Ad Widget

ಕಳಂಜ : ಆನಂದ ಪೂಜಾರಿ ಮಣಿಮಜಲು ನಿಧನ

ಕಳಂಜ ಗ್ರಾಮದ ಮಣಿಮಜಲು ನಿವಾಸಿ ಆನಂದ ಪೂಜಾರಿಯವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು, ಅ. 01 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ರತ್ನಾವತಿ, ಇಬ್ಬರು ಪುತ್ರರಾದ ಸೀತಾರಾಮ ಪೂಜಾರಿ ಹಾಗೂ ಉಮೇಶ್ ಪೂಜಾರಿ, ನಾಲ್ವರು ಪುತ್ರಿಯರಾದ ಶ್ರೀಮತಿ ಕುಸುಮಾವತಿ ಅಣ್ಣಿ ಪೂಜಾರಿ ಸಕಲೇಶಪುರ, ಶ್ರೀಮತಿ ಶಾಂಭವಿ ನೀಲಪ್ಪ...

ರೋಟರಿ ಜಿಲ್ಲಾ ಗವರ್ನರ್ ಆಗಿ ರೊ.ಜಿತೇಂದ್ರ ಎನ್.ಎ.

ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3181 ಝೋನ್-5 ರ 2021- 2022 ಸಾಲಿನ ಅಸಿಸ್ಟೆಂಟ್ ಗವರ್ನರ್ ಆಗಿ ಸುಳ್ಯ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪ್ರಸ್ತುತ ರೋಟರಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕರಾದ ರೊ. ಜಿತೇಂದ್ರ ಎನ್.ಎ. ರವರನ್ನು ನಿಯೋಜಿತ ಜಿಲ್ಲಾ ಗವರ್ನರ್ ರವೀಂದ್ರ ಭಟ್ ಆಯ್ಕೆ ಮಾಡಿರುತ್ತಾರೆ. ಪ್ರಸ್ತುತ ಝೋನಲ್ ಲೆಫ್ಟಿನೆಂಟ್ ಆಗಿ ಕರ್ತವ್ಯ...
Ad Widget

ಉಬರಡ್ಕ ಕೋವಿಡ್ ಟೆಸ್ಟ್ – ಎಲ್ಲಾ ವರದಿ ನೆಗೆಟಿವ್

ಉಬರಡ್ಕ ಗ್ರಾ.ಪಂ.ವತಿಯಿಂದ ಇಂದು ಕೋವಿಡ್ -19 ಟೆಸ್ಟ್ ಪಂಚಾಯತ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪರೀಕ್ಷೆಗೊಳಪಟ್ಟ ಎಲ್ಲಾ 45 ಜನರ ವರದಿ ನೆಗೆಟಿವ್ ಬಂದಿದೆ.

ವಿಖಾಯ ರಕ್ತದಾನಿ ಬಳಗಕ್ಕೆ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಶಂಸೆ

ರಾಷ್ಟ್ರೀಯ ರಕ್ತ ದಾನ ದಿನದ ಅಂಗವಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಕ್ಟೋಬರ್ 01 2020 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ ಕೆ ಎಸ್ ಎಸ್ ಎಫ್ ವಿಖಾಯ ರಕ್ತದಾನಿಗ ಬಳಗದ ಕಾರ್ಯವೈಕರಿಯನ್ನು ಶ್ಲಾಘಿಸಿ ಪ್ರಶಂಸನಾ ಪತ್ರ ವನ್ನು ಬ್ಯಾಂಕ್ ಆಫ್ ಬರೋಡದ ವಿಭಾಗೀಯ ಮುಖ್ಯಸ್ಥೆ ಶ್ರೀಮತಿ ಸುಜಯಾ ವಿ. ಶೆಟ್ಟಿ...

ಬಿಜೆಪಿ ಸುಳ್ಯ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ.1ರಂದು ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಸುಳ್ಯ ಮಂಡಲ ಅಧ್ಯಕ್ಷ ಹರೀಶ ಕಂಜಿಪಿಲಿ ವಹಿಸಿದ್ದರು. ವೇದಿಕೆಯಲ್ಲಿ ಮಾನ್ಯ ಶಾಸಕ ಎಸ್ ಅಂಗಾರ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ. ನಾರಾಯಣ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೋಗಿ...

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿಸ್ತೃತ ಕಟ್ಟಡ ಉದ್ಘಾಟನೆ – ಮೌಲ್ಯಯುತ ಶಿಕ್ಷಣಕ್ಕೆ ಸರಕಾರದಿಂದ ಪ್ರೋತ್ಸಾಹ : ಮೀನಾಕ್ಷಿ ಶಾಂತಿಗೋಡು

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಆರ್.ಐ.ಡಿ.ಎಫ್ ನಬಾರ್ಡ್ 25 ಯೋಜನೆಯಡಿ ರೂ.119 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಲೇಜಿನ ವಿಸ್ತೃತ ಕಟ್ಟಡದ ಉದ್ಘಾಟನಾ ಸಮಾರಂಭವು ಅ.01 ರಂದು ನಡೆಯಿತು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ವಿಸ್ತೃತ ಕಟ್ಟಡದ ಉದ್ಘಾಟನೆಗೈದರು.ಶಾಸಕ ಎಸ್.ಅಂಗಾರ ನಾಮಫಲಕ ಅನಾವರಣಗೊಳಿಸಿದರು. ನಂತರ...

