ಸುಳ್ಯದಲ್ಲಿಂದು 55 ಕೊರೊನ ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇಂದು 55 ಕೊರೊನಾ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಒಟ್ಟು 417 ಸಕ್ರೀಯ ಪ್ರಕರಣಗಳಿವೆ.

ಸುಳ್ಯ : ನಗರದ ಸ್ವಚ್ಚತೆಗೆ ಹೊಸ ವಾಹನಗಳ ಹಸ್ತಾಂತರ

ಸುಳ್ಯ ನಗರ ಪಂಚಾಯತಿಗೆ ಸ್ವಚ್ಛತೆಯ ನಿರ್ವಹಣೆಗಾಗಿ ಇನ್ನೆರಡು ವಾಹನಗಳು ಆಗಮಿಸಿದ್ದು ಟಾಟಾ ಕಂಪೆನಿಯ ಪಿಕಪ್ ಮತ್ತು ಟಾಟಾ 407 ವಾಹನ ಇಂದು ಸುಳ್ಯ ನಗರ ಪಂಚಾಯಿತಿಗೆ ಹಸ್ತಾಂತರಗೊಂಡವು. ಟಾಟಾ ವಾಹನಗಳ ಅಧಿಕೃತ ಮಾರಾಟಗಾರರು ಆದ ಅರವಿಂದ್ ಮೋಟಾರ್ಸ್ ಸಂಸ್ಥೆಯ ಪ್ರತಿನಿಧಿಗಳು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗೂ ಮುಖ್ಯಾಧಿಕಾರಿ ಕುಮಾರಸ್ವಾಮಿ ಅವರಿಗೆ ವಾಹನದ...
Ad Widget

ಹಗರಣದ ರೂವಾರಿಗೆ ಜೀರೋ ಟ್ರಾಫಿಕ್ ಸ್ವಾಗತ, ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ- ವೆಂಕಪ್ಪ ಗೌಡ ಟೀಕೆ

ಭಾರತೀಯ ಜನತಾಪಾರ್ಟಿ ಸರಕಾರದ ಪ್ರಮಾಣವಚನ ಸ್ವೀಕಾರ ಸಭೆಗೆ ಈ ಹಿಂದೆ ಗರ್ಭಿಣಿಯರಿಗೆ, ಮಕ್ಕಳಿಗೆ ಅಪೌಷ್ಟಿಕತೆ ನಿವಾರಣೆಗೆ ನೀಡುತ್ತಿದ್ದ ಮೊಟ್ಟೆಯಲ್ಲಿ ಹಗರಣ ಮಾಡಿದ ಆರೋಪ ಹೊತ್ತ ಶಶಿಕಲಾ ಜೊಲ್ಲೆಯವರು ಜೀರೋ ಟ್ರಾಫಿಕ್ ಮೂಲಕ ಆಗಮಿಸಿದ್ದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಈ ವಿಚಾರವಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಕಟುವಾಗಿ ಟೀಕಿಸಿದ್ದಾರೆ.ಭಾರತೀಯ ಜನತಾ ಪಾರ್ಟಿಯ ಅಂಧ ದರ್ಬಾರ್...

ಸಚಿವ ಅಂಗಾರರಿಗೆ ದ.ಕ.ಜಿಲ್ಲಾ ಉಸ್ತುವಾರಿ – ಕೊಡಗಿಗೆ ಕೋಟ, ಉಡುಪಿಗೆ ಸುನಿಲ್

ರಾಜ್ಯದ ನೂತನ ಸಚಿವರಾಗಿ ಎರಡನೇ ಬಾರಿ ಇಂದು ಪ್ರಮಾಣವಚನ ಸ್ವೀಕರಿಸಿದ ಸುಳ್ಯ ಶಾಸಕರಾದ ಎಸ್.ಅಂಗಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ತಕ್ಷಣದಿಂದ ಜಾರಿ ಬರುವಂತೆ ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೋಟಿ ಶ್ರೀನಿವಾಸ ಪೂಜಾರಿ ಅವರಿಗೆ ಕೊಡಗು ಹಾಗೂ ಸುನಿಲ್ ಕುಮಾರ್ ಅವರನ್ನು ಉಡುಪಿ...

ಸುಳ್ಯ : ಹಿಂದು ಜಾಗರಣ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ

ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಇದರ ಪದಾಧಿಕಾರಿಗಳ ಆಯ್ಕೆ ಪುತ್ತೂರಿನ 'ಪಂಚವಟಿ' ಕಾರ್ಯಾಲಯದಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ನಿಕೇಶ್ ಉಬರಡ್ಕ, ಕಾರ್ಯದರ್ಶಿಗಳಾಗಿ ಹೇಮಂತ್ ಮಂಡೆಕೋಲು, ವಾಸುದೇವ ಕೆರೆಕ್ಕೋಡಿ, ಹಾಗೂ ಹಿಂದೂ ಯುವವಾಹಿನಿ ತಾಲೂಕು ಸಂಯೋಜಕರಾಗಿ ಅಭಿಷೇಕ್ ತೊಡಿಕಾನ ಆಯ್ಕೆಯಾದರು. ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲೆಯ ಜಿಲ್ಲಾ ಬೈಠಕ್ ನಲ್ಲಿ, ಪ್ರಾಂತ ಸಂಘಟನಾ ಕಾರ್ಯದರ್ಶಿ...

