Ad Widget

ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ಕಾಂಕ್ರೀಟ್ ಕಾಮಗಾರಿ ಉದ್ಘಾಟನೆ ನೆರವೇರಿಸಿದ ಶಾಸಕಿ ಭಾಗೀರಥಿ ಮುರುಳ್ಯ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ಮಾದ್ರಡ್ಕ ಮತ್ತು ಹೆರಕಜೆ ಎಂಬಲ್ಲಿ  2022-23 ನೇ ಸಾಲಿನ ವಿಶೇಷ ಅನುದಾನದಡಿಯಲ್ಲಿ ರೂ.50 ಲಕ್ಷ ಅನುದಾನದಲ್ಲಿ 930 ಮೀ ರಸ್ತೆ ಕಾಂಕ್ರೀಟಿಕರಣಗೊಂಡಿದ್ದು,  ಇದನ್ನು ಶಾಸಕಿಯರಾದ ಕು ಭಾಗೀರಥಿ ರವರು ಏ.10 ರಂದು  ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷರಾದ ಎ. ವಿ. ತೀರ್ಥರಾಮ್, ಮಾಜಿ ಜಿ.ಪಂ. ...

50ನೇ ಸಂಭ್ರಮ ಆಚರಿಸಿಕೊಂಡ ಭಾವ ತೀರ ಯಾನ 51 ನೇ ದಿನಕ್ಕೆ- ಗಣ್ಯರಿಂದ ಶುಭ ಹಾರೈಕೆ ; ಏ.12ರಂದು ಬೆಳಿಗ್ಗೆ 11ಗಂಟೆಗೆ ಶೋ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 50 ದಿನದ ಸಂಭ್ರಮಾಚರಣೆ ಏ.11 ರಂದು ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಶುಭಹಾರೈಸಿದರು. ಈ ಸಂದರ್ಭದಲ್ಲಿ ಚಲನಚಿತ್ರ ನಟರು ಹಾಗೂ ಗಣ್ಯರು...
Ad Widget

ರೋಟರಿ ಸಮಾಜ ಸೇವೆ ನಿರಂತರ ಮುಂದುವರೆಯಲಿ – ಜಿಲ್ಲಾ ರಾಜ್ಯಪಾಲ ರೋ. ವಿಕ್ರಂ ದತ್ತ ;  ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಅಧಿಕೃತ ಭೇಟಿ

ಸುಬ್ರಹ್ಮಣ್ಯ ಏ.14: ದಕ್ಷಿಣ ಕನ್ನಡ ಕೊಡಗು ಮೈಸೂರು ಹಾಗೂ ಚಾಮರಾಜನಗರ ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ 31 81ರ ಜಿಲ್ಲಾ ರಾಜ್ಯಪಾಲ ವಿಕ್ರಮ ದತ್ತ ಅವರು ಗುರುವಾರ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ಅಧಿಕೃತ ಭೇಟಿ ನೀಡಿದರು. ಅವರು ಅಂದು ಸಂಜೆ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ "ರೋಟರಿ ಅಂತರಾಷ್ಟ್ರೀಯ ಸಂಸ್ಥೆ. ವಿಶ್ವದಾದ್ಯಂತ ಇರುವ...

50 ಸಂಭ್ರಮಾಚರಣೆಯಲ್ಲಿ ‘ಭಾವ ತೀರ ಯಾನ’

ಸಿನಿಮಾ ನಮ್ಮನ್ನು ಹೊಸ ಜಗತ್ತಿಗೆ ಕರೆದೊಯ್ಯುವ, ಮನರಂಜನೆಯನ್ನು ಕೊಡುವ ಅಥವಾ ನಾವು ಟಾಕೀಸ್‌ಲ್ಲಿ ಕುಳಿತು ವೀಕ್ಷಿಸುವ, ದೂರದರ್ಶನದಲ್ಲಿ ವೀಕ್ಷಿಸುವ ಚಿತ್ರ ಅಂತ ಅಂದುಕೊಂಡಿದ್ದೇವೆ. ಆದರೆ ಸಿನಿಮಾ ಕೂಡ ಒಂದು ರೀತಿಯಲ್ಲಿ ನಮಗೆ ಶಿಕ್ಷಣ ಮಾಧ್ಯಮವಾಗಿದೆ ಎಂದರೆ ತಪ್ಪಾಗಲಾರದು. ಸಿನಿಮಾದಲ್ಲಿ ನಾವು ಕಾಣದ ದೇಶಗಳನ್ನು, ಅಲ್ಲಿಯ ವೈಶಿಷ್ಟ್ಯಗಳನ್ನು, ಅವರ ಸಂಸ್ಕೃತಿ -ಸಂಪ್ರದಾಯ, ಆಚಾರ-ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ, ಅಂತೆಯೇ...

