ಐವರ್ನಾಡು : ಜಮಾಬಂದಿ

ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ 2020 - 21 ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆ.14 ರಂದು ಗ್ರಾಮ ಪಂಚಾಯತ್ ನ ಗ್ರಾಮ ವಿಕಾಸ ಸಭಾಭವನದಲ್ಲಿ ಜರಗಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ರವರು ಸ್ವಾಗತಿಸಿ, 2020 - 21ಸಾಲಿನ ಜಮಾ...

ಪಂಜ : ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಮತ್ತು ಅಭಿಯಾನ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಪಂಜ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಮತ್ತು ಅಭಿಯಾನ ಸೆ.14ರಂದು ನಡೆಯಿತು. ಪಂಜದ ಹಿರಿಯ ವೈದ್ಯ ಡಾ|| ಯಂ. ರಾಮಯ್ಯ ಭಟ್ ಅವರು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಹರೀಶ್ ಕಂಜಿಪಿಲಿ ಅಧ್ಯಕ್ಷರು, ಭಾ.ಜ.ಪಾ. ಸುಳ್ಯ ಮಂಡಲ ವಹಿಸಿದ್ದರು.ಈಶ್ವರ್ ಕಟೀಲ್ ಜಿಲ್ಲಾ ಉಪಾಧ್ಯಕ್ಷರು ಮತ್ತು ಸಂಚಾಲಕರು, ಆರೋಗ್ಯ...
Ad Widget

ಕಳಂಜ ಗ್ರಾಮ ಪಂಚಾಯತ್ ಜಮಾಬಂದಿ

ಕಳಂಜ ಗ್ರಾಮ ಪಂಚಾಯತ್ ನ 2020-21ನೇ ಸಾಲಿನ ಜಮಾಬಂದಿಯು ಸೆ.13ರಂದು ನಡೆಯಿತು. ಜಮಾಬಂದಿ ಅಧಿಕಾರಿಯಾಗಿ ದ.ಕ.ಜಿ.ಪಂ.ಇ.ಇ. ಕಾರ್ಯಪಾಲಕ ಇಂಜಿನಿಯರ್ವೇಣುಗೋಪಾಲ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಳ್ಯ ಉಪವಿಭಾಗ ಪಂ. ರಾ. ಇ. ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದಹನುಮಂತರಾಯಪ್ಪ, ಪಂ.ರಾ.ಇ. ಇಲಾಖೆಯ ಮ್ಯಾನೇಜರ್ನೇಮಿಚಂದ್ರ, ಪಿಡಿಓ ಶ್ರೀಧರ್.ಕೆ.ಆರ್, ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ, ಉಪಾಧ್ಯಕ್ಷ ಗಣೇಶ್ ರೈ ಕಳಂಜ,...

ಗಾಂಧಿನಗರ : ಶಿವಶಕ್ತಿ ಆಯಿಲ್ ಮಿಲ್ ಸಹಸಂಸ್ಥೆ ಶಿವಶಕ್ತಿ ಫ್ಲೋರ್ ಮಿಲ್ ಶುಭಾರಂಭ

ಸುಳ್ಯದ ಗಾಂಧಿನಗರದ ಶಶಿ ಕಾಂಪ್ಲೆಕ್ಸ್ ನಲ್ಲಿ ಕಳೆದ 12 ವರ್ಷಗಳಿಂದ ಕಾರ್ಯಚರಿಸುತ್ತಿಸುತ್ತಿರುವ ಶಿವಶಕ್ತಿ ಆಯಿಲ್ ತನ್ನ ಗ್ರಾಹಕರಿಗೆ ಹೆಚ್ಚು ಸೇವೆ ನೀಡುವ ಉದ್ದೇಶದಿಂದ ಶಿವಶಕ್ತಿ ಫ್ಲೋರ್ ಮಿಲ್ ಸೆ.11 ರಂದು ಶುಭಾರಂಭಗೊಂಡಿತು. ಇಲ್ಲಿ ಅಕ್ಕಿ, ಗೋಧಿ, ರಾಗಿ ಹಾಗೂ ಧವಸಧಾನ್ಯಗಳನ್ನು ಕ್ಲಪ್ತ ಸಮಯದಲ್ಲಿ ಹುಡಿಮಾಡಿಕೊಡಲಾಗುವುದು ಎಂದು ಮಾಲಕರಾದ ಶಿವರಾಮ ಬಳ್ಳಡ್ಕ ತಿಳಿಸಿದ್ದಾರೆ.

