Ad Widget

ಕೇನ್ಯ : ಹಿಂದೂ ಜಾಗರಣಾ ವತಿಯಿಂದ ಸ್ವಚ್ಛತಾ ಅಭಿಯಾನ

ಹಿಂದೂ ಜಾಗರಣಾ ವೇದಿಕೆ ಶ್ರೀ ಮಹಾವಿಷ್ಣು ಘಟಕ ಕಣ್ಕಲ್, ಕೇನ್ಯ ಇದರ ವತಿಯಿಂದ ಶ್ರೀ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಪರಿಕಲ್ಪನೆಯಂತೆ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನ ಕೇನ್ಯದಲ್ಲಿ ಅ. 02 ರಂದು ನಡೆಯಿತು. ಕೇನ್ಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳಿಗ್ಗೆ ಗಂಟೆ 9.00ರಿಂದ ಸಂಜೆ ಗಂಟೆ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಎರಡೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸ್ಕೌಟ್ ಗೈಡ್ ಶಿಕ್ಷಕರನ್ನು ಒಳಗೊಂಡಂತೆ ಮಹಾತ್ಮ ಗಾಂಧಿ ಜನ್ಮದಿನಾಚರಣೆಯನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಬಿಇಒ ಮಹದೇವ ಎಸ್ ಪಿ ಇವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಯಿತು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಗೌರವ ಸಲ್ಲಿಸಲಾಯಿತು....
Ad Widget

ಅ.12 ರಿಂದ ಪಂಜದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಪ್ರಧಾನಿ ಮೋದಿಯವರ ಆಲೋಚನೆಯಾದ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಪೂರಕವಾಗಿ ಪಂಜದ ಸುತ್ತ ಮುತ್ತಲಿನ ಜನರಿಗೆ ಸಹಕಾರಿಯಾಗಲೆನ್ನುವ ಉದ್ದೇಶದಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ದ ವಠಾರದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಅ.12 ರಿಂದ 17 ರ ವರೆಗೆ ನಡೆಯಲಿದೆ. ಒಬ್ಬ ವ್ಯಕ್ತಿಗೆ ಒಂದು ವಿಷಯದ ಬಗ್ಗೆ ಮಾತ್ರ ತರಬೇತಿ ಪಡೆದುಕೊಳ್ಳಲು ಅವಕಾಶ. ತರಬೇತಿ...

ಕಳಂಜ ಕೋವಿಡ್ ಟೆಸ್ಟ್ – ಎಲ್ಲರ ವರದಿ ನಗೆಟಿವ್

ಕಳಂಜ ಗ್ರಾಮಸ್ಥರಿಗಾಗಿ ವಿಶೇಷ ಕೋವಿಡ್ ತಪಾಸಣೆಯನ್ನು ಕಳಂಜ ವಿಷ್ಣುನಗರದ ಅಕ್ಷರ ಕರಾವಳಿ ಕಟ್ಟಡದಲ್ಲಿ ಅ. 02 ರಂದು ನಡೆಸಲಾಯಿತು. ಸ್ವಯಂಪ್ರೇರಿತರಾಗಿ 43 ಜನ ತಪಾಸಣೆಗೆ ಒಳಗಾಗಿದ್ದು ಎಲ್ಲರ ವರದಿ ನೆಗೆಟಿವ್ ಬಂದಿರುವುದಾಗಿ ತಿಳಿದುಬಂದಿದೆ.

ಗೂನಡ್ಕ : ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಕಾರನ್ನು ಬೆನ್ನಟಿ ಹಿಡಿದ ಅರಂತೋಡಿನ ಯುವಕರು

ಕಲ್ಲುಗುಂಡಿಯ ಗೂನಡ್ಕ ಬಳಿ ಬೈಕೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕಾರ್ ಒಂದನ್ನು ಮರ್ಕಂಜದಲ್ಲಿ ಲಕ್ಷ್ಮೀಶ್ ಪಾಲ್ತಾಡು ತಡೆಹಿಡಿದು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ. ಇದಕ್ಕೆ ಅರಂತೋಡಿನ ರಿಕ್ಷಾ ಚಾಲಕ ಮಾಲಕರಾದ ವಿಜಯಕುಮಾರ್ ನಾಯ್ಕ್ ಮತ್ತು ಮುರಳೀಧರ ಸೂoತೋಡು ಸಹಕರಿಸಿದ್ದಾರೆ. ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ದಿ.ಬಾಲಚಂದ್ರ ಕಳಗಿ ಸ್ಮರಣಾರ್ಥ ಸ್ವಯಂಪ್ರೇರಿತ ರಕ್ತದಾನ ಶಿಬಿರ – 38 ಜನ ರಕ್ತದಾನ

