- Saturday
- March 14th, 2026
ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾಗಿ ವಿನಯ ಕುಮಾರ್ ಕಂದಡ್ಕ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪೆಲ್ತಡ್ಕ ಅವಿರೋಧ ಆಯ್ಕೆಯಾಗಿದ್ದಾರೆ. ಅಧ್ಯಕ್ಷತೆಗೆ ಮತ್ತು ಉಪಾಧ್ಯಕ್ಷ ತೆಗೆ ಒಬ್ಬೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ತಹಶೀಲ್ದಾರ್ ಅನಂತಶಂಕರ್ ಅಧಿಕೃತ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಎಸ್.ಅಂಗಾರ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಉಪ...
ಜಾಲ್ಸೂರು ಎನ್ ಇ ಸಂಕಿರಣದಲ್ಲಿ ಎನ್ ಇ ಸಹೋದರರ ಮಾಲಕತ್ವದ ಎನ್ ಇ ಗ್ರೋಸರಿ ಇಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಗೆ ಅಸ್ಸಯ್ಯದ್ ಎ ಎಸ್ ಆಟು ಕೊಯ ತಂಙಳ್ ಕುಂಬೋಳ್ ಆಶೀರ್ವದಿಸಿದರು. ಸ್ಥಳೀಯ ಮಸೀದಿ ಖತೀಬರಾದ ಅಬೂಬಕ್ಕರ್ ಫೈಝಿ ಕುಂಬಡಾಜೆ ದುವಾ ನೆರವೇರಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಬ್ಬಾಸ್ ಮುಸ್ಲಿಯಾರ್, ಹಾಜಿ ಅಬ್ದುಲ್ಲಾ ಕಟ್ಟೆ ಕಾರ್ಸ್,...
ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಾಮಾನ್ಯ ಸಭೆಯು ನ.3 ನಡೆಯಿತು. ಈ ಸಂದರ್ಭದಲ್ಲಿ ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷರಾಗಿ ಐದನೇ ಬಾರಿಗೆ ಆಯ್ಕೆಯಾದ ನಿತ್ಯಾನಂದ ಮುಂಡೋಡಿಯವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ್, ಉಪಾಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಜಾಕೆ ಸದಾನಂದ, ಎ.ವಿ.ತೀರ್ಥರಾಮ, ಕೆ.ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ...
ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ರಿ) ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೋಸ್ಕರ ಅಂತರ್ಜಾಲ ಮೂಲಕ (ಝೂಮ್)ರಾಜ್ಯಮಟ್ಟದ ಕನ್ನಡ ಭಾಷಣ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯ ಪ್ರಥಮ ಬಹುಮಾನವನ್ನು ರಾಮಕುಂಜದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಕೇರ್ಪಳದ ಕು. ಅನನ್ಯ ಕೆ.ಟಿ., ದ್ವಿತೀಯ ಬಹುಮಾನವನ್ನು ಸುಳ್ಯದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ...
ಮೊಗ್ರ ಒಡಿಯೂರು ಸಂಘದವರಿಂದ ರಸ್ತೆ ಬದಿ ಸ್ವಚ್ಛತಾ ಕಾರ್ಯ ಶ್ರಮದಾನ ಮೂಲಕ ಇಂದು ನಡೆಯಿತು. ಬಳ್ಪದ ಎಡೋಣಿಯಿಂದ ಮೊಗ್ರ ಶಾಲೆಯವರೆಗೆ ರಸ್ತೆಬದಿಯನ್ನು ಸ್ವಚ್ಚ ಮಾಡಲಾಯಿತು. ಹಾಗೂ 30ಕ್ಕೂ ಹೆಚ್ಚು ಸಂಘದ ಸದಸ್ಯರು ಸೇರಿ ಸಂಜೆಯವರೆಗೆ ಶ್ರಮದಾನ ನಡೆಸಿದರು.
