- Saturday
- July 4th, 2026
ಮುರುಳ್ಯ ಗ್ರಾಮದ ಅಲೆಕ್ಕಾಡಿಯಲ್ಲಿ ಯುವತಿಯೊಬ್ಬಳು ಯುವಕನೋರ್ವ ಅಸಹ್ಯವಾಗಿ ವರ್ತಿಸಿದ್ದಾನೆಂದು ಪೊಲೀಸು ದೂರು ನೀಡಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನವಾಜ್ ಎಂಬ ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಜಾಮೀನು ನೀಡಿರುವುದಾಗಿ ತಿಳಿದು ಬಂದಿದೆ. ಅಲೆಕ್ಕಾಡಿಯಲ್ಲಿ ಬಾಡಿಗೆ ರೂಮ್ ಮಾಡಿಕೊಂಡಿದ್ದ ಕಲ್ಮಡ್ಕದ ಕಜೆ ನವಾಜ್ (29)...
ಕೊಡಿಯಾಲ ಗ್ರಾಮ ಪಂಚಾಯತ್ 2021-22 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರದೀಪ್ ರೈ ಅಜ್ರಂಗಳರವರ ಅಧ್ಯಕ್ಷತೆಯಲ್ಲಿ ನ.8 ರಂದು ಪಂಚಾಯತ್ ಆವರಣದಲ್ಲಿ ನಡೆಯಿತು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಹರ್ಷನ್ ಕೆ.ಟಿ, ಸದಸ್ಯರಾದ ಕರುಣಾಕರ ಆಳ್ವ, ಶ್ರೀಮತಿ ಚಿತ್ರ, ಶ್ರೀಮತಿ ವಿಜಯಕುಮಾರಿ, ಶ್ರೀಮತಿ ಯಶವಂತಿ ಉಪಸ್ಥಿತರಿದ್ದರು.ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ...
ಸುಳ್ಯ ನಗರ ಪಂಚಾಯತ್ ನ ಕಲ್ಲುಮುಟ್ಲು ನೀರು ಶುದ್ಧೀಕರಣ ಘಟಕದಲ್ಲಿ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವ ಕಾರ್ಯ ಇರುವುದರಿಂದ ನವೆಂಬರ್ 10 ಬುಧವಾರದಂದು ಸುಳ್ಯ ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ತಿಳಿಸಿದ್ದಾರೆ.
ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಶ್ರೀಯುತ ಹರೇಕಳ ಹಾಜಬ್ಬ ಅವರನ್ನು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ವಸಂತ ಶೆಟ್ಟಿ ಬೆಳ್ಳಾರೆ ಹಾಗೂ ಕಾರ್ಯದರ್ಶಿಗಳಾದ ಶ್ರೀ ಡಾ.ಎಂ ಎಸ್ ಶಶಿಕುಮಾರ್, ಶಾಲೆಯ ಪ್ರಾಂಶುಪಾಲರು ಹಾಗೂ ಸದಸ್ಯರು ಮತ್ತು ಪೋಷಕರು ಸೇರಿ ವಿಮಾನ...
ಭಾರತೀಯ ಮಜ್ದೂರು ಸಂಘ ಬೆಳ್ತಂಗಡಿ ಸಂಯೋಜಿತ ರಬ್ಬರ್ ಟ್ಯಾಪರ್ಸ ಕೃಷಿ ಮಜ್ದೂರು ಸಂಘ ಸುಳ್ಯ ಇದರ ಕಾರ್ಯಕಾರಿ ಸಮಿತಿ ರಚನಾ ಸಭೆಯು ನ. 07ರಂದು ಸುಳ್ಯ ಕಲ್ಕುಡ ದೈವಸ್ಥಾನ ವಠಾರದಲ್ಲಿ ನಡೆಯಿತು. ಸುಳ್ಯ ತಾಲೂಕಿನ ರಬ್ಬರ್ ಟ್ಯಾಪರ್ಸ ಕೃಷಿ ಮಜ್ದೂರು ಸಂಘದ ಕಾರ್ಯಕಾರಿ ಸಮಿತಿ ರಚನಾ ಸಭೆಯು ಶಶಿಕುಮಾರ್ ಅಡ್ಯಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಅವಿಭಜಿತ...
