- Sunday
- March 15th, 2026
ಹರಿಹರ ಪಲ್ಲತ್ತಡ್ಕ ಗ್ರಾಮದ ಎಲ್ಲಪಡ್ಕ ದಲ್ಲಿರುವ ಶ್ರೀ ಗುಳಿಗರಾಜ ದೈವಸ್ಥಾನದಲ್ಲಿ ಜ.27 ಬುಧವಾರ ದಂದು ವಾರ್ಷಿಕ ನೇಮೋತ್ಸವ ನಡೆಯಲಿದೆ ಹಾಗೂ ಮಧ್ಯಾಹ್ನ 1:00 ಗಂಟೆಯಿಂದ ದೈವಸ್ಥಾನದ ವಠಾರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ವರದಿ:-✍ಉಲ್ಲಾಸ್ ಕಜ್ಜೋಡಿ
ಪೈಕ ಶ್ರೀ ಉಳ್ಳಾಕುಲು ಮತ್ತು ಮಲೆ ದೈವಗಳ ಹಾಗೂ ಅಜ್ಜಿ ದೈವದ ಸಾನ್ನಿಧ್ಯಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಜ .19 ಹಾಗೂ 20 ರಂದು ನಡೆಯಿತು . ಜ.19 ರಂದು ತಂತ್ರಿಗಳ ಸ್ವಾಗತ ಕಾರ್ಯಕ್ರಮ ,ಶಿಲ್ಪಿಗಳಿಂದ ದೈವಸ್ಥಾನ ಬಿಟ್ಟುಕೊಡುವ ಕಾರ್ಯಕ್ರಮ ,ಸಾಯಂಕಾಲ ದೇವತಾ ಪ್ರಾರ್ಥನೆ ,ಪುಣ್ಯಾಹವಾಚನ ಸಪ್ತಶುದ್ದಿ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ,...
ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಮಹಿಳಾ ಕಾಯಕೋತ್ಸವ ಕಾರ್ಯಕ್ರಮಕ್ಕೆ ಜ.18 ರಂದು ಚಾಲನೆ ನೀಡಲಾಯಿತು.ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಕಾಯಕೋತ್ಸವಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ನರೇಗಾ ತಾಂತ್ರಿಕ ಸಹಾಯಕರಾದ ರಶ್ಮಿ ಎನ್ , ತೋಟಗಾರಿಕಾ ತಾಂತ್ರಿಕ ಸಹಾಯಕರಾದ ಆಕಾಂಕ್ಷ ರೈ ಎ ಇವರು ಮ.ಗಾಂ.ರಾ.ಗ್ರಾ.ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಐಇಸಿ...
ಹಲ್ಲುಗಳು ಇತರ ಅಂಗಗಳಂತೆ ಶ್ರೇಷ್ಠ ಅಂಗವಾಗಿದೆ. ಅದರ ರಕ್ಷಣೆ ಅಗತ್ಯ ಎಂದು ಸುಳ್ಯ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕರುಣಾಕರ ಕೆ.ವಿ ಹೇಳಿದರು. ಇವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜ.22ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಬಾಯಿ...
ಪೆರುವಾಜೆ ಗ್ರಾಮದ ಅರ್ನಾಡಿ ಹತ್ತಿರ ಚಿರತೆಯೊಂದು ಓಡಾಟ ನಡೆಸಿದ ವಿಚಾರ ತಿಳಿದುಬಂದಿದೆ. ಗ್ರಾಮಸ್ಥರು ಜಾಗರೂಕರಾಗಿದ್ದು ರಾತ್ರಿ ಪ್ರಯಾಣ, ತೋಟಗಳಿಗೆ ರಾತ್ರಿ ನೀರು ಬಿಡುವ ಕೃಷಿಕರು ಎಚ್ಚರ ವಹಿಸುವಂತೆ ಹಾಗೂ ಚಿರತೆ ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಬೆಳ್ಳಾರೆ ಶಾಖೆಯ ಉಪವಲಯಾರಣ್ಯಾಧಿಕಾರಿ ಪ್ರಸಾದ್.ಕೆ.ಜೆ ವಿನಂತಿಸಿದ್ದಾರೆ. ಸಂಪರ್ಕ ಸಂಖ್ಯೆ : 9480108532, 9480527590.
ಭಾರತ ಸರಕಾರದ ವತಿಯಿಂದ ಗ್ರಾಮೀಣ ವಸತಿಪ್ರದೇಶದ ಆಸ್ತಿಗಳನ್ನು ಡ್ರೋನ್ ತಂತ್ರಜ್ಞಾನದ ಮೂಲಕ ಸ್ವಾಮಿತ್ವ ಯೋಜನೆಯಡಿ ಅಳತೆಕಾರ್ಯ ಕೈಗೊಳ್ಳುವ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜ.22 ರಂದು ಪೂರ್ವಾಹ್ನ 11.00 ಗಂಟೆಗೆ ಸರಿಯಾಗಿ ಅಜ್ಜಾವರ ಗ್ರಾ.ಪಂ.ನ ರಾಜೀವ ಗಾಂಧಿ ಸೇವಾ ಕೇಂದ್ರ ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆಯನ್ನು ಕರೆಯಲಾಗಿದೆ. ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು, ಸ್ತ್ರೀಶಕ್ತಿ,...
ಜ್ಞಾನ ಮಂದಾರ ಅಕಾಡೆಮಿ ವತಿಯಿಂದ ನೀಡುವ ಸಮಾಜರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವೆಂಕಟರಮಣ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ದೇವಚಳ್ಳ ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾದ ಶೈಲೇಶ್ ಅಂಬೆಕಲ್ಲು ರವರನ್ನು ಸೊಸೈಟಿ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಮೋಹನರಾಮ್ ಸುಳ್ಳಿ, ನಿರ್ದೇಶಕರುಗಳಾದ...
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಜ.22 ರಂದು ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಹರಿಹರಪಲ್ಲತ್ತಡ್ಕ ಗ್ರಾಮದ ಗುಂಡಿಹಿತ್ಲು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಸಪರಿವಾರ ದೈವಗಳ ಗುಡಿಗಳು ನವೀಕರಣಗೊಂಡಿದ್ದು ಜ. 24 ಆದಿತ್ಯವಾರದಿಂದ ಜ. 26 ಮಂಗಳವಾರದ ತನಕ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಸಪರಿವಾರ ದೈವಗಳ ನೇಮೋತ್ಸವ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು...
ಕನಾ೯ಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ 2020ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಯಶಸ್ವಿ ಪಿ.ಭಟ್ ಶೇ.94.75(ಡಿಸ್ಟಿಂಕ್ಷನ್)ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು, ಸುಳ್ಯ ಶಾಖೆಯ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಹಾಗೂ ಸುಳ್ಯ ದೇವಸ್ಯ ನಿವಾಸಿಯಾದ ಪ್ರಶಾಂತ್ ಭಟ್ ಮತ್ತು ಶ್ರೀ ಮತಿ...
Loading posts...
All posts loaded
No more posts
