Ad Widget

ಜೂನ್ 1 ರಿಂದ ದೇವರ ದರ್ಶನ ಭಾಗ್ಯ

ಲಾಕ್ಡೌನ್ ಬಳಿಕ ಸುಮಾರು ಎರಡು ತಿಂಗಳಿಂದ ಬಂದಾಗಿದ್ದ ಧಾರ್ಮಿಕ ಕೇಂದ್ರಗಳು ಜೂನ್ 1 ರಿಂದ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿಯಮಾನುಸಾರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಲವು ನಿಯಮಗಳನ್ನು ಪಾಲಿಸುವ ಮೂಲಕ ಭಕ್ತರು ದೇವರ...

ವೆಂಕಪ್ಪ ಗೌಡ, ಭರತ್ ಮುಂಡೋಡಿ, ಧನಂಜಯ ಅಡ್ಪಂಗಾಯ ಟಿ.ಎಂ.ಶಹೀದ್ ರನ್ನು ಬ್ಲಾಕ್ ಉಸ್ತುವಾರಿಗಳಾಗಿ ನೇಮಕ

ಸುಳ್ಯದ ಕಾಂಗ್ರೆಸ್ ನಾಯಕರಿಗೆ ವಿವಿಧ ಬ್ಲಾಕ್ ಗಳ ಉಸ್ತುವಾರಿಗಳಾಗಿ ನೇಮಕ ಮಾಡಿದ್ದಾರೆ. ಎಂ.ವೆಂಕಪ್ಪ ಗೌಡ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ, ಟಿ.ಎಂ.ಶಹೀದ್ ರಿಗೆ ವಿರಾಜಪೇಟೆ ಬ್ಲಾಕ್ ಉಸ್ತುವಾರಿ, ಭರತ್ ಮುಂಡೋಡಿಯವರಿಗೆ ಕಾರ್ಕಳ ಬ್ಲಾಕ್ ಉಸ್ತುವಾರಿ ಹಾಗೂ ಧನಂಜಯ ಅಡ್ಪಂಗಾಯರನ್ನು ಬೇಲೂರು ಬ್ಲಾಕ್ ಉಸ್ತುವಾರಿ ಗಳನ್ನಾಗಿ ನೇಮಿಸಿ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಮಾಡಿದ್ದಾರೆ.ಸುಳ್ಯ ಬ್ಲಾಕ್ ಕಾಂಗ್ರೆಸ್...
Ad Widget

ಅಪಾಯದ ಸ್ಥಿತಿಯಲ್ಲಿ ವಳಲಂಬೆಯಲ್ಲೊಂದು ಟ್ರಾನ್ಸ್ ಫಾರ್ಮರ್

ಗುತ್ತಿಗಾರು. ಮೇ.೨೮: ತುಕ್ಕು ಹಿಡಿದ ವಿದ್ಯುತ್ ತಂತಿಗಳು, ಯಾವುದೇ ಸೂಕ್ತ ಭದ್ರತೆ ಇಲ್ಲದ ಟ್ರಾನ್ಸ್ಫಾರ್ಮರ್ ಒಂದು ಅಪಾಯವನ್ನು ಆಹ್ವಾನಿಸುತ್ತಿದೆ. ಅಂದಹಾಗೆ ಈ ದೃಶ್ಯ ಕಂಡುಬರುತ್ತಿರುವುದು ವಳಲಂಬೆಯ ಕೂವೆಕ್ಕೋಡಿಯ ಆರ್ನೋಜಿ ಬಳಿಯ ಟಿ.ಸಿಯಲ್ಲಿ.ಸುಮಾರು ೨೦ ಮನೆಗಳಿಗೆ ಸಂಪರ್ಕ ಕಲ್ಪಿಸುವ ಆರ್ನೋಜಿಯ ಈ ಟ್ರಾನ್ಸ್ ಫಾರ್ಮರ್ ಕಳೆದ ಹಲವು ಸಮಯದಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಕಂಬದಲ್ಲಿ ಅಳವಡಿಸಲಾದ ಟಿ.ಸಿ ಸಂಪೂರ್ಣ...

