- Friday
- August 7th, 2026
ಕುಕ್ಕೆ ಸುಬ್ರಹ್ಮಣ್ಯ ಲಕ್ಷದೀಪೋತ್ಸವದಂದು ಕಳೆದ ಹಲವಾರು ವರ್ಷಗಳಿಂದ ತಬಲ, ಹಾರ್ಮೋನಿಯಂ, ಯಕ್ಷಗಾನ ತರಬೇತಿ ನೀಡುತ್ತಿರುವ ಗಣೇಶ ಪರ್ವತಮುಖಿ ಅವರನ್ನು ಸನ್ಮಾನಿಸಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸನ್ಮಾನ ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸದ್ಯರು ಹಾಗೂ ಮಾಸ್ಟರ್ ಪ್ಲಾನರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಜಾತ್ರೋತ್ಸವದ ಅಂಗವಾಗಿ ಬುಧವಾರ ಲಕ್ಷ ದೀಪೋತ್ಸವ ನಡೆದು ತದನಂತರದಲ್ಲಿ ಬೀದಿ ಉರುಳುಸೇವೆ ಆರಂಭವಾಯಿತು. ಕುಕ್ಕೆ ಕ್ಷೇತ್ರಕ್ಕೆ ಭಕ್ತಾದಿಗಳು ಸಲ್ಲಿಸುವ ಅತಿ ದೊಡ್ಡ ಹರಕೆಗಳಲ್ಲಿ ಬೀದಿ ಉರುಳುಸೇವೆಯು ಪ್ರಮುಖ ಸೇವೆಯಾಗಿದೆ. ಹರಕೆಯನ್ನು ಹೊತ್ತ ಭಕ್ತರು ಕುಮಾರಧಾರ ಸ್ಥಾನಗಟ್ಟದಲ್ಲಿ ಮಿಂದು ಅಲ್ಲಿಂದಲೇ ಸುಮಾರು ಎರಡುವರೆ ಕಿಲೋಮೀಟರ್...
“ಅಡಿಕೆ ಕೃಷಿಕರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರು ಗಮನ ಹರಿಸಿದ್ದು, ಬೆಳೆಗಾರರ ಹಿತ ಕಾಯಲು ಕೇಂದ್ರ ಸರಕಾರ ಬದ್ಧವಾಗಿದ್ದು, ಜತೆಗಿದ್ದೇವೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.ಅವರು ಬಾಳುಗೋಡಿನಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. “ಈಗಾಗಲೇ ಕೇಂದ್ರ ಕೃಷಿ ಸಚಿವರ ನೇತೃತ್ವದಲ್ಲಿ ಅಡಿಕೆ ಬೆಳೆಯುವ ಭಾಗದ ಸಂಸದರ...
ಜಟ್ಟಿಪ್ಪಳ್ಳದ ಭಾಗದ ನಾಗರಿಕರು ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರಿಗಾಗಿ ಸರಕಾರಿ ಬಾವಿಯನ್ನು ಉಪಯೋಗಿಸುತ್ತಿದ್ದು, ಇದೀಗ ಕಲುಷಿತಗೊಂಡು ಕುಡಿಯಲು ಆಯೋಗ್ಯವಾಗಿದೆ. ಮರದ ಎಲೆಗಳು ಬಿದ್ದು, ಹಲವು ವರ್ಷಗಳಿಂದ ಹೂಳು ತೆಗೆಯದೇ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ಬಗ್ಗೆ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇನ್ನಾದರೂ ಜನರಿಗೆ ಶುದ್ಧ...
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬೆಳ್ಳಾರೆ ಇದರ ಆಶ್ರಯದಲ್ಲಿ ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ ) ಪಾಂಬಾರು ನೇತೃತ್ವದಲ್ಲಿ ಜ್ಞಾನ ದೀಪ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ( ರಿ ) ಬೆಳ್ಳಾರೆ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಸಂಭ್ರಮ 2025 ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ ಸಾಧಕರಿಗೆ ಸನ್ಮಾನ...
