- Wednesday
- August 5th, 2026
ಸುಬ್ರಹ್ಮಣ್ಯ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ಕೇಂದ್ರ ಕಚೇರಿ, ಮಂಗಳೂರು ಪ್ರಾದೇಶಿಕ ಕಚೇರಿ ಇದರ ವತಿಯಿಂದ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ಡಿಸೆಂಬರ್ 21 ರಂದು ರವಿವಾರ ಕುಕ್ಕೆ ಸುಬ್ರಹ್ಮಣ್ಯದ ವಿಶಾಲವಾದ ರಥ ಬೀದಿಯಲ್ಲಿ ನಡೆಯಲಿರುವುದು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಕೋಲಾರ, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ,...
ಕುಕ್ಕೆ ಸುಬ್ರಮಣ್ಯದ ನೂಚಿಲ ಪಂಜುರ್ಲಿಗುಡ್ಡೆ ಎಂಬಲ್ಲಿ ಪ್ರತೀ ವರ್ಷ ವಿಜೃಂಭಣೆಯಿಂದ ದೈವಗಳ ನೇಮೋತ್ಸವವು ನಡೆಯುತಿದ್ದು, ಈ ಧೈವಸ್ಥಾನಕ್ಕೆ ಸುಮಾರು 150 ವರ್ಷಕ್ಕೂ ಅಧಿಕ ಇತಿಹಾಸವಿರುತ್ತದೆ. ಈ ದೈವಸ್ಥಾನಕ್ಕೆ ಊರ ಹಾಗೂ ಪರ ಊರಿನಿಂದ ಸಾವಿರಾರು ಭಕ್ತರು ತಮ್ಮ ಕಷ್ಟ ನಿವಾರಣೆಗೆಂದು ಹರಕೆ ಹೊತ್ತು ಬರುತಿದ್ದು, ಇದಕ್ಕೆ ಪ್ರತಿಫಲವನ್ನು ಕಂಡುಕೊಂಡ ಉದಾಹರಣೆ ಹಲವಾರು ಇವೆ. 2026ನೇ ಸಾಲಿನ...
ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ(ಮೀಫ್) ಕೇಂದ್ರ ಸಮಿತಿ ಮೂಲಕ ಆನಿವಾಸಿ ಉದ್ಯಮಿ ಎಸ್.ಎಂ. ಮುಸ್ತಫ ಭಾರತ್ ರವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಡಿಜಿಟಲ್ ಟಿ.ವಿಯನ್ನು ಮೀಫ್ ಒಕ್ಕೂಟದ ಅಧ್ಯಕ್ಷ ಮೂಸಬ್ಬ.ಪಿ ಬ್ಯಾರಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು "ಇಂದಿನ ಡಿಜಿಟಲ್ ಯುಗ ದಲ್ಲಿ ವಿದ್ಯಾರ್ಥಿ ಗಳ ಕೌಶಲ್ಯ ಪೂರ್ಣ ಕಲಿಕೆಗೆ ವಿದ್ಯುನ್ಮಾ...
ಸುಳ್ಯ ಬೀರಮಂಗಲ ನಿವಾಸಿ ಉದ್ಯಮಿ ಸುಳ್ಯದಲ್ಲಿ ಸುದರ್ಶನ ಕೃಷಿ ಏಜೆನ್ಸಿಯ ಮಾಲಕರಾಗಿದ್ದ ಸುದೇಶ್ ಕುಮಾರ್ ಶೆಟ್ಟಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಿ.16ರಂದು ಬೆಳಿಗ್ಗೆ ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಅಕ್ಷತಾ ಶೆಟ್ಟಿ ಹಾಗೂ ಇಬ್ಬರು ಪುತ್ರರರಾದ ಸಮನ್ಯು ಹಾಗೂ ಶುಶಾನ್ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಇಂದಿನಿಂದ(ಡಿ.16) ಧನುಪೂಜೆ ಪ್ರಾರಂಭಗೊಂಡಿದ್ದು, ಧನುರ್ಮಾಸದ ಮೊದಲ ದಿನವಾದ ಇಂದು ಸುಮಾರು 120 ಭಕ್ತಾದಿಗಳು ಉಪಸ್ಥಿತರಿದ್ದರು.ಇಂದು ಡಿ.16 ರಿಂದ ಜ.14 ರವರೆಗೆ ಪ್ರತೀದಿನ ಪ್ರಾತಃಕಾಲ 5:30ಕ್ಕೆ ಧನುಪೂಜೆ ನಡೆಯಲಿದ್ದು, ಜ.14 ಮಕರ ಸಂಕ್ರಮಣದ ದಿನ ಪ್ರಾತಃಕಾಲ 4:00 ಗಂಟೆಯಿಂದ ಉದ್ಯಾಪನ ಧನುಪೂಜೆ ಹಾಗೂ ಧನುಪೂಜೆ ಸಮಾಪ್ತಿ ಹಾಗೂ ಮದ್ಯಾಹ್ನ...