ಮಾನಸಿಕ‌ ಖಿನ್ನತೆ, ಆತ್ಮಹತ್ಯೆಗೆ ಪ್ರೇರೇಪಿಸುತ್ತಿದೆ ಕೊರೊನಾ- ಬಲಿಯಾಗುತ್ತಿದ್ದಾರೆ ಶಂಕಿತರು, ಸೋಂಕಿತರು

ಕೊರೋನಾ ವೈರಸ್ ಕೇವಲ ಮನುಷ್ಯನ ದೇಹದ ಮೇಲೆ ಪರಿಣಾಮ ಬೀರಿ ಸಾವು ತರುತ್ತಿಲ್ಲ. ಬದಲಾಗಿ ಮನಸ್ಸಿನ ಮೇಲೂ ಪರಿಣಾಮ ಬೀರಿ ಅಪಾಯಕಾರಿಯಾಗಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಕೊರೋನಾ ಸೋಂಕು ತಗುಲಿದೆ ಎಂಬ ಆತಂಕದಲ್ಲೇ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರು ಹಾಗೂ ಬೀದರ್ ನಲ್ಲಿ ಯುವಕರು ಆತ್ಮಹತ್ಯೆಗೆ ಶರಣಾಗಿದ್ದು ಕೊರೋನಾ ಹೇಗೆ ಮಾನಸಿಕವಾಗಿ ಜನರ ಮೇಲೆ ಪರಿಣಾಮ...

ಪೆರಾಜೆಯಲ್ಲಿ ರಬ್ಬರ್ ಕಳವು ಪ್ರಕರಣದ ಆರೋಪಿಗಳ ಬಂಧನ

ರಬ್ಬರ್ ಶೀಟ್ ಮತ್ತು ಸ್ಕ್ರಾಪ್ ಕಳವು ಮಾಡಿದ್ದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರುಯಶಸ್ವಿಯಾಗಿದ್ದಾರೆ   ಮಡಿಕೇರಿ ತಾಲ್ಲೂಕು ಪಿ.ಪೆರಾಜೆ ಗ್ರಾಮದ ನಿವಾಸಿ ಆರ್.ಎ ಶರತ್ ಎಂಬುವವರು ಅವರ ರಬ್ಬರ್ ತೋಟದಿಂದ ಟ್ಯಾಪಿಂಗ್ ಮಾಡಿ ಸಂಗ್ರಹಿಸಿ ಇಟ್ಟಿದ್ದ 2,10,000 ರೂ ಬೆಲೆಬಾಳುವ 1300 ಕೆ.ಜಿ ರಬ್ಬರ್ ಶೀಟ್ ಮತ್ತು 900...

ಜೂನ್ 7 ರಂದು ಡಿಕೆಶಿ ಪದಗ್ರಹಣ -6500 ಪ್ರದೇಶಗಳಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಅವರು, ಜೂ.7 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪದಗ್ರಹಣ ಮಾಡಲಿದ್ದಾರೆ. ಇದೇ ಸಂದರ್ಭ ಏಕ ಕಾಲದಲ್ಲಿ ರಾಜ್ಯದ ಸುಮಾರು 6,500 ಪ್ರದೇಶಗಳಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಯ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ವೀಕ್ಷಕ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ....

ಬಹರೈನ್ ನಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವವು ನೀಡಿ ಮಾನವೀಯತೆ ಮೆರೆದ ಕೇರ್ ಅಂಡ್ ಶೇರ್ ಚಾರಿಟೇಬಲ್ ಟ್ರಸ್ಟ್

ಅರಬ್ ರಾಷ್ಟ್ರವಾದ ಬಹರೈನ್ ನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಕೇರ್ ಅಂಡ್ ಶೇರ್ ಚಾರಿಟೇಬಲ್ ಟ್ರಸ್ಟ್ ಸಹಾಯ ಹಸ್ತ ನೀಡಿ ಮಾನವೀಯತೆ ಮೆರೆದಿದೆ. ಕೋವಿಡ್ 19 ನಿಂದ ನಮ್ಮ ದೇಶ ಮಾತ್ರವಲ್ಲ ವಿದೇಶಗಳು ಕೂಡ ಕಷ್ಟಕ್ಕೀಡಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದರಲ್ಲೂ ವಿದೇಶದಲ್ಲಿ ಕಷ್ಟಕ್ಕೀಡಾಗಿರುವ ಭಾರತೀಯರಲ್ಲಿ ಹಲವರ ಪರಿಸ್ಥಿತಿ ಕೇಳಿದರೆ ಕಣ್ಣೀರು ಬರುವ...

