Ad Widget

ಅಜ್ಜಾವರ : ಚೈತ್ರ ಯುವತಿ ಮಂಡಲದ ಅಧ್ಯಕ್ಷರಾಗಿ ಶಶ್ಮಿ ಭಟ್ ಪುನರಾಯ್ಕೆ – ಕಾರ್ಯದರ್ಶಿಯಾಗಿ ಹರ್ಷಿತಾ ಅಜ್ಜಾವರ – ಖಜಾಂಜಿಯಾಗಿ ಲಕ್ಷ್ಮೀ ಪಲ್ಲತಡ್ಕ

ಚೈತ್ರ ಯುವತಿ ಮಂಡಲ ಅಜ್ಜಾವರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಶಶ್ಮಿ ಭಟ್ ಹಂಚಿನ ಮನೆ ಮುಂದಿನ 2 ವರ್ಷ ಗಳ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶ್ರೀಮತಿ ಮಾಲತಿ ಸೂರ್ಯ,ಶ್ರೀಮತಿ ಗೀತಾoಜಲಿ ಗುರುರಾಜ್,ಕಾರ್ಯದರ್ಶಿಯಾಗಿ ಕು. ಹರ್ಷಿತಾ ಅಜ್ಜಾವರ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಉಷಾ ನವೀನ್, ಖಜಾಂಜಿಯಾಗಿ ಕು.ಲಕ್ಷ್ಮೀ ಪಲ್ಲತಡ್ಕ,ಗೌರವ ಸಲಹೆಗಾರರಾಗಿ ಶ್ರೀಮತಿ ಜಯಲಕ್ಷ್ಮೀ...

ಸುಬ್ರಹ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸೆ 28  ರಂದು ಬೃಹತ್ ಸ್ವಚ್ಛತಾ ಅಭಿಯಾನವನ್ನು ಸ್ವಚ್ಛತಾ ಸೇವಾ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ, ಐ ಕ್ಯೂ ಎ ಸಿ ಸಂಯೋಜಕಿ ಶ್ರೀಮತಿ ಲತಾ ಬಿ.ಟಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಆರತಿ ಕೆ ಹಾಗೂ ಸುಮಿತ್ರಕುಮಾರಿ...
Ad Widget

ವಳಲಂಬೆ : ಪುರಾಳಬದಿ ಶ್ರೀ ಶಂಖಚೂಡ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ರಚನೆ ; ಅಧ್ಯಕ್ಷರಾಗಿ ಮಣಿಯಾನ ಸುಬ್ಬಣ್ಣ ಗೌಡ – ಪ್ರಧಾನ ಕಾರ್ಯದರ್ಶಿ ಡಿ.ಆ‌ರ್. ಲೋಕೇಶ್ವರ – ಕೋಶಾಧಿಕಾರಿಯಾಗಿ ಮಾಧವ ಮಾಸ್ತರ್‌ ಮೂಕಮಲೆ

ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ಪೈಕ- ವಳಲಂಬೆ ಇದರ ಜೀರ್ಣೋದ್ದಾರ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಮಣಿಯಾನ ಸುಬ್ಬಣ್ಣ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಆರ್ ಲೋಕೇಶ್ವರ ಹಾಗೂ ಕೋಶಾಧಿಕಾರಿಯಾಗಿ ಮಾಧವ ಮಾಸ್ತರ್‌ ಮೂಕಮಲೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ವೆಂಕಟ್ ದಂಬೆಕೋಡಿ ಹಾಗೂ ವೆಂಕಟ್ ವಳಲಂಬೆ, ಜತೆ ಕಾರ್ಯದರ್ಶಿ ಚಿನ್ನಪ್ಪ ಗೌಡ ಮುಚ್ಚಾರ ಹಾಗೂ...

ಅ. 02 ರಿಂದ ಮೆಟ್ಟಿನಡ್ಕ, ಕಂದ್ರಪ್ಪಾಡಿ ರಸ್ತೆ ಕಾಮಗಾರಿ ಆರಂಭ – ಬದಲಿ ರಸ್ತೆ ಬಳಸಲು ಇಲಾಖೆ ಸೂಚನೆ

ಮೆಟ್ಟಿನಡ್ಕ, ಕಂದ್ರಪ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಕ್ಟೋಬರ್ 2 ರಿಂದ ನಡೆಯಲಿರುವುದರಿಂದ ರಸ್ತೆ ಬಂದ್ ಆಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸಿ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಕಟಣೆ ತಿಳಿಸಿದೆ.

ಕೊಡಿಯಾಲ : ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ವೀಕ್ಷಣೆ – ಗಿಡ ನಾಟಿ ಕಾರ್ಯಕ್ರಮ

ಮನ್ ಕೀ ಬಾತ್ ಕಾರ್ಯಕ್ರಮ ಕೊಡಿಯಾಲ ಗ್ರಾಮದ ಕಲ್ಪತ್ತಬೈಲು ಬೂತ್ (ಬೂತ್ ಸಂಖ್ಯೆ 80) ಸದಸ್ಯರಾದ ಹಿರಿಯ ಕಾರ್ಯಕರ್ತ ಬೀಯಲು ಮನೆಯಲ್ಲಿ ಇಂದು ನಡೆಯಿತು. ನಂತರ ಗಿಡ ನಾಟಿ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಲೋಹಿತ್ ಪೆರಿಯಾಣ, ಶಕ್ತಿಕೇಂದ್ರ ಪ್ರಮುಖ್ ಚೇತನ್ ಕೊಡಿಯಾಲ, ಬೂತ್ ಸದಸ್ಯರಾದ ತಾರಾನಾಥ್ ಬೆರ್ಯ , ಗೋಪಾಲ ಎಂ ಮತ್ತು ಮನೆಯವರು ಉಪಸ್ಥಿತರಿದ್ದರು.