ಕಲಾವಿದ ‘ಮೋಹನ್ ಸೋನಾ’ರ ಸಾಕ್ಷ್ಯಚಿತ್ರ ಯೂಟ್ಯೂಬ್ ನಲ್ಲಿ ಬಿಡುಗಡೆ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿರ್ಮಾಣದ,ಜೀವನ್ ರಾಂ ಸುಳ್ಯ ನಿರ್ದೇಶನದ,ರಂಗ- ಚಿತ್ರ ಕಲಾವಿದ ಮೋಹನ ಸೋನರ ಸಾಕ್ಷ್ಯಚಿತ್ರ ಯುಟ್ಯೂಬ್ ನಲ್ಲಿ ಬಿಡುಗಡೆಗೊಂಡಿದೆ. ಅದ್ಭುತ ಕಲಾವಿದ ಮೋಹನ ಸೋನರ ಜೀವನ ಸಾಧನೆಯ ಸಾಕ್ಷ್ಯಚಿತ್ರ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ https://youtu.be/hlqN34FblgU

ಮಿತ್ತಡ್ಕ : ಅರಣ್ಯೀಕರಣ ಗಿಡ ನಾಟಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ)ಸುಳ್ಯ ದೊಡ್ಡತೋಟ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ದೊಡ್ಡತೋಟ ವಲಯ, ಜನಜಾಗೃತಿ ವೇದಿಕೆ ದೊಡ್ಡತೋಟ ,ಅರಣ್ಯ ಇಲಾಖೆ ಮರ್ಕಂಜ ಮತ್ತು ಗ್ರಾಮ ಅರಣ್ಯ ಸಮಿತಿ, ಹಾಗೂ ಸ. ಹಿ .ಪ್ರಾ ಶಾಲೆ ಮಿತ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ ಆ.2 ರಂದು ಅರಣ್ಯೀಕರಣ ಗಿಡ...

ಸುಳ್ಯದ ಅಂಗಾರ ಸೇರಿದಂತೆ ಕರಾವಳಿಯ ಮೂವರಿಗೆ ಸಚಿವ ಸ್ಥಾನ

ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟದ ರಚನೆಯಾಗಲಿದ್ದು ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ. ಸುಳ್ಯದ ಮಾಜಿ ಸಚಿವ ಎಸ್. ಅಂಗಾರ ಮತ್ತೊಮ್ಮೆ ಸಚಿವರಾಗುವುದು ಖಚಿತವಾಗಿದೆ. ಸಿಎಂ ಬೊಮ್ಮಾಯಿ ಯವರು ಅಂಗಾರರಿಗೆ ಕರೆ ಮಾಡಿ ಬೆಂಗಳೂರಿಗೆ ಬರಲು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಕರಾವಳಿಯ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಹಾಗೂ...

ಬೆಳ್ಳಾರೆ : ಖಾಸಗಿ ರಸ್ತೆಯಲ್ಲಿ ಅಳವಡಿಸಿದ್ದ ಬೀದಿ ದೀಪ ತೆರವು ಮಾಡಿದ ಪಿಡಿಒ – ಜಾಲತಾಣದಲ್ಲಿ ಸುಳ್ಳು ಆರೋಪಕ್ಕೆ ಅಧ್ಯಕ್ಷರಿಂದ ಸ್ಪಷ್ಟನೆ

ಬೆಳ್ಳಾರೆ ಕೊಳಂಬಳ ಅರ್ನಾಡಿ ಎಂಬಲ್ಲಿ ಖಾಸಗಿ ರಸ್ತೆಗೆ ಪಂಚಾಯತ್ ಬೀದಿದೀಪ ಅಳವಡಿಸಿದ್ದನ್ನು ಪಿಡಿಒ ನೇತೃತ್ವದಲ್ಲಿ ತೆರವು ಮಾಡಲಾಗಿತ್ತು. ಈ ಕುರಿತು ಸರಿಯಾದ ಕ್ರಮ ಕೈಗೊಂಡಿದ್ದರೂ ಪಿಡಿಒ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ರು. ಬಿಜೆಪಿ ಕಾರ್ಯಕರ್ತನ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಗೆ ಹೋಗುವ ಬೀದಿ ದೀಪ ತೆರವುಗೊಳಿಸಿದ್ದಾರೆ. ಅನಿಲ್ ರೈ ಕುಮ್ಮಕ್ಕಿನಿಂದ ಗ್ರಾಂ ಪಂ. ಬೆಳ್ಳಾರೆ...

ಚೆಂಬು : ಭಗವಾನ್ ಸಂಘ ಊರುಬೈಲು ವತಿಯಿಂದ ಸೇತುವೆಗಳ ಸ್ವಚ್ಚತೆ

ಆಗಸ್ಟ್ ಒಂದರಿಂದ ಹದಿನೈದರವರೆಗಿನ "ಸ್ವಚ್ಚ ಭಾರತ್ ಪಾಕ್ಷಿಕ ಅಭಿಯಾನ" ಯೋಜನೆ ಅಂಗವಾಗಿ ನೆಹರು ಯುವ ಕೇಂದ್ರ, ಮಡಿಕೇರಿ ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ ,ಊರುಬೈಲು, ಇದರ ಸದಸ್ಯರು ಆಗಸ್ಟ್ 1ರಂದು ಚೆಂಬು ಗ್ರಾಮದ ಎಲ್ಲಾ ಪ್ರಮುಖ ಸೇತುವೆಗಳನ್ನು ಸ್ವಚ್ಚಗೊಳಿಸಿ ,ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ಯತೀಶ್ ಹನಿಯಡ್ಕ ಸಂಘದ ಸದಸ್ಯರಿಗೆ...
Loading posts...

All posts loaded

No more posts

error: Content is protected !!