Ad Widget

ಪೆರುವಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರ ನೇಮಕ ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್, ವೆಂಕಟಕೃಷ್ಣ ರಾವ್ ಪೆರುವಾಜೆ, ಪದ್ಮನಾಭ ಶೆಟ್ಟಿ ಪೆರುವಾಜೆ, ದಾಮೋದರ ನಾಯ್ಕ‌ ಪೆಲತ್ತಡ್ಕ, ಜಯಪ್ರಕಾಶ್ ರೈ ಪೆರುವಾಜೆ, ಜಗನ್ನಾಥ ರೈ ಪೆರುವಾಜೆ, ಭಾಗ್ಯಲಕ್ಷ್ಮೀ‌ ಅರ್ನಾಡಿ, ನಾರಾಯಣ ಕೊಂಡೆಪ್ಪಾಡಿ, ಯಶೋಧ...

ತೊಡಿಕಾನ : ಅಶ್ಲೀಲ ಫೋಟೋ ಶೂಟ್ ಪ್ರಕರಣ ವಿ.ಹೆಚ್.ಪಿ, ಬಜರಂಗದಳ ಖಂಡನೆ

ತೊಡಿಕಾನ ದೇವರಗುಂಡಿಯ ಬಳಿ ಇತ್ತೀಚೆಗೆ ಕೆಲವರು ಆಶ್ಲೀಲ ಫೋಟೋ ತೆಗೆದಿರುವ ಘಟನೆ ಯ ಬಗ್ಗೆ ಅರಂತೋಡು ವಿಶ್ವ ಹಿಂದೂ ಪರಿಷದ್ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಚಂಡ ತೀವ್ರವಾಗಿ ಖಂಡಿಸಿದೆ. ಅಂತವರಿಗೆ ಮತ್ತು ಇದಕ್ಕೆ ಸಂಬಂಧಿಸಿದ ಅಧಿಕಾರಿ ಗಳು ಕ್ರಮ ಕೈಗೊಳ್ಳಲು ಕೋರಿದೆ. ಯಾರೇ ಆಗಿರಲಿ ಧಾರ್ಮಿಕ ಕ್ಷೇತ್ರಕ್ಕೆ ದಕ್ಕೆ ಆಗುವ...
Ad Widget

ಅಡ್ಡಬೈಲು ಬೋಗಾಯನಕೆರೆ ರಸ್ತೆ ಅಭಿವೃದ್ಧಿ 8.39 ಕೋ. ರೂ. ಮಂಜೂರು – ಶಾಸಕ ಎಸ್.ಅಂಗಾರ

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ವ್ಯಾಪ್ತಿಗೆ ಬರುವ ಅಡ್ಡಬೈಲ -ಬೀದಿಗುಡ್ಡೆ - ಬೋಗಾಯನಕೆರೆ ರಸ್ತೆ ಅಭಿವೃದ್ಧಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ( ಪಿಎಂಜಿಎಸ್ ವೈ ) ಯಡಿ 8.39 ಕೋಟಿ ರೂ . ಮಂಜೂರುಗೊಂಡಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಅವರು ತಿಳಿಸಿದ್ದಾರೆ. 9 ಕಿ.ಮೀ. ಉದ್ದದ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಸ್ಥಳೀಯರ...

ಡಾ.ಮುರಲೀ ಮೋಹನ ಚೂಂತಾರು ಅವರಿಗೆ ರಾಜೀವ್ ಗಾಂಧಿ ವಿವಿ ಪುರಸ್ಕಾರ

ಖ್ಯಾತ ದಂತ ವೈದ್ಯರು, ವೈದ್ಯ ಸಾಹಿತಿ ಡಾ. ಮುರಲೀ ಮೋಹನ ಚೂಂತಾರು ಅವರು ವೃತ್ತಿಯ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅನುಪಮ ಸೇವೆಯನ್ನು ಗುರುತಿಸಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಗೌರವಿಸಲು ತೀರ್ಮಾನಿಸಿದೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್‌. ಸಚ್ಚಿದಾನಂದ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಂಗಳೂರಿನ ರಾಜೀವ್ ಗಾಂಧಿ...