ಶಾಂತಿನಗರ ಶಾಲಾ ಎಸ್.ಡಿ.ಎಂ.ಸಿ ರಚನೆ – ಅಧ್ಯಕ್ಷರಾಗಿ ಮಹಮ್ಮದ್ ನಝೀರ್

ಶಾಂತಿನಗರ ಸ.ಉ.ಹಿ.ಪ್ರಾ. ಶಾಲೆಯಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಸೆ.3 ರಂದು ಮಾಡಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ನಝೀರ್ , ಉಪಾಧ್ಯಕ್ಷರಾಗಿ ಶ್ರೀಮತಿ ಗೋಪಿ, ಸದಸ್ಯರಾಗಿ ಜಗದೀಶ್ ಪಿ ಆರ್, ಬಾಲಕೃಷ್ಣ ಎಸ್.ಆರ್, ಶಶಿಕಲಾ.ಎ, ಗೀತಾ, ಲತಾ.ಎ, ಪುಟ್ಟಣ್ಣ ನಾಯ್ಕ, ಇಬ್ರಾಹಿಂ.ಎಸ್.ಎ, ಹಮೀದ್, ಸಾಜಿದ, ಮುಮ್ತಾಜ್, ಜುಲೈಕಾ, ಮರಿಯಮ್ಮ, ಸೀತಾ, ಚಿಕ್ಕಯ್ಯ, ಪುಷ್ಪಲತ, ದಿವ್ಯ.ಎಂ ಇವರುಗಳು ಆಯ್ಕೆಯಾದರು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ – ನವಾನ್ನ ಪ್ರಸಾದ

ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಸೋಮವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ) ಮತ್ತು ಕದಿರು ಕಟ್ಟುವ ಕಾರ್ಯವು ವಿವಿಧ ವೈಧಿಕ ವಿದಿ ವಿಧಾನಗಳೊಂದಿಗೆ ನೆರವೇರಿತು. ಈ ನಿಮಿತ್ತ ಪ್ರಾತಃಕಾಲ ಪಂಚಾಮೃಮಹಾಭಿಷೇಕವನ್ನು ಶ್ರೀ ದೇವರ ಮೂಲ ವಿಗ್ರಹಕ್ಕೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ನೆರವೇರಿಸಿದರು. ವರ್ಷದಲ್ಲಿ ಹೊಸ್ತಾರೋಗಣೆಯ ಒಂದು ದಿನ...

ಕಾಯರ್ತೋಡಿ ಶ್ರೀ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ – ಅಧ್ಯಕ್ಷರಾಗಿ ವಾಸುದೇವ ಬೆಳ್ಳಿಪ್ಪಾಡಿ

ಕಾಯರ್ತೋಡಿ ಶ್ರೀ ವ್ಯಾಘ್ರಚಾಮುಂಡಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪೂರ್ವಭಾವಿ ಸಭೆ ನಡೆದು, ಪದಾಧಿಕಾರಿಗಳ ಆಯ್ಕೆ ನಡೆಯಿತು. ಉತ್ಸವ ಸಮಿತಿ ಅಧ್ಯಕ್ಷರಾಗಿ ವಾಸುದೇವ ಬೆಳ್ಳಿಪ್ಪಾಡಿ, ಕಾರ್ಯದರ್ಶಿಯಾಗಿ ಶೇಷಪ್ಪ ನಾಯ್ಕ ಪರಿವಾರಕಾನ, ಕೋಶಾಧಿಕಾರಿಯಾಗಿ ವಸಂತ ಬಿಳಿಯಾರು, ಉಪಾಧ್ಯಕ್ಷರಾಗಿ ವೆಂಕಟ್ರಮಣ ದೇಂಗೋಡಿ, ವೆಂಕಟ್ರಮಣ ಕುದ್ಪಾಜೆ, ಶ್ರೀಮತಿ ಯಶೋಧ ರಾವ್‌ರವರು ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಆಡಳಿತ ಮೊಕ್ತೇಸರ ಡಿ.ಎಸ್.ಶೇಷಪ್ಪ, ಮೊಕ್ತೇಸರರಾದ ಡಿ.ಎಸ್.ಗಿರೀಶ್, ಡಿ.ಎಸ್.ಕುಶಾಲಪ್ಪ...

