Ad Widget

ಭಾರತೀಯ ಭೂಸೇನೆಯಿಂದ ಸತೀಶ್ ಜಾಲುಮನೆ ನಿವೃತ್ತಿ

ಭಾರತೀಯ ಭೂ ಸೇನೆಯಲ್ಲಿ 17 ವರ್ಷಗಳ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿರುವ ಸತೀಶ್ ಜಾಲುಮನೆ ಜ. 31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಕೊಲ್ಲಮೊಗ್ರದ ಚಿನ್ನಪ್ಪ ಗೌಡ ಜಾಲುಮನೆ ಮತ್ತು ಭವಾನಿ ದಂಪತಿಗಳ ಪುತ್ರರಾದ ಸತೀಶ್ ಜಾಲುಮನೆಯವರು 2004 ರಲ್ಲಿ ಸೇನೆಗೆ ಸೇರಿ ದೇಶ ಸೇವೆ ಆರಂಭಿಸಿದ್ದರು. ಜಮ್ಮುಕಾಶ್ಮೀರ, ಉದಂಪುರ, ಶ್ರೀನಗರ, ಉತ್ತರ ಪ್ರದೇಶ, ಜಾನ್ಸಿ, ಪಂಜಾಬ್,...

ಭಾರತೀಯ ಭೂಸೇನೆಯಿಂದ ನಿತಿನ್ ನಂಗಾರು ನಿವೃತ್ತಿ

ಭಾರತೀಯ ಭೂ ಸೇನೆಯಲ್ಲಿ ಸುಮಾರು 17 ವರ್ಷಗಳ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿತಿನ್ ನಂಗಾರು ಜ. 31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಮಡಿಕೇರಿ ತಾಲೂಕು ಜೋಡುಪಾಲ ನಂಗಾರು ದಾಸಪ್ಪ ಮತ್ತು ಭಾನುಮತಿ ದಂಪತಿಗಳ ಪುತ್ರ ನಿತಿನ್ ನಂಗಾರು 2004 ರಲ್ಲಿ ಸೇನೆಗೆ ಸೇರಿ ದೇಶ ಸೇವೆ ಆರಂಭಿಸಿದ್ದರು. ಅಸ್ಸಾಂ, ಜಮ್ಮುಕಾಶ್ಮೀರ, ಲಡಾಕ್, ದೆಹಲಿ, ಸಿಕಂದರಬಾದ್,ಜಲಂದರ್,...
Ad Widget

ಹರಿಹರ ಪಲ್ಲತ್ತಡ್ಕ : ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ

ಹರಿಹರ ಪಲ್ಲತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಇಂದು ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಮುಂಡಾಜೆಯವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಅಂಗಣ, ಆಶಾ ಕಾರ್ಯಕರ್ತೆ ಪುಷ್ಪಾವತಿ, ಗ್ರಂಥಾಲಯ ಮೇಲ್ವಿಚಾರಕಿ...

ಕಳಂಜ : ಪಲ್ಸ್ ಪೋಲಿಯೋ ಶಿಬಿರ

ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವು ಇಂದು ಕೋಟೆಮುಂಡುಗಾರು ಹಿ. ಪ್ರಾ. ಶಾಲೆಯಲ್ಲಿ ಜರುಗಿತು. ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಬೇಬಿ ಕೆ. ಸಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜಯಂತಿ, ಶ್ರೀಮತಿ ಶೇಷಮ್ಮ, ಅಂ. ಕಾರ್ಯಕರ್ತೆ ಕು. ದೀಪ್ತಿ ಇವರುಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

ಬಾಳಿಲದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ

ಬಾಳಿಲ ಗ್ರಂಥಾಲಯದ ಕಟ್ಟಡದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವು ನಡೆಯಿತು. ಬಾಳಿಲ ಗ್ರಾ.ಪಂ.ನ ಸದಸ್ಯರಾದ ಶ್ರೀಮತಿ ತ್ರಿವೇಣಿಯವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಾಳಿಲ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ದಯಾನಂದಿನಿ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಶೋಭಾ, ಶ್ರೀಮತಿ ಮೋಹಿನಿ ಹಾಗೂ ಸಹಾಯಕಿಯಾಗಿ ಶ್ರೀಮತಿ ಶಶಿಕಲಾ ಬಾಳಿಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಮೋಹಿನಿಯವರು...

ಸುಳ್ಯ : ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸಚಿವ ಅಂಗಾರರಿಂದ ಚಾಲನೆ

ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಇಂದು ನಡೆಯಿತು. ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ವೈದ್ಯಾಧಿಗಳು, ಸಿಬ್ಬಂದಿಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಜೀವನ ಯಾತ್ರೆ…..

