- Friday
- May 16th, 2025

ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವದ ಪ್ರಯುಕ್ತ ಮಾ.19ರಂದು ರಾತ್ರಿ ಶ್ರೀ ರುಧಿರ ಚಾಮುಂಡಿ ದೈವದ ನೇಮೋತ್ಸವ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಸಂಜೆ ನಡುಬೆಟ್ಟು ಚಾವಡಿಯಿಂದ ಶ್ರೀ ದೈವಗಳ ಭಂಡಾರ ಆಗಮಿಸಿ ರುಧಿರ ಚಾಮುಂಡಿ ದೈವದ ನೇಮೋತ್ಸವ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ...

ಪ್ರತಿ ವರ್ಷ ಮಾರ್ಚ್ 20ರಂದು ವಿಶ್ವ ಬಾಯಿ ಆರೋಗ್ಯ ದಿನ ಎಂದು ಆಚರಿಸಿ ಬಾಯಿ ಆರೋಗ್ಯದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸಲಾಗುತ್ತದೆ. 2007ರಲ್ಲಿ ಈ ಆಚರಣೆ ಆರಂಭವಾಯಿತು. ಬಾಯಿಯ ಆರೋಗ್ಯವನ್ನು ಕಾಪಾಡುವುದು ಹೇಗೆ ಮತ್ತು ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ದೇಹದ ಆರೋಗ್ಯದ ಮೇಲೆ ಉಂಟಾಗುವ ಧನ್ಮಾತ್ಮಕ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸದುದ್ದೇಶ ಈ...

ವಿಶ್ವೇಶ್ವರಾಯ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ, ಜೆ.ಎನ್.ಎನ್.ಸಿ.ಇ, ಶಿವಮೊಗ್ಗದಲ್ಲಿ ನಡೆದ 2024-25ನೇ ಸಾಲಿನ ವಿ.ಟಿ.ಯು ರಾಜ್ಯಮಟ್ಟದ ಅತ್ಲೆಟಿಕ್ ಮೀಟ್‌ನಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು, ಸುಳ್ಯ ಇದರ ಕಂಪ್ಯೂಟಕ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ, 8ನೇ ಸೆಮಿಸ್ಟರ್ ವಿದ್ಯಾರ್ಥಿ ಟಿಷನ್ ಮಾದಪ್ಪ ಅವರು 21 ಕಿಲೋ ಮೀಟರ್ ಹಾಗೂ 5೦೦೦ ಮಿ. ಓಟದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡು ಅದಲ್ಲದೆ...

ಐವತೊಕ್ಲು ಗ್ರಾಮದ ಪಲ್ಲೋಡಿ ನಿವಾಸಿ ,ಮೀನಾಕ್ಷಿ ಇವರು ಕಳೆದ ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗಾಗಿ ಯುವ ತೇಜಸ್ಸು ಬಳಗದಿಂದ ಆರ್ಥಿಕ ಸಹಾಯಧನದ ₹. 12000/- ಚೆಕ್ ಅನ್ನು ಮಾ.16ರಂದು ಅವರ ನಿವಾಸದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಯುವ ತೇಜಸ್ಸು ಬಳಗದ ಸದಸ್ಯರು ಉಪಸ್ಥಿತರಿದ್ದರು.

ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಅಧ್ಯಕ್ಷರಾದ ಮೀರಾಝ್ ಸುಳ್ಯ ರವರ ಅಧ್ಯಕ್ಷತೆಯಲ್ಲಿ ಸವಣೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಗ್ರಾಮಾಂತರ ಜಿಲ್ಲಾ ಪ್ರ.ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ ವೀಕ್ಷಕರಾಗಿ ಆಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು.ಸಭೆಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯದಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಪ್ರತೀ ಬ್ರಾಂಚ್ ಮಟ್ಟದಿಂದ ಆಯಾಯ...