ಕೊಲ್ಲಮೊಗ್ರ : ರಸ್ತೆಯಲ್ಲಿ ಕೆಟ್ಟು ನಿಂತ ಯಂತ್ರ – ತೆರವುಗೊಳಿಸದಿದ್ದರೆ ಸವಾರರಿಗೆ ಕಾದಿದೆ ಸಂಕಟ

ಕಳೆದ ಒಂದು ತಿಂಗಳಿಂದ ಕೊಲ್ಲಮೊಗ್ರ ಪೇಟೆಯಲ್ಲಿ ತಾಂತ್ರಿಕ ಕಾರಣದಿಂದ ಕೆಟ್ಟು ನಿಂತಿರುವ ಜೀಯೋ ಕಂಪೆನಿಯ ಕೇಬಲ್ ಅಳವಡಿಕೆಯ ಯಂತ್ರದಿಂದಾಗಿ ವಾಹನ ಸವಾರರಿಗೆ ತೊಂದರೆ ಉಂಟುಮಾಡುತ್ತಿದೆ. ಈ ಬಗ್ಗೆ ಜೀಯೋ ಕಂಟ್ರಾಕ್ಟರ್ ಗಳಿಗೆ ಹಲವು ಸಲ ಮನವಿ ಮಾಡಿದ್ದರು ಕೂಡ ಕ್ಯಾರೇ ಅನ್ನುತ್ತಿಲ್ಲ. ಕೆಲವೇ ದಿನಗಳಲ್ಲಿ ತೆರವುಗೊಳಿಸುತ್ತೇವೆ ಎಂದು ಭರವಸೆ ಮಾತ್ರ ನೀಡುತ್ತಿದ್ದಾರೆ. ರಾತ್ರಿ ವೇಳೆ ಹಾಗೂ...

ಕಂಡಕ್ಟರ್ ಅಚಾತುರ್ಯಕ್ಕೆ ಸಹಾಯವಾಣಿಗೆ ದೂರು ನೀಡಿದ ಮಕ್ಕಳು : ತುರ್ತು ಸ್ಪಂದಿಸಿದ ಇಲಾಖೆ

ಸುಳ್ಯ ಕೆ ಎಸ್ ಆರ್ ಟಿ ಸಿ ಬಸ್ ಕಂಡಕ್ಟರ್ ನಿಂದಾದ ಅಚಾತುರ್ಯಕ್ಕೆ ಸಹಾಯವಾಣಿಗೆ ಮಕ್ಕಳು ದೂರು ನೀಡಿದ್ದು, ಸಂದೇಶ ಬಂದ ಕೂಡಲೇ ಇಲಾಖೆ ತುರ್ತು ಸ್ಪಂದಿಸಿದ ಘಟನೆ ಅ.25 ರಂದು ನಡೆದಿದೆ.ಮಡಪ್ಪಾಡಿಯ ಕಡ್ಯ ರೇಷ್ಮಾ ಯತೀಶ್ ರವರ ಪುತ್ರ 4 ನೇ ತರಗತಿ ವಿದ್ಯಾರ್ಥಿ ಆರ್ಯ ಕಡ್ಯ ಹಾಗೂ ಪವಿತ್ರ ಮಹೇಶ್ ದಂಪತಿಗಳ ಪುತ್ರ...

ಕಾವಿನಮೂಲೆ : ಟಿಂಬರ್ ಸಾಗಿಸುತ್ತಿದ್ದ ಲಾರಿ ಪಲ್ಟಿ

ಬೆಳ್ಳಾರೆ ಕಾವಿನಮೂಲೆ ಸಮೀಪ ಟಿಂಬರ್ ಲಾರಿಯೊಂದು ಪಲ್ಟಿಯಾದ ಘಟನೆ ಅ.29 ರ ರಾತ್ರಿ ನಡೆದಿದೆ. ಬೆಳ್ಳಾರೆ ಕಡೆಯಿಂದ ಸುಳ್ಯ ಕಡೆಗೆ ರಬ್ಬರ್ ಮರಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ಪಲ್ಟಿಯಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಲಾರಿಯಲ್ಲಿದ್ದ ಮರದ ತುಂಡುಗಳೆಲ್ಲ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು.