ಪೆರುವಾಜೆ ಗ್ರಾಮದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಗುದ್ದಲಿ ಪೂಜಾ ಕಾರ್ಯಕ್ರಮವು ಶಾಸಕರ ನೇತೃತ್ವದಲ್ಲಿ ನ.01 ರಂದು ಪೆರುವಾಜೆ ಗ್ರಾಮದಲ್ಲಿ ನಡೆಯಿತು. ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಸುಮಾರು 27.50 ಲಕ್ಷ ದ ಯಾತ್ರಿ ನಿವಾಸದ ಗುದ್ದಲಿ ಪೂಜೆ ಕಾರ್ಯಕ್ರಮವು ಈ ಸಂದರ್ಭದಲ್ಲಿ ನಡೆಯಿತು. ಪೆರುವಾಜೆ ಗ್ರಾಮದ ಮುಕ್ಕೂರು, ಮುರ್ಕೆತ್ತಿ, ಪೆರುವಾಜೆ ಬೂತ್ ನಲ್ಲಿ ಸುಮಾರು...
ದಕ್ಷಿಣ ಕನ್ನಡ ಜಿಲ್ಲಾ ಯುವ ಬ್ರಿಗೇಡ್ ನ ಸಂಚಾಲಕರಾಗಿ ಸುಳ್ಯದ ಮನೀಶ್ ಗೂನಡ್ಕ ಆಯ್ಕೆಯಾಗಿದ್ದರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದ ರಾಜ್ಯಮಟ್ಟದ ಲೀಡರ್ಸ್ ಮೀಟ್ ಕಾರ್ಯಕ್ರಮದಲ್ಲಿ ರಾಜ್ಯ ಮಾರ್ಗದರ್ಶನ ಮಂಡಳಿ ಇವರನ್ನು ಆಯ್ಕೆ ಮಾಡಿದೆ.
ಕಡಬ ತಾ. ಕೇನ್ಯ ಗ್ರಾಮದ ಪೋಳೆ ದಿ ಕಿಟ್ಟಣ್ಣ ಗೌಡರ ಪುತ್ರ ಹೇಮಂತ್ ಪಿ.ಕೆ. ಇವರ ವಿವಾಹವು ಬೆಳ್ತಂಗಡಿ ತಾ. ತಣ್ಣೀರುಪಂತ ಗ್ರಾಮದ ಮಡಪ್ಪಾಡಿ ಬಾಬು ಗೌಡರ ಪುತ್ರಿ ಡೀಕ್ಷಿತಾ (ಸೌಮ್ಯ ಎಂ.)ಳೊಂದಿಗೆ ಅ.28 ರಂದು ಪಂಜ ಪೈಂದೋಡಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ವಿಶ್ವ ಹಿಂದೂ ಪರಿಷತ್ ಭಜರಂಗದಳ ಛತ್ರಪತಿ ಶಾಖೆ ಮುಕ್ಕೂರು ಕುಂಡಡ್ಕ ಇದರ ವತಿಯಿಂದ ಮುಕ್ಕೂರು ಶಾಲಾ ವಠಾರದ ಸ್ವಚ್ಛತಾ ಕಾರ್ಯಕ್ರಮವು ನ.01 ರಂದು ನಡೆಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಯುವಸೇನೆ ಮುಕ್ಕೂರು ಪೆರುವಾಜೆ ವತಿಯಿಂದ ಶ್ರೀ ಕೊರಗಜ್ಜ ದೈವಸ್ಥಾನ ಕುಂಡಡ್ಕ ಇದರ ಬ್ರಹ್ಮಕಲಶ ಸಂದರ್ಭದಲ್ಲಿ ನಡೆಸಿದ 'ಯುವಸೇನೆ ಸೇವಾರ್ಥ ಲಕ್ಕಿ ಕೂಪನ್' ನಲ್ಲಿ ಉಳಿಕೆಯಾದ ರೂ.29,230 ಹಣವನ್ನು ದೈವಸ್ಥಾನಕ್ಕೆ ಹಸ್ತಾಂತರಿಸಲಾಯಿತು. ದೈವಸ್ಥಾನದ ವತಿಯಿಂದ ಕುಂಬ್ರ ದಯಾಕರ ಆಳ್ವ ಪೆರುವಾಜೆ, ಕುಶಾಲಪ್ಪ ಗೌಡ ಕುಂಡಡ್ಕ, ದಯಾನಂದ ರೈ ಕನ್ನೆಜಲು, ಬಾಲಕೃಷ್ಣ ರೈ ಕನ್ನೆಜಲು ಹಾಗೂ ಹೊನ್ನಪ್ಪ ಗೌಡ...
Loading posts...
All posts loaded
No more posts
