- Saturday
- March 14th, 2026
ಗುಂಡಿಅಂಗಡಿ ಮೈರ್ಪಳ್ಳ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 5ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟೀಕರಣ ನಡೆಯಲಿದೆ. ಈ ಸಂದರ್ಭದಲ್ಲಿ ಜಿ.ಪಂ.ಇಂಜಿನಿಯರ್ ಹನುಮಂತ ರಾಯಪ್ಪ, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಸಹಕಾರಿ ಭಾರತಿ ಅಧ್ಯಕ್ಷ ಪ್ರವೀಣ್ ಎಸ್.ರಾವ್, ಮಾಧನ ನಂದಗೋಕುಲ, ಶರತ್ ಕಾಸಿನಗೊಡ್ಲು, ಭಾನುಪ್ರಕಾಶ್ ಪೆಲ್ತಡ್ಕ, ಗುತ್ತಿಗೆದಾರ ಹರಿಪ್ರಸಾದ್ ಎಲಿಮಲೆ...
ಈ ಜಗತ್ತೇ ಹಾಗೆ ಒಬ್ಬ ವ್ಯಕ್ತಿ ಏನಾದರೂ ಒಂದು ಸಾಧಿಸಬೇಕೆಂದು ಹೊರಟಾಗ ಕೆಲವರು ಆ ವ್ಯಕ್ತಿಯ ಸಾಧನೆಯ ಹಾದಿಯಲ್ಲಿ ಆತನಿಗೆ ಬೆಂಗಾವಲಾಗಿ ನಿಂತರೆ ಇನ್ನೂ ಕೆಲವರು ಆತನ ಆ ಸಾಧನೆಯ ಗುರಿಯನ್ನು ಮುಟ್ಟದಂತೆ ಮಾಡಲು ತುಂಬಾ ಪ್ರಯತ್ನಿಸುತ್ತಾರೆ.ನಾವು ಸಾಧನೆ ಮಾಡಲು ಹೊರಟಾಗ ತುಂಬಾ ಜನ ನಮ್ಮ ಕಾಲೆಳೆಯಲೆಂದೇ ಕಾಯುತ್ತಾ ಕುಳಿತಿರುತ್ತಾರೆ. ಆದರೆ ಆ ಕಾಲೆಳೆಯಲೆಂದೇ ಕಾಯುತ್ತಾ...
ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಕೇಂದ್ರ ವಳಲಂಬೆ ಇದರ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಗಾನ ನೃತ್ಯ ತರಬೇತಿಯ ನಾಲ್ಕನೇ ಬ್ಯಾಚ್ ನ ತರಗತಿಗಳು ಇದೇ ನ.28ರಿಂದ ಪ್ರತಿ ಭಾನುವಾರ ನಡೆಯಲಿವೆ. ಪ್ರತಿ ಮಧ್ಯಾಹ್ನ 2 ರಿಂದ ನಡೆಯಲಿರುವ ತರಗತಿಗೆ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಂಚಾಲಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9481759851, 9481447718, 9481973364 ಸಂಪರ್ಕಿಸಬಹುದಾಗಿದೆ.
ಅಮರ ಸುಳ್ಯ ಸುದ್ದಿ ಪತ್ರಿಕೆ ವತಿಯಿಂದ ದೀಪಾವಳಿ ವಿಶೇಷಾಂಕ ತೃತೀಯ ಸ್ಥಾನವನ್ನು ಪಡೆದ ವಿಜೇತ ಆಯುಷ್ಮಾನ್ ಪಿ. ರವರಿಗೆ ಬಹುಮಾನದ ಪ್ರಾಯೋಜಕರಾದ ಶಫೀಕ್ ಮಠ ಮಾಲಕತ್ವದ ಪಾದುಕ ಕಲೆಕ್ಷನ್ ನಲ್ಲಿ ನ.26ರಂದು ಬಹುಮಾನ ವಿತರಣೆ ನಡೆಯಿತು. ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ವ್ಯಾಪಾರ ಸಂಸ್ಥೆಗಳಾದ...
ಅಮರ ಸುಳ್ಯ ಸುದ್ದಿ ಪತ್ರಿಕೆಯ ವತಿಯಿಂದ 2020 ನೇ ಸಾಲಿನ ದೀಪಾವಳಿ ವಿಶೇಷಾಂಕದಲ್ಲಿ ಮುದ್ದು ಕಂದ ಫೋಟೋ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಮಾರು ನೂರಕ್ಕೂ ಹೆಚ್ಚು ಪುಟಾಣಿ ಮಕ್ಕಳ ಫೋಟೋಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಮೂವರು ಮಕ್ಕಳು ಪ್ರಥಮ ದ್ವಿತೀಯ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದ್ವಿತೀಯ ಬಹುಮಾನದ ಪ್ರಾಯೋಜಕರಾಗಿ ರಥಬೀದಿಲ್ಲಿ ಕಾರ್ಯಚರಿಸುತ್ತಿರುವ ಶಾಫಿ ಕುತ್ತಮೊಟ್ಟೆ...
ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಮಡ್ಕದಲ್ಲಿ 7ನೇ ವರ್ಷದ ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಸಾಮೂಹಿಕ ತಂಬಿಲ ಮತ್ತು ಶ್ರೀ ಮುಳ್ಳುಗುಳಿಗ ದೈವಕ್ಕೆ ಅಗೇಲು ಸಮ್ಮಾನ ಕಾರ್ಯಕ್ರಮವು ಡಿ. 06 ರ ಆದಿತ್ಯವಾರ ಸಂಜೆ ಗಂಟೆ 6 ರಿಂದ ಜರುಗಲಿರುವುದು. ಸದ್ರಿ ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿರುವುದರಿಂದ ಸೇವೆ ಮಾಡಲಿಚ್ಚಿಸುವವರು ಡಿ.06 ರಂದು ಸಂಜೆ ಗಂಟೆ 6ರ...
ಸುಳ್ಯ ತಾ. ಅರಂತೋಡು ಗ್ರಾಮದ ಕಿರ್ಲಾಯ ಪೂಜಾರಿಮನೆ ದಿ.ಪುಟ್ಟಪ್ಪ ರವರ ಪುತ್ರಿ ಕೀರ್ತಿಶ್ರೀ ಯ ವಿವಾಹವು ಮಡಿಕೇರಿ ತಾ. ಪೆರಾಜೆ ಗ್ರಾಮದ ನಿಡ್ಯಮಲೆ ದಿ.ಜನಾರ್ಧನ ಮಾಸ್ತರ್ ರವರ ಪುತ್ರ ಮನೋಜ್ ರೊಂದಿಗೆ ನ.18 ರಂದು ವಧುವಿನ ಮನೆಯಲ್ಲಿ ನಡೆಯಿತು.
ದೆಹಲಿ ಮಿತ್ರ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರ ಆಶಯದಂತೆ ಕಳಂಜ ಗ್ರಾಮದ ಸುತ್ತಮುತ್ತಲಿನ ಜನರಿಗೆ ಅವರ ಗ್ರಾಮದ ಕಿಟಕಿಯಿಂದಲೇ ಸಾಂಸ್ಕೃತಿಕ ಜಗತ್ತಿನ ದರ್ಶನ ಮಾಡುವ ವಿಶಿಷ್ಟ ಪರಿಕಲ್ಪನೆಯೊಂದಿಗೆ, ಎಲ್ಲರನ್ನೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರೊಂದಿಗೆ ಸಾಂಸ್ಕೃತಿಕವಾಗಿ ಬೆಸುಗೆ ಹಾಕುವ ಪ್ರಯತ್ನವಾಗಿ ಬೆಳ್ಳಾರೆ ಸಮೀಪದ ಕಳಂಜ ಗ್ರಾಮದ ತಂಟೆಪ್ಪಾಡಿ ಎಂಬಲ್ಲಿ 'ನಿನಾದ ಸಾಂಸ್ಕೃತಿಕ ಕೇಂದ್ರ'ವು ರೂಪುಗೊಳ್ಳುತ್ತಿದ್ದು...
ಸೀತಾರಾಮ ಪಲ್ಲೋಡಿ ನೆಲ್ಯಾಡಿ ಯುನಿವರ್ಸಿಟಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಪಂಜದ ಸೀತಾರಾಮ ಪಲ್ಲೋಡಿಯವರು ಪಿ.ಹೆಚ್.ಡಿ. ಪದವಿ ಪಡೆದುಕೊಂಡಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಲೋಕೇಶ್ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ "ದಕ್ಷಿಣ ಕನ್ನಡದಲ್ಲಿ ರಾಜಕೀಯ ಪತ್ರಿಕೋದ್ಯಮ : ಆಯಾಮ ಮತ್ತು ಪ್ರಭಾವ ( C 1840 – 1956)" ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯ...
ಸುಳ್ಯ ತಾ.ಪಂ ಕಚೇರಿಯಲ್ಲಿ ನ.೨೫ರಂದು ನಡೆದ ಕೆಡಿಪಿ ಸಭೆಯಲ್ಲಿ ಈ ಭಾರಿ ಹಲವು ಮೂಲಭೂತ ಸಮಸ್ಯೆಗಳ ಕುರಿತು ಪ್ರಶ್ನೋತ್ತರಗಳು ಹಾಗೂ ಪ್ರಗತಿ ಪರಿಶೀಲನಾ ಸಭೆ, ಚರ್ಚೆ ಇಂದು ನಡೆಯಿತು . ಗ್ರಾ.ಪಂ ಚುನಾವಣೆ ಸಮೀಪಿಸುತ್ತಿದ್ದಂತೆ ಅಧಿಕಾರಿಗಳ ಕೆಲಸ ಕಾರ್ಯಗಳ ಕುರಿತು ಸಭೆಯಲ್ಲಿ ವಿವಿಧ ಸಮಸ್ಯೆಗಳ ಪರಿಶೀಲನಾ ಸಭೆಯು ನಡೆದು ಕಳೆದ ಎರಡು ವರ್ಷಗಳಿಂದ ಮಂಡೆಕೋಲು ಬೈಲಿನಲ್ಲಿ...
Loading posts...
All posts loaded
No more posts