ತಾಯಿ ಗದರಿಸಿದಕ್ಕೆ ಮಂಗಳೂರಿನಿಂದ ಪೆರ್ಲ ಅಜ್ಜಿಯ ಮನೆಗೆ ಸೈಕಲಿನಲ್ಲಿ ಹೊರಟ ಬಾಲಕ

ಮಂಗಳೂರಿನ ಕೊಂಚಾಡಿ ಪರಿಸರದ ಸೂರಜ್ ಎಂಬ ಬಾಲಕ ತಾಯಿ ಗದರಿಸಿದ್ದಕ್ಕೆ ಕೋಪಿಸಿಕೊಂಡು ತನ್ನ ಸೈಕಲ್ಲನ್ನು ಏರಿ ಮನೆಯವರಿಗೆ ವಿಷಯ ತಿಳಿಸದೇ ಕೇರಳದಲ್ಲಿರುವ ತನ್ನ ಅಜ್ಜಿಯ ಮನೆಗೆ ಹೊರಟಿರುತ್ತಾನೆ. ಮಧ್ಯಾಹ್ನ 12:00 ಗಂಟೆಗೆ ಕಾಣೆಯಾದ ಬಾಲಕ ಆತಂಕದಿಂದ ಮನೆಯವರು ಹುಡುಕಲು ಆರಂಭಿಸಿದಾಗ ಹುಡುಗ ಕಲ್ಲಡ್ಕದಲ್ಲಿ ಇದ್ದಾನೆ ಎಂದು ವಿಷಯ ತಿಳಿದು ಬಂದಿದೆ. ಕಲ್ಲಡ್ಕದಲ್ಲಿ ಬಾಲಕ ಸೈಕಲ್ನಲ್ಲಿ ಬರುವುದನ್ನು...

ಬೆಳ್ಳಾರೆ ಝಖರಿಯಾ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮ

ಬೆಳ್ಳಾರೆ ಝಖರಿಯಾ ಜುಮಾ ಮಸ್ಜಿದ್ ನಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆ ಯ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಮಸೀದಿಯ ಆಡಳಿತಾಧಿಕಾರಿ ಮುಹಮ್ಮದ್ ರಾಫಿ ಯವರ ನಿರ್ಧೆಶನ ಪ್ರಕಾರ ಕೋವಿಡ್ ನಿಯಮಾನುಸಾರ ಸರಳವಾಗಿ ಆಚರಿಸಲಾಯಿತು. ಸ್ಥಳೀಯ ಖತೀಬ್ ಯೂನುಸ್ ಸಖಾಫಿ ವಯನಾಡ್ ರವರ ನೇತ್ರತ್ವದಲ್ಲಿ ಕಾರ್ಯಕ್ರಮ ನಡೆದು ಪ್ರವಾದಿಯವರ ಜೀವನ ಕುರಿತು...

ಶುಭವಿವಾಹ ಮೇಘನಾ – ಶಶಾಂಕ್

ನೆಲ್ಲೂರು ಕೆಮ್ರಾಜೆ ಗ್ರಾಮದ ಗಟ್ಟಿಗಾರು ಚಂದ್ರಶೇಖರ ರವರ ಪುತ್ರಿ ಮೇಘನಾ ಳ ವಿವಾಹವು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಹಡೀಲು ಚಿನ್ನಪ್ಪ ಗೌಡರ ಪುತ್ರ ಶಶಾಂಕ್ ರೊಂದಿಗೆ ಅ.29 ರಂದು ಉಡುಪಿ ಚಿಟ್ಟಾಡಿಯ ಶ್ರೀ ಸರಸ್ವತಿ ಸಭಾಭವನದಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!