Ad Widget

ದ ಕ ಇಂದು 183 ಮಂದಿಯಲ್ಲಿ ಸೋಂಕು ಪತ್ತೆ – 54 ಜನರ ಸೋಂಕಿನ ಮೂಲ ನಾಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 183 ಮಂದಿಗೆ ಕೊರೋನಾ ಸೋಂಕು ತಗಲಿದೆ . ಈ ಪೈಕಿ 54 ಮಂದಿಯ ಸೋಂಕಿನ ಮೂಲವನ್ನು ಪತ್ತೆಯಾಗಿಲ್ಲ. ಇದು ಆರೋಗ್ಯ ಇಲಾಖೆಯ ಹಾಗೂ ಜನಸಾಮಾನ್ಯರ ನಿದ್ರೆಗೆಡಿಸಿದೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 1542 ಕ್ಕೇರಿದೆ. ಇಂದು 3 ಮಂದಿ ತೀವ್ರ ನಿಗಾ ಘಟಕದಲ್ಲಿದ್ದರೇ, ಪುತ್ತೂರಿನ ಬಾಣಂತಿ ಸಹಿತ ಮೂವರು ಬಲಿಯಾಗಿದ್ದಾರೆ....

ಕೌಡಿಚ್ಚಾರ್ ಸೇತುವೆಯಿಂದ ಕೆಳಗೆ ಬಿದ್ದ ಕಾರು

ಕೌಡಿಚ್ಚಾರ್ ಸೇತುವೆಯಿಂದ ಕಾರೊಂದು ಕೆಳಗೆ ಬಿದ್ದಿರುವ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿ ದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಸಿದ್ದಿಕ್ ಪಲ್ಲತ್ತೂರು ಚಲಾಯಿಸುತ್ತಿದ್ದ ಆಲ್ಟೋ ಕಾರು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಚಾಲಕ ಹಾಗೂ ಜತೆಗಿದ್ದ ನಿಸಾರ್ ಬಾರೆಬೆಟ್ಟು ಅಲ್ಪಸ್ವಲ್ಪ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Ad Widget

ಅಮರ ಸುದ್ದಿ ವೆಬ್ಸೈಟ್ ವರದಿಗೆ ಸ್ಪಂದಿಸಿದ ಸುಳ್ಯ ತಹಶೀಲ್ದಾರ್

ಕುಸಿಯುವ ಭೀತಿಯಲ್ಲಿರುವ ಕುರುಂಜಿಗುಡ್ಡೆಯ ಕೆಲವು ಮನೆಗಳ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಅಮರ ಸುದ್ದಿ ವೆಬ್ ಸೈಟ್ ಬುಧವಾರ ಬೆಳಗ್ಗೆ ವರದಿಯೊಂದನ್ನು ಪ್ರಕಟಿಸಿತ್ತು ಇದಕ್ಕೆ ಸ್ಪಂದಿಸಿದ ನ.ಪಂ. ಮುಖ್ಯ ಅಧಿಕಾರಿ ಮತ್ತಡಿ, ಇಂಜಿನಿಯರ್ ಶಿವಕುಮಾರ್, ಸ್ಥಳೀಯ ನ.ಪಂ ಸದಸ್ಯರು ಕುರುಂಜಿ ಗುಡ್ಡೆ ಪರಿಸರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಹಶಿಲ್ದಾರ್ ರಿಗೆ ಮಾಹಿತಿ ನೀಡಿದ್ದರು. ಹಾಗೂ...

