- Saturday
- September 26th, 2026
ಬೆಳ್ಳಾರೆ ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಆಟದ ಮೈದಾನ ವಿಸ್ತರಣೆ ಮತ್ತು ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡಿರುವ ಕೂಲಿಕಾರರಿಗೆ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಕೈಗೊಂಡು ಕೋವಿಡ್ ಲಸಿಕೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಗ್ರಾಮ ಪಂಚಾಯತ್...
ಮೆಸ್ಕಾಂ ಸುಳ್ಯ ಉಪವಿಭಾಗದ ಸುಳ್ಯ 33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್ ಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸ ಇರುವುದರಿಂದ ಕೇರ್ಪಳ, ಶ್ರೀರಾಂಪೇಟೆ, ಸಂಪಾಜೆ, ಅರಂತೋಡು, ಕೋಲ್ಚಾರು, ಕಾವು, ಅಜ್ಜಾವರ, ಕೇನ್ಯ, ಸುಬ್ರಹ್ಮಣ್ಯ ಫೀಡರುಗಳಲ್ಲಿ ನಾಳೆ (ಜೂ.22) ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 6ರ ತನಕ ವಿದ್ಯುತ್...
ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲಿನ ಮಹಿಳೆಯೊಬ್ಬರಿಗೆ ನಾಗರಹಾವು ಕಚ್ಚಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲು ಎಂಬಲ್ಲಿನ ಚಂದ್ರಾವತಿ ಎಂಬುವವರು ಜೂ.19ರಂದು ಮನೆಯ ಸಮೀಪ ನಾಗರಹಾವು ಕಚ್ಚಿದ್ದು, ಪರಿಣಾಮ ಮಹಿಳೆ ಸ್ಮೃತಿ ತಪ್ಪಿದ್ದು ತಕ್ಷಣವೇ ಮನೆಯವರು ಮಹಿಳೆಯನ್ನು ಕೊಲ್ಲಮೊಗ್ರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ...
ಗುತ್ತಿಗಾರು ಕಮಿಲ ರಸ್ತೆಯ ಚತ್ರಪ್ಪಾಡಿ ಬಳಿ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯಲ್ಲಿ ನೀರು ನಿಂತು ಕೆಸರುಮಯವಾಗಿತ್ತು. ರಸ್ತೆ ಬದಿಯ ಚರಂಡಿಯನ್ನು ಸ್ಥಳೀಯ ಯುವಕರು ಸೇರಿ ದುರಸ್ತಿಗೊಳಿಸಿದರು. ರವೀಂದ್ರ ಆಜಡ್ಕ, ನಿಶ್ಚಿತ್ ರಾಂ ತುಪ್ಪದಮನೆ, ಅಜಯ್ ಸಂಪ್ಯಾಡಿ, ಶ್ರವಣ್ ಸಂಪ್ಯಾಡಿ, ಶ್ರೇಯಸ್ ಸಂಪ್ಯಾಡಿ ಶ್ರಮದಾನ ನಡೆಸಿ ಸಾಮಾಜಿಕ ಕಳಕಳಿ ಮೆರೆದರು.
ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ & ಗೈಡ್ಸ್ ದಳದ ಗೈಡ್ ವಿದ್ಯಾರ್ಥಿನಿ ಸುಶ್ಮಿತಾ.ಸಿ ಜಿಲ್ಲಾ ಸಂಸ್ಥೆ ನಡೆಸಿದ ರಾಜ್ಯ ಪುರಸ್ಕಾರ ಪದಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಾಳಿಲ ಚಾಕೋಟೆಡ್ಕ ಗುರುವಪ್ಪ ನಾಯ್ಕ ಹಾಗೂ ಶ್ರೀಮತಿ ಭಾಗೀರಥಿಯವರ ಪುತ್ರಿ.
ಸುಳ್ಯ ತಾಲೂಕಿನಲ್ಲಿ ಇಂದು 55 ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ನಿನ್ನೆ 72 ಪಾಸಿಟಿವ್ ಬಂದಿತ್ತು. ತಾಲೂಕಿನಲ್ಲಿ ಒಟ್ಟು 599 ಸಕ್ರೀಯ ಪ್ರಕರಣಗಳಿವೆ.
