- Tuesday
- November 26th, 2024
ಪಂಜದ ಕರಿಕ್ಕಳ ಸಮೀಪ ಹಳೆ ತಂತಿ ಬದಲಾವಣೆ ವೇಳೆ ವಿದ್ಯುತ್ ಕಂಬ ಮುರಿದು ಬಿದ್ದು ಕಾರ್ಮಿಕ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಬೆಳ್ಳಾರೆ ಸಿದ್ಧಿ ಇಲೆಕ್ಟ್ರಿಕಲ್ ನ ಸಿಬ್ಬಂದಿಗಳು ಕರಿಕ್ಕಳ ಸಮೀಪ ವೈರ್ ಬದಲಾವಣೆ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಂಬ ಮುರಿದು ಬಿದ್ದು ಕಂಬದಲ್ಲಿದ್ದ ಕಿಟ್ಟು ಎಂಬವರ ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು ಮಂಗಳೂರಿನ...
ಶಿಕ್ಷಕರ ದಿನಾಚರಣೆಯ ಅಂಗವಾಗಿ ಸುಳ್ಯ ರೋಟರಿ ಕ್ಲಬ್ ಇವರು ಕೊಡಮಾಡಿದ "ನೇಷನ್ ಬಿಲ್ಡರ್ ಅವಾರ್ಡ್ "ಮತ್ತು ದ ಕ ಜಿಲ್ಲಾ ಪ.ಪೂ ಪ್ರಾಚಾರ್ಯರ ಸಂಘ(ರಿ )ಮಂಗಳೂರು,ಹಾಗೂ ವಿವಿಧ ವಿಷಯವಾರು ಉಪನ್ಯಾಸಕರ ಸಂಘ, ದೈ. ಶಿಕ್ಷಣ ಉಪನ್ಯಾಸಕರ ಸಂಘ, ಆಳ್ವಾಸ್ ಪಪೂ ಕಾಲೇಜು ಮೂಡಬಿದಿರೆ ಇವರ ವತಿಯಿಂದ "ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ"ಗೆ ಭಾಜನರಾದ ಪ್ರತಿಷ್ಠಿತ ಸುಳ್ಯ...
ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ದ.ಕ ಜಿಲ್ಲೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆ ಇವರ ಜಂಟಿ ಆಶ್ರಯದಲ್ಲಿ ನಡೆಯುವ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುವ ಸುಳ್ಯ ತಾಲೂಕು ತಂಡಕ್ಕೆ ಸರಕಾರಿ ಪದವಿ ಪೂರ್ವ ಗುತ್ತಿಗಾರು ಇದರ ಪಿಯುಸಿ ವಿದ್ಯಾರ್ಥಿಗಳಾದ ವರ್ಷ ಕೆ. ಹಾಗೂ ಧೃತಿ ಯಂ.ಪಿ. ಆಯ್ಕೆಯಾಗಿರುತ್ತಾರೆ.
ಸುಳ್ಯದ ಪಶು ಆಸ್ಪತ್ರೆಯಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಸೆ.28 ರಂದು ನಾಯಿ ಮತ್ತು ಬೆಕ್ಕುಗಳಿಗೆ ರೇಬಿಸ್ ರೋಗ ನಿರೋಧಕ ಲಸಿಕೆಯನ್ನು ವರ್ಷಂಪ್ರತಿಯಂತೆ ಉಚಿತವಾಗಿ ನೀಡಲಾಗುವುದು ಎಂದು ಪಶು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಿಸುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಭಾರಿ ವಿರೋಧ ಮಧ್ಯೆ ಇಂದಿನ ಸಂಪುಟ ಸಭೆಯಲ್ಲಿ ವರದಿಯನ್ನು ತಿರಸ್ಕಾರ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಸಾಕಷ್ಟು ವಿರೋಧ ವ್ಯಕ್ತವಾಗಿದ್ದ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ವಿಧಾನಸೌಧದಲ್ಲಿ...
ಶ್ರೀಮತಿ ಪರಿಮಳ ಐವರ್ನಾಡು ಇವರು ಜನಸಿರಿ ಫೌಂಡೇಶನ್(ರಿ )ರವರು ಕೊಡಮಾಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ಶಿಕ್ಷಣ ಕ್ಷೇತ್ರದಲ್ಲಿನ ಪ್ರಾಮಾಣಿಕ ಸೇವೆಗೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ತರಬೇತಿ ಹಾಗೂ ಪ್ರೋತ್ಸಾಹಕ್ಕೆ ಸಂದ ಗೌರವವಾಗಿದೆ. ದಿನಾಂಕ 28-9-2024 ಶನಿವಾರದಂದು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಜರುಗುವ ಅದ್ದೂರಿ ಸಮಾರಂಭ ಶಿಕ್ಷಕರ ಹಬ್ಬದಲ್ಲಿ ಗೌರವ ಪ್ರಶಸ್ತಿಯನ್ನು...
https://youtu.be/75eEWhmWPdI?si=pMJbcBGqZZQiYAw8 ಕೊಲ್ಲಮೊಗ್ರ ಗ್ರಾಮದ ಚಾಳೆಪ್ಪಾಡಿ(ತಂಬಿನಡ್ಕ) ಎಂಬಲ್ಲಿ ನೆಲೆಸಿದ್ದ ಅಂಚೆಯಣ್ಣ ಅಬ್ದುಲ್ ಜಬ್ಬಾರ್ ರವರು ಸೆ.13.ರಂದು ನಿಧನರಾಗಿದ್ದರು. ಅಕಾಲಿಕ ನಿಧನದಿಂದ ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದ್ದ ಜಬ್ಬಾರ್ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿತ್ತು. ತಾನು ಬದುಕಿದ್ಸಾಗ ಜಾತಿ ಧರ್ಮ ನೋಡದೇ ಇತರರ ನೋವಿಗೆ ಸ್ಪಂದಿಸುತ್ತಾ ಬಂದಿದ್ದರಿಂದ ಜಬ್ಬಾರ್ ಒಬ್ಬ ಅಜಾತಶತ್ರುವಾಗಿದ್ದರು. ಈ ಹಿನ್ನೆಯಲ್ಲಿ ಕೆಲ ಆತ್ಮೀಯರು ಸೇರಿ ಅವರ ಕುಟುಂಬದ...
ಶ್ರೀ ವಿಷ್ಣು ಸೇವಾ ಸಮಿತಿ ಉದಯಗಿರಿ ಮಾವಿನಕಟ್ಟೆ ಇದರ ಆಶ್ರಯದಲ್ಲಿ ಸೆ.22 ರಂದು ಓಣಂ ಆಚರಣೆಯು ಶ್ರೀ ವಿಷ್ಣು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಿತಿಯ ಗೌರವ ಸಲಹೆಗಾರರಾದ ಗಂಗಾಧರ ಕೇಪಳಕಜೆ ನೆರವೇರಿಸಿದರು.ಸಮುದಾಯದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಮುದಾಯದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಓಣಂ...
ಚೊಕ್ಕಾಡಿ ಹೈಸ್ಕೂಲ್ ಕುಕ್ಕುಜಡ್ಕದಲ್ಲಿ ಸೆ. 23 ರಂದು ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ ಬಾಲಕಿಯರ ತಂಡ ಪ್ರಥಮ, ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಪ್ರೌಢಶಾಲಾ ವಿಭಾಗದಲ್ಲಿ ಬಾಲಕ, ಬಾಲಕಿಯರು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
Loading posts...
All posts loaded
No more posts