ಕಳಂಜ ಗ್ರಾಮದ ಪಾಂಡಿಪಾಲ್- ತಂಟೆಪ್ಪಾಡಿ- ಕಿಲಂಗೋಡಿ ರಸ್ತೆಯ 50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

ಕಳಂಜ ಗ್ರಾಮದ ಪಾಂಡಿಪಾಲ್- ತಂಟೆಪ್ಪಾಡಿ- ಕೀಲಂಗೋಡಿ ರಸ್ತೆಯ 50 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮವು ಏ.09ರಂದು ನಡೆಯಿತು. ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರು ಹಿರಿಯರಾದ ಅಣ್ಣಾ ವಿನಯಚಂದ್ರ, ಪ್ರಮುಖರಾದ ಹರೀಶ್ ಕಂಜಿಪಿಲಿ,...

ಏಪ್ರಿಲ್ 22 ರಿಂದ 26 ರವರೆಗೆ ಕುಕ್ಕುಜಡ್ಕ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬಲ್ಲಾಳರು ಆರಾಧನೆ ಮಾಡಿಕೊಂಡು ಬರುತ್ತಿದ್ದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಕ್ಕುಜಡ್ಕದ ಶ್ರೀ ವಿಷ್ಣುಮೂರ್ತಿ, ಶ್ರೀ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು ಸುಮಾರು 1 ವರೆ ಕೋಟಿಗೂ ಮಿಕ್ಕಿದ ಖರ್ಚಿನಲ್ಲಿ ಸಂಪೂರ್ಣ ಕೆಲಸ ಕಾರ್ಯ ನಡೆದು ಏ. 22 ರಿಂದ ಪ್ರಾರಂಭವಾಗಿ ಏ. 26 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿದೆ ಬ್ರಹ್ಮಕಲಶೋತ್ಸವ...
Ad Widget

ಕಲ್ಲುಗುಂಡಿ : ಅಪಘಾತದಲ್ಲಿ ಭೀಮಗುಳಿ ಕುಟುಂಬದ ನಾಲ್ವರು ದುರ್ಮರಣ ಪ್ರಕರಣ – ಏಳು ವರ್ಷದ ಬಳಿಕ ಟಿಪ್ಪರ್ ಚಾಲಕ ಮತ್ತು ಮಾಲಕನಿಗೆ ಎರಡು ವರ್ಷ ಜೈಲು ಶಿಕ್ಷೆ

ಕಲ್ಲುಗುಂಡಿ ಸಮೀಪದ ಕಡೆಪಾಲ ಎಂಬಲ್ಲಿ ಏಳು ವರ್ಷಗಳ ಹಿಂದೆ ನಡೆದ ಕಾರು ಮತ್ತು ಟಿಪ್ಪರ್ ಅಪಘಾತ ಪ್ರಕರಣದಲ್ಲಿ ಪಂಜ ಭೀಮಗುಳಿ ಕುಟುಂಬದ ಒಂದೇ ಮನೆಯ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿ ಟಿಪ್ಪರ್ ಚಾಲಕ ಹಾಗೂ ಮಾಲಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ. ತೀರ್ಪು...

ಆರೋಗ್ಯವನ್ನು ನಿಸರ್ಗ ಮೂಲವಾಗಿಸಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುತ್ತಿದೆ ಡಾ. ಚೂಂತಾರು ಅವರು ಬರೆದ “ಸ್ವಾದ” ಆಹಾರ ಸಂಹಿತೆ

ಇತ್ತೀಚೆಗೆ ಪ್ರಕಟವಾಗಿರುವ ಡಾ. ಮುರಳೀಮೋಹನ ಚೂಂತಾರು ಅವರ 'ಸ್ವಾದ - ಆಹಾರಸಂಹಿತೆ' ಎಂಬ ಕೃತಿಯು ಸಾವಿರಾರು ವರ್ಷಗಳಿಂದಲೂ ಭಾರತೀಯರ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬಂದ ನಿಸರ್ಗಮೂಲ ಪದ್ಧತಿಯಾದ ಶಾಕಾಹಾರ, ಮಿತಾಹಾರ, ಪಥ್ಯ, ಉಪವಾಸ ಮುಂತಾದ ಆಯುರ್ವೇದ ಸಿದ್ಧಾಂತಗಳನ್ನು ಮೆಲುದನಿಯಿಂದ ಮಂಡಿಸುತ್ತ, ಜೊತೆಗೆ ನಿರೋಗಿಯಾಗಿರಲು ಅಗತ್ಯವಾದ ಆಹಾರಕ್ರಮವನ್ನು ವಿವರಿಸುತ್ತ, ಕಾಲಕ್ಕೆ ತಕ್ಕಂತೆ ಆಧುನಿಕ ವೈದ್ಯವಿಜ್ಞಾನದ ಸಂತುಲಿತ ಅಳವಡಿಕೆಯಿಂದ ಹೇಗೆ...

ಏ 14 : ಅಂಬೇಡ್ಕರ್ ಜಯಂತಿ ಅಂಗವಾಗಿ ಸುಳ್ಯದಲ್ಲಿ ಬೃಹತ್ ರಕ್ತದಾನ ಶಿಬಿರ

ಅಂಬೇಡ್ಕರ್ ರಕ್ಷಣಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ರಿ. ಸುಳ್ಯ ಇದರ ವತಿಯಿಂದ ಏಪ್ರಿಲ್ 14ರಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಈ ಕಾರ್ಯಕ್ರಮವನ್ನು ಮಂಗಳೂರು ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆಸಲಾಗುತ್ತದೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ...