ಬಾಳಿಲ ವಿದ್ಯಾಬೋಧಿನೀ ವಿದ್ಯಾಸಂಸ್ಥೆಗಳ ಆವರಣದಲ್ಲಿ ಡಿ.10ರಂದು "ವಿದ್ಯಾ ವೈಭವ" ವಿನೂತನ ಸಾಂಸ್ಕೃತಿಕ ಹಬ್ಬ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕರಾದ ಬಿ.ವಿ ಶಗ್ರಿತ್ತಾಯ ತೆಂಗಿನ ಮರದ ಹಿಂಗಾರವನ್ನು ಅರಳಿಸುವುದರ ಮೂಲಕ ನಡೆಸಿದರು.ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಯು.ರಾಧಾಕೃಷ್ಣರಾವ್ ಸ್ವಾಗತಿಸಿದರು. ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾಬೋಧಿನೀ ಪ್ರೌಢಶಾಲೆಯ ಸುಮಾರು 400...
ಚೊಕ್ಕಾಡಿ ಪೇಟೆಯ ಪರಿಸರದ ಮಾರ್ಗದಲ್ಲಿ ಜೀಪಿನಡಿಗೆ ಬಿದ್ದು ಮೃತಪಟ್ಟಿದ್ದ ನಾಯಿಯ ಶವದಿಂದ ಪರಿಸರಕ್ಕೆ ಅಸೌಚ್ಯ ಉಂಟಾಗುತ್ತಿದ್ದುದನ್ನು ಗಮನಿಸಿದ ಮಯೂರಿ ಯುವತಿ ಮಂಡಲ(ರಿ.) ಚೊಕ್ಕಾಡಿ ಇದರ ಸದಸ್ಯರು ತಕ್ಷಣ ಸ್ಪಂದಿಸಿ ಮಾನವೀಯತೆ ಮೆರೆದರು.ನಾಯಿಯ ಶವವನ್ನು ಸುರಕ್ಷಿತವಾಗಿ ತೆರವುಗೊಳಿಸಿ, ಅದನ್ನು ಹೊಂಡ ತೆಗೆದು ಹೂತು ಹಾಕಿ ಯುವತಿ ಮಂಡಲದ ಸದಸ್ಯರು ಪರಿಸರದ ಸ್ವಚ್ಛತೆಯನ್ನು ಕಾಪಾಡಿದರು. ಗರುಡ ಯುವಕ ಮಂಡಲದ...
ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಹಾಗೂ ಚೈತನ್ಯ ಗೆಳೆಯರ ಬಳಗ(ರಿ.) ಶೆಟ್ಟಿಮಜಲು ಇದರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025(75 ದಿನಗಳ ಸ್ವಚ್ಛತಾ ಅಭಿಯಾನ) ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದು, ಡಿ.15 ಸೋಮವಾರದಂದು ಶೆಟ್ಟಿಮಜಲು ಬಸ್ ನಿಲ್ದಾಣ ಹಾಗೂ ಮತ್ತು ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಲಾಯಿತು. ಈ ಸಂದರ್ಭದಲ್ಲಿ ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲು ಇದರ ಅಧ್ಯಕ್ಷರು ಹಾಗೂ ...
ಸುಳ್ಯದಲ್ಲಿ ಡಿ.14 ರಂದು ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್(ರಿ.) ಇದರ ನೂತನವಾಗಿ ಪ್ರಾರಂಭವಾದ ಸುಳ್ಯ ಶಾಖೆಯ ಪದಗ್ರಹಣ ಕಾರ್ಯಕ್ರಮವು ಕೆ.ವಿ.ಜಿ ಆಯುರ್ವೇದ ಫಾರ್ಮಾ ಹಾಗೂ ರಿಸರ್ಚ್ ಸೆಂಟರಿನ ಎ/ಸಿ ಆಡಿಟೋರಿಯಂನಲ್ಲಿ ನೆರವೇರಿತು.ಈ ಕಾರ್ಯಕ್ರಮದ ಪದಗ್ರಹಣ ಅಧಿಕಾರಿ ಆಗಿ ಜಿಲ್ಲಾ ಆಯುಷ್ ಆಫೀಸರ್ ಡಾ.ಮೊಹಮ್ಮದ್ ಇಕ್ಬಾಲ್ ರವರು ಸರಕಾರಿ ಕಾರ್ಯಕ್ರಮ ಹಾಗೂ ಇನ್ನಿತರ ಎಲ್ಲಾ ಜಾಗೃತಿ ಮೂಡಿಸುವ...
ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪ. ವರ್ಗದ ಸಭಾಭಾವನ ಗುತ್ತಿಗಾರು ಇಲ್ಲಿ ಕ್ಲಬ್ ನಸ್ಥಾಪಕಾಧ್ಯಕ್ಷರಾದ ಮಾಯಿಲಪ್ಪ ಕೊಂಬೆಟ್ಟು ಇವರ ಸಮ್ಮುಖದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಶಿರಾಜೆ, ಪ್ರಧಾನ ಕಾರ್ಯದರ್ಶಿಯಾಗಿ ನಿರಂತ್ ದೇವಶ್ಯ, ಕೋಶಾಧಿಕಾರಿಯಾಗಿ ವಿನೀತ್ ಮುತ್ಲಾಜೆ ಹಾಗೂ ನಿರ್ದೇಶಕರುಗಳಾಗಿ ಗಿರೀಶ್ ಪಾರೆಪ್ಪಾಡಿ, ಜಯಂತ...
Loading posts...
All posts loaded
No more posts
