ಗೂನಡ್ಕ : ಮ್ಯಾಕೊ ಸುಳ್ಯ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಮಂಗಳೂರು ಆಟೋರಿಕ್ಷಾ ಹಾಗೂ ಕಾರು ಚಾಲಕರ ಸಹಕಾರಿ ಸಂಘ ನಿಯಮಿತ (MACO) ಇದರ ಸುಳ್ಯ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕರು ಹಾಗೂ ಸಂಘದ ಅಧ್ಯಕ್ಷರಾದ ಐವನ್ ಡಿ'ಸೋಜಾರವರು ಇಂದು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಚಾಲನೆಯನ್ನು ನೀಡಿದರು.ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆ, ಉಪಾಧ್ಯಕ್ಷರಾದ...

ಹರಿಹರ ಪಲ್ಲತ್ತಡ್ಕ : ಶ್ರೀ ಹರಿಹರೇಶ್ವರ ದೇವರ ಭಕ್ತಿಗೀತೆ ಬಿಡುಗಡೆ

ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವರ ಭಕ್ತಿಗೀತೆಯನ್ನು ಸೆ.10 ರ ಗಣೇಶ ಚತುರ್ಥಿ ಹಬ್ಬದ ದಿನದಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಯಂತ್ ನಾಯ್ಕ್ ಎಲ್ಲಪಡ್ಕ, ಗಿರೀಶ್ ಕಾಂತುಕುಮೇರಿ, ಸಂತೋಷ್ ನಾಯ್ಕ್ ಗಡಿಕಲ್ಲು, ಶ್ರೀಕಾಂತ್ ಪಂಜ, ಗಣೇಶ್ ಮಂಚಿಕಟ್ಟೆ, ರಾಮಣ್ಣ ಮಂಚಿಕಟ್ಟೆ, ದಯಾನಂದ ಏನೆಕಲ್ಲು,...
Ad Widget

ಕೇನ್ಯ: ನೂತನ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ಕಡಬ ತಾಲೂಕಿನ ಕೇನ್ಯ ಗ್ರಾಮದಲ್ಲಿ ಹಿಂದೂ ಜಾಗರಣ ವೇದಿಕೆ ಮಹಾವಿಷ್ಣು ಘಟಕ ಕಣ್ಕಲ್ ನೇಲಡ್ಕ ವತಿಯಿಂದ ನೂತನವಾಗಿ ನಿರ್ಮಿಸಿದ ವೀರ್ ಸಾವರ್ಕರ್ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ ಸೆ.18ರಂದು ನಡೆಯಿತು. ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್ ರೈ ರವರು ನೂತನ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿದರು. ವಾಸುದೇವ ಕೆರೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು. ರಘುನಾಥ ರೈ...

ಕ್ರೈಸ್ತ ಅಲ್ಪಸಂಖ್ಯಾತ ಸೊಸೈಟಿಯ ಮಹಾಸಭೆ – 12% ಡಿವಿಡೆಂಡ್ ಘೋಷಣೆ

ಸುಳ್ಯ ತಾಲೂಕು ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಬಿಟ್ಟಿ ಬಿ. ನೆಡುನೀಲಂ ಅಧ್ಯಕ್ಷತೆಯಲ್ಲಿ ಸೆ.18 ರಂದು ಸಂಘದ 3ನೇ ಮಹಡಿಯಲ್ಲಿ ನಡೆಯಿತು.ಸಂಘವು 2020-21 ನೇ ವರ್ಷದ ಅವಧಿಯಲ್ಲಿ ಲಾಭಗಳಿಸಿದ್ದನ್ನು ಪರಿಗಣಿಸಿ, ತನ್ನ ಸದಸ್ಯರಿಗೆ ಶೇ.12 ರಷ್ಟು ಡಿವಿಡೆಂಡ್ ನೀಡುವುದೆಂದು ಅಧ್ಯಕ್ಷರು ಘೋಷಿಸಿದರು. 2020-21 ನೇ ವರ್ಷದ ಆಡಳಿತ ಮಂಡಳಿ ವರದಿಯನ್ನು...

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅಶ್ವಿನಿ ಮುಂಡೋಡಿ ಉತ್ತೀರ್ಣ

ಕಳೆದ ಆಗಸ್ಟ್ 22 ರಂದು ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿಪೇಪರ್ 1 ಹಾಗೂ ಪೇಪರ್ 2 ಎರಡರಲ್ಲೂ ಪ್ರಥಮ ಪ್ರಯತ್ನದಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ಇವರು ಮರ್ಕಂಜ ಗ್ರಾಮದ ಮುಂಡೋಡಿ ಜನಾರ್ಧನ ಹಾಗೂ ಸರಸ್ವತಿ ದಂಪತಿಗಳ ಪುತ್ರಿ. ಪ್ರಸ್ತುತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದುಗ್ಗಲಡ್ಕ : ಪ್ರೊಬೆಷನರಿ ತಹಶೀಲ್ದಾರ್ ಅಕ್ರಂ ಷಾ ವಿದ್ಯಾರ್ಥಿಗಳೊಂದಿಗೆ ಸಂವಾದ

