- Saturday
- August 8th, 2026
ದೇವಚಳ್ಳ ಗ್ರಾಮದ ಚಳ್ಳದಲ್ಲಿ ಜೀರ್ಣೋದ್ಧಾರಗೊಳ್ಳದೇ ಅವನತಿ ಹೊಂದಿದ್ದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಾಲ ಕೂಡಿಬಂದಿದ್ದು ಏ.24 ರಂದು ಭಕ್ತಾಭಿಮಾನಿಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ದೇವಚಳ್ಳ, ನೆಲ್ಲೂರುಕೆಮ್ರಾಜೆ, ಅಮರ ಮುಡ್ನೂರು ಗ್ರಾಮದ ದೇವಸ್ಥಾನ ಹಾಗೂ ಮನೆಗಳಲ್ಲಿ ಪ್ರಶ್ನೆ ಚಿಂತನೆ ನಡೆದ ಸಂದರ್ಭದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಆಗಬೇಕೆಂದು ಕಂಡುಬಂದಿತ್ತು. ಹಳ್ಳದಲ್ಲಿ ದೇವಸ್ಥಾನ ಇತ್ತೆಂಬ ಜಾಗದಲ್ಲಿ ಕೆರೆ ಹಾಗೂ...
ಗುತ್ತಿಗಾರು ಸರಕಾರಿ ಪ್ರೌಢಶಾಲೆಯ 1೦ನೇ ತರಗತಿ ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಹೋಗಿದ್ದ ವೇಳೆ ನಾಲ್ಕು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಹಾಗಾಗಿ ಇಂದು ನಡೆಯಬೇಕಾಗಿದ್ದ ಪ್ರೌಢಶಾಲಾ ಇಂಟರ್‌ನಲ್ ಪರೀಕ್ಷೆಯನ್ನು ರದ್ದುಗೊಳಿಸಿ ವಿದ್ಯಾರ್ಥಿಗಳಿಗೆ ರಜೆ ನೀಡಿದ ಘಟನೆ ವರದಿಯಾಗಿದೆ.ನಡುಗಲ್ಲು, ಕಂದ್ರಪ್ಪಾಡಿ, ಮೆಟ್ಟಿನಡ್ಕ ಹಾಗೂ ಚತ್ರಪ್ಪಾಡಿಯ ನಾಲ್ವರು ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಇತರ ವಿದ್ಯಾರ್ಥಿಗಳನ್ನು ಕೂಡಾ ತಪಾಸಣೆಗೊಳಪಡಿಸಲು...
ಪೈಚಾರು ಸೋಣಂಗೇರಿ ರಸ್ತೆ ಕಾಮಗಾರಿ ಭರದಿಂದ ನಡೆಯುತ್ತಿದ್ದು ಸೋಣಂಗೇರಿ ಸಮೀಪ ರಸ್ತೆ ಬದಿಯ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದು ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಮರ ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಮರದ ಬೇರುಗಳು ಕಾಣಿಸುತ್ತಿದ್ದು ಬೀಳುವ ಹಂತಕ್ಕೆ ತಲುಪಿದೆ. ಈ ಬಗ್ಗೆ ಅಧಿಕಾರಿಗಳು ಗಮನಿಸಿ ಅಪಾಯ ಸಂಭವಿಸುವ ಮೊದಲೇ ತೆರವುಗೊಳಿಸುವುದು ಒಳಿತು.
ನೆಲ್ಲೂರು ಕೆಮ್ರಾಜೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಕೊರತ್ತೋಡಿ ಇದರ ವತಿಯಿಂದ ನಡೆಯುವ ಮಕ್ಕಳ ಕುಣಿತ ಭಜನಾ ತರಬೇತಿಯು ಬೊಳ್ಳಾಜೆ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು(ಎ.18)ರಂದು ಉದ್ಘಾಟನೆಗೊಂಡಿತು.ಸುಳ್ಯ ತಾಲೂಕು ಭಜನಾ ಪರಿಷತ್ ನ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಭಜನಾ ಸಂಘದ ಅಧ್ಯಕ್ಷ ಅಚ್ಚುತ ಮುಂಡೋಕಜೆ...
ಕಲೆ, ಸಾಹಿತ್ಯ, ಸಾಮಾಜಿಕ , ಸಂಘಟನೆ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಸುಳ್ಯ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರನ್ನು ಅವರ ಹುಟ್ಟೂರಿನಲ್ಲಿ ಗೌರವಿಸಲಾಯಿತು.ಉಡುಪಿ ತಾಲೂಕಿನ ಮಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಶ್ರೀರಾಮಸತ್ರ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಡಾ| ಶ್ರೀಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಶ್ರೀ ರಾಘವಾನುಗ್ರಹ ಪ್ರಶಸ್ತಿ ನೀಡಿ ಸಮ್ಮಾನಿಸಿದರು. ಅದಮಾರು ಮಠದ ಶ್ರೀಶ್ರೀ ವಿಶ್ವಪ್ರಿಯತೀರ್ಥ...
ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ಚಾವಡಿ ನೇಮ ಮತ್ತು ಜಾತ್ರೋತ್ಸವ ಎ.17 ಹಾಗೂ 18ರಂದು ಜರುಗಿತು. ಎ.17ರಂದು ರಾತ್ರಿ ವಾಲಸಿರಿ ನಡೆಯಿತು. ಎ.18ರಂದು ಬೆಳಿಗ್ಗೆ ನಾಯರ್ ದೈವದ ನೇಮೋತ್ಸವ ನೆರವೇರಿತು. ಜಾತ್ರೋತ್ಸವದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದರು.
ಪಂಜ ಪರಿಸರದಲ್ಲಿ ಧಾರಾಕಾರವಾಗಿ ಸುರಿದ ಮಳೆ ಮತ್ತು ಭಯಾನಕ ಗಾಳಿಗೆ ರಸ್ತೆ ಮತ್ತು ಮನೆಗಳಿಗೆ ಬಿದ್ದ ಮರಗಳನ್ನು ವಿಪತ್ತು ನಿರ್ವಹಣಾ ಘಟಕ ಪಂಜ ವಲಯದ ಸದಸ್ಯರು ತೆರವು ಗೊಳಿಸಿದರು. ಪಂಜ ಪಂಚಲಿಂಗೇಶ್ವರ ದೇವಾಲಯದ ಹಿಂಭಾಗದಲ್ಲಿ ಬಿದ್ದ ಮರಗಳನ್ನು ತೆರವು ಗೊಳಿಸಿ ನಂತರ ಡಬ್ಬಲ್ ಕಟ್ಟೆಯ ರಸ್ತೆಯುದ್ದಕ್ಕೂ ಬಿದ್ದ ಬೃಹದಾಕಾರದ ಮರಗಳು ಕಡಿದು ಪಂಜದ ಕೂತ್ಕುಂಜ ಗ್ರಾಮದ...
ಕೊರೋನಾ ಸೋಂಕಿನ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಂಪೂರ್ಣ ನಿರ್ಲಕ್ಷ ವಹಿಸಿವೆ. ಕೊರೊನಾಗೆ ಸಂಬಂಧಪಟ್ಟ ನಿಯಮಗಳು ಕೇವಲ ಬಾಯಿಮಾತಿಗೆ ಮಾತ್ರ ಸೀಮಿತವಾಗಿದ್ದು ಕ್ರಿಯೆಯಲ್ಲಿ ಇಲ್ಲ ಎಂದು ಎಂ. ವೆಂಕಪ್ಪ ಗೌಡ ತಿಳಿಸಿದ್ದಾರೆ. ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ರಾಜ್ಯ ಚಿಂತಾಜನಕ ಸ್ಥಿತಿಯಲ್ಲಿದೆ. ನಗರ ಹಾಗೂ ಹಳ್ಳಿಗಳಲ್ಲಿ ಕೆಲವೆಡೆ ಇನ್ನೂ ಕೊರೊನಾದ ಗಂಭೀರತೆ ಅರ್ಥವಾಗಿಲ್ಲ. ಕಠಿಣ ಕ್ರಮ...
ನಾಲ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎ.22 ಹಾಗೂ 23 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಕ್ಷೇತ್ರ ಪಾಲಿನಿ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವದ ಅಂಗವಾಗಿ ಎ.16 ರಂದು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಭಟ್ ಇವರ ನೇತೃತ್ವದಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ,...
ಶ್ರೀ ಧರ್ಮಶಾಸ್ತ್ರ ಸೇವಾ ಟ್ರಸ್ಟ್ (ರಿ.) ಮುಪ್ಪೇರ್ಯ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾ ಮಹೋತ್ಸವ ಸಮಿತಿ ಬಾಳಿಲ ಮುಪ್ಪೇರ್ಯ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಅರ್ಚಕ ಶ್ರೀ ನರಸಿಂಹ ಭಟ್.ಆರ್ ಬಾಳಿಲ ಇವರ ನೇತೃತ್ವದಲ್ಲಿ ಮುಪ್ಪೇರ್ಯದಲ್ಲಿ ನಿರ್ಮಿಸಿದ ಶ್ರೀ ಅಯ್ಯಪ್ಪ ಸ್ವಾಮಿ ಗುಡಿಯಲ್ಲಿ...
Loading posts...
All posts loaded
No more posts
