Ad Widget

ಗಡಿಕಲ್ಲು ಬಳಿ ರಸ್ತೆ ಬದಿ ಕುಸಿತ – ಅಪಾಯದಲ್ಲಿ ಕಲ್ಮಕಾರು ಕೊಲ್ಲಮೊಗ್ರ ರಸ್ತೆ

ಕಲ್ಮಕಾರು ಕೊಲ್ಲಮೊಗ್ರ ರಸ್ತೆಯ ಗಡಿಕಲ್ಲು ಬಳಿ ರಸ್ತೆ ಬದಿ ಕುಸಿದಿದ್ದು ಅಪಾಯ ಆಹ್ವಾನಿಸುತ್ತಿದೆ. ಎರಡು ವರ್ಷಗಳಿಂದ ರಸ್ತೆ ಬದಿ ಕುಸಿಯಲು ಆರಂಭವಾಗಿದ್ದು, ಇಲಾಖೆ ಮೌನ ವಹಿಸಿದೆ. ಮಳೆ ಇನ್ನೂ ಕಡಿಮೆಯಾಗದಿದ್ದರೇ ಸಂಪರ್ಕ ಕಡಿತಗೊಳ್ಳುವ ಆತಂಕವಿದ್ದು ಸ್ಕೂಲ್ ಬಸ್ ಸೇರಿದಂತೆ ಘನ ವಾಹನ ಚಾಲಕರು ಎಚ್ಚರಿಕೆ ವಹಿಸುವುದು ಒಳಿತು.

ಕನ್ನಡ ಶಾಲೆಗಳ ಕಡೆಗೆ ಮಕ್ಕಳು ಬರಬೇಕಾದರೇ ಶಿಕ್ಷಕರ ಕೊರತೆ ಸರಿಯಾಗಬೇಕಿದೆ – ಪುರುಷೋತ್ತಮ ಬಿಳಿಮಲೆ

ಸುಳ್ಯ ತಾಲೂಕಿನ 12 ಶಾಲೆಗಳಲ್ಲಿ ಶೂನ್ಯ ಶಿಕ್ಷಕರು ಇದ್ದಾರೆ ಅದನ್ನು ಸರಕಾರದ ಗಮನಕ್ಕೆ ತರುವ ಕೆಲಸಗಳನ್ನು ಮಾಡುತ್ತೇನೆ. ಅಲ್ಲದೇ ಅತಿಥಿ ಶಿಕ್ಷಕರ ವೇತನದಲ್ಲಿ ಇದೀಗ ಸರಿಯಾಗಿ ವೇತನ ನಿರ್ದಿಷ್ಟ ದಿನದಂದು ಪಾವತಿಯಾಗದೇ ಇದೆ ಇದನ್ನು ಅಧಿಕಾರಿಗಳಲ್ಲಿ ಮಾತಾನಾಡಿ ಸರಿ ಪಡಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು. ಸರಕಾರಿ ಶಾಲೆಗಳಿಗೆ ಅನುದಾನ...
Ad Widget

ಕನ್ನಡ ಭಾಷೆ ಕಲಿಸುವುದರಲ್ಲಿ ನಾವು ಶೇ 50 ರಷ್ಟು ಹಿಂದಿದ್ದೇವೆ – ಬಿಳಿಮಲೆ

ಸುಳ್ಯಕ್ಕೆ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆಯವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಜತೆ ಪತ್ರಕರ್ತರ ಜತೆ ಸಂವಾದ ನಡೆಸಿದರು. ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಕುರಿತಾಗಿ ಮಾತನಾಡಿದರು. ಕನ್ನಡವನ್ನು ಕಲಿಸುವ ಮಾದರಿಯಲ್ಲಿ ನಾವು ಶೇ.50ರಷ್ಟು ಹಿಂದಿದ್ದೇವೆ ಎಂದು ಹೇಳಿದರು.‌ ಅಲ್ಲದೇ ರಾಜ್ಯ ಸರಕಾರಗಳು ಅಂದಿನಿಂದ ಇಂದಿನವರೆಗೆ ಕನ್ನಡದ ಅಭಿವೃದ್ಧಿಗೆ ಬೇಕಾಗಿ ಅನೇಕ...

ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾ‌ರ್ ಜಿ.ಮಂಜುನಾಥ್ ಅವರಿಗೆ ಬೀಳ್ಕೊಡುಗೆ.

ಸುಳ್ಯ: ಕಳೆದ ಹದಿನೈದಕ್ಕು ಹೆಚ್ಚು ತಿಂಗಳುಗಳಿಂದ ಸುಳ್ಯ ನಗರ ಪಂಚಾಯತ್‌ನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ತಹಶೀಲ್ದಾ‌ರ್ ಜಿ.ಮಂಜುನಾಥ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ನಗರ ಪಂಚಾಯತ್‌ಗೆ ನೂತನ ಅಧ್ಯಕ್ಷ, ಹಾಗೂ ಉಪಾಧ್ಯಕ್ಷ ಆಯ್ಕೆ ನಡೆದ ಹಿನ್ನಲೆಯಲ್ಲಿ ಆಡಳಿತಾಧಿಕಾರಿ ಅವರ ಅಧಿಕಾರ ಕೊನೆಗೊಂಡಿದೆ. ಈ ಹಿನ್ನಲೆಯಲ್ಲಿ ನಗರ ಪಂಚಾಯತ್‌ನಲ್ಲಿ ಸೆ.2ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ನ.ಪಂ. ಅಧ್ಯಕ್ಷೆ ಎ.ಶಶಿಕಲಾ...

ಮರೆಯದಿರು ನೀ..

ಮಳೆಹನಿಗಳು ನಾ ಮೇಲು-ತಾ ಮೇಲು ಎನ್ನುತ್ತಾ ಪುಟಿದುಒಂದಾಗಿ ಹರಿಯುವುದು ನೀ ಕಂಡಿಯಾ?ಇನ್ನೇಕೆ ನಮ್ಮೊಳಗಿನ ಜಗಳನಾವೆಲ್ಲರೂ ಒಂದೇ ಎಂದು ನೀ ಮರೆತೆಯಾ? ಮಳೆಗೆ ಬಾಗಿದ ಗಿಡಗಳು ಖುಷಿಯಾಗಿ ನಿಲ್ಲುವುದುತಾ ಬಾಗಿದರೂ, ಬಾಯಾರಿದ ಬೇರು ತನಿಯಿತೆಂದು..ಬಂದ ಕಷ್ಟವ ಎದುರಿಸಿ ನೀ ಧೈರ್ಯದಿ ನಿಲ್ಲು..ಅನುಭವಗಳಿಂದ ಗಟ್ಟಿಯಾದೆನೆಂದು.. ಗಾಳಿಯಾಡಲು ಖುಷಿಯಾದ ಮರಗಳುಭೂಮಿಯ ಮುಟ್ಟುವ ಯತ್ನದಲ್ಲಿ..ತಾನು ನಿಲ್ಲಲು ಭೂಮಿಯೇ ಕಾರಣವೆಂಬಹೆಮ್ಮೆ ಅವುಗಳಲ್ಲಿ.. ಖುಷಿಯಾಡೊಡನೆ...

ಕ್ರೈಸ್ತ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ – ಶೇ 12 ಡಿವಿಡೆಂಡ್ ನೀಡಲು ತೀರ್ಮಾನ

ಸೆ.01 ಆದಿತ್ಯವಾರದಂದು ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ 15ನೇ ವಾರ್ಷಿಕ ಮಹಾಸಭೆಯು ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಬಿಟ್ಟಿ ಬಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. 2023-24ನೇ ಸಾಲಿನಲ್ಲಿ ಸಂಘವು ಉತ್ತಮ ವ್ಯವಹಾರ ನಡೆಸಿರುತ್ತದೆ. ಮತ್ತು ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದೆಂದು ತೀರ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕೆ.ಪಾ...

