Ad Widget

ಕುಂತೂರು : ಶಾಸಕ ಅಂಗಾರರಿಂದ ಕಾರ್ಯಕರ್ತರ ಭೇಟಿ

ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ನ ಕುಂತೂರು ಎರಡನೇ ವಾರ್ಡ್ ನ ಬೂತ್ ಗೆ ಭೇಟಿ ಮಾಡಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಜಿ.ಪಂ‌.ಸದಸ್ಯೆ ಆಶಾ ತಿಮ್ಮಪ್ಪ ಉಪಸ್ಥಿತರಿದ್ದರು.

ಸೋಣಂಗೇರಿ : ಕಾಂಗ್ರೆಸ್ ಬೆಂಬಲಿತರಿಂದ ಕೊನೆಕ್ಷಣದ ಮತಯಾಚನೆ

ಸೋಣಂಗೇರಿಯಲ್ಲಿ ಕಾಂಗ್ರೆಸ್ ಬೆಂಬಲಿತರಿಂದ ಕೊನೆಕ್ಷಣದ ಮತಯಾಚನೆ ನಡೆಯುತ್ತಿದೆ.
Ad Widget

ಐನೆಕಿದು: ಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ

ಐನೆಕಿದು 1ನೇ ವಾರ್ಡ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಗಿರೀಶ್ ಆಚಾರ್ಯ ,ಭಾರತಿ ಶಶಿಕಾಂತ್, ಲಲಿತಾ ಗುಂಡಡ್ಕ, ಹಾಗೂ ಬಿಜೆಪಿ ಕಾರ್ಯಕರ್ತರುಗಳಾದ ವಿಶ್ವನಾಥ ಬಿಳಿಮಲೆ,ಕಿಶೋರ್ ಕುಮಾರ್ ಕೂಜುಗೋಡು, ಜಯಪ್ರಕಾಶ್ ಕೂಜುಗೋಡು, ನವೀನ್ ಕಟ್ರಮನೆ, ಕಿರಣ್ ಪೈಲಾಜೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕನಕಮಜಲು : ಅಭ್ಯರ್ಥಿಗಳ ಜತೆ ಬಿಜೆಪಿ ಕಾರ್ಯಕರ್ತರು

ಕನಕಮಜಲು ಬೂತ್ ನಲ್ಲಿ ಅಭ್ಯರ್ಥಿಗಳ ಪರವಾಗಿ ನಾಯಕರು ಹಾಗೂ ಕಾರ್ಯಕರ್ತರು ಕೊನೆಯ ಹಂತದ ಮತಯಾಚನೆ ನಡೆಸಿದರು.

ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಬೆಂಬಲಿಗರ ಮತಬೇಟೆ

ಅಮರಪಡ್ನೂರು ಗ್ರಾಮದ ವಾರ್ಡ್ 1ರ ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸತ್ಯಪ್ರಸಾದ್ ಪುಳಿಮಾರಡ್ಕ, ಜನಾರ್ದನ ಸುಬ್ಬ ಬೈರ, ಭುವನೇಶ್ವರಿ (ಸ್ವಾತಿ) ಮತ್ತು ಬಿಜೆಪಿ ಬೆಂಬಲಿಗರು ಅಭ್ಯರ್ಥಿಗಳ ಪರವಾಗಿ ಕೊನೆ ಕ್ಷಣದ ಮತಬೇಟೆ ನಡೆಸಿದರು.

ಸೋಣಂಗೇರಿ : ಕಾಂಗ್ರೆಸ್ ಬೆಂಬಲಿತರಿಂದ ಕೊನೆಕ್ಷಣದ ಮತಯಾಚನೆ

ಸೋಣಂಗೇರಿಯಲ್ಲಿ ಕಾಂಗ್ರೆಸ್ ಬೆಂಬಲಿತರಿಂದ ಕೊನೆಕ್ಷಣದ ಮತಯಾಚನೆ ನಡೆಯುತ್ತಿದೆ.

ಕೊಲ್ಲಮೊಗ್ರ : ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದ ಶಾಸಕ ಎಸ್.ಅಂಗಾರ

ಕೊಲ್ಲಮೊಗ್ರ ಬೂತ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಶಾಸಕ ಎಸ್.ಅಂಗಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಮಾಧವ ಚಾಂತಾಳ, ಉದಯ ಕೊಪ್ಪಡ್ಕ, ಜಯಶ್ರೀ ಎಸ್. , ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ವಿ.ತೀರ್ಥರಾಮ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಜ್ಜಾವರ : ಪಕ್ಷೇತರ ಅಭ್ಯರ್ಥಿ ಅಶೋಕ್ ಕುಮಾರ್ ಮತಯಾಚನೆ

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು (5ನೇ ವಾರ್ಡ್)ಪಕ್ಷೇತರ ಅಭ್ಯರ್ಥಿ ಅಶೋಕ್ ಕುಮಾರ್ ರವರೊಂದಿಗೆ ಬೆಂಬಲಿಗರು ಮತಯಾಚಿಸಿದರು.

ಗುತ್ತಿಗಾರು : ಕಣ್ಣು ಕಾಣದಿದ್ದರೂ ಮತದಾನಕ್ಕೆ ಬಂದು ಮಾದರಿಯೆನಿಸಿದ ಗುರುವ

ಮತದಾನ ಮಾಡಲು ಹಲವರು ಹೋಗದೇ ಇರುವ ಸಂದರ್ಭದಲ್ಲಿ ತೀರ ಬಡತನದಲ್ಲಿರುವ ಕಟ್ಟಿಗೆ ಆಯ್ದು ಹೋಟೆಲ್ ಗೆ ಮಾರಿ ಜೀವನ ಸಾಗಿಸುತ್ತಿರುವ ಈ ದಂಪತಿಗಳು ಎಲ್ಲರಿಗೆ ಮಾದರಿಯೆನಿಸಿದ್ದಾರೆ. ಕಣ್ಣು ಕಾಣದೇ ಇರುವ ಪತಿ ಗುರುವರನ್ನು ಕರೆದುಕೊಂಡು ಪ್ರತಿದಿನ ಕಟ್ಟಿಗೆ ಸಂಗ್ರಹಕ್ಕೆ ಹೋಗುವ ಪತ್ನಿ ಐತೆ ಕೂಡ ಮತದಾನಕ್ಕೆ ಜತೆಯಾಗಿ ಬಂದು ಮಾದರಿ ಮತದಾರರೆನಿಸಿಕೊಂಡರು.

ಅಜ್ಜನಗದ್ದೆ : ಬಿಜೆಪಿ ಬಂಡಾಯ ಅಭ್ಯರ್ಥಿ ಭೇಟಿ ಮಾಡಿದ ಎಸ್.ಎನ್. ಮನ್ಮಥ

ಅಮರಪಡ್ನೂರು ಗ್ರಾಮದ ವಾರ್ಡ್ 1ರ ಅಜ್ಜನಗದ್ದೆ ಬೂತ್ ನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ರಾಧಾಕೃಷ್ಣ ಗೌಡ ಕೊರತ್ಯಡ್ಕ ಮತ್ತು ಬೆಂಬಲಿಗರನ್ನು ಎಸ್.ಎನ್. ಮನ್ಮಥ ಭೇಟಿ ಮಾಡಿ ಮಾತನಾಡಿದರು.
Loading posts...

All posts loaded

No more posts

error: Content is protected !!