ಸಾಮಾಜಿಕ ಅರಣ್ಯ ಇಲಾಖೆಯಿಂದ ರೈತರಿಗೆ ಸಹಾಯಧನ

ರೈತರು ತಮ್ಮ ಜಮೀನಿನಲ್ಲಿ ವಾಣಿಜ್ಯ ಬೆಳೆಗಳಾದ ಕೊಕ್ಕೋ ಅಡಿಕೆ ತೆಂಗು ಗೇರು ಕಾಳುಮೆಣಸು ಗಿಡಗಳನ್ನು ನಾಟಿ ಮಾಡಿದಲ್ಲಿ ಪ್ರತಿ ಗಿಡಕ್ಕೆ ಸಾಮಾಜಿಕ ಅರಣ್ಯ ಇಲಾಖೆಯಿಂದ ರೂ 14 ರಂತೆ ಸಹಾಯಧನವನ್ನು ನೀಡುತ್ತಿದ್ದು, ಆಸಕ್ತ ರೈತರು ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ. ಅರ್ಜಿ ಜೊತೆ ಆಧಾರ್ ಕಾರ್ಡ್, ಆರ್ ಟಿಸಿ, ಬ್ಯಾಂಕ್ ಪಾಸ್ ಬುಕ್ , ನಾಟಿ...

ಅಧಿಕಾರಿಗಳ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಬಲಿಯಾದ ಕೊಲ್ಲಮೊಗ್ರ ಬಿಎಸ್ಸೆನ್ನೆಲ್ ನೆಟ್ವರ್ಕ್

ಪ್ರಧಾನಮಂತ್ರಿಗೆ ಬರೆದ ಪತ್ರಕ್ಕೆ ಎಚ್ಚರಗೊಂಡ ಅಧಿಕಾರಿಗಳು ಕೊಲ್ಲಮೊಗ್ರ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಜನರ ಸಮಸ್ಯೆ ಕೇಳೋರೆ ಇಲ್ಲದಂತಾಗಿದೆ. ಇಂತಹ ಗ್ರಾಮೀಣ ಪ್ರದೇಶದಲ್ಲಿ ಇರುವ ಒಂದೇ ಆಗಿರುವುದರಿಂದ ಜನ ತುರ್ತು ಸೇವೆಗಳಿಗೆ ಪರದಾಡುವಂತ ಪರಿಸ್ಥಿತಿ ಬಂದಿದೆ. ಶಾಸಕರು ಸಂಸದರೂ ಬಿಎಸ್ಎನ್ ಎಲ್ ನೆಟ್ವರ್ಕ್ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಂತಿಲ್ಲ. ಮತ್ತೆ ಸ್ಥಳೀಯ ಜನಪ್ರತಿನಿಧಿಗಳು ಏನೂ...

ಸುಳ್ಯ ಪೇಟೆಯಲ್ಲಿ ಡ್ರೈವಿಂಗ್ ಮಾಡುತ್ತಿರುವಾಗಲೇ ಹೃದಯಾಘಾತ – ಮೃತ್ಯು

ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ನಿಧನರಾದ ಘಟನೆ ಇಂದು ಸುಳ್ಯದಲ್ಲಿ ನಡೆದಿದೆ. ಮಂಡೆಕೋಲು ಗ್ರಾಮದ ಕೇನಾಜೆಯ ಪೋಕರ್ ಕುಂಇ್ ಮೃತರಾದವರೆಂದು ತಿಳಿದು ಬಂದಿದೆ ಮಧ್ಯಾಹ್ನ ಸುಮಾರಿಗೆ ಪೋಕರ್ ಕುಂಇ್ ಅವರು ಕಾರಿನಲ್ಲಿ ಬರುತ್ತಿದ್ದಾಗ ಸುಳ್ಯ ಪೋಲೀಸ್ ಠಾಣೆ ಸಮೀಪ ಕಾರು ಸ್ಕೂಟಿಯೊಂದಕ್ಕೆ ತಾಗಿ ಮುಂದಕ್ಕೆ ಬಂದು‌ ಮತ್ತೊಂದು ಕಾರಿಗೆ ತಾಗಿ ನಿಂತಿತು. ಅವರು ಕಾರಿನ ಸ್ಟೇರಿಂಗ್ ಗೆ...
Loading posts...

All posts loaded

No more posts

error: Content is protected !!