ಸುಳ್ಯ : ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಭಾರತೀಯ ಜನತಾ ಪಾರ್ಟಿಯ ಮುಂದಿನ ಆರು ವರ್ಷಗಳ ಅವಧಿಯ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ ಚಾಲನೆ ನೀಡಿದ್ದು ಈ ಸಂದರ್ಭದಲ್ಲಿ ಸುಳ್ಯದಲ್ಲೂ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಯಿತು. ಸುಳ್ಯದ ಬಿಜೆಪಿಯ ಹಿರಿಯರಾದಂತಹ ಸೀತ ಅಶೋಕ್ ಪ್ರಭುಗಳ ಮನೆಯಲ್ಲಿ ಅಶೋಕ್ ಪ್ರಭುಗಳು 8800002024 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ಬಿಜೆಪಿಯ ಸದಸ್ಯತ್ವವನ್ನು ಪಡೆದುಕೊಂಡರು....

ಕಾಂತಮಂಗಲ :  ಸೇತುವೆಯಿಂದ ಯುವಕನೋರ್ವ ಹೊಳೆಗೆ ಹಾರಿರುವ ಶಂಕೆ – ಜಮಾಯಿಸಿದ ಜನ

ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ಹೊಳೆಗೆ ಯುವಕನೊಬ್ಬ ಬಿದ್ದಿದ್ದಾನೆಂದು ಜನರು ಸೇತುವೆಯ ಮೇಲೆ ಜಮಾಯಿಸಿರುವುದಾಗಿ ತಿಳಿದುಬಂದಿದೆ. ನೀರಿಗೆ ಬಿದ್ದವನು ಅಡ್ಪಂಗಾಯದ ಯುವಕ ಎನ್ನಲಾಗುತ್ತಿದೆ. ಹಾರಿದ್ದಾನೆಯೇ ಇಲ್ಲವೋ ಎಂಬುವುದು ಇನ್ನು ಖಚಿತವಾಗದೇ ಇದ್ದು ಸದ್ಯ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಆಗಮಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.

ಕೊಲ್ಲಮೊಗ್ರು : ಮಳೆಗಾಲದಲ್ಲಿ ಸಂಚಾರಕ್ಕೆ ಕಷ್ಟಕರವಾಗುವ ಮುಳುಗು ಸೇತುವೆಗೆ ಸಿಗಬೇಕಿದೆ ಮುಕ್ತಿ ; ಸರ್ವಋತು ಸೇತುವೆ ನಿರ್ಮಾಣಕ್ಕೆ ಆಗ್ರಹ

✍️ಉಲ್ಲಾಸ್ ಕಜ್ಜೋಡಿಮಳೆಗಾಲದ ಸಮಯದಲ್ಲಿ ನೀರಿನ ಹರಿವು ಹೆಚ್ಚಾಗಿ ನದಿಗಳು ತುಂಬಿ ಹರಿಯುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನೀರಿನ ಹರಿವು ಹೆಚ್ಚಾದಾಗ ನದಿಯ ನೀರು ರಸ್ತೆ, ಸೇತುವೆಗಳ ಮೇಲೆ ಹರಿದು ಕೆಲಹೊತ್ತು ಸಂಚಾರಕ್ಕೆ ತೊಡಕುಂಟಾಗುತ್ತದೆ. ಆದರೆ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕೊಲ್ಲಮೊಗ್ರು ಪೇಟೆ ಸಮೀಪದಲ್ಲಿರುವ ಕೊಲ್ಲಮೊಗ್ರು ಮತ್ತು ಕಲ್ಮಕಾರು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಮುಳುಗು ಸೇತುವೆಯೊಂದಿದ್ದು, ಪ್ರತೀ...

ಕಡ್ತಲ್ ಕಜೆ ಕೆಂಚಪ್ಪ ಗೌಡ ನಿಧನ

ಗುತ್ತಿಗಾರು ಗ್ರಾಮದ ಕಡ್ತಲ್ ಕಜೆ ಕೆಂಚಪ್ಪ ಗೌಡ ಸೆ.02 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರರಾದ ಗೋವರ್ದನ, ಮೆಸ್ಕಾಂ ಉದ್ಯೋಗಿ ಹರ್ಷವರ್ದನ, ಪುತ್ರಿ ಚಿತ್ರಾ ಚಂದ್ರಶೇಖರ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!