ಗುತ್ತಿಗಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ನಿಧಿ ವರ್ಗಾವಣೆ ಕಾರ್ಯಕ್ರಮದ ಕರಪತ್ರ ಬಿಡುಗಡೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು ಇದರ ವತಿಯಿಂದ ಸದಸ್ಯರ ಖಾತೆಗೆ ಪ್ರಗತಿ ನಿಧಿ ವರ್ಗಾವಣೆ ಕಾರ್ಯಕ್ರಮ ಅನುಷ್ಠಾನ ಮಾಡಲಿದ್ದು ತಾಲೂಕಿನಲ್ಲಿ ಪ್ರಥಮ ಬಾರಿಗೆ ಗುತ್ತಿಗಾರು ವಲಯದಲ್ಲಿ ಗುತ್ತಿಗಾರು ಹಣ ಸಂಗ್ರಹ ಕೇಂದ್ರದಲ್ಲಿ ನಡೆಯಲಿದ್ದು ಇದರ ಅಂಗವಾಗಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಕಾರ್ಯಕ್ರಮವನ್ನು ಗುತ್ತಿಗಾರು ವಲಯ ಕಚೇರಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು...

ಲತಾಶ್ರೀ ಸುಪ್ರೀತ್ ಗೆ ರಾಷ್ಟ್ರಮಟ್ಟದ ಡಾ.ಅಬ್ದುಲ್ ಕಲಾಂ ಪ್ರಶಸ್ತಿ

ಮಾತೃಭೂಮಿ ಸೇವಾ ಟ್ರಸ್ಟ್(ರಿ.), ತುಮಕೂರು ಇವರು ಕೊಡಮಾಡುವ ರಾಷ್ಟ್ರಮಟ್ಟದ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಗೆ ಸಾಹಿತಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಭಾಜನರಾಗಿದ್ದು ನ. 21ರಂದು ಮಾತೃಭೂಮಿ ಸೇವಾ ಟ್ರಸ್ಟ್(ರಿ.) ತುಮಕೂರು ಇದರ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಮಾನಿಕೆರೆ ಹತ್ತಿರ, ತುಮಕೂರು ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ...
Ad Widget

ಶುಭವಿವಾಹ : ಪೂರ್ಣಿಮಾ ಪುಳಿಮರಡ್ಕ- ಹರೀಶ್ ಬಾಂಜಿಕೋಡಿ

ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ಪುಳಿಮರಡ್ಕ ಮೋನಪ್ಪ ಗೌಡರ ಪುತ್ರಿ ಪೂರ್ಣಿಮಾರವರ ವಿವಾಹವು ಐರ್ವನಾಡು ಗ್ರಾಮದ ಬಾಂಜಿಕೋಡಿ ಗಣಪಯ್ಯ ಗೌಡರ ಪುತ್ರ ಹರೀಶ್ ರೊಂದಿಗೆ ನ.12ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾಬವನದಲ್ಲಿ ನಡೆಯಿತು.

ಗುತ್ತಿಗಾರು : ನ.22 ರಂದು ಚಿಣ್ಣರ ಮನೆ ಶುಭಾರಂಭ

ಗುತ್ತಿಗಾರಿನ ಸ್ವಾತಿ ಸಂಕೀರ್ಣದಲ್ಲಿ ನ.22 ರಂದು ಚಿಣ್ಣರ ಮನೆ ಶುಭಾರಂಭಗೊಳ್ಳಲಿದೆ. ಇಲ್ಲಿ 2 ವರ್ಷ ಮೇಲ್ಪಟ್ಟ ಹಾಗೂ 5 ವರ್ಷದೊಳಗಿನ ಮಕ್ಕಳಿಗೆ ಸಂಸ್ಕಾರದೊಂದಿಗೆ ಆಟಪಾಟ ಕಲಿಕೆ, ಯೋಗ, ಸಾತ್ವಿಕ ಊಟ ಉಪಹಾರ ನೀಡಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ. ಮಕ್ಕಳನ್ನು ಸೇರ್ಪಡೆಗೊಳಿಸಲಿಚ್ಚಿಸುವವರು ಸಂಪರ್ಕಿಸಬಹುದು ಮೊ :8073117026, 9480189590

ಶುಭವಿವಾಹ: ಹರ್ಷಿತಾ-ಶಿವಕುಮಾರ

ತೊಡಿಕಾನ ಗ್ರಾಮದ ಬಾಳೆಕಜೆ ಹೂವಪ್ಪ ಗೌಡರ ಪ್ರಥಮ ಪುತ್ರಿ ಹರ್ಷಿತಾ ರವರ ವಿವಾಹವು ಮಡಿಕೇರಿ ತಾಲೂಕು‌ ಪೆರಾಜೆ ಗ್ರಾಮದ ಪೆರುಮುಂಡ ಮುಕುಂದ ಗೌಡರ ಪುತ್ರ ಶಿವಕುಮಾರ ರೊಂದಿಗೆ ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ನ.20ರಂದು‌ ನಡೆಯಿತು.

