Ad Widget

ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 1ಕೋಟಿ 80ಲಕ್ಷ ರೂಪಾಯಿ ಗಳ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಮತ್ತು 42ಲಕ್ಷ ರೂಪಾಯಿ ವೆಚ್ಚದ ಕಾಮಗಾರಿ ಉದ್ಘಾಟನೆ ನೇರವೆರಿಸಿದ ಶಾಸಕರು.

ದಿನಾಂಕ 27/03/25 ರಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕೊಲ್ಲಮೊಗ್ರು ಗಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮಾನ್ಯ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.ಕೊಲ್ಲಮೊಗ್ರ-ಆಲದಮರಬಳಿ ಮುಖ್ಯ ರಸ್ತೆಗೆ ನೂತನ ಸೇತುವೆಗೆ - 1ಕೋಟಿ ಕಲ್ಮಕಾರು ರಸ್ತೆಯ ಗಡಿಕಲ್ಲು ಬಳಿ ತಡೆಗೋಡೆಗೆ 25ಲಕ್ಷಕೊಲ್ಲಮೊಗ್ರ ಗ್ರಾಮದ ಕುಂಟುಕಾಪು ರಸ್ತೆಗೆ 10ಲಕ್ಷಕೊಲ್ಲಮೊಗ್ರ ಗ್ರಾಮದ ಮಲ್ಲಾಜೆ-ಕೊಳೆಕ್ಕಾನ -20ಲಕ್ಷಕೊಲ್ಲಮೊಗ್ರ ಗ್ರಾಮದ ಕಡಂಬಳ- 5ಲಕ್ಷ...

ಸಾಹಿತಿ ಭೀಮರಾವ್ ವಾಷ್ಠರ್ ಅವರ 49ನೇ ಜನ್ಮದಿನ ಆಚರಣೆ ಸಂಭ್ರಮ ಪ್ರಯುಕ್ತರಾಜ್ಯಮಟ್ಟದ ಚುಟುಕು ಕವಿಗೋಷ್ಠಿ – 2 ಸಾಹಿತ್ಯ ಕೃತಿಗಳ ಬಿಡುಗಡೆ – ಪ್ರಶಸ್ತಿ ಪ್ರದಾನ – ಸಾಂಸ್ಕೃತಿಕ ಸಮಾರಂಭ – 2025

ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕವಿ, ಸಾಹಿತಿ, ಗಾಯಕ, ಜ್ಯೋತಿಷಿಯಾದ ಎಚ್ ಭೀಮರಾವ್ ವಾಷ್ಠರ್ ರವರ 49 ನೇ ಹುಟ್ಟುಹಬ್ಬದ ಆಚರಣೆ ಸಂಭ್ರಮ ಪ್ರಯುಕ್ತ, ರಾಜ್ಯಮಟ್ಟಟದ ಚುಟುಕು ಕವಿಗೋಷ್ಠಿ - ಎರಡು ಸಾಹಿತ್ಯ ಕೃತಿಗಳ ಬಿಡುಗಡೆ - ಪ್ರಶಸ್ತಿ ಪ್ರದಾನ -...
Ad Widget

ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ 2025 – ನಮ್ಮ ಸಂಸ್ಕೃತಿ ನಮ್ಮ ಉತ್ಸವ ಕಾರ್ಯಕ್ರಮ

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಜಾನಪದ ಉತ್ಸವ 2025, ನಮ್ಮ ಸಂಸ್ಕೃತಿ ನಮ್ಮ ಉತ್ಸವ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಮಾ -27 ರಂದು ನಡೆಯಿತು. ನೆಹರು ಮೆಮೊರಿಯಲ್ ಕಾಲೇಜು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಡಾ ಪೂವಪ್ಪ ಕಣಿಯೂರು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ದಿನನಿತ್ಯದ ಜೀವನ ಕ್ರಮಕ್ಕೂ ಜಾನಪದ ಕ್ಕೂ ಅವಿನಾಭಾವ...

ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರಕ್ತದಾನ ಶಿಬಿರ

ಸುಳ್ಯಸರಕಾರಿ ಪ್ರಥಮ ದರ್ಜೆ ಕಾಲೇಜು, ಐ.ಕ್ಯೂ.ಎ.ಸಿ ವಿಭಾಗ, ನೇಷನಲ್ ಇಂಟಿಗ್ರೇಟೆಡ್ ಫಾರಮ್ ಆಫ್ ಆರ್ಟಿಸ್ಟ್ಸ್ ಆಂಡ್ ಆಕ್ಟಿವಿಸ್ಟ್ಸ್ ಕರ್ನಾಟಕ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಲಯನ್ಸ್ ಕ್ಲಬ್ ಹಿರಿಯಡ್ಕ ಇದರ ಜಂಟಿ ಆಶ್ರಯದಲ್ಲಿ ಸಂವೇದನಾ-2 ಶೀರ್ಷಿಕೆಯಡಿ ರಕ್ತದಾನ ಶಿಬಿರವು ಕಾಲೇಜಿನ ಸಭಾಂಗಣದಲ್ಲಿ ಮಾ.22 ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ. ಆರ್...

ಕೊಲ್ಲಮೊಗ್ರು : ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮವು ಮಾ.27 ರಂದು ನಡೆಯಿತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಗುದ್ದಲಿಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು.ಕೊಲ್ಲಮೊಗ್ರು ಪೇಟೆಯ ಆಲದ ಮರದ ಬಳಿಯ ಹೊಳೆಗೆ 1 ಕೋಟಿ ರೂಪಾಯಿ ವೆಚ್ಚದ ಸೇತುವೆ, ಗಡಿಕಲ್ಲು ರಸ್ತೆ ಬದಿ 25 ಲಕ್ಷ...

ಅರಂತೋಡು : ಹಣ ಕಳೆದುಹೋಗಿದೆ – ಸಿಕ್ಕಿದವರು ಹಿಂತಿರುಗಿಸಲು ಮನವಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಂತೋಡು ಒಕ್ಕೂಟ ಸೇವಾ ಪ್ರತಿನಿಧಿಯಾಗಿರುವ ಸುಪ್ರೀತ ಅವರ ಪತಿ ಸುಧಾಕರ್ ಅವರ 20500 ರೂಪಾಯಿ ನಗದು ಅರಂತೋಡು ಪೇಟೆಯಿಂದ ಪೆಲ್ತಡ್ಕದ ಪಯಸ್ವಿನಿ ಜ್ಯೂಸ್ ಸೆಂಟರ್ ನ ಮಧ್ಯೆ ಮಾ.27 ರಂದು ಸಂಜೆ 4 30 ರ ವೇಳೆಗೆ ಬಿದ್ದು ಹೋಗಿರುತ್ತದೆ. ಎಲ್ಲವೂ 500 ರೂಪಾಯಿ ನೋಟುಗಳಾಗಿದ್ದು ಪ್ಲಾಸ್ಟಿಕ್ ಕವರ್...

ರಸ್ತೆ ಮಿತಿಗಿಂತ ಹೆಚ್ಚಿನ ಭಾರ ಸಾಗಾಟ – ಹೂತು ಹೋದ ಲಾರಿ – ಸಾರ್ವಜನಿಕರ ಮನವಿ ನಿರ್ಲಕ್ಷಿಸಿದ ಇಲಾಖೆ

ಎಲಿಮಲೆ ಅರಂತೋಡು ರಸ್ತೆಯಲ್ಲಿ ಪಿಂಡಿಮನೆಯಲ್ಲಿ ಅಧಿಕ ಬಾರ ಹೊತ್ತು ಸಾಗುತ್ತಿದ್ದ ಲಾರಿ ಪಿಂಡಿಮನೆ ಎಂಬಲ್ಲಿ ಹೂತು ಹೋದ ಘಟನೆ ಮಾ.27 ರಂದು ನಡೆದಿದೆ. ಇದರಲ್ಲಿ 3 ಯೂನಿಟ್ ಗಿಂತ ಜಾಸ್ತಿ ಜಲ್ಲಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.‌ ಈ ರಸ್ತೆಯಲ್ಲಿ ಮಿತಿಗಿಂತ ಹೆಚ್ಚಿನ ಭಾರದ ವಾಹನಗಳು ಸಾಗುತ್ತಿದ್ದು ರಸ್ತೆಗೆ ಹಾನಿಯಾಗುತ್ತಿರುವುದರಿಂದ ಮಿತಿಗಿಂತ ಹೆಚ್ಚಿನ ಭಾರ ಹೊತ್ತು ಸಾಗುವ ವಾಹನಗಳಿಗೆ...

