- Saturday
- March 14th, 2026
ವಿಶ್ವ ಹಿಂದೂ ಪರಿಷದ್ ಭಜರಂಗದಳದ ನೂತನ ಮುಕ್ಕೂರು - ಕುಂಡಡ್ಕ ಛತ್ರಪತಿ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಅ.18 ರಂದು ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ನಡೆಯಿತು. ಅಯೋಧ್ಯಾ ಕರಸೇವಕರಾದ ಯಶೋಧ ಪ್ರಭು ಏನಡ್ಕ ಪೆರುವಾಜೆ ಇವರು ಉದ್ಘಾಟಿಸಿದರು. ಭಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿಕೃಷ್ಣ ಹಸಂತಡ್ಕ ದಿಕ್ಸೂಚಿ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಭಜರಂಗದಳ ಸಂಯೋಜಕರಾದ ಶ್ರೀಧರ್...
ಸುಳ್ಯ ನಗರದ ಖಾಸಗಿ ವಸತಿಗೃಹವೊಂದರಲ್ಲಿ ಹುಡುಗ ಮತ್ತು ಹುಡುಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಘಟನೆ ಇಂದು ವರದಿಯಾಗಿದೆ . ಹುಡುಗ ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್ ಎಂದು ತಿಳಿದುಬಂದಿದ್ದು , ಹುಡುಗಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯ ಕಲ್ಕಜೆಯ ಶೇಷಪ್ಪ ಎಂಬವರ ಪುತ್ರಿ ಇಂದಿರಾ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ...
ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಆಶ್ರಯದಲ್ಲಿ ಅಗಲಿದ ಮಹಾನ್ ಕಲಾವಿದ ಮೋಹನ ಸೋನರಿಗೆ ರಂಗಗೀತೆ ಗಾಯನ- ನುಡಿ ನಮನ ಕಾರ್ಯಕ್ರಮ ನಡೆಯಿತು. ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ " ಸೋನಾರ ಸಾವು ಸಾವಲ್ಲ. ಅದು ಬದುಕಿನ ಮುಂದುವರಿಕೆ. ಪಂಪ ರನ್ನ ಕುಮಾರವ್ಯಾಸರಂತೆ ಸೋನ ಕೂಡಾ ಸದಾ...
ಮುಕ್ಕೂರು: ಮುಕ್ಕೂರು ಕುಂಡಡ್ಕ ಬಜರಂಗದಳ ಛತ್ರಪತಿ ಶಾಖೆಯ ಸಂಯೋಜಕ್ ಆಗಿ ಪ್ರಸಾದ್ ಎನ್ ಕುಂಡಡ್ಕ ಆಯ್ಕೆಯಾಗಿದ್ದಾರೆ.ಅ.18 ರಂದು ಪೆರುವಾಜೆ ಜೆಡಿ ಆಡಿಟೋರಿಯಂ ನಲ್ಲಿ ಪದಗ್ರಹಣ ನಡೆಯಿತು. ಸಹ ಸಂಯೋಜಕ್ ರಾಗಿ ರಮೇಶ್ ಕುಂಡಡ್ಕ, ಗೋ-ರಕ್ಷಾ ಪ್ರಮುಖ್ ರಾಗಿ ಪ್ರಸಾದ್ ಕುಂಡಡ್ಕ, ಆನಂದ ಜಾಲ್ಪಣೆ, ಸುರಕ್ಷಾ ಪ್ರಮುಖ್ ವಾಸುಕುಂಡಡ್ಕ , ಅಖಡ್ ಪ್ರಮುಖ್ -ವಿಶ್ವನಾಥ ಕಂಪವಿದ್ಯಾರ್ಥಿ ಪ್ರಮುಖ್...
ಭಾರತೀಯ ಜನತಾ ಪಕ್ಷ ಶಕ್ತಿ ಕೇಂದ್ರ ಸಂಪಾಜೆ ಕೊಡಗು, ಮಹಿಳಾ ಮೋರ್ಚಾ ಸಂಪಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಜಾಗೃತಿ ಸಮಾವೇಶವು ಸಂಪಾಜೆಯ ಕೊಯನಾಡು ಗಣೇಶ ಕಲಾ ಮಂದಿರದಲ್ಲಿ ಅ.18 ರಂದು ಸಭೆ ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನಾಂಗಿ ಕಂಜಿಪಿಲಿ, ಅಧ್ಯಕ್ಷರು ಮಹಿಳಾ ಮೋರ್ಚಾ ಸಂಪಾಜೆ, ಮುಖ್ಯ ಅತಿಥಿಗಳಾಗಿ ಯಶೋಧ ರಾಮಚಂದ್ರ, ನಿವೃತ್ತ ಪ್ರಾಂಶುಪಾಲರು, ಸುಳ್ಯ...
ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅ.18 ರಂದು ಭೇಟಿ ನೀಡಿದರು. ಇವರಿಗೆ ಶಾಲುಹೊದಿಸಿ ದೇವರ ಪ್ರಸಾದವನ್ನು ಅರ್ಚಕರಾದ ನಾಗರಾಜ್ ಹೆಗಡೆ ವಿತರಿಸಿದರು. ಈ ಸಂದರ್ಭದಲ್ಲಿ ಪಂಜ ಪಂಚಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ಡಾ| ದೇವಿಪ್ರಸಾದ್ ಕಾನತ್ತೂರ್, ಲಿಗೋಧರ ಆಚಾರ್ಯ, ಚೆನ್ನಕೇಶವ ಆಚಾರ್ಯ, ಲೋಕೇಶ್ ಬರಮೇಲು ಹಾಗೂ ನಾರಾಯಣ ಕೃಷ್ಣ ನಗರ...
ಕೊಲ್ಲಮೊಗ್ರ ದಿಂದ ಕಡಂಬಳ ಸಂಚರಿಸುವ ಕಿರುಸೇತುವೆ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕುಸಿತಗೊಂಡು ಸಂಚಾರಕ್ಕೆ ತಡೆಯಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸಿದ ಯುವ ಮುಖಂಡ ಉದಯ ಶಿವಾಲ ತಾಲೂಕು ಪಂಚಾಯತ್ ಸದಸ್ಯ ಉದಯ ಕೊಪ್ಪಡ್ಕರವರಿಗೆ ತಿಳಿಸಿ ಸ್ಪಂದಿಸುವಂತೆ ಮನವಿಮಾಡಿದ್ದರು. ಕೂಡಲೇ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿದ ತಾ.ಪಂ ಸದಸ್ಯ ಉದಯ ಕೊಪ್ಪಡ್ಕ ವಾರದೊಳಗೆ ತಾತ್ಕಾಲಿಕ ದುರಸ್ತಿ ಕಾರ್ಯವನ್ನು...
ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಲಪ್ರಳಯ ಉಂಟಾಗಿರುವ ಬೆನ್ನಲ್ಲೇ ಮತ್ತೆ ಮಳೆ ಭೀತಿ ಎದುರಾಗಿದೆ.ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಅ.20ರಿಂದ ಮುಂದಿನ 4 ದಿನ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಅ.21ರಂದು ಯೆಲ್ಲೋ ಅರ್ಲಟ್ ಇದ್ದರೆ...
ಅಜ್ಜಾವರ ಗ್ರಾಮದ ದೊಡ್ಡೇರಿ ಶ್ರೀ ಕಾಳಿಕಾಂಬ ಮಂದಿರದಲ್ಲಿ ನವರಾತ್ರಿ ಪ್ರಯುಕ್ತ ಅ.17 ರಂದು ಗಣಪತಿ ಹವನದೊಂದಿಗೆ ಪೂಜೆ ಆರಂಭಗೊಂಡಿತು.ಪ್ರತಿ ದಿನ ಪೂಜಾ ಕಾರ್ಯಕ್ರಮ ನಡೆದು,ಅ.24 ರಂದು ಮಹಾಪೂಜೆಯೊಂದಿಗೆ ನವರಾತ್ರಿ ಪೂಜೆ ಸಮಾಪನಗೊಳ್ಳಲಿದೆ.
ಸುಳ್ಯ ಪಶು ಆಸ್ಪತ್ರೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು ಅವರ ಅಮಾನತು ಆದೇಶ ತೆರವಾಗಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಸುಳ್ಯ ತಾಲೂಕಿನಾದ್ಯಂತ ಪ್ರಸಿದ್ಧರಾಗಿದ್ದ ಡಾ. ದೇವಿಪ್ರಸಾದ್ ಕಾನತ್ತೂರು ಅವರ ವಿರುದ್ಧ ಪಿತೂರಿ ನಡೆದು ಸೇವೆಯಿಂದ ಅಮಾನತಾಗುವಂತೆ ಮಾಡಲಾಗಿತ್ತು. ದಾಖಲೆ ತಿದ್ದುಪಡಿ ಮಾಡಿ...
Loading posts...
All posts loaded
No more posts