ಸುಳ್ಯ ತಾಲೂಕಿನ ಪ್ರೊಬೆಷನರಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಆಡಳಿತ ಸೇವೆಯ ‌ಅಧಿಕಾರಿ ಅಕ್ರಂರವರು ಸೆ.17 ರಂದು ಸರಕಾರಿ ಪ್ರೌಢಶಾಲೆ ದುಗ್ಗಲಡ್ಕಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತುಂಬು ಸೌಜನ್ಯದೊಂದಿಗೆ ತಮ್ಮ ಯು ಪಿ ಎಸ್ ಸಿ ಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಉತ್ತಮ ಶೈಕ್ಷಣಿಕ ತಳಹದಿಯನ್ನು ರೂಪಿಸಿಕೊಂಡು, ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ...

ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅಶ್ವಿನಿ ಮುಂಡೋಡಿ ಉತ್ತೀರ್ಣ

ಕಳೆದ ಆಗಸ್ಟ್ 22 ರಂದು ನಡೆದ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಪೇಪರ್ 1 ಹಾಗೂ ಪೇಪರ್ 2 ಎರಡರಲ್ಲೂ ಪ್ರಥಮ ಪ್ರಯತ್ನದಲ್ಲಿ ಅರ್ಹತೆಯನ್ನು ಪಡೆದಿದ್ದಾರೆ. ಇವರು ಮರ್ಕಂಜ ಗ್ರಾಮದ ಮುಂಡೋಡಿ ಜನಾರ್ಧನ ಹಾಗೂ ಸರಸ್ವತಿ ದಂಪತಿಗಳ ಪುತ್ರಿ. ಪ್ರಸ್ತುತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ...

ದೇವಚಳ್ಳ ಡಿಜಿಟಲ್ ಗ್ರಂಥಾಲಯಕ್ಕೆ ಚಾಲನೆ

ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ದೇವಚಳ್ಳ ಗ್ರಂಥಾಲಯವು ಇಂದು ಡಿಜಿಟಲ್ ಗ್ರಂಥಾಲಯವಾಗಿ ನವೀಕೃತಗೊಂಡು ಉದ್ಘಾಟನೆಗೊಂಡಿತು.ಶಿಕ್ಷಣ ಇಲಾಖೆಯ ಮಹತ್ವದ ಪರಿಕಲ್ಪನೆಯಡಿ ಕೇವಲ ಹದಿನೈದು ದಿನಗಳಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ಸಾರ್ವಜನಿಕ ಗ್ರಂಥಾಲಯವು ಅತ್ಯಂತ ಸುವ್ಯವಸ್ತಿತವಾಗಿ ಡಿಜಿಟಲ್ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಅತ್ಯಾಕರ್ಷಕ ಗೋಡೆ ಬರಹ, ಸುಂದರ ಚಿತ್ರಗಳು, 10,000 ಕ್ಕೂ ಮಿಕ್ಕಿದ ಪುಸ್ತಕಗಳು ಸುಸಜ್ಜಿತ ವಾಚನಾಲಯಗಳಿಂದ ಕೂಡಿರುವ ಗ್ರಂಥಾಲಯಕ್ಕೆ ಇಂದು...

ಮೋದಿ ಜನ್ಮದಿನದ ಅಂಗವಾಗಿ ಬೂಡು ಭಗವತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಸುಳ್ಯ ಕೇರ್ಪಳ ಬೂಡು ಶ್ರೀ ಪನ್ನೆಬೀಡು ಭಗವತಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಹುಟ್ಟು ಹಬ್ಬ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನೆಯನ್ನು ಬೂಡು ರಾಧಾಕೃಷ್ಣ ರೈ ನೆರೆವೇರಿಸಿದರು. ಈ ಸಂದರ್ಭದಲ್ಲಿ ಬೂಡು ರಾಧಾಕೃಷ್ಣ ರೈ, ಸುಳ್ಯ ನಗರ ಬಿಜೆಪಿ ನಗರ ಅಧ್ಯಕ್ಷ ಐ.ಬಿ. ಚಂದ್ರಶೇಖರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ,...

ಐವರ್ನಾಡು : ಹಸಿ ಮೀನು ಮಾರುಕಟ್ಟೆ ಉದ್ಘಾಟನೆ

ಐವರ್ನಾಡು ಗ್ರಾಮ ಪಂಚಾಯತ್, ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಹಸಿಮೀನು ಮಾರುಕಟ್ಟೆಯು ಸೆ.17 ರಂದು ಉದ್ಘಾಟನೆಗೊಂಡಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ನೂತನ ಮೀನು ಮಾರುಕಟ್ಟೆಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್...
Loading posts...

All posts loaded

No more posts

error: Content is protected !!