ಸುಳ್ಯದ ವಿವಿಧೆಡೆ ತಂಪೆರೆದ ಮಳೆರಾಯ – ಸಂಕಷ್ಟಕ್ಕೆ ಸಿಲುಕಿದ ಸುಳ್ಯ ಜಾತ್ರೆಯ ವ್ಯಾಪಾರಸ್ಥರು

ಹಲವು ದಿನಗಳಿಂದ ಮೋಡ ಕವಿದ ವಾತಾರಣವಿದ್ದು ಸುಳ್ಯ ತಾಲೂಕಿನ ವಿವಿಧೆಡೆ ಇಂದು ಮಳೆ ಸುರಿದಿದೆ. ಸುಳ್ಯ ಗುತ್ತಿಗಾರು ಸಂಪಾಜೆ, ಜಾಲ್ಸೂರು ಸೇರಿದಂತೆ ವಿವಿಧೆಡೆ ಬಾರಿ ಮಳೆಯಾಗಿದೆ. ಸುಳ್ಯ ಜಾತ್ರೆಯ ಸಂತೆ ವ್ಯಾಪಾರಸ್ಶರು ಮಳೆಯಿಂದ ತೊಂದರೆಗೆ ಸಿಲುಕಿದರು. ಅಕಾಲಿಕ ಮಳೆ ಸಂಕಷ್ಟದಲ್ಲಿರುವ ಕೃಷಿಕರಿಗೆ ಮತ್ತೆ ಬರೆ ಎಳೆದಂತಾಗಿದೆ.  ವಿದ್ಯುತ್ ಕಡಿತಗೊಂಡಿದ್ದು ಸುಳ್ಯದಲ್ಲಿ ಕತ್ತಲೆ ಆವರಿಸಿದೆ.

ಅರಂತೋಡು ಘನ ತ್ಯಾಜ್ಯ ಘಟಕ ಪುನರ್ ನಿರ್ಮಾಣಕ್ಕೆ ಧನ ಸಹಾಯ

ಗ್ರಾಮ ಪಂಚಾಯತ್ ಅರಂತೋಡು ಘನ ತ್ಯಾಜ್ಯ ಘಟಕ ಪುನರ್ ನಿರ್ಮಾಣಕ್ಕಾಗಿ ಅನ್ವಾರುಲ್ ಹುದಾ ಯಂಗ್ ಮ್ಯಾನ್ಸ್ ಎಸ್ಸೋಸಿಯೇಷನ್ ವತಿಯಿಂದ ರೂಪಾಯಿ 5,000 ಚೆಕ್ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಮಾಜಿ ಉಪಾಧ್ಯಕ್ಷರಾದ ಹರಿಣಿ ದೇವರಾಜೆ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ, ಅನ್ವರುಲ್ ಹುದಾ  ಯಂಗ್ ಮೆನ್ಸ್ ಎಸೋಸಿಯೇಷನ್...
Ad Widget

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ಪಂಜ ಸಾವಿರ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಇಂದು(ಜ.13) ಧನು ಪೂಜೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯರವರು ಆಗಮಿಸಿ ಧನು ಪೂಜೆಯ ವಿಶೇಷ ಪ್ರಸಾದವನ್ನು ಸ್ವೀಕರಿಸಿದರು.ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ,...

ಇತಿಹಾಸ ಪ್ರಸಿದ್ಧ ಪೇರಡ್ಕ – ಗೂನಡ್ಕ ದರ್ಗಾ ಶರೀಫ್ ಉರೂಸ್ ಸಮಾರೋಪ ಮತ್ತು ಸರ್ವಧರ್ಮ ಸಮ್ಮೇಳನ ; ಎಂ.ಎ ಗಫೂರ್, ಟಿ.ಎಂ ಶಹೀದ್, ಸದಾನಂದ ಮಾವಜಿಯವರಿಗೆ ಸನ್ಮಾನ

ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿರುವ ಸರ್ವಧರ್ಮಿಯರಿಂದ ಗೌರವಿಸಲ್ಪಡುವ ಪೇರಡ್ಕ - ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ವಾರ್ಷಿಕ ಉರೂಸ್ ಕಾರ್ಯಕ್ರಮ  ಸಮಾರೋಪ ಸಮಾರಂಭಮತ್ತು ದಲ್ಲಿ ಕರ್ನಾಟಕ ಸರ್ಕಾರದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಫೂರ್ ಉಡುಪಿ, ಇತ್ತೀಚೆಗೆ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ರಿಗೆ ಸಂಪುಟ ದರ್ಜೆ ಸ್ಥಾನ ಮಾನ...

