- Thursday
- August 6th, 2026
ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ರವರು ಜಾಲ್ಸೂರು ಗ್ರಾಮ ಪಂಚಾಯತ್ ಚುನಾವಣೆಯ ನಾಲ್ಕನೇ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಕೇಂದ್ರದಲ್ಲಿ ಏಜೆಂಟರ ಬಳಿ ಹೆಚ್ಚು ಜನ ಕುಳಿತುಕೊಳ್ಳಲು ಅವಕಾಶ ಮಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವುದೇ ಮತದಾರರು ಚುನಾವಣಾ ಕೇಂದ್ರದ ಒಳಗಡೆ ಏಜೆಂಟರ ಬಳಿ ಹೋಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು....
ಬಾಳಿಲ ಗ್ರಾ.ಪಂ.ನ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 5 ಮತಕೇಂದ್ರಗಳಲ್ಲಿ ಮತದಾರರು ಮತದಾನದಲ್ಲಿ ನಿರತರಾಗಿರುವ ದೃಶ್ಯ ಕಂಡುಬಂದಿತು. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಪಾಲಿಸಲಾಗಿತ್ತು.
ಜಾಲ್ಸೂರು ಗ್ರಾಮ ಪಂಚಾಯತ್ ಚುನಾವಣೆಯ ಎರಡನೇ ವಾರ್ಡ್ ಮತಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟೇಶ ನಡುಬೆಟ್ಟು, ತಿಲಕ ಎನ್ ಪಿ ಗೀತಾ ಚಂದ್ರಹಾಸ ಮತ್ತು ಬೆಂಬಲಿಗರೊಂದಿಗೆ ಮತಯಾಚಿಸಿದರು.
ಸಂಪಾಜೆ ಗ್ರಾಮ ಪಂಚಾಯತ್ ದರ್ಖಾಸ್ ,ಪೇರಡ್ಕ 3ನೇ ವಾರ್ಡ್ ನಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ,ವಿರಾಜಪೇಟೆ ಉಸ್ತುವಾರಿ ಟಿ.ಎಂ ಶಹೀದ್ ಮತಯಾಚನೆ ನಡೆಸಿದರು.
ಕೋಟೆಮುಂಡುಗಾರು ಸ.ಹಿ.ಪ್ರಾ.ಶಾಲೆಯಲ್ಲಿ ಕಳಂಜ ಗ್ರಾ.ಪಂ.ನ 2 ವಾರ್ಡುಗಳಿಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು , ಮತದಾರರು ಬಿರುಸಿನಿಂದ ಮತ ಚಲಾಯಿಸುತ್ತಿದ್ದಾರೆ. ಕೋವಿಡ್ ಸುರಕ್ಷತಾ ಕ್ರಮದೊಂದಿಗೆ ಒಟ್ಟು 3 ಮತಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಜಾಲ್ಸೂರು ಗ್ರಾಮ ಎರಡನೇ ವಾರ್ಡಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗುಲಾಬಿ ಕೆ ಎನ್, ಮುಜೀಬ್ ಪೈಚಾರ್, ವೇದ ಆರ್ ಶೆಟ್ಟಿ ಮತಯಾಚನೆಯಲ್ಲಿ ನಿರತರಾಗಿರುವುದು.
ಜಾಲ್ಸೂರು ಗ್ರಾಮದ ಬೊಳುಬೈಲು ಶಾಲಾ ಮತಗಟ್ಟೆಯಲ್ಲಿ ಹೆಚ್ಚಿನ ಕ್ಯೂ ಕಂಡು ಬರುತ್ತಿದ್ದು,ಸರತಿ ಸಾಲಿನಲ್ಲಿ ಬಂದು ಮತಚಲಾಯಿಸಿದರು.
ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕ್ಕಳ ಶಾಲೆಯ ಬೂತ್ ನಲ್ಲಿ ಕಾಂಗ್ರೆಸ್ ಬೆಂಬಲಿತರು ಕೊನೆಯ ಹಂತದ ಮತಯಾಚನೆ ನಡೆಸಿದರು.
Loading posts...
All posts loaded
No more posts
