ಕೋಮಾ ಸ್ಥಿತಿಯಲ್ಲಿದ್ದ ಕೊಲ್ಲಮೊಗ್ರು ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ ಮೀನಾಕ್ಷಿ ಬೆಂಡೋಡಿ ನಿಧನ

ಕೊಲ್ಲಮೊಗ್ರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಎಲ್.ಸಿ.ಆರ್.ಪಿ ಮೀನಾಕ್ಷಿ ಬೆಂಡೋಡಿ ಅವರು ಡಿ.20ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ. ಅನಾರೋಗ್ಯದಿಂದಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೋ-ಬಿ.ಪಿ ಗೆ ಒಳಗಾಗಿ ಕೋಮಾ ಸ್ಥಿತಿಗೆ ಜಾರಿದ್ದ ಅವರು ಇಂದು(ಡಿ.20) ನಿಧನರಾದರು ಎಂದು ತಿಳಿದುಬಂದಿದೆ.ಮೃತರಿಗೆ 40 ವರ್ಷ ವಯಸ್ಸಾಗಿತ್ತು, ಮೃತರು...

ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ರವರನ್ನು ಭೇಟಿ ಮಾಡಿ ಬೇಡಿಕೆ ಗಳ ಮನವಿ ಸಲ್ಲಿಸಿದ ಸೂಡ ಅಧ್ಯಕ್ಷ ಕೆ.ಎಂ ಮುಸ್ತಫ

ಸುಳ್ಯ ನಗರ ಪಂಚಾಯತ್ ಗೆ ಮಾಸಿಕ ಸಭೆ ನಡೆಸಲು ಆಗಮಿಸಿದ  ಆಡಳಿತಾಧಿಕಾರಿಯಾದ  ತಹಶೀಲ್ದಾರ್ ಶ್ರೀಮತಿ ಮಂಜುಳಾ ರವರನ್ನು ಭೇಟಿ ಮಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫ ಕೆಲವು ಪ್ರಚಲಿತ ಸಮಸ್ಯೆ ಗಳ ಬಗ್ಗೆ ಚರ್ಚಿಸಿದರು ಅಮೃತ 2.0 ಯೋಜನೆಯಡಿ ಪೈಪ್ ಲೈನ್ ಗೆ ಅಗೆದ ರಸ್ತೆಯನ್ನು ಸರಿಪಡಿಸುವಂತೆ ಸಂಬಂಧ ಪಟ್ಟವರಿಗೆ...
Ad Widget

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ನೇತೃತ್ವದ ತಂಡದ ಪದಗ್ರಹಣ

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ನೂತನ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಪ್ರಧಾನ ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ, ಕೋಶಾಧಿಕಾರಿ ಅನಿಲ್ ಕಳಂಜ ತಂಡದ ಪದಗ್ರಹಣ ಸಮಾರಂಭ ಡಿ.11ರಂದು ಸುಳ್ಯದ ರಂಗ ಮಯೂರಿ ಕಲಾ ಶಾಲೆಯಲ್ಲಿ ನಡೆಯಿತು.ತಾಲೂಕು ಸಂಘದ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಕೊಯಿಂಗೋಡಿಯವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

ಐನೆಕಿದು : ಕೂಜುಗೋಡಿನಲ್ಲಿ ತೋಟಗಳಿಗೆ ಆನೆ ದಾಳಿ ; ಕಂಗು, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿ-ನಷ್ಟ

ಕಡಬ ತಾಲೂಕಿನ ಐನೆಕಿದು ಗ್ರಾಮದ ಜಯಪ್ರಕಾಶ್ ಕೂಜುಗೋಡು ಹಾಗೂ ಸುರೇಶ್ ಕೂಜುಗೋಡು ರವರ ತೋಟಗಳಿಗೆ ಆನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದ್ದು, ಡಿ.18 ರಂದು ರಾತ್ರಿ ಜಯಪ್ರಕಾಶ್ ಕೂಜುಗೋಡು ರವರ ತೋಟಕ್ಕೆ ಹಾಗೂ ಡಿ.19 ರಂದು ಸುರೇಶ್ ಕೂಜುಗೋಡು ರವರ ತೋಟಕ್ಕೆ ದಾಳಿ ನಡೆಸಿದ ಆನೆ ಕಂಗು, ತೆಂಗು ಹಾಗೂ ಬಾಳೆ ಕೃಷಿಯನ್ನು ನಾಶಪಡಿಸಿದೆ.ಈ ಸಂದರ್ಭದಲ್ಲಿ...