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಸಲ್ಪಡುತ್ತಿರುವ ಇನ್ಸ್‌ಪೈಯರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಅವಾರ್ಡ್‌ಗೆ ಆಯ್ಕೆಯಾಗಿರುತ್ತಾರೆ. 6ನೇ ಆಂಗ್ಲ ಮಾಧ್ಯಮ ವಿಭಾಗದ ಪಿ ಮನ್ವಿ ಹಾಗೂ ಅಹನ್ ಗೌಡ ಕೆ ಎಚ್ ಆಯ್ಕೆಯಾದ ವಿದ್ಯಾರ್ಥಿಗಳು. ವಿಜ್ಙಾನ ಶಿಕ್ಷಕ ದಿನೇಶ್ ಮಾಚಾರ್ ಇವರ...

ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.18 ಮತ್ತು 19 ರಂದು ಶ್ರೀ ದೈವದ ಒತ್ತೆಕೋಲ ಮಹೋತ್ಸವ ನಡೆಯಿತು. ಮಾ.18 ರಂದು ಬೆಳಿಗ್ಗೆ ಗಣಪತಿ ಹವನ , ಶುದ್ಧಿ ಕಲಶ, ಮೇಲೇರಿ ಕಾರ್ಯಕ್ರಮ , ಅಶ್ವತ್ಥ ಪೂಜೆ ಮದ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ ಅನ್ನ ಸಂತರ್ಪಣೆ ಹಾಗೂ ಕುಳಿಚಾಟ...

ಮುಕ್ಕೂರು : ಕಲಾತ್ಮಕ ಸಿನೆಮಾಗಳನ್ನು ವೀಕ್ಷಿಸುವುದರಿಂದ ಬೌದ್ಧಿಕ ವಿಕಸನಕ್ಕೆ ಕಾರಣವಾಗುತ್ತದೆ. ಮೇರು ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಸಾಹಿತ್ಯ ಲೋಕವನ್ನು ತೆರೆದ ಕಣ್ಣಿನಿಂದ ನೋಡಿದಾಗ ಅದು ನಮ್ಮ ಬದುಕಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಸುಳ್ಯ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಹೇಳಿದರು. ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಇದರ ವತಿಯಿಂದ ಮುಕ್ಕೂರು...

ಸುಳ್ಯದ ಯುವ ಸಂಗೀತ ನಿರ್ದೆಶಕ ಮಯೂರ ಅಂಬೆಕಲ್ಲು ಸಾರಥ್ಯದಲ್ಲಿ ಮೂಡಿಬಂದ "ಭಾವ ತೀರ ಯಾನ" ಚಲನಚಿತ್ರ ತಿಂಗಳು ಪೂರೈಸುತ್ತಿದ್ದು, ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ನಿರಂತರ ಪ್ರದರ್ಶನ ಕಾಣುತ್ತಿದೆ. ಮಾ.19 ರಂದು ಸಂಜೆ 7.30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ. ಕೌಂಟರ್'ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಅರಂತೋಡು ಶ್ರೀ ದುರ್ಗಾ ಗೆಳೆಯರ ಬಳಗ ವತಿಯಿಂದ ಮಹಿಳೆಯರ ಮತ್ತು ಪುರುಷರ ಹೊನಲು ಬೆಳಕಿನ ಹಗ್ಗ ಜಗ್ಗಾಟ ಅರಂತೋಡು ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನ ವಠಾರ ದಲ್ಲಿ ಮಾ.16 ರಂದು ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾ ಗೆಳೆಯರ ಬಳಗ ಅಧ್ಯಕ್ಷ ಲಿಖಿನ್ ಕಳುಬೈಲು ವಹಿಸಿದರು.ಪಂದ್ಯಾಟದ ಉದ್ಘಾಟನೆಯನ್ನು ತೋಟಂ ಶ್ರೀ ಉಳ್ಳಾ ಕುಳು ದೈವಸ್ಥಾನ ಅಧ್ಯಕ್ಷ...

All posts loaded
No more posts