ಶುಭವಿವಾಹ: ಲಕ್ಷ್ಮೀಶ-ಪೂರ್ಣಿಮಾ

ಬಾಳಿಲ ಗ್ರಾಮದ ಕಾಂಚೋಡು ಪುಟ್ಟಣ್ಣ ಗೌಡರ ಪುತ್ರ ಚಿ|ರಾ|ಲಕ್ಷ್ಮೀಶರ ವಿವಾಹವು ಪಂಬೆತ್ತಾಡಿ ಗ್ರಾಮದ ಕರಿಕ್ಕಳ ತಿಮ್ಮಪ್ಪ ಗೌಡರ ಪುತ್ರಿ ಚಿ|ಸೌ|ಪೂರ್ಣಿಮಾರೊಂದಿಗೆ ನ.21ರಂದು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ನಡೆಯಿತು.

ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಸುಭಾಶ್ಚಂದ್ರ ರೈ ತೋಟ ರಿಗೆ ಚಿನ್ನದ ಪದಕ

ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ ಸುಭಾಶ್ಚಂದ್ರ ರೈ ತೋಟ ರಿಗೆ ಚಿನ್ನದ ಪದಕ ಲಭಿಸಿದೆ.ನ. 12ರಿಂದ 14 ರವರೆಗೆ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ( ಹಿರಿಯರ ಕ್ರೀಡಾಕೂಟ) ನಲ್ಲಿ 100ಮೀ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, 100 ಮೀ ಅಡೆತಡೆ ಓಟದಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರು ಸುಳ್ಯ...

ಬಳ್ಪ : ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೊತ್ಸವದ ಸಮಲೋಚನಾ ಸಭೆ

ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಮತ್ತು ರಥೋತ್ಸವದ ಸಮಾಲೋಚನಾ ಸಭೆ ದೇವಸ್ಥಾನದಲ್ಲಿ ಇಂದು ನಡೆಯಿತು. ಡಿ.30 ಮತ್ತು 31 ರಂದು ನಡೆಯಲಿರುವ ಜಾತ್ರೊತ್ಸವದ ಪೂರ್ವಭಾವಿ ತಯಾರಿಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷರಾದ ಸದಾನಂದ ರೈ ಅರ್ಗುಡಿ, ಗೌರವಾಧ್ಯಕ್ಷರಾದ ಭಾಸ್ಕರ ಗೌಡ ಪಂಡಿ,ಧಾರ್ಮಿಕ ಉತ್ಸವ ಮಹಿಳಾ ವಿಭಾಗದ ಅಧ್ಯಕ್ಷರಾದ...

ರೈತರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಮತ್ತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ : ಲೋಲಜಾಕ್ಷ ಭೂತಕಲ್ಲು

ರೈತ ವಿರೋಧಿ ಮೂರು ಕೃಷಿ ಮಸೂದೆಗಳನ್ನು ಹಿಂದಕ್ಕೆ ಪಡೆಯುದಾಗಿ ನಮ್ಮ ಪ್ರಧಾನಿಯವರು ಈಗಾಗಲೇ ಘೋಷಿಸಿದ್ದು ಇದು ಕೇವಲ ಭರವಸೆಯಾಗಿ ಉಳಿಯಬಾರದು ರೈತರ ಸ್ವಾಭಿಮಾನಕ್ಕೆ ಮತ್ತೆ ಧಕ್ಕೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಸುಳ್ಯ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹೇಳಿದರು.ಮೂರು ಕೃಷಿ ಮಸೂದೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದುಕೊಳ್ಳುವ ಭರವಸೆ ನೀಡಿರುವ ಹಿನ್ನಲೆಯಲ್ಲಿ...

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪ್ರ.ಕಾರ್ಯದರ್ಶಿ ಅಫ್ಸರ್ ಗೂನಡ್ಕಕ್ಕೆ ಭೇಟಿ – ಕಾರ್ಯಕರ್ತರಿಂದ ಸನ್ಮಾನ

ಎಸ್‌ಡಿಪಿಐ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ಗೂನಡ್ಕದ ದಿ ಕಪ್ಸ್ ಕೆಫೆಯಲ್ಲಿ ಪಕ್ಷದ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ರಾಜ್ಯ ನಾಯಕರನ್ನು ಹೂಗುಚ್ಛ ನೀಡಿ ಸನ್ಮಾನಿಸಿಲಾಯಿತು.ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಟರ್ಲಿ, ಸುಳ್ಯ...
Loading posts...

All posts loaded

No more posts

error: Content is protected !!