ಕೊಲ್ಲಮೊಗ್ರ ಗ್ರಾಮದ ಮುಳ್ಳುಗಾಗಿಲು ಕುಕ್ಕುಜೆ ಪೈಲೂರು ಲಕ್ಷ್ಮೀ ಎಂಬವರು ನ.11 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಯೋಗೀಶ್, ಸೊಸೆಯಂದಿರಾದ ರೋಹಿಣಿ ಯೋಗೀಶ್, ಮೀನಾಕ್ಷಿ ಪದ್ಮಯ್ಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಬಾಳುಗೋಡು : ಯುವ ಪತ್ರಕರ್ತ ಉಲ್ಲಾಸ್ ಕಜ್ಜೋಡಿ ಅವರನ್ನು ಸನ್ಮಾನಿಸಿದ ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ
ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು “ಸಂಸದರ ನಡೆ-ಗ್ರಾಮದ ಕಡೆ” ಕಾರ್ಯಕ್ರಮ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಸಲುವಾಗಿ ಇಂದು(ನ.20) ಬಾಳುಗೋಡು ಗ್ರಾಮಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಯುವ ಪತ್ರಕರ್ತ, ಬರಹಗಾರ ಹಾಗೂ ಅಮರ ಸುದ್ದಿ ವಾರಪತ್ರಿಕೆಯ ವರದಿಗಾರರಾದ ಉಲ್ಲಾಸ್ ಕಜ್ಜೋಡಿ ಅವರನ್ನು ಸಂಸದರು ಶಾಲು ಹೊದಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸುಳ್ಯ...
ಬೆಳ್ಳಾರೆಯ ಹೃದಯ ಭಾಗದ ಜೆ.ಎಂ.ಬಿಲ್ಡಿಂಗ್ ನಲ್ಲಿ ಕಳೆದ 25 ವರುಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಾ ಬಂದಿರುವ ಕರ್ನಾಟಕ ಫರ್ನಿಚರ್ಸ್ ನ ನೂತನ ಮಳಿಗೆ ಕರ್ನಾಟಕ ಫರ್ನಿಚರ್ಸ್ ಮತ್ತು ಎಲೆಕ್ಟ್ರೋನಿಕ್ಸ್ ಅದೇ ಬಿಲ್ಡಿಂಗ್ ನ ಮೇಲ್ಮಹಡಿಯಲ್ಲಿ ನ 17 ರಂದು ಉದ್ಘಾಟನೆಗೊಂಡಿತು. ಬೆಳ್ಳಾರೆ ಝಕರಿಯ ಜುಮುಅ: ಮಸೀದಿಯ ಖತೀಬರಾದ ಬಹು ನಸೀಹ್ ದಾರಿಮಿ ಉದ್ಘಾಟನೆಗೈದರು.ಬಹು ಉಮರ್...
ಸುಳ್ಯ: ʼಸಂಸದರ ನಡೆ ಗ್ರಾಮದ ಕಡೆʼ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಲವೆಡೆ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ್ದಾರೆ. ಇಂದು ಬೆಳಗ್ಗೆ ತಾಲೂಕಿನ ಬಾಳುಗೋಡು, ಮಧ್ಯಾಹ್ನ ಕಲ್ಮಕಾರು ಹಾಗೂ ಕೊಲ್ಲಮೊಗ್ರುವಿನಲ್ಲಿ ಕ್ಯಾ. ಚೌಟ ಅವರು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಆ ಬಳಿಕ ಸ್ಥಳೀಯರ ಕುಂದು-ಕೊರತೆ ಆಲಿಸಿದ್ದಾರೆ....
ದಕ್ಷಿಣ ಕನ್ನಡ ಜಿಲ್ಲಾ ಸಂಸದ ಬ್ರಿಜೇಶ್ಚೌಟ ಅವರು ನ.20 ಬಾಳುಗೋಡು ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸ್ವತಂತ್ರ ಭಾರತದ ಮೊದಲ ಚುನಾವಣೆಗಳಲ್ಲಿ ಅವಿಭಜಿತ ಪುತ್ತೂರು ಕ್ಷೇತ್ರದಿಂದ ಮದ್ರಾಸ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಶಾಸಕರು ಕೂಜುಗೋಡು ಕಟ್ಟೆಮನೆ ವೆಂಕಟ್ರಮಣ ಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಿಜೆಪಿಯ ಪ್ರಮುಖರು, ಕಾರ್ಯಕರ್ತರು...
Loading posts...
All posts loaded
No more posts