ಸರ್ಕಾರದ ಆದೇಶದಂತೆ ಸೂಕ್ತ ಮುಂಜಾಗೃತ ಕ್ರಮಗಳನ್ನು ಪಾಲಿಸಿಕೊಂಡು ಅಂಗನವಾಡಿಗಳನ್ನು ತೆರೆಯಲು ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಇಂದು ಕಳಂಜ ಗ್ರಾಮದ ಅಯ್ಯನಕಟ್ಟೆ ಅಂಗನವಾಡಿಯಲ್ಲಿ ಮಕ್ಕಳ ಪ್ರಾರಂಭೋತ್ಸವವನ್ನು ನಡೆಸಲಾಯಿತು. ಪುಟಾಣಿಗಳಿಗೆ ಹೂವು ನೀಡುವುದರ ಮೂಲಕ ಅಂಗನವಾಡಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಕು. ದೀಪ್ತಿ ಎನ್, ಸಹಾಯಕಿ ಶ್ರೀಮತಿ ಲಲಿತಾ ಮಣಿಮಜಲು, ಎ.ಎನ್.ಎಂ ಬೇಬಿ ಕೆ ಸಿ,...
ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಹಾಗೂ ಕಾರ್ತಿಕ ಪೂರ್ಣಿಮೆಯ ಲಕ್ಷದೀಪ ಉತ್ಸವಗಳು ನ.14ರಿಂದ ನ.20ರ ತನಕ ವಿಜೃಂಭಣೆಯಿಂದ ನಡೆಯಲಿದೆ. ನ.14 ಆದಿತ್ಯವಾರದಂದು ಬೆಳಗ್ಗೆ 10.00 ಗಂಟೆಗೆ ಪ್ರಾರ್ಥನೆ, ಬಳಿಕ ಪಂಡಿತ್ ದೇವರಾಯ ಕಿಣಿ ಮತ್ತು ಬಳಗದವರಿಂದ ಸಂತವಾಣಿ ಕಾರ್ಯಕ್ರಮ ನಡೆಯಲಿದೆ. ನ.15 ಸೋಮವಾರದಂದು ಬೆಳಗ್ಗೆ 10.00 ಗಂಟೆಗೆ ದೀಪೋಜ್ವಲನ, ಏಕಾಹ ಭಜನೆ, ರಾತ್ರಿ...
ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 82 ನೇ ವಾರ್ಷಿಕ ಮಹಾಸಭೆಯು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ನ.07 ರಂದು ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಗತ ವರ್ಷದ ವರದಿಯನ್ನು ಮಂಡಿಸಿದರು. ಸಂಘದ ಅಧ್ಯಕ್ಷರ ಅಧ್ಯಕ್ಷತೆಯೊಂದಿಗೆ 82ನೇ ಸಭೆಯು ನಡೆಯಿತು, ಸಭೆಯಲ್ಲಿ...
ಪೆರುವಾಜೆ ಗ್ರಾಮದ ಮಠತ್ತಡ್ಕ ಚಂದ್ರಶೇಖರ ನಾಯ್ಕರ ಸುಪುತ್ರ ರಮೇಶ.ಎಂ ರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಮಂಜಲ್ತಡ್ಕ ಸುಂದರ ನಾಯ್ಕರ ಸುಪುತ್ರಿ ಹರ್ಷಿತಾರೊಂದಿಗೆ ನ.07ರಂದು ಮಂಜಲ್ತಡ್ಕ ವಧುವಿನ ಮನೆಯಲ್ಲಿ ನಡೆಯಿತು.
Loading posts...
All posts loaded
No more posts
