- Wednesday
- May 6th, 2026
ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವರ ಮತ್ತು ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ, ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕಲ್ಲೇರಿತ್ತಾಯ ಹಾಗೂ ಇತರ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಸಿದ್ಧತೆಯಾಗಿ ಫೆ.10ರಂದು ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ಆವರಣದಲ್ಲಿ ಊರಿನ ಯುವಕರಿಂದ ಅಲಂಕಾರ ಸೇವೆ ನಡೆಯಿತು.
ಇತಿಹಾದ ಪ್ರಸಿದ್ಧ ಕಂದ್ರಪ್ಪಾಡಿ ರಾಜ್ಯದೈವ ಹಾಗೂ ಪುರುಷ ದೈವ ದೈವಸ್ಥಾನದಲ್ಲಿ ಜಾತ್ರಮಹೋತ್ಸವಕ್ಕೆ ಫೆ. 10 ರಂದು ಮುಹೂರ್ತ ನಡೆಯಿತು. ಕಂಚುಕಲ್ಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ಜಾತ್ರೆಗೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಫೆ. 10 ರಿಂದ ಜಾತ್ರೆ ನಡೆದು ಧ್ವಜಾರೋಹಣ ನಡೆಯುವವರೆಗೆ ದೈವಸ್ಥಾನದ ವ್ಯಾಪ್ತಿಗೊಳಪಟ್ಟ ಮನೆಗಳಲ್ಲಿ ಯಾವುದೇ ಶುಭಕಾರ್ಯ ನಡೆಸುವಂತಿಲ್ಲ ಎಂಬ ಧಾರ್ಮಿಕ ಕಟ್ಟುಪಾಡು ಇಲ್ಲಿ ನಡೆದುಕೊಂಡು...
ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವರ ಮತ್ತು ಅಮ್ಮನವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಅಣ್ಣಪ್ಪ ಸ್ವಾಮಿ, ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಮತ್ತು ಕಲ್ಲೇರಿತ್ತಾಯ ಹಾಗೂ ಇತರ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು (ಫೆ.10) ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಊರ ಮಹಿಳೆಯರಿಂದ ಶ್ರಮಸೇವೆ ನಡೆಯಿತು.
ಸಾವಿನವರೆಗೂ ಸಾಗುವ ದಾರಿ, ಕೊನೆಯಾಗುವುದು ತೀರವ ಸೇರಿ…ತಿಳಿದರೂ ತಿಳಿಯದೇ ಹೋದರೂ ಕೂಡ ತಿಳಿಯಲೆಬೇಕು ಬದುಕಿನ ಹಾದಿ, ಗುರಿ ಸೇರುವ ದಾರಿ…ನೀನು ಯಾರು ಎಂಬ ನಿಜವು ತಿಳಿಯದು ಯಾರಿಗೂ ನಿನ್ನನ್ನು ಹೊರತು, ನಿನ್ನ ಮನಸ್ಸನು ಹೊರತು…ಇತರರ ಬದುಕಿನ ಜೊತೆಗೆ ನೀನು ನಿನ್ನಯ ಬದುಕನು ಹೋಲಿಸಬೇಡ,ನಿನ್ನಯ ಬದುಕಿನ ದಾರಿಯೇ ಬೇರೆ, ಇತರರ ಬದುಕಿನ ದಾರಿಯೇ ಬೇರೆ…ಇಲ್ಲಿ ಯಾರೂ ಶಾಶ್ವತವಲ್ಲ,...
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.09 ರಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು.
ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಕಾವ್ಯ ಮೆಡಿಕಲ್ ಫೆ. 7 ರಂದು ಶುಭಾರಂಭಗೊಂಡಿತು. ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಗುತ್ತಿಗಾರು ಶ್ರೀ ಮುತ್ತಪ್ಪೇಶ್ವರ ದೈವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ ವಳಲಂಬೆ, ತಾ.ಪಂ. ಮಾಜಿ ಅಧ್ಯಕ್ಷ...
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಫೆ.08 ರಂದು ಮಾನ್ಯ ಮುಜರಾಯಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನಡೆಸಲಾಗುತ್ತಿರುವ ವನಸಂವರ್ಧನಾ ಕಾರ್ಯಕ್ರಮದ ಅಂಗವಾಗಿ ನಾಗಸಂಪಿಗೆ ಗಿಡವನ್ನು ನೆಟ್ಟರು.ನಂತರ ಮಾನ್ಯ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಅಂಗಾರ ಹಾಗೂ ಜಿಲ್ಲಾಧಿಕಾರಿಗಳಾದ...
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಅಂಗವಾಗಿ ಫೆ.8ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದ್ದು, ರಾತ್ರಿ ಸಭಾ ಕಾರ್ಯಕ್ರಮ ನಡೆಯಿತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಕೀಲಾಡಿ, ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್ ಎನ್ ಮನ್ಮಥ, ದ.ಕ.ಜಿಲ್ಲಾ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರು,...
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.12ರಿಂದ ಫೆ.16ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಫೆ.08ರಂದು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಗಳು, ಜಾತ್ರೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.
ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.12ರಿಂದ ಫೆ.16ರ ತನಕ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಫೆ.12 ಶನಿವಾರದಂದು ಬೆಳಗ್ಗೆ 9.30ಕ್ಕೆ ಉಗ್ರಾಣ ಮುಹೂರ್ತ, ಸಂಜೆ 5.30ಕ್ಕೆ ತಂತ್ರಿಗಳ ಆಗಮನ, ಸ್ವಾಗತ, ಪ್ರಾರ್ಥನೆ, ದೀಪಾರಾಧನೆ,...
Loading posts...
All posts loaded
No more posts
