ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೆ ಚುನಾವಣೆ ನಡೆಸಲು ಅಧಿಕಾರಿಗಳ ನೇಮಕ

ಗ್ರಾಮ ಪಂಚಾಯತ್ ಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಪ್ರಕಟವಾಗಿದ್ದು ಇನ್ನು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಾಗಿದೆ. ಈ ಚುನಾವಣೆ ನಡೆಸಲು 25 ಗ್ರಾಮ ಪಂಚಾಯತ್ ಗಳಿಗೆ ಅಧಿಕಾರಿಗಳ ನೇಮಕ ಮಾಡಲಾಗಿದ್ದು ಅವರು ಚುನಾವಣೆಯ ದಿನ ನಿಗದಿಪಡಿಸಲಿದ್ದಾರೆ.

ಮರ್ಕಂಜ : ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಗೆ ಮನವಿ

ಮರ್ಕಂಜದಲ್ಲಿ ಆರಂಭವಾಗಿರುವ ಗಣಿಗಾರಿಕೆ ಭಾರಿ ಸ್ಪೋಟಕಗಳನ್ನು ಬಳಸಿ ನಡೆಯುತ್ತಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಗಣಿಗಾರಿಕೆ ಮುಂದುವರೆದರೇ ಸಮೀಪದ ಮನೆ,ಪರಿಸರ ಹಾಗೂ ಕಲ್ಲು ಸಾಗಾಟದಿಂದ ರಸ್ತೆ ಕೂಡ ಹಾನಿಯಾಗಲಿದೆ ಹಾಗೂ ಭಾರಿ ಸ್ಪೋಟಕ ಬಳಸುವುದರಿಂದ ಕೆರೆ,ಬಾವಿ ಹಾಗೂ ಅಂತರ್ಜಲ ಕೂಡ ಬರಿದಾಗುವ ಭೀತಿ ಜನರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿ ಹೋರಾಟಕ್ಕಿಳಿದಿದ್ದಾರೆ. ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು...
Ad Widget

ಎನ್ನೆಂಸಿ: ಸಂಶೋಧನಾ ಘಟಕ ವತಿಯಿಂದ ಉಪನ್ಯಾಸ ಕಾರ್ಯಕ್ರಮ

ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇಲ್ಲಿನ ಸಂಶೋಧನಾ ಘಟಕ ವತಿಯಿಂದ "ಸಂಶೋಧನಾ ನೈತಿಕತೆ ಮತ್ತು ಕೃತಿಚೌರ್ಯ" ಎಂಬ ವಿಷಯದ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ನಡೆಯಿತು. ನಿಟ್ಟೆಯ ಪಾರ್ಮಸಟಿಕಲ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ವಿಜಯಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಪೂವಪ್ಪ ಕಣಿಯೂರು ಕಾರ್ಯಕ್ರಮದ ಅಧ್ಯಕ್ಷತೆ...

ಕಳಂಜ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ. 19 ರಂದು ಜರುಗಲಿದ್ದು ಇದರ ಪೂರ್ವಭಾವಿಯಾಗಿ ಇಂದು (ಪೆ. 01) ಕೊಳ್ಳಿ ಮುಹೂರ್ತ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಐನೆಕಿದು ಭಜನೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಐನೆಕಿದು ನವಜೀವನ ಸಮಿತಿಯ ವತಿಯಿಂದ ಪ್ರತೀ ತಿಂಗಳು ನಡೆಯುವ ಭಜನಾ ಕಾರ್ಯಕ್ರಮವು ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳಿಂದ ಜರುಗದೇ ಇದ್ದು ಇಂದು ಐನೆಕಿದು ನವಗ್ರಾಮದ ಜಲನಯನದ ಕಟ್ಟಡದಲ್ಲಿ ಭಜನಾ ಕಾರ್ಯಕ್ರಮವು ಜರುಗಿತು. ಮನೆ ಮನೆ ಭಜನೆ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆ ಯು ರಾಷ್ಟ್ರೀಯ ಸ್ವಯಸೇವಕ ಸಂಘ ಹಾಗೂ...