ರೋಟರಿ ತರಬೇತಿ ಕಾರ್ಯಗಾರದ ಜಿಲ್ಲಾ ಸಂಚಾಲಕರಾಗಿ ರೊ.ಡಾ.ಕೇಶವ ಪಿ.ಕೆ

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಜಿಲ್ಲೆಗಳನ್ನೊಳಗೊಂಡ ಸುಮಾರು 100 ಕ್ಕೂ ಮಿಕ್ಕಿ ರೋಟರಿ ಕ್ಲಬ್ ಗಳ ರೋಟರಿ ಜಿಲ್ಲೆ 3181 ಇದರ 2021- 2022 ಸಾಲಿನ ನಿಯೋಜಿತ ಅಧ್ಯಕ್ಷ ಕಾರ್ಯದರ್ಶಿಗಳ ತರಬೇತಿ ಕಾರ್ಯಾಗಾರದ (PETS & SETS) ಜಿಲ್ಲಾ ಸಂಚಾಲಕರಾಗಿ ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರೊ.ಡಾ.ಕೇಶವ PK ಯವರು ಸರ್ವಾನುಮತದಿಂದ ಆಯ್ಕೆಗೊಂಡಿರುತ್ತಾರೆ.ಸುಳ್ಯ ರೋಟರಿಯ...

ವಿಹಿಂಪ ಬೆಳ್ಳಾರೆಯ ದರ್ಖಾಸು ಶಾಖೆ ಉದ್ಘಾಟನೆ – ಸಂಯೋಜಕರಾಗಿ ಹರೀಶ್ ಚೂಂತಾರು

ವಿಶ್ವ ಹಿಂದೂ ಪರಿಷದ್ ಭಜರಂಗದಳ, ವಾಲ್ಮೀಕಿ ಶಾಖೆ ಬೆಳ್ಳಾರೆ ಇದರ ಉಪಸಮಿತಿ ದರ್ಖಾಸು ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಸೆ.30 ರಂದು ಶ್ರೀ ವೆಂಕಟರಮಣ ದೇವಸ್ಥಾನದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ಪ್ರಖಂಡದ ವಿಶ್ವಹಿಂದೂ ಪರಿಷದ್ ಅಧ್ಯಕ್ಷರಾದ ಸೋಮಶೇಖರ ಪೈಕ, ಭಜರಂಗದಳ ಜಿಲ್ಲಾ ಸಹಸಂಯೋಜಕ ಲತೀಶ್ ಗುಂಡ್ಯ, ಭಜರಂಗದಳ ಸಂಯೋಜಕ್ ನಿಕೇಶ್ ಉಬರಡ್ಕ, ಸುಳ್ಯ ವಿಹಿಂಪ ಸಹ...

ಉಬರಡ್ಕಮಿತ್ತೂರು ಸಹಕಾರಿ ಸಂಘದ ಮ್ಯಾನೇಜರ್ ನಿತ್ಯಾನಂದ ಎನ್ ರವರಿಗೆ ಬೀಳ್ಕೊಡುಗೆ

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಿತ್ಯಾನಂದ ಎನ್. ರವರಿಗೆ ಬೀಳ್ಕೊಡುಗೆ ಸಮಾರಂಭವು ಸೆ.30 ರಂದು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ ವಹಿಸಿದ್ದರು.ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷರಾದ ಭಾಸ್ಕರ ಯು.ವಿ, ನಿರ್ದೇಶಕರುಗಳಾದ ರತ್ನಾಕರ ಗೌಡ ಬಳ್ಳಡ್ಕ, ಹರೀಶ್...

ಗಾಂಧಿ ಜಯಂತಿಯ ಪ್ರಯುಕ್ತ ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸುಳ್ಯ ಮಂಡಲ ಮತ್ತು ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಅ.2 ರಂದು ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಪೂರ್ವಾಹ್ನ 7.30ಕ್ಕೆ ಸರಿಯಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಯವರ ಜನ್ಮದಿನ ಗಾಂಧಿ ಜಯಂತಿ ಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ ಕಾರ್ಯಕ್ರಮವಾದ ಸ್ವಚ್ಛ ಭಾರತ್ ಕಾರ್ಯಕ್ರಮ ನಡೆಯಲಿದೆ....
Loading posts...

All posts loaded

No more posts

error: Content is protected !!