ಗಾಯಕ ವಿಜಯಕುಮಾರ್ ಸುಳ್ಯ ನೇತೃತ್ವದಲ್ಲಿ ಜಾತ್ರೋತ್ಸವದಲ್ಲಿ ಮನರಂಜಿಸಿದ “ವಿಜಯ್ ಮ್ಯೂಸಿಕಲ್ ನೈಟ್ -2026”

ಸುಳ್ಯ ಜಾತ್ರಾ ಪ್ರಯುಕ್ತ ಜ.10 ರಂದು ಸುಳ್ಯದ ಖಾಸಗಿ ಬಸ್‌ ನಿಲ್ದಾಣದಲ್ಲಿ ನಡೆದ “ವಿಜಯ್ ಮ್ಯೂಸಿಕಲ್ ನೈಟ್-2026” ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.ಕಾರ್ಯಕ್ರಮದ ಸಂಚಾಲಕರಾದ ರಾಷ್ಟ್ರಮಟ್ಟದ ಗಾನಗಂಧರ್ವ ಪ್ರಶಸ್ತಿ ಪುರಸ್ಕೃತರಾದ ವಿಜಯಕುಮಾ‌ರ್ ಸುಳ್ಯ ಇವರ ಸಾರಥ್ಯದಲ್ಲಿ ಮತ್ತು ವಿವಿಧ ಜಿಲ್ಲೆಯ ಪ್ರಖ್ಯಾತ ಗಾಯಕ, ಗಾಯಕಿಯರು ಹಾಡಿ ಮನ ರಂಜಿಸಿದರು. ವಿಶೇಷ ಆಕರ್ಷಣೆಯಾಗಿ ನೃತ್ಯ ವೈವಿಧ್ಯ ನಡೆಯಿತು. ನಿರೂಪಕ...

“ಜಿ.ಎಲ್.ಆಚಾರ್ಯ ಜುವೆಲ್ಲರ್ಸ್‌ ಗ್ಲೋ ಫೆಸ್ಟ್” – ಕೊನೆಯ ಮೂರು ದಿನ ಮಾತ್ರ ಬಾಕಿ

ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜುವೆಲ್ಲರ್ಸ್‌ ಸಂಸ್ಥೆಯು ತನ್ನ ಪುತ್ತೂರು, ಮೂಡಬಿದಿರೆ, ಸುಳ್ಯ, ಹಾಸನ ಮತ್ತು ಕುಶಾಲನಗರದ ಶಾಖೆಗಳಲ್ಲಿ ವಜ್ರಭರಣಗಳ ವಾರ್ಷಿಕ ಮಹೋತ್ಸವದ ಪ್ರಯುಕ್ತ ಗ್ರಾಹಕರಿಗೆ “ಗ್ಲೋ ಫೆಸ್ಟ್” ಅನ್ನು ಡಿ.15ರಂದು ಆಯೋಜಿಸಿದ್ದು, ಇನ್ನು ಕೇವಲ ಮೂರು ದಿನಗಳಲ್ಲಿ ಮುಕ್ತಾಯಗೊಳ್ಳುವ ಈ ಫೇಸ್ಟ್ ನಲ್ಲಿ ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಯೊಂದಿಗೆ ವಜ್ರಾಭರಣಗಳನ್ನು ಖರೀದಿಸುವ ಸುವರ್ಣ ಅವಕಾಶ...