ಸುಳ್ಯದ ಯುವ ಉದ್ಯಮಿಗಳಾದ ಪ್ರಗ್ಯಾನ್ ಎಂಟರ್ ಪ್ರೈಸಸ್ ನ ಮಾಲಕ ಕಾರ್ತಿಕ್ ರೈ ಕನ್ನೆಜಾಲು, ಡಿಸೈನ್ ಇಂಟಿರಿಯರ್ಸ್ ನ ಅಶ್ವಿನ್ ಅಡ್ಕಾರ್, ಆದಿಲಕ್ಷ್ಮೀ ಟ್ರಾನ್ಸ್ ಪೋರ್ಟ್ ನ ರಾಜೇಶ್ ಕಿರಿಭಾಗ, ವಿನಾಯಕ ಸೂಪರ್ ಮಾರ್ಕೆಟ್ ನ ಅಮೃತ್ ರಾಜ್ ಸುಳ್ಯ ರವರ ನೇತೃತ್ವದಲ್ಲಿ ಅಶಕ್ತ ಬಡಕುಟುಂಬಗಳನ್ನು ಗುರುತಿಸಿ ಸಹಾಯಧನ ಹಾಗೂ ಆಹಾರ ಸಾಮಾಗ್ರಿಗಳ ಕಿಟ್ ನ್ನು...
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರಧಾನ್ಯಗಳ ಕಿಟ್ ವಿತರಣಾ ಕಾರ್ಯಕ್ರಮ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಕಿಟ್ ವಿತರಿಸಿ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನೀಡುವ ಈ...
ಸುಳ್ಯ ತಾಲೂಕಿನಲ್ಲಿ ಇಂದು 53 ಕೋವಿಡ್ ಪಾಸಿಟಿವ್ ಧೃಡಪಟ್ಟಿದೆ. ಒಟ್ಟು 519 ಸಕ್ರೀಯ ಪ್ರಕರಣಗಳಿವೆ. ಸುಳ್ಯ ನಗರ ವ್ಯಾಪ್ತಿ 10, ನಾಲ್ಕೂರು 6, ಐವರ್ನಾಡು 4, ಆಲೆಟ್ಟಿ 3, ಅರಂತೋಡು 3, ಸುಬ್ರಹ್ಮಣ್ಯ 3, ಕೊಲ್ಲಮೊಗ್ರ 3, ಅಮರ ಮುಡ್ನೂರು 2, ಮಂಡೆಕೋಲು 2, ಗುತ್ತಿಗಾರು 2, ಪಂಬೆತ್ತಾಡಿ 2, ಬೆಳ್ಳಾರೆ 2, ಏನೆಕಲ್ಲು 2,...
ನಿನ್ನಯ ಶಕ್ತಿಯ ಪರಿಚಯ ಮಾಡಿಸು, ಸೋಲಲೆಬೇಡ ನೀನ್ಯಾರಿಗೂ…ನಿನ್ನನ್ನು ದ್ವೇಷಿಸೋ ಮನುಜರೆಲ್ಲರೂ ಪ್ರೀತಿಸುವಂತೆ ನೀ ಬದುಕು…ಬದುಕಲಿ ಬರುವ ಸೋಲು-ಗೆಲುವುಗಳ ಬಂದಂತೆಯೇ ನೀ ಸ್ವೀಕರಿಸು…ಅಹಂಕಾರ, ಮದ-ಮತ್ಸರಗಳನು ಬಿಟ್ಟು ಬಾಳು ನೀ ಬದುಕಿನಲಿ…ನಿನ್ನಯ ಬದುಕು ಸ್ಪೂರ್ತಿಯಾಗಲಿ ಮುಂದಿನ ತಲೆ-ತಲೆಮಾರಿಗೂ… ಮನಸಲಿ ಸಾವಿರ ನೋವುಗಳಿದ್ದರೂ ನಗು-ನಗುತಿರು ನೀ ಪ್ರತಿನಿಮಿಷ…ನಿನ್ನಯ ನಗುವನು ನೋಡಿ ಖುಷಿಪಡುವ ಜನರೂ ಇಹರು ಈ ಜಗದಿ…ಜೀವನವೆಂಬ ಯುದ್ದದಲ್ಲಿ ಗೆಲುವೇ...
Loading posts...
All posts loaded
No more posts