ಬಿದ್ದು ಸಿಕ್ಕಿದ ಬ್ಯಾಗನ್ನು ಮಾಲಕರಿಗೆ ಹಿಂತಿರುಗಿಸಿದ ಪಂಜ ಗ್ರಾ.ಪಂ.ಆಡಳಿತಾಧಿಕಾರಿ

ಜುಲೈ 7 ರಂದು ಬಳ್ಪದಿಂದ ಎಣ್ಣೆಮಜಲಿಗೆ ಹೋಗುವ ರಸ್ತೆಯಲ್ಲಿ ಬೆಲೆಬಾಳುವ ವಸ್ತುಗಳಿರುವ ಬ್ಯಾಗ್ ಸಿಕ್ಕಿತ್ತು. ಬ್ಯಾಗ್ ಸಿಕ್ಕಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಬ್ಯಾಗ್ ಕಳೆದುಕೊಂಡ ಬಳ್ಪ ಗ್ರಾಮದ ಎಣ್ಣೆಮಜಲು ಜೋಸೆಫ್ ಗೆ ತಿಳಿದು ಪಂಜ ಗ್ರಾಮ ಪಂಚಾಯತ್ ಗೆ ಬಂದು ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ಅವರಿಂದ ಪಡೆದುಕೊಂಡು ಕೃತಜ್ಞತೆ ಸಲ್ಲಿಸಿದರು.

ಅಮರ ಸುದ್ದಿ ವೆಬ್ಸೈಟ್ ವರದಿಗೆ ಸ್ಪಂದಿಸಿದ ನಗರ ಪಂಚಾಯತ್ ಮುಖ್ಯಧಿಕಾರಿ

ಅಮರ ಸುದ್ದಿ ವೆಬ್ಸೈಟ್ ವರದಿಯಲ್ಲಿ ಇಂದು ಬೆಳಿಗ್ಗೆ ಕುಸಿಯುವ ಭೀತಿಯಲ್ಲಿ ಕುರುಂಜಿ ಗುಡ್ಡೆ ಪರಿಸರದ ಕೆಲವು ಮನೆಗಳು , ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಪಂದಿಸಲು ವರದಿಯಲ್ಲಿ ಪ್ರಕಟಿಸಲಾಗಿತ್ತು . ವರದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ನ.ಪಂ. ಮುಖ್ಯ ಅಧಿಕಾರಿ ಮತ್ತಡಿ, ಇಂಜಿನಿಯರ್ ಶಿವಕುಮಾರ್, ಸ್ಥಳೀಯ ನ.ಪಂ ಸದಸ್ಯರು ಕುರುಂಜಿ ಗುಡ್ಡೆ ಪರಿಸರಕ್ಕೆ ಭೇಟಿ ನೀಡಿ...

ಸುಣ್ಣಮೂಲೆ ಭಾರಿ ಮಳೆಗೆ ಬಾವಿ ಕುಸಿತ

ಕನಕಮಜಲು ಗ್ರಾಮದ ಸುಣ್ಣಮೂಲೆ ಪರಿಸರದಲ್ಲಿ ಭಾರಿ ಮಳೆಗೆ ಸುಮಾರು ಐವತ್ತು ವರ್ಷ ಹಳೆಯ ಬಾವಿ ಕುಸಿತಗೊಂಡಿದೆ.ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಣ್ಣ ಮೂಲೆಯ ಗೌಸಿಯಾ ಮಂಝಿಲ್ ಇದರ ಆವರಣದಲ್ಲಿರುವ ಬಾವಿ ಜು.8 ರಂದು ಕುಸಿದಿದೆ. ಈ ಬಾವಿಯಿಂದ ಸುಮಾರು ಐವತ್ತು ವರ್ಷಗಳಿಂದ ನೀರನ್ನು ಬಳಸಿಕೊಳ್ಳುತ್ತಿದ್ದರು.

ಬಾಳಿಲ ಉಳ್ಳಾಕುಲು ಪ್ರಗತಿಬಂಧು ತಂಡ ರಚನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಬೆಳ್ಳಾರೆ ವಲಯದ ಬಾಳಿಲ ಒಕ್ಕೂಟದ ಕಾಯಾರ ಎಂಬಲ್ಲಿ ನೂತನವಾಗಿ ಶ್ರೀ ಉಳ್ಳಾಕುಲು ಪ್ರಗತಿ ಬಂಧು ತಂಡವನ್ನು ತಾಲ್ಲೂಕಿನ ಆಂತರಿಕ ಲೆಕ್ಕ ಪರಿಶೋಧಕರಾದ ಉಮೇಶ್ ರವರು ಉದ್ಘಾಟಿಸಿದರು .ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳಿಧರ ಎ, ಸೇವಾಪ್ರತಿನಿಧಿ ರತ್ನಾವತಿ ಉಪಸ್ಥಿತರಿದ್ದರು. ತಂಡದ ಪ್ರಬಂಧಕರಾಗಿ ವೇಣುಗೋಪಾಲ ಸಂಯೋಜಕರಾಗಿ ಸುಂದರ...

