- Friday
- July 31st, 2026
ಚಲನಚಿತ್ರ ಹಾಸ್ಯ ಕಲಾವಿದ, ರಾಜ್ಯ ಸಭಾ ಸದಸ್ಯ ಟೆನ್ನಿಸ್ ಕೃಷ್ಣ ರವರು ಗಾಂಧಿನಗರದ ಅಶ್ರಫ್ ಅವರ ಮೀನಿನ ಅಂಗಡಿಯಲ್ಲಿ ಒಣ ಮೀನು ಖರೀದಿಸಿದರು. ಈ ಸಂದರ್ಭದಲ್ಲಿ ಟೆನ್ನಿಸ್ ಕೃಷ್ಣ ರವರ ಆಪ್ತರಾದ ಸುಪ್ರೀತ್ ಮೋoಟಡ್ಕ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಮೇ 03 : ನಿರಂತರವಾಗಿ ರಜೆಯ ಕಾರಣದಿಂದ ಹಾಗೂ ಬೇಸಿಗೆಯ ರಜೆ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು(ಏ.03) ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಭಕ್ತರ ಸುಗಮಾ ದರ್ಶನಕ್ಕಾಗಿ ಶ್ರೀ...
ನಾಲ್ಕೂರು ಗ್ರಾಮದ ಮರಕತ ನಿವಾಸಿ ನಿವೃತ್ತ ಯೋಧ ಚಿನ್ನಪ್ಪ ಪಡ್ರೆ ಮೇ.03 ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. 24 ವರ್ಷಗಳ ಸೈನಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರಿಗೆ 62 ವರ್ಷ ವಯಸ್ಸಾಗಿತ್ತು. ಮರಕತ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯರಾಗಿದ್ದರು. ಮೃತರು ಪತ್ನಿ ಮನೋರಮ, ಪುತ್ರಿಯರಾದ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ನಮಿತಾ, ಇಂಜಿನಿಯರ್...
ಜೇ.ಸಿ.ಐ ಸುಳ್ಯ ಪಯಸ್ವಿನಿ ವತಿಯಿಂದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಮೇ.2ರಂದು ಸಂಚಯ ನಿವಾಸ ಚೂಂತಾರು ಇಲ್ಲಿ ಆಚರಿಸಲಾಯಿತು. ಜೇ.ಸಿ.ಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಜೇ.ಸಿ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಕಾರ್ಮಿಕ ದಿನದ ಪ್ರಯುಕ್ತ ಶ್ರಮಿಕ ವರ್ಗದ ಜನರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಎಲೆಕ್ಟ್ರೀಷಿಯನ್ ಹರಿಶ್ಚಂದ್ರ ತಂಟೆಪ್ಪಾಡಿ ಅವರನ್ನು ಸನ್ಮಾನಿಸಿ...
ಗುತ್ತಿಗಾರು ಗ್ರಾಮದ ಮೊಗ್ರ ಮೂವದಲ್ಲಿ ಬಡತನದಲ್ಲಿರುವ ಮಹಿಳೆ ಶ್ರೀಮತಿ ಜಯಂತಿಯವರ ಮನೆಯ ಮಾಡು ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿ ನೆರವಿಗೆ ಧಾವಿಸಿದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಊರವರು ದುರಸ್ತಿಗೊಳಿಸಿದರು.ಗುತ್ತಿಗಾರು ಪಿ.ಎ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ ರವರ ಮಾರ್ಗದರ್ಶನದಲ್ಲಿ ಹಳೆ ಶೀಟಿನ ಮಾಡನ್ನು ತೆಗೆದು 2 ಸಾಲು ಸಿಮೆಂಟ್...
ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್(ರಿ.) ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಹಾಗೂ ಅರಿವು ಕೇಂದ್ರ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಮೇ.04 ರಿಂದ ಮೇ.10 ರವರೆಗೆ ಗುತ್ತಿಗಾರಿನ ಗ್ರಾಮ ಪಂಚಾಯತ್ ಪ.ವರ್ಗದ ಸಭಾಭವನದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ 4 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ “ಚೆಸ್ ತರಬೇತಿ ಕಾರ್ಯಾಗಾರ” ನಡೆಯಲಿದ್ದು, ಹೆಚ್ಚಿನ...
ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಶ್ರೀ ಶಿರಾಡಿ ದೈವದ ನೇಮೋತ್ಸವವು ಮೇ.01 ಹಾಗೂ 02 ರಂದು ಶ್ರೀ ಶಿರಾಡಿ ಹಾಗೂ ಸಹಪರಿವಾರ ದೈವಗಳ ದೈವಸ್ಥಾನದಲ್ಲಿ ನಡೆಯಿತು.ಮೇ.01 ರಂದು ಭಂಡಾರ ಬಂದು ಮೇ.02 ರಂದು ಬೆಳಗ್ಗಿನಿಂದ ಸಂಜೆಯವರೆಗೆ ಶ್ರೀ ಶಿರಾಡಿ ಹಾಗೂ ಉಪ ದೈವಗಳ ನೇಮೋತ್ಸವ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ನಂತರ ಸಂಜೆ ಶ್ರೀ ಗುಳಿಗ ದೈವದ...
ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ "ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)" ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ ಅಮರ ಸುಳ್ಯ ಸುದ್ದಿ ವಾರಪತ್ರಿಕೆಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದು, ಈ ವಾರ ಏ.27 ಸೋಮವಾರದಿಂದ ಮೇ.02 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ...
ಕುಕ್ಕೆ ಸುಬ್ರಹ್ಮಣ್ಯ ಸಮೀಪ ಬಾಡಿಗೆ ಮನೆಯಲ್ಲಿ ವಾಸವಿರುವ ಶ್ರೀಮತಿ ಹರ್ಷಿತಾರವರ ಮಗಳು ಏನೆಕಲ್ಲು ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕು.ತಶ್ಮಿತ ಇವಳು Soliocice ಕಾಯಿಲೆಗೆ ತುತ್ತಾಗಿದ್ದು, ಇವಳ ಒಂದು ಬದಿ ಬೆನ್ನು ಬಾಗಿ ಇನ್ನೊಂದು ಬದಿ ಉಬ್ಬಿರುತ್ತದೆ. ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ವೈದ್ಯರು ಸರ್ಜರಿ ಮಾಡಬೇಕು, 5ಲಕ್ಷದಿಂದ 6ಲಕ್ಷ ಖರ್ಚಾಗಬಹುದು ಎಂದು ಹೇಳಿರುತ್ತಾರೆ. ಅಲ್ಲದೆ...
ಸೋಣಂಗೇರಿ ಶ್ರೀ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕಾಗಿ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಹಾಗೂ ಎ.ಒ.ಎಲ್.ಇ "ಬಿ" ಕಮಿಟಿಯ ಚೆರ್ಮೇನ್ ಡಾ. ರೇಣುಕಾ ಪ್ರಸಾದ್ ಕುರುಂಜಿ ಅವರು ನೀಡಿದ ಧನಸಹಾಯದ ಚೆಕ್ ನ್ನು ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆಯವರು ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡರಿಗೆ ಮೇ.02 ರಂದು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಎ.ಒ.ಎಲ್.ಇ ಬಿ ಕಮಿಟಿಯ...
Loading posts...
All posts loaded
No more posts