ಮಂಡೆಕೋಲು : ಶಾಸಕಿ ಭಾಗೀರಥಿ ಮುರುಳ್ಯರಿಂದ ಸಂಜೀವಿನಿ ಕಟ್ಟಡ ಲೋಕಾರ್ಪಣೆ

ಮಂಡೆಕೋಲು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಾಣಗೊಂಡಿರುವ ಸಂಜೀವಿನಿ ಕಟ್ಟಡವನ್ನು ಏ.10 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರವರು ಉದ್ಘಾಟಿಸಿದರು. ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು “ಸಂಜೀವಿನಿ ಸಂಘ ಅನ್ನುವಂತಹದ್ದು ಮಹಿಳೆಯರ ಧ್ಯೇಯೋದ್ದೇಶಕ್ಕಾಗಿ ಇರುವಂತಹದ್ದು, ಮುಂದಿನ ದಿನಗಳಲ್ಲಿ ಮಂಡೆಕೋಲು ಸಂಜೀವಿನಿ ಸಂಘವು ಒಳ್ಳೆಯ ಕೆಲಸಗಳನ್ನು ಮಾಡಿ ಪ್ರಧಾನಿ ಮೋದಿಯವರು ತಮ್ಮ ಮನ್-ಕಿ-ಬಾತ್...

ಕಲ್ಮಕಾರು : ವಿಷ ಸೇವಿಸಿ ಆತ್ಮಹತ್ಯೆ

ಕಲ್ಮಕಾರು ಗ್ರಾಮದ ತಿರುಮಲೇಶ್ವರ ದಬ್ಬಡ್ಕ ಎಂಬುವವರು ವಿಷ ಸೇವಿಸಿ ಮೃತಪಟ್ಟ ಘಟನೆ ಏ.10 ರಂದು ನಡೆದಿದೆ ಎಂದು ತಿಳಿದುಬಂದಿದೆ. ಕೃಷಿಗಾಗಿ ತಂದಿದ್ದ ಕ್ರಿಮಿನಾಶಕವನ್ನು ಎರಡು ದಿನಗಳ ಹಿಂದೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಿರುಮಲೇಶ್ವರ ಅವರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ನಿಧನರಾದರು. ಮೃತರಿಗೆ 52 ವರ್ಷ...

ನಾಳೆ (ಏ.11) ಕೊಲ್ಲಮೊಗ್ರು- ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣಾ ಫಲಿತಾಂಶ ಘೋಷಣೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಫಲಿತಾಂಶವು ನಾಳೆ(ಏ.11) ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.ಜ.19 ರಂದು ಸೊಸೈಟಿ ನೂತನ ಆಡಳಿತ ಮಂಡಳಿಯ ಚುನಾವಣೆ ನಡೆದಿದ್ದು, ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆಗೆ ತಡೆ ನೀಡಲಾಗಿತ್ತು.ಇದೀಗ ಹೈಕೋರ್ಟ್ ಆದೇಶದಂತೆ ಡಿ.ಆರ್ ರವರು ಫಲಿತಾಂಶ ಘೋಷಣೆ ನಿಗದಿಪಡಿಸಿ ನೋಟೀಸ್ ಕಳಿಸಿರುವುದಾಗಿ ತಿಳಿದುಬಂದಿದೆ.

ಸುಳ್ಯ : ಏ.12 ರಂದು ಕೇಂದ್ರ ಸರಕಾರದ ವಿರುದ್ಧ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಸಿದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಬೆಲೆ ಏರಿಕೆ ವಿರುದ್ಧ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಏ.12 ರಂದು ಸಂಜೆ 4:00 ಗಂಟೆಗೆ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷರಾದ...

ಸುಳ್ಯ ಪ್ರೆಸ್ ಕ್ಲಬ್ ಮಹಾಸಭೆ – ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ, ಪ್ರ.ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿ ಈಶ್ವರ ವಾರಣಾಸಿ ಆಯ್ಕೆ

ಸುಳ್ಯ ಪ್ರೆಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಶರೀಫ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿಯಾಗಿ ಈಶ್ವರ ವಾರಣಾಶಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎ.10ರಂದು ಸುಳ್ಯ ಪ್ರೆಸ್ ವಾರ್ಷಿಕ‌ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಉಪಾಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ಹಸೈನಾರ್...

ಭಾವ ತೀರ ಯಾನಕ್ಕೆ 50ರ ಸಂಭ್ರಮ – ಯುವ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿನಿ ಜಗತ್ತು – ಏ.11ರಂದು ಕನ್ನಡ ಹಾಗೂ ತುಳು ನಟರ ಉಪಸ್ಥಿತಿಯಲ್ಲಿ ಬೆಳಿಗ್ಗೆ 11ಕ್ಕೆ ಚಿತ್ರ ಪ್ರದರ್ಶನ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ಯಶಸ್ವಿ ಪ್ರದರ್ಶನದೊಂದಿಗೆ 50 ನೇ ದಿನಕ್ಕೆ ಕಾಲಿರಿಸಿದೆ. ಈ ಹಿನ್ನೆಲೆಯಲ್ಲಿ ಏ.10 ರಂದು ಸಂಭ್ರಮಾಚರಣೆ ನಡೆಯಲಿದೆ. ಕನ್ನಡ, ತುಳು ಚಿತ್ರನಟರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಏ.11ರಂದು ಶುಕ್ರವಾರ ಬೆಳಿಗ್ಗೆ...
Loading posts...

All posts loaded

No more posts

error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