- Sunday
- March 15th, 2026
ನಿಂತಿಕಲ್ಲು ಕಾಪಡ್ಕ (ಪುಂಡೂರು) ನಿವಾಸಿ ಲಕ್ಷ್ಮೀಯವರು ಅಲ್ಪಕಾಲದ ಅನಾರೋಗ್ಯದಿಂದ ಫೆ. 15ರಂದು ರಾತ್ರಿ ನಿಧನರಾದರು.ಅವರಿಗೆ 78ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ನಾರಾಯಣ ನಾಯ್ಕ, ಪುತ್ರಿಯರಾದ ಪಾರ್ವತಿ ಬಾಬು ನಾಯ್ಕ ಕುಳ್ಳಾಜೆ, ದೇವಕಿ ಸೋಮಪ್ಪ ನಾಯ್ಕ ಕೊಳಚಿಪ್ಪು, ಮೀನಾಕ್ಷಿ ಗೋವಿಂದ ನಾಯ್ಕ ಅಡೂರು, ಜಾನಕಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಕವಾಟೋದ್ಘಾಟನೆ, ತೈಲಾಭ್ಯಂಜನ, ಉಷಾಃಪೂಜೆ, ಆರಾಟುಬಲಿ ನಂತರ ಅವಭೃಥ ಸ್ನಾನ ,ದರ್ಶನ ಬಲಿ ನಡೆಯಲಿದೆ. ಮಧ್ಯಾಹ್ನ 11.30 ಕ್ಕೆ ರಾಜಾಂಗಣ ಪ್ರಸಾದ, ಬಟ್ಟಲುಕಾಣಿಕೆ, ಧ್ವಜ ಅವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಪ್ರಸಾದ ವಿತರಣೆ ನಡೆಯಲಿದೆ.ರಾತ್ರಿ 7.30 ಕ್ಕೆ ಅಗ್ನಿಗುಳಿಗ ದೈವದ ಭಂಡಾರ ತೆಗೆದು,...
ಚಂದನ ಸಾಹಿತ್ಯ ವೇದಿಕೆ, ಸುಳ್ಯ ಇದರ ದಶಮಾನೋತ್ಸವ ಆಚರಣೆ ಸಂಭ್ರಮ, ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಇದರ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕವಿ ಸಂಗಮ - ಕವಿ ಸಂಭ್ರಮ 2021, ರಾಜ್ಯ ಮಟ್ಟದ ಸದ್ಭಾವನಾ ಕವಿಗೋಷ್ಠಿ 2021 ವೇದಿಕೆ ಯಲ್ಲಿ 2021ನೇ ಸಾಲಿನ ರಾಜ್ಯ ಮಟ್ಟದ ಚಂದನ ಕಾವ್ಯಶ್ರೀ ಪ್ರಶಸ್ತಿಯನ್ನು ಸಾಹಿತ್ಯ...
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ನೀಡುವ 2020ನೇ ಸಾಲಿನ ಮಾಸ್ತಿ ಪ್ರಶಸ್ತಿ ಪ್ರಕಟಿಸಿಸಲಾಗಿದ್ದು ಸುಳ್ಯದ ಸುಬ್ರಾಯ ಚೊಕ್ಕಾಡಿ ಹಾಗೂ ಪುರುಷೋತ್ತಮ ಬಿಳಿಮಲೆಯವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳನ್ನು ಮಾ.27 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.ಈ ಪ್ರಶಸ್ತಿಯ ಜತೆ ರೂ. 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಕಲ್ಮಡ್ಕ ಗ್ರಾ.ಪಂ. ಅಧ್ಯಕ್ಷೆಯಾಗಿ ಹಾಜಿರಾ ಗಫೂರ್, ಉಪಾಧ್ಯಕ್ಷರಾಗಿ ಮಹೇಶ್ ಕರಿಕ್ಕಳ ಅವಿರೋಧ ಆಯ್ಕೆಯಾಗಿದ್ದಾರೆ. ಇಲ್ಲಿ ಒಟ್ಟು 9 ಸ್ಥಾನಗಳಲ್ಲಿ 5 ಕಾಂಗ್ರೆಸ್, 3 ಪಕ್ಷೇತರರು, 1 ಜೆಡಿಎಸ್ ಪಡೆದುಕೊಂಡಿತ್ತು.
ಜಾಲ್ಸೂರು ಗ್ರಾಮದ ಕುಕ್ಕಂದೂರು ಶ್ರೀ ಮುರುಗನ್ ದೇವಸ್ಥಾನದ ಅಷ್ಟಬಂಧ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ. 16 ಮತ್ತು 17 ರಂದು ನಡೆಯಲಿದೆ.
ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷರಾಗಿ ಚಂದ್ರಶೇಖರ ಪನ್ನೆ, ಉಪಾಧ್ಯಕ್ಷೆಯಾಗಿ ಗೌರಿ ಆಯ್ಕೆಯಾಗಿದ್ದಾರೆ. ಇಲ್ಲಿ 14 ಸ್ಥಾನಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 4, ಎಸ್ ಡಿ ಪಿ ಐ 2 ಸ್ಥಾನ ಪಡೆದಿತ್ತು.
ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ರೇವತಿ ಪುಲ್ಲಡ್ಕ, ಉಪಾಧ್ಯಕ್ಷೆಯಾಗಿ ಪ್ರಮೀಳಾ ಎರ್ದಡ್ಕ ಆಯ್ಕೆಯಾಗಿದ್ದಾರೆ. ಇಲ್ಲಿ 17 ಸ್ಥಾನಗಳ ಪೈಕಿ ಬಿಜೆಪಿ 13 ರಲ್ಲಿ ಜಯಗಳಿಸಿತ್ತು.
ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ವಿನುತಾ ಪಾತಿಕಲ್ಲು ಮತ್ತು ಉಪಾಧ್ಯಕ್ಷರಾಗಿ ಅನಿಲ್ ತೋಟಪ್ಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಡೆಕೋಲು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ 14 ಮತ್ತು ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಇಲ್ಲಿ ಅವಿರೋಧ ಆಯ್ಕೆ ನಡೆದಿದೆ.
Loading posts...
All posts loaded
No more posts