*ಅಪಾಯಕ್ಕೆ ಆಹ್ವಾನಿಸುತ್ತಿದೆ ಅಯ್ಯನಕಟ್ಟೆ ತಿರುವು*

        ಮಳೆಗಾಲ ಬಂತೆಂದರೆ ರಸ್ತೆಗಳ ಸ್ಥಿತಿ ಅಯೋಮಯ ವಾಗುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿ ಮಳೆಗಾಲಕ್ಕೂ ಮುನ್ನವೇ ರಸ್ತೆಯೊಂದು ಅಸಮರ್ಪಕ ಮೋರಿ ವ್ಯವಸ್ಥೆಯಿಂದ ಅಪಾಯದ ಹಂತ ತಲುಪಿದೆ. ಕಳಂಜ ಗ್ರಾಮದ ಅಯ್ಯನಕಟ್ಟೆ ತಿರುವು 'ಚೊಕ್ಕಾಡಿ ಕ್ರಾಸ್' ಈ ದುರಾವಸ್ಥೆಗೆ ತಲುಪಿದ ರಸ್ತೆ. ಈ ರಸ್ತೆಯು ಕಳಂಜ, ಅಮರಪಡ್ನೂರು ಮತ್ತು ಅಮರಮುಡ್ನೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದಲ್ಲದೆ, ಸುಳ್ಯಕ್ಕೆ ತಲುಪಲು...

ಆಧಾರ್ – ಪಾನ್ ಜೋಡಣೆಗೆ ಮುಂದಿನ ಮಾರ್ಚ್ ವರೆಗೆ ಅವಕಾಶ

ಆಧಾರ್ - ಪಾನ್ ಜೋಡಣೆಯ ಗಡುವಿನ ಕೊನೆಯ ದಿನವನ್ನು ಮುಂದಿನ ವರ್ಷದ ಮಾರ್ಚ್ ರವರೆಗೂ ಸರ್ಕಾರ ವಿಸ್ತರಿಸಿದೆ . ಕೋವಿಡ್ -19 ನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಸೋಮಾವಾರ ಮಾಹಿತಿ ನೀಡಿದೆ . ಇದಕ್ಕೂ ಮೊದಲು ಕೂಡ ಹಲವು ಬಾರಿ ಈ ಗಡುವನ್ನು ವಿಸ್ತರಿಸಲಾಗಿದ್ದು , ಇನ್ಮುಂದೆ ಮುಂದಿನ ಮಾರ್ಚ್ ರವರೆಗೆ...

ಕೊಲಮೊಗ್ರ ಮರ ಬಿದ್ದು ರಸ್ತೆ ಬಂದ್ – ತೆರವುಗೊಳಿಸಿದ ತುರ್ತು ಕಾರ್ಯಪಡೆ

ಇಂದು ಬೆಳಿಗ್ಗೆ ಕೊಲ್ಲಮೊಗ್ರದಿಂದ ಹರಿಹರ ಸಂಪರ್ಕಿಸುವ ರಸ್ತೆಗೆ ಮರಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಕೊಲ್ಲಮೊಗ್ರ ಗ್ರಾಮದಲ್ಲಿ ಮಳೆಗಾಲದ ತುರ್ತು ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ತಂಡ ರಚಿಸಲಾಗಿತ್ತು. ರಸ್ತೆ ಬಂದ್ ಆಗಿರುವ ವಿಚಾರ ತಿಳಿದ ಕೂಡಲೇ ತಕ್ಷಣ ಕಾರ್ಯಪ್ರವರ್ತರಾದ ತಂಡದವರು ಕೂಡಲೇ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮೆಸ್ಕಾಂ ಸಿಬ್ಬಂದಿಗಳಾದ ನಿತ್ಯಾನಂದ ಹಾಗೂ ಗಣೇಶ್...
Loading posts...

All posts loaded

No more posts

error: Content is protected !!