ಈ ಜೀವನಾ ಒಂದು ಯಾತ್ರೆಯೋಪ್ರತೀ ದಿನಾ ಇಲ್ಲಿ ಜಾತ್ರೆಯೋ...ಮನಸ್ಸಲಿ ಏನೇನೋ ಯೋಚನೆಪ್ರೀತಿಯೇ ಇಲ್ಲಿ ಸಂಪಾದನೆ ನೋವನು ಮರೆಸೊ ಪ್ರೀತಿಯೋಅಥವಾ ನೋವನು ಕೊಡುವ ಪ್ರೀತಿಯೋ... ಇಂದು ಶಿಕ್ಷೆಯಾ ಕೊಡುವ ಮನುಜರುಮುಂದೆ ಅವರೆ ಶಿಕ್ಷೆಯ ಅನುಭವಿಸುವರು... ಕಳೆದು ಹೋದ ಸಮಯವಂತೂಮತ್ತೆ ಎಂದೂ ತಿರುಗಿ ಬಾರದು...ನೀ ಮಾಡಿದ ಪಾಪ-ಪುಣ್ಯವಾನೀ ಅನುಭವಿಸೋ ಕಾಲ ಬರುವುದು... ನಿರೀಕ್ಷೆಯೂ ನಿರಂತರ...ಇಲ್ಲಿ ಪ್ರತೀಕ್ಷೆಯೂ ನಿರಂತರ... ಈ...

ಬೆಳ್ಳಾರೆ : ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ

ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ, ಪಶು ಚಿಕಿತ್ಸಾಲಯ ಬೆಳ್ಳಾರೆ ವತಿಯಿಂದ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವು ಜ.30 ರಂದು ಬೆಳ್ಳಾರೆಯಲ್ಲಿ ನಡೆಯಿತು. ಹಿರಿಯ ಪಶು ವೈದ್ಯಕೀಯ ಪರೀಕ್ಷಕ ವಿಶ್ವನಾಥರವರು ನಾಯಿಗಳಿಗೆ ಲಸಿಕೆ ನೀಡಿದರು.

ಇನ್ನರ್ ವ್ಹೀಲ್ ಕ್ಲಬ್ ಮತ್ತು ಶಿಶು ಕಲ್ಯಾಣ ಇಲಾಖೆಯ ವತಿಯಿಂದ ಮಾಹಿತಿ ಶಿಬಿರ – ಕಪಾಟು ಕೊಡುಗೆ

ಸುಳ್ಯ ಇನ್ನರ್ ವ್ಹೀಲ್ ಕ್ಲಬ್ ಮತ್ತು ಶಿಶು ಕಲ್ಯಾಣ ಇಲಾಖೆಯ ವತಿಯಿಂದ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಾಹಿತಿ ಶಿಬಿರ ನಡೆಯಿತು. ಶಿಬಿರದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷೆ ಜಯಮಣಿ ಮಾಧವ ವಹಿಸಿದ್ದರು. ಇಲಾಖೆಯ ಅಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆ ದೀಪ ಬೆಳಗಿಸಿದರು. ಡಾ.ವೀಣಾ ಪಾಲಚಂದ್ರ ಕಿಶೋರಿಯವರಿಗೆ ಯೌವನಾವಸ್ಥೆಯಲ್ಲಿ ಬೇಕಾದ ಆರೋಗ್ಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕ್ಲಬ್...

ಬೆಳ್ಳಾರೆ ವಿರಾಟ್ ಫ್ರೆಂಡ್ಸ್ ಮಹಾಸಭೆ – ಅಧ್ಯಕ್ಷರಾಗಿ ಸಚಿನ್ ರೈ ಪೂವಾಜೆ ಕಾರ್ಯದರ್ಶಿಯಾಗಿ ರಂಜನ್ ತಡಗಜೆ

ಬೆಳ್ಳಾರೆ ವಿರಾಟ್ ಫ್ರೆಂಡ್ಸ್ ಇದರ ಮಹಾಸಭೆಯು ಜ.28 ರಂದು ಬೆಳ್ಳಾರೆಯ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ2021- 22ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಹೊಸ ಸದಸ್ಯರ ಸೇರ್ಪಡೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಿಥುನ್ ಶೆಣೈ, ಅಧ್ಯಕ್ಷರಾಗಿ ಸಚಿನ್ ರೈ ಪೂವಾಜೆ, ಕಾರ್ಯದರ್ಶಿಯಾಗಿ ರಂಜನ್ ತಡಗಜೆ,ಕೋಶಾಧಿಕಾರಿಯಾಗಿ ಮಂಜುನಾಥ ಹೆಗ್ಡೆ ತಡಗಜೆ,ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಆಚಾರ್ಯ...
Loading posts...

All posts loaded

No more posts

error: Content is protected !!