ಇಂದು ವಿಶ್ವ ಹೃದಯ ದಿನ –  ಹೃದಯ ತೊಂದರೆಗಳು ಮತ್ತು ದಂತ ಆರೋಗ್ಯ

ಬರಹ : ಡಾ| ಮುರಲೀ ಮೋಹನ್ ಚೂಂತಾರ್ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಎಂದು ಆಚರಿಸಿ ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 2000ನೇ ಇಸವಿಯಲ್ಲಿ ಈ ಆಚರಣೆ “ದೈಹಿಕ ಚಟುವಟಿಕೆ ಮತ್ತು ಹೃದಯದ ಆರೋಗ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಈ ಆಚರಣೆ ಆರಂಭವಾಗಿತ್ತು. 2021ರಲ್ಲಿ ‘ಹೃದಯವನ್ನು ಜೋಡಿಸಿ’...

ಹಾಸ್ಟೇಲ್ ನಿಂದ ರಸ್ತೆ ಬದಿಗೆ ಹರಿದು ಬರುತ್ತಿರುವ ಕೊಳಚೆ ನೀರು – ಸೊಳ್ಳೆ ಉತ್ಪತ್ತಿಯ ತಾಣವಾಗುವ ಮೊದಲು ಕ್ರಮಕೈಗೊಳ್ಳಲು ಒತ್ತಾಯ

ಸುಳ್ಯ ಕೋರ್ಟ್ ಹಿಂಭಾಗದಲ್ಲಿರುವ ವಿದ್ಯಾರ್ಥಿನಿ ನಿಲಯದಿಂದ ಕೊಳಚೆ ನೀರನ್ನು ರಸ್ತೆ ಪಕ್ಕದ ತೆರೆದ ಚರಂಡಿಗೆ ಬಿಡುತ್ತಿದ್ದಾರೆ. ಚರಂಡಿಯಲ್ಲಿ ನೀರು ಹರಿದು ಹೋಗದೇ ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ವಿದ್ಯಾರ್ಥಿನಿಯರಿಗೆ ಸ್ವಚ್ಛತೆಯ ಪಾಠ ಹೇಳಿಕೊಡಬೇಕಾದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಗೆ ಕೊಳಚೆ ನೀರನ್ನು ರಸ್ತೆಯ ಬದಿಗೆ ಬಿಡಬಾರದು ಎಂಬ ಸಾಮಾನ್ಯ ಜ್ಞಾನವಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಚರಂಡಿಯಲ್ಲಿ ನೀರು ಶೇಖರಣೆಯಾಗಿ...

ಪೆರುವಾಜೆ : ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಕೇಳುವವರಿಲ್ಲವೇ ?

ಪೆರುವಾಜೆ ದೇವಸ್ಥಾನದ ಬಳಿ ನವರಾತ್ರಿ ಉತ್ಸವಕ್ಕೆ ಶುಭಕೋರಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬ್ಯಾನರ್ ಅಳವಡಿಸಿದ್ದು ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ, ಸದಸ್ಯರಿಗೆ ಕಾನೂನಿನ ಅರಿವಿಲ್ಲವೇ ಅಥವಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದಾಗ ಪ್ರಶ್ನಿಸುವ ಧೈರ್ಯ ಅಧಿಕಾರಿಗಳಿಲ್ಲವೇ ಎಂದು ಜನ ಪ್ರಶ್ನಿಸುವಂತಾಗಿದೆ.

ಮೋನಪ್ಪ ಗೌಡ ಅಡ್ಡಂತ್ತಡ್ಕ ನಿಧನ

ಅಜ್ಜಾವರ ಗ್ರಾಮದ ಅಡ್ಡಂತ್ತಡ್ಕ ಮೋನಪ್ಪ ಗೌಡ (88) ಅಲ್ಪಕಾಲದ ಅಸೌಖ್ಯದಿಂದ ಮೇನಾಲದಲ್ಲಿರುವ ಸ್ವಗೃಹದಲ್ಲಿ ಸೆ.28 ರಂದು ನಿಧನರಾದರು. ಮೃತರು ಪತ್ನಿ ಮುತ್ತಮ್ಮ, ಪುತ್ರರಾದ ಚಂದ್ರಶೇಖರ, ಗೋಪಾಲಕೃಷ್ಣ ಹಾಗೂ ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಬಾಬು ಗೌಡ ಬಾಳಿಲ ಕುಕ್ಕುತ್ತಡಿ

ನಾಲ್ಕೂರು ಗ್ರಾಮದ ಹೊಸಹಳ್ಳಿ ನಿವಾಸಿ ಬಾಬುಗೌಡ ಬಾಳಿಲ ಕುಕ್ಕುತಡಿ ಇಂದು ಮುಂಜಾನೆ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಂದ್ರಾವತಿ, ಮಗ ಸುರೇಶ್ ಬಾಳಿಲ, ಪುತ್ರಿ ನವೀನ ಮೋಹನ್ ದೇರಾಜೆ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!