- Wednesday
- July 1st, 2026
ಫೆ.27 ಭಾನುವಾರದಂದು ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದ ಅಂಗವಾಗಿ ಕಳಂಜ ವಿಷ್ಣುನಗರದ ಅಕ್ಷರ ಕರಾವಳಿ ಕಟ್ಟಡದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ನಡೆಯಲಿದೆ. ಈ ಅಭಿಯಾನವು ಬೆಳಗ್ಗೆ ಗಂಟೆ 8.00ರಿಂದ ಸಂಜೆ ಗಂಟೆ 5.00ರ ತನಕ ನಡೆಯಲಿದ್ದು, 5 ವರ್ಷದೊಳಗಿನ ಎಲ್ಲಾ ಮಕ್ಕಳು ಲಸಿಕೆಯನ್ನು ಪಡೆದುಕೊಳ್ಳುವಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಬೇಬಿ...
ಮಾವಿನಕಟ್ಟೆ ಉದಯಗಿರಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಶ್ರೀ ದೈವದ ವಾರ್ಷಿಕ ಒತ್ತೆಕೋಲದ ಆಮಂತ್ರಣ ಪತ್ರಿಕೆ ಫೆ .25 ರಂದು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಎ.ವಿ ತೀರ್ಥರಾಮ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಶ್ರೀ ಕಟೀಲ್, ಸದಸ್ಯರುಗಳಾದ ಕೃಷ್ಣಪ್ಪ ಗೌಡ ಮಾವಿನಕಟ್ಟೆ, ರಾಮಚಂದ್ರ ನಾಗನಗದ್ದೆ, ಲೋಕೇಶ್ ಪೂಜಾರಿ ತಳೂರು, ವೆಂಕಟ್ರಮಣ ಮೆದು,...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಪ್ಲೇಸ್ಮೆಂಟ್ ಮತ್ತು ಕೆರಿಯರ್ ಗೈಡೆನ್ಸ್ ಸೆಲ್ ವತಿಯಿಂದ ಸಂದರ್ಶನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು. ಬೆಂಗಳೂರಿನ ಜಿಲೆಟ್ ಕಂಪೆನಿಯ ಪುನೀತ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿವಿದ್ಯಾರ್ಥಿಗಳಿಗೆ ಸಂದರ್ಶನ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಮತಿ ರತ್ನಾವತಿ ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂತಿಮ...
ಹರಿಹರ ಪಲ್ಲತ್ತಡ್ಕದ ಪ್ರಯಾಣಿಕರ ತಂಗುದಾಣದಲ್ಲಿ ಫೆ.24 ರಂದು ಪುಸ್ತಕ ಗೂಡು ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಬಾಳುಗೋಡು ಗ್ರಾಮದ ನಿವೃತ್ತ ಅಂಚೆ ವಿತರಕ ಧರ್ಮಪಾಲ ಮುಚ್ಚಾರ ಅವರು ಪುಸ್ತಕ ಗೂಡು ಉದ್ಘಾಟನೆ ಮಾಡಿದರು.ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಯಂತ ಬಾಳುಗೋಡು ಹಾಗೂ ಉಪಾಧ್ಯಕ್ಷರಾದ ವಿಜಯ...
ಜಾಲ್ಸೂರು ಗ್ರಾಮ ಬೊಳುಬೈಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಮಾಲಕತ್ವದ ಶ್ರೀ ಮಹಾವಿಷ್ಣುಮೂರ್ತಿ ಗ್ರಾನೈಟ್ಸ್ ಫೆ. 23 ರಂದು ಶುಭಾರಂಭಗೊಂಡಿದೆ. ಇಲ್ಲಿ ವಿವಿಧ ದರ್ಜೆಯ ಗ್ರಾನೈಟ್ ಗಳು ಲಭ್ಯವಿದೆ ಎಂದು ಮಾಲಕರಾದ ಬಬ್ಲು ತಿಳಿಸಿದ್ದಾರೆ.
ಗುತ್ತಿಗಾರಿನ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪ್ರಾಥಮಿಕ ಅರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಫೆ. 25ರಂದು ಬೆಳಿಗ್ಗೆ 10ರಿಂದ ಪ್ರಾಥಮಿಕ ಅರೋಗ್ಯ ಕೇಂದ್ರ ಗುತ್ತಿಗಾರಿನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.
ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ 22 ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ನಡೆಯಿತು.ಫೆ.20 ರಂದು ಬೆಳಿಗ್ಗೆ 9:00 ಗಂಟೆಯಿಂದ ಹಸಿರು ಕಾಣಿಕೆ ಪ್ರಾರಂಭ, ಮದ್ಯಾಹ್ನ 12:00 ಗಂಟೆಗೆ ಮಹಾಪೂಜೆ, ಮದ್ಯಾಹ್ನ 12:30 ರಿಂದ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ,...
ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಫೆ.20 ರಂದು ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ ಮತ್ತು ಶ್ರೀಮತಿ ಮಾಲಿನಿ ವಿನೋದ್ ಕುಮಾರ್ ಉಳುವಾರು ಮಲ್ಲಡ್ಕ ಇವರು ತಮ್ಮ ಎರಡು ತಿಂಗಳ ಗೌರವಧನ ನೀಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ದೇವಚಳ್ಳ ಗ್ರಾಮದ ತಳೂರು ಹಲಸಿನಡ್ಕ ಬಾಬು ಮಡಿವಾಳ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.19 ರಂದು ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಹಲವಾರು ವರ್ಷಗಳಿಂದ ಗ್ರಾಮದ ದೈವ ಹಾಗೂ ದೇವರ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪುತ್ರರಾದ ಪದ್ಮನಾಭ, ತೀರ್ಥರಾಮ, ಪುತ್ರಿ ಭಾರ್ಗವಿ, ಅಳಿಯ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆಯ ನೇತೃತ್ವದಲ್ಲಿ ಫೆ. 11 ರಂದು ಮೀನುಗಾರಿಕಾ ಸಚಿವರಾದ ಎಸ್. ಅಂಗಾರರವರ ಸುಳ್ಯದ ಕಛೇರಿಯಲ್ಲಿ ನಡೆದ ಸಭೆಯಲ್ಲಿ "ಮಹಶೀರ್ ಮತ್ಸ್ಯ ರೈತ ಉತ್ಪಾದಕ ಕಂಪೆನಿ ಲಿಮಿಟೆಡ್” ಇದರ ನೂತನ ಆಡಳಿತ ಮಂಡಳಿಯ ರಚನೆ ನಡೆಯಿತು. ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳಾಗಿ 11 ಜನರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹೇಶ್ ಕುಮಾರ್ ಮೇನಾಲ, ಉಪಾಧ್ಯಕ್ಷರಾಗಿ...
Loading posts...
All posts loaded
No more posts
