Ad Widget

ಕಸಾಪ ಕನ್ನಡ ರಾಜ್ಯೋತ್ಸವ- ಸಾಹಿತ್ಯ ಸಂಭ್ರಮ

ಪ್ರಾಥಮಿಕ ಮತ್ತು ಪ್ರೌಢಶಾಲಾ ಕನ್ನಡ ಶಿಕ್ಷಕರಿಗೆ ಕಾರ್ಯಾಗಾರ. ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಇದರ ವತಿಯಿಂದ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುಳ್ಯ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ- ಸಾಹಿತ್ಯ ಸಂಭ್ರಮದ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ ಸುಳ್ಯದ ಕನ್ನಡ ಭವನದಲ್ಲಿಇಂದು ನಡೆಯಿತು.ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ...

ಅಯ್ಯನಕಟ್ಟೆ ರಸ್ತೆಯಲ್ಲಿ ಬೃಹದಾಕಾರದ ಹೊಂಡ ನಿರ್ಮಾಣ , ಆಹ್ವಾನಿಸುತ್ತಿದೆ ಅಪಾಯ ?

ಬೆಳ್ಳಾರೆ :ಅಯ್ಯನಕಟ್ಟೆಯಿಂದ ಚೊಕ್ಕಾಡಿ ಯನ್ನು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಇರುವ ಮೋರಿಯ ಮೇಲ್ಭಾಗದಲ್ಲಿ ಮಣ್ಣು ಕುಸಿದು ಡಾಮರು ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದೆ. ವಾಹನ ಸವಾರರ ಅರಿವಿಗೆ ಬಾರದೆ ವಾಹನಗಳ ಚಕ್ರವು ರಸ್ತೆಯಲ್ಲಿನ ಹೊಂಡದ ಒಳಗೆ ಸಿಲುಕಿ ಅಪಾಯ ಸಂಭವಿಸುವ ಸಾಧ್ಯತೆ ಇದ್ದು ಆಡಳಿತ ಯಂತ್ರವು ತಕ್ಷಣವೇ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಸರಿಪಡಿಸಿ ಮುಂದಾಗುವ ಅಪಾಯವನ್ನ ತಡೆಗಟ್ಟಬೇಕಾಗಿದ್ದು...
Ad Widget

ಕೇಂದ್ರ ಸರ್ಕಾರದಿಂದ ಚಾರ್ಮಾಡಿ ಘಾಟ್‌ ಹೆದ್ದಾರಿ ದ್ವಿಪಥಗೊಳಿಸಲು 343.74 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಚೌಟ

ಮಂಗಳೂರು: ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಮಂಗಳೂರಿನಿಂದ ಮೂಡಿಗೆರೆಯಾಗಿ ತುಮಕೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯಲ್ಲಿ 75...

ವಿನೋಬನಗರ: ಸ್ಕೂಟಿಗೆ ಕಾರು ಢಿಕ್ಕಿ – ಸ್ಕೂಟಿ ಸವಾರನಿಗೆ ಗಾಯ

ಕಾರು ನಿಲ್ಲಿಸಿದೇ ಚಾಲಕ ಪರಾರಿ ಸ್ಕೂಟಿಗೆ ಕಾರು ಢಿಕ್ಕಿ ಹೊಡೆದು, ಸ್ಕೂಟಿ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಾಲ್ಕೂರು ಗ್ರಾಮದ ವಿನೋಬನಗರದಲ್ಲಿ ನ.9ರಂದು ಬೆಳಿಗ್ಗೆ ಸಂಭವಿಸಿದ್ದು, ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ತಮಿಳುನಾಡು ರಿಜಿಸ್ಟ್ರೇಶನಿನ ಬೀಝಾ ಕಾರೊಂದು ವಿನೋಬನಗರ ಶಾಲೆಯ ಬಳಿ ಮುಖ್ಯರಸ್ತೆಯಲ್ಲಿ ಅಡ್ಕಾರಿನ ಜಿ.ಎಂ. ಹಸನ್ ಅವರು...

ದುಬೈ ಯಲ್ಲಿ ಅರಂತೋಡು ಕುಟುಂಬ ಸಮ್ಮಿಲನ ಮತ್ತು ಸನ್ಮಾನ ಕಾರ್ಯಕ್ರಮ

ದುಬೈಯಲ್ಲಿ ಅನಿವಾಸಿ ಭಾರತೀಯ ಅರಂತೋಡು ಕುಟುಂಬ ಸಮ್ಮಿಲನ ಮತ್ತು ಸನ್ಮಾನ ಸಮಾರಂಭದ ಕಾರ್ಯಕ್ರಮ, ನ. 07ರಂದು ಅಲ್ ತವಾರ್ ಪಾರ್ಕ್ ದುಬೈ ಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಮ್ಮಿಲನದ ಮುಖ್ಯ ಆಕರ್ಷಣೆಯಾಗಿ ಅಲ್ಪ ದಿವಸದ ಮಾಯಾ ನಗರಿ ದುಬೈ ಯ ವೀಕ್ಷಣೆಗೆ ಬಂದಿದ್ದ ಅರಂತೋಡು ಪಾರೆಕ್ಕಲ್ ಕಮಾಲ್,ಮತ್ತು ಯುವ ಉದ್ಯಮಿ, ಸಮಾಜ ಸೇವಕ ಡಾ. ಇಸ್ಮಾಯಿಲ್ ಸರ್ಫ್ರಾಜ್...