ಡಿ.20 ರಿಂದ ಜ.04 ರವರೆಗೆ ಪುತ್ತೂರಿನ ಜಿ‌.ಎಲ್ ಒನ್ ಮಾಲ್ ನಲ್ಲಿ “ಜಿ.ಎಲ್ ಉತ್ಸವ” ಹಾಗೂ “ಫುಡ್ ಫೆಸ್ಟಿವಲ್” ; ಚಳಿಗಾಲವನ್ನು ಬೆಚ್ಚಗಾಗಿಸಲು “ಶಾಪಿಂಗ್ ಸಂಭ್ರಮ” ವಿಶೇಷ ಕೊಡುಗೆಗಳು, ಕೂಪನ್ ಗಳು ಹಾಗೂ ಖಚಿತ ಬಹುಮಾನಗಳು ; ವೀಕೆಂಡ್ ಅನ್ನು ಸ್ಪೆಷಲ್ ಆಗಿಸಲು “ಸಾಂಸ್ಕೃತಿಕ ಕಾರ್ಯಕ್ರಮಗಳು, ಫ್ಯಾಷನ್ ಷೋ” ಹಾಗೂ “ಚಿತ್ರಕಲಾ ಸ್ಪರ್ಧೆ”

ಪುತ್ತೂರಿನ ಪ್ರತಿಷ್ಠಿತ ಜಿ.ಎಲ್ ಒನ್ ಮಾಲ್ ನಲ್ಲಿ ಡಿ.20 ರಿಂದ ಜ.04 ರವರೆಗೆ “ಜಿ.ಎಲ್ ಮಾಲ್ ಉತ್ಸವ” ಶಾಪಿಂಗ್ ಸಂಭ್ರಮವು ಗ್ರಾಹಕರ ಚಳಿಗಾಲವನ್ನು ಬೆಚ್ಚಗಾಗಿಸಲು ಆಕರ್ಷಕ “ಫುಡ್ ಫೆಸ್ಟಿವಲ್” ನೊಂದಿಗೆ ಬಹಳ ಅದ್ದೂರಿಯಾಗಿ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ರೀಲ್ಸ್ ಚಾಲೆಂಜ್, ಎಲ್ಲಾ ಮಳಿಗೆಗಳಲ್ಲಿ ವಿಶೇಷ ಕೊಡುಗೆಗಳು, ಶಾಪಿಂಗ್ ಕೂಪನ್ ಗಳು ಹಾಗೂ ಖಚಿತ ಬಹುಮಾನಗಳು ಇರಲಿವೆ....

ಸಮಸ್ತ 100ನೇ ವಾರ್ಷಿಕ ಮಹಾ ಸಮ್ಮೇಳನ ಪ್ರಚಾರಾರ್ಥ ಅರಂತೋಡು ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ದ್ವಜದಿನ ಆಚರಣೆ

ಎಸ್.ಕೆ.ಎಸ್.ಎಸ್.ಎಫ್ ಅರಂತೋಡು ಶಾಖೆ ವತಿಯಿಂದ ಆದರ್ಶ ಪರಿಶುದ್ಧತೆ ಶತಮಾನಗಳಿಂದ ಎಂಬ ಧ್ಯೇಯವಾಕ್ಯದೊಂದಿಗೆ ಸಮಸ್ತ 100ನೇ ವಾರ್ಷಿಕ ಪ್ರಚಾರ ಸಮ್ಮೇಳನಾರ್ಥ ಧ್ವಜ ದಿನವನ್ನು ಆಚರಿಸಲಾಯಿತು. ದ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು. ಬದ್ರಿಯಾ ಜುಮಾ  ಮಸೀದಿಯ ಖತೀಬರಾದ ಇಸ್ಮಾಯಿಲ್ ಫೈಝಿ ಗಟ್ಟಮನೆ ಸಂದೇಶ ಭಾಷಣ ಮಾಡಿದರು. ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕಾರ್ಯದರ್ಶಿ ಕೆ.ಎಂ...

ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆ

ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 2026ನೇ ವರುಷದ ಕ್ಯಾಲೆಂಡರ್‌ನ್ನು  ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಯವರು ಡಿಸೆಂಬರ್ 18ರಂದು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ವಸಂತ ಕಿರಿಭಾಗ, ನಿರ್ದೆಶಕರುಗಳಾದ  ಯಶೋಧ ರಾಮಚಂದ್ರ, ಮಾಧವ ಬಿ.ಟಿ, ಕಮಲಾಕ್ಷ ನಂಗಾರು, ಡಾ. ಮನೋಜ್ ಕುಮಾರ್, ದಿನೇಶ್ ಮಡ್ತಿಲ, ಭವಾನಿಶಂಕರ ಅಡ್ತಲೆ, ದಯಾನಂದ ಅಟ್ಲೂರು,...

