- Saturday
- March 7th, 2026
ಮಂಗಳೂರು ಯೂನಿವರ್ಸಿಟಿ ನಡೆಸಿದ 2025 ನೇ ಸಾಲಿನ ಬಿ. ಎ ಅಂತಿಮ ಪರೀಕ್ಷೆಯಲ್ಲಿ ಸುಳ್ಯ ಸ.ಪ್ರ.ದರ್ಜೆ ಕಾಲೇಜು ಕೊಡಿಯಾಲಬೈಲ್ ಇಲ್ಲಿನ ವಿದ್ಯಾರ್ಥಿ ದಿವ್ಯ ಪಿ.ಜಿ. ಶೇಕಡ 88% ಪಡೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ನಾಲ್ಕೂರು ಗ್ರಾಮದ ಸಾಲ್ತಾಡಿ ಪೊಡಿಯಾ ಜಿ. ಮತ್ತು ಗಿರಿಜಾ ಕೆ. ದಂಪತಿಗಳ ಪುತ್ರಿ.
ಮಂಗಳೂರು ಯೂನಿವರ್ಸಿಟಿ ನಡೆಸಿದ 2025 ನೇ ಸಾಲಿನ ಬಿ. ಎ ಅಂತಿಮ ಪರೀಕ್ಷೆಯಲ್ಲಿ ಕೊಡಿಯಾಲಬೈಲು ಸ.ಪ್ರ.ದ.ಕಾಲೇಜಿನ ವಿದ್ಯಾರ್ಥಿ ಕು. ಪ್ರೀತಿಕಾ ಎಂ.ಎಸ್. ಶೇಕಡ 88% ಅಂಕ ಪಡೆದುಕೊಂಡು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಗುತ್ತಿಗಾರು ಗ್ರಾಮದ ಪೈಕ ಮೋಹನಹಳ್ಳಿ ಮನೆ ಸಿದ್ದಾರ್ಥ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರಿ.
ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ 2025 -26 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ದಿನಾಂಕ 22 ಜುಲೈ 2025 ರಂದು ಅಮ್ಮು ರೈ ಕಾಂಪ್ಲೆಕ್ಸ್ ಬೆಳ್ಳಾರೆ ಇಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಐವರ್ನಾಡು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮಾಲತಿ ಬೆಳ್ಳಾರೆ ಇವರ ವೃತ್ತಿ ಸಾಧನೆಯನ್ನು ಗುರುತಿಸಿ...
ಶಕ್ತಿ ಯುವಕ ಮಂಡಲ (ರಿ) ಬೆಳ್ಳಿಪ್ಪಾಡಿ ಹಾಗೂ ಊರಿನ ಎಲ್ಲ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಇದೇ ಬರುವ ದಿನಾಂಕ 13 - 07- 2025 ನೇ ಭಾನುವಾರ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದಿಂದ 150 ಮೀಟರ್ ದೂರದಲ್ಲಿರುವ ಶ್ರೀ ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಇವರ ಗದ್ದೆಯಲ್ಲಿ ಕೆಸರಗದ್ದೆ ಕ್ರೀಡಾಕೂಟ ನಡೆಯಲಿದೆ.ಬೆಳಗ್ಗೆ ಗಂಟೆ...
ಸುಳ್ಯ ನಗರ ಮಹಾ ಯೋಜನೆ ಕುರಿತು ಮಾಸ್ಟರ್ ಪ್ಲಾನ್ ಅನುಷ್ಠಾನ ಬಗ್ಗೆ ಸುಳ್ಯದ ನಾಗರಿಕರ ಸಭೆ ಕರೆದು, ಚರ್ಚೆ ನಡೆಸಿ, ಸಾರ್ವಜನಿಕರ ಅಭಿಪ್ರಾಯ ಪಡೆದು ಸುಳ್ಯದ ನಾಗರಿಕರಿಗೆ ತೊಂದರೆ ಆಗದಂತೆ ಅನುಷ್ಠಾನಗೊಳಿಸಬೇಕು ಎಂಬುದಾಗಿ ಮಾಹಿತಿ ಹಕ್ಕು ಕಾರ್ಯಕರ್ತ ಡಿ.ಎಂ.ಶಾರಿಖ್, ಆಗ್ರಹಿಸಿದ್ದಾರೆ.
ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲ ಇಲ್ಲಿ 21 ಜೂನ್ 2025 ರಂದು ವಿಶ್ವ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ (ರಿ) ಬಾಳಿಲ ಇದರ ಅಧ್ಯಕ್ಷರಾದ ಯು ರಾಧಾಕೃಷ್ಣ ರಾವ್ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿ, ವಿದ್ಯಾರ್ಥಿಗಳೆಲ್ಲರೂ ಯೋಗ ಅಭ್ಯಾಸವನ್ನು ಮಾಡಿ ಜೀವನದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿಕೊಂಡು ಓದಿನ ಕಡೆಗೆ ಮಹತ್ವ ಕೊಡಬೇಕು...
ಅಮರ ಸುದ್ದಿ ವಾರಪತ್ರಿಕೆಯಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಲ್ಲಾಸ್ ಕಜ್ಜೋಡಿ ರವರ ಮೊದಲ ಕೃತಿ “ಜೀವನಯಾನ” ಕವನ ಸಂಕಲನವು ಜೂ.20 ರಂದು ಬಿಡುಗಡೆಗೊಳ್ಳಲಿದ್ದು, ಸಂಧ್ಯಾರಶ್ಮಿ ಸಾಹಿತ್ಯ ಸಂಘ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ಹೋಬಳಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಕುರುಂಜಿಬಾಗ್ ನ ಸಂಧ್ಯಾರಶ್ಮಿ ಸಭಾಂಗಣದಲ್ಲಿ ಜೂ.20 ರಂದು ನಡೆಯಲಿರುವ ಸಾಹಿತಿ ಕೆ.ಆರ್...
ಕೊಲ್ಲಮೊಗ್ರು ಗ್ರಾಮದ ಚಿದಾನಂದ ಮಲ್ಲಾಜೆ ಜೂ.16ರಂದು ಸ್ವಗೃಹದಲ್ಲಿ ನಿಧನರಾದರು.ಇವರು ಕೆಲ ಸಮಯಗಳಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು.ಮೃತರಿಗೆ 65 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮೀನಾಕ್ಷಿ, ಪುತ್ರಿ ಶ್ರೀಮತಿ ಸಂಧ್ಯಾ ಶ್ರೀಧರ್ ಮೆಟ್ಟಿನಡ್ಕ, ಪುತ್ರ ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಅಕ್ಷಯ್, ಸಹೋದರರಾದ ಗೋಪಾಲಕೃಷ್ಣ, ಅಶೋಕ್, ಸಹೋದರಿ ಶ್ರೀಮತಿ ರತ್ನಾವತಿ ಐನೆಕಿದು ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.
ಪುತ್ತೂರಿನ ಪ್ರಸಿದ್ಧ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ಸಂಸ್ಥೆಯಿಂದ ಜೂನ್ 09ರಿಂದ " ಕರಿಮಣಿ ಮೇಳ" ಎಂಬ ಹೊಸ ಯೋಜನೆಯೊಂದ್ದು ಪ್ರಾರಂಭಗೊಳ್ಳಲಿದ್ದು ಇದರಲ್ಲಿ ಗ್ರಾಹಕರು ತಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿ ಪ್ರತಿ ಗ್ರಾಂಗೆ ರೂ 150ರಂತೆ ಅಧಿಕ ದರ ಪಡೆದುಕೊಳ್ಳಬಹುದಾಗಿದ್ದು ಗ್ರಾಹಕರು ಈ ಅವಕಾಶವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ
Loading posts...
All posts loaded
No more posts