ಎನ್. ಎಂ. ಎಂ. ಎಸ್. ಪರೀಕ್ಷೆಯಲ್ಲಿ ದೀಪಕ್ ಎಸ್. ತಾಲೂಕಿಗೆ ಪ್ರಥಮ

2024-25 ನೇ ಸಾಲಿನ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ ದೀಪಕ್ ಎಸ್.180 ರಲ್ಲಿ 107 ಅಂಕ ಪಡೆದು ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಪದವಿಪೂರ್ವ ಕಾಲೇಜು ಗುತ್ತಿಗಾರು( ಪ್ರೌಢಶಾಲಾ ವಿಭಾಗ) ಇಲ್ಲಿಯ 8 ನೇ ತರಗತಿಯ ಆಂಗ್ಲ ಮಾಧ್ಯಮದ ವಿದ್ಯಾರ್ಥಿಯಾಗಿದ್ದು, ದೇವಚಳ್ಳ ಗ್ರಾಮದ ಮಾವಿನಕಟ್ಟೆ ನಿವಾಸಿ ರಾಜೇಂದ್ರ ಎಂ. ಮತ್ತು ಆಶಾ ಎಸ್. ಇವರ ಸುಪುತ್ರ.

ಸುಳ್ಯ : ಸ. ಮಾ. ಹಿ. ಪ್ರಾ. ಶಾಲೆ ಸುಳ್ಯ- ರೈಟು ಟು ಲೀವ್ ಕೋಟೆ ಫೌಂಡೇಶನ್ ಬೆಂಗಳೂರು ಇವರಿಂದ ಸ್ಮಾರ್ಟ್ ಟಿವಿ ಮತ್ತು ಮಕ್ಕಳಿಗೆ ಬ್ಯಾಗ್ ಕೊಡುಗೆ

ದಿನಾಂಕ 27/03/2025ರಂದು ಕೋಟೆ ಫೌಂಡೇಶನ್ ವತಿಯಿಂದ ಮಾದರಿ ಶಾಲೆ, ಸುಳ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ ಹಾಗೂ ಎರಡು ಸ್ಮಾರ್ಟ್ ಟಿವಿ ಯನ್ನು ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಕೋಟೆ ಫೌಂಡೇಶನ್ ನಿರ್ದೇಶಕರಾದ ಶ್ರೀ ರಮೇಶ್, ಹಾಗೂ ಸದಸ್ಯರಾದ ಜಯಂತ ವೆಂಕಟರಾಜ್, ಸುಳ್ಯದ ಸಂಯೋಜಕರಾದ ಶ್ರೀಯುತ ಪ್ರದೀಪ್ ಉಬರಡ್ಕ, ನಗರ ಪಂಚಾಯತ್...

ಮಹಿಳೆಗೆ ಹಲ್ಲೆ –  ಆರೋಪಿ ಬಂಧನಕ್ಕೆ ವಿ.ಹಿ.ಪಂ. ಒತ್ತಾಯ, ಪ್ರತಿಭಟನೆಯ ಎಚ್ಚರಿಕೆ

ಸುಳ್ಯದ ನಾವೂರು ಎಂಬಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಚಂದ್ರಿಕಾ ಎಂಬ ಮಹಿಳೆಗೆ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಎಂಬವರು ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸುತೇವೆ. FIR ದಾಖಲಿಸಿ 24 ಗಂಟೆ ಕಳೆದರೂ ಇನ್ನೂ ಬಂಧಿಸದ ಪೊಲೀಸ್ ಇಲಾಖೆ ಆದಷ್ಟು ಬೇಗ ಆರೋಪಿಯನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ...
Loading posts...

All posts loaded

No more posts

error: Content is protected !!