“ಸ್ವದೇಶಿ ಬಳಸಿ-ದೇಶ ಬೆಳೆಸಿ” ಸ್ವದೇಶಿ ಜಾಗೃತಿ ಜಾಗರಣ ಸೈಕ್ಲಿಂಗ್ ಅಭಿಯಾನಕ್ಕೆ ಅರಂತೋಡಿನಲ್ಲಿ ಸ್ವಾಗತ

“ಸ್ವದೇಶಿ ಬಳಸಿ ದೇಶ ಬೆಳೆಸಿ” ಎಂಬ ಘೋಷ ವಾಕ್ಯದಡಿ, ಸಾಪ್ಟವೇರ್ ಉತ್ಪನ್ನಗಳಿಂದ ಹಿಡಿದು ನಿತ್ಯ ಉಪಯೋಗಿಸುವ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ದೇಶದ ಆರ್ಥಿಕತೆಯನ್ನು ಬಳಪಡಿಸುವ ಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಜಿ ಸೇನಾಧಿಕಾರಿ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನೇತ್ರತ್ವದಲ್ಲಿ ನಡೆಯುತ್ತಿರುವ ಸ್ವದೇಶಿ ಜಾಗರಣ ಸೈಕೆಲಿಂಗ್ ಅಭಿಯಾನ ಬುಧವಾರ ಸುಳ್ಯ...

ನಿಜಮಹಾತ್ಮ ಅಂಬೇಡ್ಕರ್ ನಾಟಕ ಪ್ರದರ್ಶನದ ವೇಳೆ ಜೈಭೀಮ್ ಪದವನ್ನು ಜೈ ಮೀಮ್ ಎಂದು ಬಳಸಿದ್ದಕ್ಕೆ ವಿರೋಧ – ಕೂಡಲೇ ಕ್ಷಮೆಯಾಚಿಸುವಂತೆ ಸುಳ್ಯ ತಾಲೂಕು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

ಸುಳ್ಯದಲ್ಲಿ ರಾಷ್ಟ್ರ ಚಿಂತನಾ ವೇದಿಕ ಹಾಗೂ ಆಟೋ ಚಾಲಕರ ಸಂಘ ಭಾರತೀಯ ಮಜ್ದೂರ್ ಸಂಘ ಇದರ ವತಿಯಿಂದ ನಡೆದಿರುವ ನಿಜ ಮಹಾತ್ಮ ಬಾಬಾ ಸಾಹೇಬ್ ಎಂಬ ನಾಟಕದ ಮೂಲಕ ಧನ್ಯವಾದ ಸಂದರ್ಭದಲ್ಲಿ ಅದರ ನಿರ್ದೇಶರ ಅಡ್ಡಂಡ ಕಾರ್ಯಪ್ಪ ಅವರು ಜೈ ಭೀಮ್ ಪದದ ಬಳಕೆ ಮಾಡುವ ವೇಳೆ ಜೈ ಮೀಮ್ ಪದವನ್ನು ಬಳಸಿ ಅಪಹಾಸ್ಯ ಮಾಡುವ...

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಂಥಾಲಯ ಮೇಲ್ವಿಚಾರಕರಿಂದ ಜಿಲ್ಲಾ ಪಂಚಾಯತ್ ಸಿಒಇ ಗೆ ಮನವಿ

ಗ್ರಾಮ ಪಂಚಾಯತ್ ಗ್ರಂಥಾಲಯ, ಅರಿವು ಕೇಂದ್ರ ಮೇಲ್ವಿಚಾರಕರಿಗೆ ವೇತನ ವಾವತಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ, ವೇತನವನ್ನು ಸಕಾಲಿಕವಾಗಿ ಪಾವತಿಸುವ  ಬಗ್ಗೆ ಮತ್ತು ಪಿ.ಎಫ್, ಇ.ಎಸ್.ಐ ಸೌಲಭ್ಯ ಒದಗಿಸಿಕೊಡುವ ಬಗ್ಗೆ ಮೇಲ್ವಿಚಾರಕರು  ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿನಾಯಕ್ ನರ್ವಡೆ IAS ಅವರಿಗೆ ಡಿ.18 ರಂದು  ಮನವಿ ನೀಡಿ ಒತ್ತಾಯಿಸಿದ್ದಾರೆ. ದ.ಕ ಜಿಲ್ಲೆಯ ಗ್ರಾಮ ಪಂಚಾಯತ್ ಗ್ರಂಥಾಲಯ, ಅರಿವು ಕೇಂದ್ರ ಮೇಲ್ವಿಚಾರಕರಿಗೆ...
Loading posts...

All posts loaded

No more posts

error: Content is protected !!