ ಯುನೈಟೆಡ್ ಫುಟ್ಬಾಲ್ ಕ್ಲಬ್ಆಯೋಜಿಸಿದ ಫುಟ್ಬಾಲ್ ಪಂದ್ಯಾಟವು ಗಾಂಧಿನಗರ ಶಾಲಾ ಮೈದಾನದಲ್ಲಿ ಅ.4 ರಂದು ನಡೆಯಿತು. ಈ ಪಂದ್ಯಾಟದಲ್ಲಿ ಸ್ಥಳೀಯ ಸುಮಾರು 16 ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಪ್ರಥಮ ಬಹುಮಾನವನ್ನು ಜೆಬಿ ಯುನೈಟೆಡ್ ತಂಡ, ದ್ವಿತೀಯ ಸುಳ್ಯ ಯುನೈಟೆಡ್ ತಂಡ ಪಡೆದುಕೊಂಡಿತು.ಬಹುಮಾನ ವಿತರಣೆಯನ್ನು ಹಿರಿಯ ಆಟಗಾರರಾದ ರಫೀಕ್ ಮಲ್ಲು, ಇಕ್ಬಾಲ್ ಜೆಬಿ ಬಷೀರ್ ನ್ಯಾಶನಲ್, ಹಮೀದ್...
Loading posts...
All posts loaded
No more posts