“ಯುವ ಸಮುದಾಯ ರಾಷ್ಟ್ರದ ಸಂಪತ್ತು” : ಲೋಕೇಶ್ ತಂಟೆಪ್ಪಾಡಿ ; ಬೆಳ್ಳಾರೆ ಜ್ಞಾನದೀಪದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

“ಬಲಿಷ್ಠ ರಾಷ್ಟ್ರ ನಿರ್ಮಾಣದ ಕನಸು ಕಂಡ ಕ್ರಾಂತಿಕಾರಿ ಸಂತ ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಚಿಂತನೆಗಳನ್ನು ಯುವ ಸಮುದಾಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ದುಶ್ಚಟಗಳಿಂದ ದೂರವಿದ್ದು ಇತರರಿಗೂ ಜಾಗೃತಿ ಮೂಡಿಸುವ ಕಾರ್ಯ ಮಾಡಿದಾಗ ಯಾವುದೇ ರೋಗದ ನಿಯಂತ್ರಣ ಸಾಧ್ಯ” ಎಂದು ಸುಳ್ಯ ಅರೋಗ್ಯ ಇಲಾಖೆಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ...

ಬೆಳ್ಳಾರೆ :ಯುವರಕ್ತ ನಿಧಿ ಬೆಳ್ಳಾರೆ ಉದ್ಘಾಟನೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ; “ಯುವ ಸಮುದಾಯ ರಕ್ತದಾನದಲ್ಲಿ ಪಾಲ್ಗೊಂಡಾಗ ಜಾಗೃತ ಸಮಾಜ ನಿರ್ಮಾಣ ಸಾಧ್ಯ” : ಭಾಸ್ಕರ್ ರಾವ್

ಯುವರಕ್ತ ನಿಧಿ ಬೆಳ್ಳಾರೆ ಇದರ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವು ಬೆಳ್ಳಾರೆ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಜ.11ರಂದು ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಐ.ಪಿ.ಎಸ್ ಅಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿ ಕರ್ನಾಟಕ ಇದರ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಇಂತಹ ಒಂದು ಗ್ರಾಮೀಣ ಭಾಗದಲ್ಲಿ ಮೊದಲ ಬಾರಿ ರಕ್ತ...

ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಟಿ.ಶ್ಯಾಮ್ ಭಟ್ ಅವರಿಗೆ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಸನ್ಮಾನ

ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ವಿಶ್ರಾಂತ ಐ.ಎ.ಎಸ್ ಅಧಿಕಾರಿ ಡಾ. ಟಿ.ಶ್ಯಾಮ್ ಭಟ್ ಅವರಿಗೆ ಪ್ರತಿಷ್ಠಿತ ಮೈಸೂರು ವಿ.ವಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿದ ಪ್ರಯುಕ್ತ ಅವರ ಸ್ವಗೃಹದಲ್ಲಿ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ದೇವಸ್ಥಾನದ ಮೊಕ್ತೇಸರರು ಹಾಗೂ ಸಮಿತಿಯ ಅಧ್ಯಕ್ಷರಾದ ಎಂ.ಬಿ ಸದಾಶಿವ ರವರು ಸನ್ಮಾನಿತರ...

ರಂಗಮನೆಯಲ್ಲಿ ನಲಿದಾಡಿದ ವಿಶೇಷ ಚೇತನ ಮಕ್ಕಳು

ಸುಳ್ಯ ಹಳೆಗೇಟಿನಲ್ಲಿರುವ  ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರಕ್ಕೆ ಸುಳ್ಯ ತಾಲೂಕಿನ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿಶೇಷ ಅಗತ್ಯವುಳ್ಳ ಸುಮಾರು 40 ಮಕ್ಕಳು ತಮ್ಮ ಹೆತ್ತವರೊಂದಿಗೆ ಭೇಟಿ ನೀಡಿದರು.    ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯು ಹಮ್ಮಿಕೊಂಡ ವಿಶೇಷ ಅಗತ್ಯವುಳ್ಳ ಮಕ್ಕಳ  ಕ್ಷೇತ್ರ ಭೇಟಿಯ ಅಂಗವಾಗಿ ರಂಗಮನೆಗೆ ಬಂದ ಮಕ್ಕಳು ಅಲ್ಲಿನ ಕಲಾತ್ಮಕ ಶಿಲ್ಪಗಳನ್ನು ಮುಗ್ಧರಾಗಿ ವೀಕ್ಷಿಸಿದರು. ಮನೆಯೊಳಗೆ...
Loading posts...

All posts loaded

No more posts

error: Content is protected !!