ಅರಂತೋಡು : ಸ್ವಚ್ಚತಾ ಸಪ್ತಾಹ – ತ್ಯಾಜ್ಯ ಎಸೆದವರಿಗೆ ದಂಡ

ದ ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರ ಆದೇಶದಂತೆ ಏ.1 ರಿಂದ 1ವಾರಗಳ ಸ್ವಚ್ಚತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದರ ಅಂಗವಾಗಿ ರಸ್ತೆ ಬದಿ ಬಿದ್ದಿದ್ದ ಸ್ವಚ್ಚತಾ ತ್ಯಾಜ್ಯಗಳ ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ಎಸೆದಿರುವ 3 ಚೀಲಗಳನ್ನು ಪರಿಶೀಲಿಸಿ ತ್ಯಾಜ್ಯವನ್ನು ಎಸೆದವರಿಗೆ ಒಟ್ಟು 4000 ರೂ...

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಮೆಟ್ರಿಕ್ ಮೇಳ

ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದಲ್ಲಿ ಗಣಿತ ಮೆಟ್ರಿಕ್ ಮೇಳವು ಏ.08ರಂದು ನಡೆಯಿತು. ಮಕ್ಕಳೇ ವ್ಯಾಪಾರಿಗಳಾಗಿ, ಊರ ವಿದ್ಯಾಭಿಮಾನಿಗಳು ಗ್ರಾಹಕರಾಗಿ ಮಕ್ಕಳ ಸಂತೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಮೆಟ್ರಿಕ್ ಮೇಳವನ್ನು ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಯ ಸಂಚಾಲಕ ಪಿ.ಜಿ.ಎಸ್.ಎನ್ ಪ್ರಸಾದ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ಬಯ್ಯ.ವೈ.ಬಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು...

ಸುಳ್ಯ: “ಕ್ಷಯ ಮುಕ್ತ ಭಾರತ” ಪ್ರತಿಜ್ಞೆ ಸ್ವೀಕಾರ

2025 ಕ್ಕೆ ಕ್ಷಯ ಮುಕ್ತ ಭಾರತ ಮಾಡುವ ಕೇಂದ್ರ ಸರಕಾರದ ಘೋಷಣೆಯಂತೆ ಸುಳ್ಯ ತಾಲ್ಲೂಕನ್ನು 2025ಕ್ಕೆ ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರತಿಜ್ಞೆಯನ್ನು ಸುಳ್ಯ ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಧಿಕಾರಿ ಡಾ.ನಂದಕುಮಾರ್, ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ಪಂಜ...

ಐವರ್ನಾಡು: ಭಾರೀ ಗಾಳಿ ಮಳೆಗೆ ಧರೆಗುರುಳಿದ ಮರ, ಸಂಚಾರ ಅಸ್ತವ್ಯಸ್ತ

ಇಂದು ಸಂಜೆ ಸುರಿದ ಭಾರಿ ಗಾಳಿ, ಮಳೆಗೆ ಐವರ್ನಾಡಿನಲ್ಲಿ ಮರ ಧರೆಗುರುಳಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದುದರಿಂದ ಸಂಚಾರಕ್ಕೆ ಕೆಲಸಮಯ ತೊಡಕುಂಟಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯರು ಸೇರಿ ಮರವನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಎ.09: ನಿಂತಿಕಲ್ಲಿನಲ್ಲಿ ಧನು ಅಸೋಸಿಯೇಟ್ಸ್ ಶುಭಾರಂಭ

ನಿಂತಿಕಲ್ಲಿನ ಧರ್ಮಶ್ರೀ ಆರ್ಕೇಡ್ ನ ಪ್ರಥಮ ಮಹಡಿಯಲ್ಲಿ ಧನಂಜಯ್ ಕಳಂಜ ಮಾಲಕತ್ವದ ಧನು ಅಸೋಸಿಯೇಟ್ಸ್ ಎ.09ರಂದು ಶುಭಾರಂಭಗೊಳ್ಳಲಿದೆ. ಇಲ್ಲಿ ಜಿ.ಎಸ್.ಟಿ ರಿಜಿಸ್ಟ್ರೇಷನ್ ಮತ್ತು ಫೈಲಿಂಗ್, ಆಡಿಟಿಂಗ್, ಆದಾಯ ತೆರಿಗೆ ಸಂಬಂಧಿತ ಕೆಲಸಗಳು, ಸೊಸೈಟಿ ರಿಜಿಸ್ಟ್ರೇಷನ್, ಇ-ಟಿ.ಡಿ.ಎಸ್ ಪಾನ್ ಕಾರ್ಡ್, ಪ್ರಾಜೆಕ್ಟ್ ರಿಪೋರ್ಟ್, ಆಧಾರ್ ತಿದ್ದುಪಡಿ ಹಾಗೂ ಇನ್ನಿತರ ಸೇವೆಗಳು ಲಭ್ಯವಿರಲಿದೆ ಎಂದು ಸಂಸ್ಥೆಯ ಮಾಲಕರಾದ ಧನಂಜಯ್...
Loading posts...

All posts loaded

No more posts

error: Content is protected !!