ಅಕ್ರಮಗಳನ್ನು ಸಕ್ರಮ ಮಾಡುವುದೇ ನ.ಪಂ.ಸದಸ್ಯ ಉಮ್ಮರ್ ಅವರ ಉದ್ಯೋಗ : ಬಿಜೆಪಿ ಆರೋಪ

ನ.ಪಂ.ಸದಸ್ಯ ಉಮ್ಮರ್ ಅವರು ನಗರದಲ್ಲಿನ ಫುಟ್ಪಾತ್ ನ ತಡೆಬೇಲಿಯನ್ನು ತಮ್ಮ ಪ್ರಭಾವ ಬಳಸಿ ತೆಗೆದಿದ್ದಾರೆ ಹಾಗೂ ಹಲವು ಅನಧಿಕೃತ - ಅಕ್ರಮ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ನಗರ ಮಹಾಶಕ್ತಿಕೇಂದ್ರ ಗಂಭೀರ ಆರೋಪ ಹೊರಿಸಿದೆ. ಅಕ್ರಮವನ್ನು ಸಕ್ರಮ ಮಾಡುವ ಉದ್ಯೋಗವನ್ನೇ ಮಾಡುತ್ತಿರುವ ಉಮ್ಮರ್ ಅವರ ಮೇಲೆ ನ.ಪಂ. ಅವರು ಸೂಕ್ತ ಕ್ರಮ ಕೈಗೊಳ್ಳಬೇಕು...

ದೇಲಂಪಾಡಿ: ಹಿಂದೂ ಐಕ್ಯ ವೇದಿ ಘಟಕದಿಂದ ಸ್ವಚ್ಚತಾ ಕಾರ್ಯಕ್ರಮ

ಹಿಂದೂ ಐಕ್ಯ ವೇದಿ ದೇಲಂಪಾಡಿ ಘಟಕದ ವತಿಯಿಂದ ಸರಕಾರಿ ಆಯುರ್ವೇದ ಆಸ್ಪತ್ರೆ ವಠಾರದಲ್ಲಿ ಸೆ.12 ರಂದು ಸ್ವಚ್ಛತಾ ಕಾರ್ಯ ನಡೆಯಿತು‌. ಈ ಸಂದರ್ಭದಲ್ಲಿ ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.

ಸ್ನಿಗ್ಧ ಮೋoಟಡ್ಕ

ಸುಳ್ಯ ಕಸಬಾ ಸುಪ್ರೀತ್ ಮೋಂಟಡ್ಕ ಮತ್ತು ಲತಾಶ್ರೀ ಸುಪ್ರೀತ್ ಮೋಂಟಡ್ಕ ದಂಪತಿಗಳ ಪುತ್ರಿ ಸ್ನಿಗ್ಧ ಮೋಂಟಡ್ಕ ಇವಳ 8ನೇ ವರ್ಷದ ಹುಟ್ಟು ಹಬ್ಬವನ್ನು ಸುಳ್ಯ ಕೇರ್ಪಳ ಸಾನ್ವಿದ್ಯ ನಿಲಯದಲ್ಲಿ ಸೆ.12 ರಂದು ಆಚರಿಸಲಾಯಿತು
Loading posts...

All posts loaded

No more posts

error: Content is protected !!