ಜಿಲ್ಲಾ ಪಂಚಾಯತ್ ಕೊಡಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಕೊಡಗು, ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ ಕೊಡಗು, ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು, ಗ್ರಾಮ ಪಂಚಾಯತ್ ಸಂಪಾಜೆ, ಪೆರಾಜೆ, ಚೆಂಬು, ಮದೆನಾಡು, ಪಯಸ್ವಿನಿ ಸಹಕಾರಿ ಸಂಘ ಸಂಪಾಜೆ ಹಾಗೂ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಶ್ರೀ ಬಾಲಚಂದ್ರ...

ಕಳಂಜ : ಗಾಂಧಿಜಯಂತಿ ಪ್ರಯುಕ್ತ ವಿಶೇಷ ಗ್ರಾಮಸಭೆ

ಗಾಂಧಿ ಜಯಂತಿ ಅಂಗವಾಗಿ ಕಳಂಜ ಗ್ರಾ.ಪಂ.ನಲ್ಲಿ ವಿಶೇಷ ಗ್ರಾಮಸಭೆ ಅ.02 ರಂದು ನಡೆಯಿತು. ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಯಶೋಧ ಮಣಿಮಜಲು ಗ್ರಾಮಸಭೆಯನ್ನು ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್.ಕೆ.ಆರ್ ಸ್ವಾಗತಿಸಿದರು. ನಂತರ ಅವರು ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ವಿವರ ನೀಡಿ, ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಗ್ರಾ.ಪಂ. ಕಾರ್ಯದರ್ಶಿ ಪದ್ಮಯ್ಯ.ಕೆ, ಗ್ರಾ.ಪಂ. ಮಾಜಿ ಸದಸ್ಯ...

ಅ.11ರಿಂದ ಅಡ್ಕಾರ್ ನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯ ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವಠಾರದಲ್ಲಿ ಅ.11ರಿಂದ 16ರವರೆಗೆ ಜರುಗಲಿದೆ.ಆತ್ಮನಿರ್ಭರ ಭಾರತಕ್ಕಾಗಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ಸುಳ್ಯ ತಾಲೂಕಿನಲ್ಲಿ ಯಶಸ್ವಿಯಾಗಿ ಸುಳ್ಯ ಮತ್ತು ವಳಲಂಬೆಯಲ್ಲಿ ನಡೆದಿದೆ. ಇದೀಗ ಮೂರನೇ ಹಂತದ ತರಬೇತಿ ಶಿಬಿರವು ನಡೆಯಲಿದೆ.ಶಿಬಿರದಲ್ಲಿ ಕೃಷಿ...

ಕೊಲ್ಲಮೊಗ್ರು ಗಾಂಧಿಜಯಂತಿ ಹಾಗೂ ಉದ್ಯೋಗಖಾತ್ರಿ ಕ್ರಿಯಾಯೋಜನೆ ತಯಾರಿ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವತಿಯಿಂದ ಇಂದು ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸ್ವಚ್ಯೋತ್ಸವ ನಿತ್ಯೋತ್ಸವ ಮಾಸಾಚರಣೆ , ಹಾಗೂ ಸ್ವಚ್ಚತೆಯ ಬಗ್ಗೆ ಪ್ರತಿಜ್ಞಾವಿಧಿ ನೆರವೇರಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ‍ ರೈತರ ಕಾಮಗಾರಿಗಳ ಕ್ರಿಯಾ ಯೋಜನೆಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಸುಳ್ಯ...

ಐವರ್ನಾಡು ಗ್ರಾ.ಪಂ ವತಿಯಿಂದ ಗಾಂಧಿಜಯಂತಿ ಆಚರಣೆ – ಬೃಹತ್ ಸ್ವಚ್ಛತಾ ಅಭಿಯಾನ

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಮತ್ತು ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಅ.2 ರಂದು ನಡೆಯಿತು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥ ಧ್ವಜಾರೋಹಣ ನೆರವೇರಿಸಿದರು.ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Loading posts...

All posts loaded

No more posts

error: Content is protected !!