ಕೇನ್ಯ ಗ್ರಾಮದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಿಕೊಡುವಂತೆ ಸಚಿವ ಕೆ ಎಸ್ ಈಶ್ವರಪ್ಪರಿಗೆ ಮನವಿ

ಜ. 31ರಂದು ಪತ್ರಕರ್ತರ ಕೊಂಬಾರು ಗ್ರಾಮ ವಾಸ್ತವ್ಯ ಮತ್ತು ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ ಕರ್ನಾಟಕ ಸರ್ಕಾರದ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಕೆ ಎಸ್ ಈಶ್ವರಪ್ಪರವರನ್ನು ಕೇನ್ಯ ಗ್ರಾಮಸ್ಥರ ವತಿಯಿಂದ ಶಾಲು ಹೊದಿಸಿ ಗೌರವಿಸಿ, ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ಕೇನ್ಯ ಗ್ರಾಮದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಿಕೊಡುವಂತೆ ಗ್ರಾಮಸ್ಥರ ವತಿಯಿಂದ ಮನವಿ ಪತ್ರ...

ಭಾರತೀಯ ಭೂಸೇನೆಯಿಂದ ಸತೀಶ್ ಜಾಲುಮನೆ ನಿವೃತ್ತಿ

ಭಾರತೀಯ ಭೂ ಸೇನೆಯಲ್ಲಿ 17 ವರ್ಷಗಳ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿರುವ ಸತೀಶ್ ಜಾಲುಮನೆ ಜ. 31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಕೊಲ್ಲಮೊಗ್ರದ ಚಿನ್ನಪ್ಪ ಗೌಡ ಜಾಲುಮನೆ ಮತ್ತು ಭವಾನಿ ದಂಪತಿಗಳ ಪುತ್ರರಾದ ಸತೀಶ್ ಜಾಲುಮನೆಯವರು 2004 ರಲ್ಲಿ ಸೇನೆಗೆ ಸೇರಿ ದೇಶ ಸೇವೆ ಆರಂಭಿಸಿದ್ದರು. ಜಮ್ಮುಕಾಶ್ಮೀರ, ಉದಂಪುರ, ಶ್ರೀನಗರ, ಉತ್ತರ ಪ್ರದೇಶ, ಜಾನ್ಸಿ, ಪಂಜಾಬ್,...

ಭಾರತೀಯ ಭೂಸೇನೆಯಿಂದ ನಿತಿನ್ ನಂಗಾರು ನಿವೃತ್ತಿ

ಭಾರತೀಯ ಭೂ ಸೇನೆಯಲ್ಲಿ ಸುಮಾರು 17 ವರ್ಷಗಳ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿತಿನ್ ನಂಗಾರು ಜ. 31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಮಡಿಕೇರಿ ತಾಲೂಕು ಜೋಡುಪಾಲ ನಂಗಾರು ದಾಸಪ್ಪ ಮತ್ತು ಭಾನುಮತಿ ದಂಪತಿಗಳ ಪುತ್ರ ನಿತಿನ್ ನಂಗಾರು 2004 ರಲ್ಲಿ ಸೇನೆಗೆ ಸೇರಿ ದೇಶ ಸೇವೆ ಆರಂಭಿಸಿದ್ದರು. ಅಸ್ಸಾಂ, ಜಮ್ಮುಕಾಶ್ಮೀರ, ಲಡಾಕ್, ದೆಹಲಿ, ಸಿಕಂದರಬಾದ್,ಜಲಂದರ್,...

ಹರಿಹರ ಪಲ್ಲತ್ತಡ್ಕ : ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ

ಹರಿಹರ ಪಲ್ಲತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಇಂದು ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಮುಂಡಾಜೆಯವರು ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ ಅಂಗಣ, ಆಶಾ ಕಾರ್ಯಕರ್ತೆ ಪುಷ್ಪಾವತಿ, ಗ್ರಂಥಾಲಯ ಮೇಲ್ವಿಚಾರಕಿ...

ಕೊಲ್ಲಮೊಗ್ರ: ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ

ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವೈದ್ಯಾಧಿಗಳು, ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!