ಕು.ಪೂಜಾ ಬೋರ್ಕಾರ್ ಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ -ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ಪ್ರಶಸ್ತಿ ಪ್ರದಾನ

ಕರ್ನಾಟಕ ನೇತಾಜಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನೀಡುವ 68ನೆಯ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 06 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಸುಳ್ಯ ತಾಲೂಕಿನಲ್ಲಿ ಪೆನ್ಸಿಲ್ ಆರ್ಟ್ ಮೂಲಕ ಅಲ್ಲದೆ ವಾಲ್ ಆರ್ಟ್,...

ಎಸ್.ಎಸ್.ಎಲ್.ಸಿ ಪರೀಕ್ಷೆಯ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಜನಾರ್ಧನ ಮಾಸ್ಟರ್ ಗಣಿತ ಕೇಂದ್ರ, ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ವತಿಯಿಂದ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ಎಣ್ಮೂರಿನ ದೀಪಕ್, ಸುಬ್ರಹ್ಮಣ್ಯದ ಹಾಗು ಗುತ್ತಿಗಾರಿನ ತಾಲೂಕು ವಿದ್ಯಾರ್ಥಿಗಳಿಗೆ, ಕಳೆದ ವರ್ಷ ಎನ್. ಎಮ್.ಎಮ್.ಎಸ್. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಅಶ್ವಿತಾ, ಪೌರ್ಣಮಿ, ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು....

ಸರಕಾರಿ ನೌಕರರ ಸಂಘ ಸುಳ್ಯ ತಾಲೂಕು ಅಧ್ಯಕ್ಷರಾಗಿ ಡಾ.ನಿತಿನ್ ಪ್ರಭು ಅವಿರೋಧ ಆಯ್ಕೆ

ಕೋಶಾಧಿಕಾರಿಯಾಗಿ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ ಆಯ್ಕೆ ರಾಜ್ಯ ಪರಿಷತ್‌ ಸದಸ್ಯ ಸ್ಥಾನಕ್ಕೆ ಮಂಜು – ಶಿವಪ್ರಸಾದ್‌ ನಡುವೆ ಸ್ಪರ್ಧೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸುಳ್ಯ ತಾಲೂಕು ಇದರ ನೂತನ ಅಧ್ಯಕ್ಷರಾಗಿ ಸುಳ್ಯ ಪಶುಸಂಗೋಪನೆ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ.ನಿತೀನ್ ಪ್ರಭು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಘದ ಕೋಶಾಧಿಕಾರಿಯಾಗಿ ಗುತ್ತಿಗಾರು ಶಾಲಾ ಸಹ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ...

ನ.10-ಮಡಿಕೇರಿಯ ಚೆಯ್ಯಂಡಾಣೆ ಗ್ರಾಮದಲ್ಲಿ ‘ಅರೆಭಾಷೆ ಗಡಿನಾಡ ಉತ್ಸವ’

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯ ಚೆಯ್ಯಂಡಾಣೆ ಗ್ರಾಮದ ನರಿಯಂದಡ ಅಯ್ಯಪ್ಪ ಯುವಕ ಸಂಘ ಇವರ ಸಹಕಾರದಲ್ಲಿ 'ಅರೆಭಾಷೆ ಗಡಿನಾಡ ಉತ್ಸವ'ವು ನ.10 ರಂದು ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ.ನಗರದ...

ದಕ್ಷಿಣ ಕನ್ನಡದಲ್ಲಿ ಎಲೆ ಚುಕ್ಕೆ ರೋಗ ಬಾಧಿತ ಅಡಿಕೆ ಕೃಷಿಕರ ನೆರವಿಗೆ ಧಾವಿಸಿ; ಕಾಫಿ ಬೆಳೆಗೂ ಮಂಡಳಿಯಿಂದ ಉತ್ತೇಜನ ಸಿಗಲಿ – ತುರ್ತು ಸ್ಪಂದನೆ ಕೋರಿ ಸಂಸದ ಬ್ರಿಜೇಶ್ ಚೌಟ ಪತ್ರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗ ಬಾಧೆಯಿಂದ ತೀವ್ರವಾಗಿ ತತ್ತರಿಸಿ ಹೋಗಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಅಡಿಕೆ...
Loading posts...

All posts loaded

No more posts

error: Content is protected !!