- Saturday
- March 14th, 2026
ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಬೇಡಿಕೆ ಬಗ್ಗೆ ಗಮನವಹಿಸುವಂತೆ ಶಾಸಕ ಆಯನೂರು ಮಂಜುನಾಥ್ ಬರೆದ ಪತ್ರಕ್ಕೆ ಸಿಎಂ ಯಡಿಯೂರಪ್ಪ ಪ್ರತಿಸ್ಪಂದಿಸಿದ್ದಾರೆಂದು ತಿಳಿದುಬಂದಿದೆ ತಿಳಿದುಬಂದಿದೆ. ಕೂಡಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲುಗೆ ಈ ಬಗ್ಗೆ ಗಮನ ಹರಿಸಿ, ಸೂಕ್ತ ಕ್ರಮವಹಿಸುವಂತೆ ಸೂಚಿಸಿದ್ದಾರೆ...
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸುಳ್ಯ ಶಾಖೆ ಗೆ ಇಂದು ಜಿಲ್ಲಾಧ್ಯಕ್ಷರು ಭೇಟಿ ನೀಡಿದರು. ಜಿಲ್ಲಾಧ್ಯಕ್ಷರಾದ ಕೃಷ್ಣ ಕೆ.ಪಿ., ಜಿಲ್ಲಾ ಕಾರ್ಯದರ್ಶಿ ನವೀನ್, ರಾಜ್ಯ ಪರಿಷತ್ ಸಂಘಟನಾ ಕಾಯದರ್ಶಿಯ ಶ್ರೀಮತಿ ಶರ್ಲಿ, ಉಪಸ್ಥಿತರಿದ್ದರು. ಸಂಘದ ಕಾರ್ಯ ಚಟುವಟಿಕೆಗಳ ಅವಲೋಕನ ನಡೆಸಿದ ಅವರು ಸುಳ್ಯ ಶಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯವರನ್ನು...
ಅರಂತೋಡಿನಲ್ಲಿ ಚಂದ್ರಪ್ರಕಾಶ್ ದೇರಾಜೆ ಎಂಬವರಿಗೆ ಸೇರಿದ ಬೆಲೆ ಬಾಳುವ ಮೊಬೈಲ್ ಫೋನ್ ಇಂದು ಮಧ್ಯಾಹ್ನ ಕಳೆದು ಹೋಗಿತ್ತು. ಇದು ರಸ್ತೆ ಬದಿಯಲ್ಲಿ ಬಾಲಕರಿಗೆ ಬಿದ್ದು ಸಿಕ್ಕಿದೆ. ಈ ವೇಳೆ ಮೊಬೈಲ್ ಗೆ ವಾರಿಸುದಾರರು ಬೇರೆ ಫೋನ್ ನಿಂದ ಕಾಲ್ ಮಾಡಿದ್ದಾರೆ. ಬಾಲಕರು ಫೋನ್ ರಿಸೀವ್ ಮಾಡಿ ಮೊಬೈಲ್ ಬಿದ್ದು ಸಿಕ್ಕಿರುವ ಬಗ್ಗೆ ಅವರಿಗೆ ತಿಳಿಸಿ ಅರಂತೋಡಿನ...
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಅ.3ರಂದು ಭೇಟಿ ನೀಡಿದರು .ಸಚಿವರನ್ನು ಅರಂತೋಡಿನಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ,ಉಪಾಧ್ಯಕ್ಷ ದಯಾನಂದ ಕುರುಂಜಿ, ಸಹಕಾರಿ ಸಂಘದ ಉಪನಿಬಂಧಕ ಪ್ರವೀಣ್ ನಾಯಕ್, ಸುಳ್ಯ ತಾಲ್ಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸಹಕಾರಿ ಸಂಘಗಳ ಯೂನಿಯನ್ ಅಧ್ಯಕ್ಷ ರಮೇಶ್...
ಉತ್ತರ ಪ್ರದೇಶದಲ್ಲಿ ನಡೆದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಎಬಿವಿಪಿ ಕುಕ್ಕೇ ಸುಬ್ರಮಣ್ಯದ ವತಿಯಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಪದ್ಮಕುಮಾರ್ ಇವರು ಪ್ರಾಸ್ತಾವಿಕ ಮಾತನಾಡಿ ಕೊಲೆ ನಡೆಸಿದವರ ವಿರುದ್ದ ಕೂಡಲೇ ಸೂಕ್ತ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಹಿರಿಯ ಕಾರ್ಯಕರ್ತರಾದ ಬುಕ್ಷಿತ್ ನೀರ್ಪಾಡಿ, ವಿದ್ಯಾರ್ಥಿ...
ಬೆಳ್ಳಾರೆ ಸಮೀಪದ ತಂಬಿನಮಕ್ಕಿಯಲ್ಲಿ ಶ್ರೀ ಪ್ರೆಶ್ ಪಿಶ್ ಸ್ಟಾಲ್ ಅ.03 ರಂದು ಶುಭಾರಂಭಗೊಂಡಿತು. ಇಲ್ಲಿ ತಾಜಾ ಹಸಿ ಮೀನುಗಳು , ಕಡಲ ಉತ್ಪನ್ನಗಳು ಹಾಗೂ ಒಣ ಮೀನುಗಳು ಲಭ್ಯವಿರಲಿದೆ ಎಂದು ಮಾಲಕರಾದ ಸಚಿನ್ ಬಸ್ತಿಗುಡ್ಡೆ ತಿಳಿಸಿದ್ದಾರೆ.
ಒಕ್ಕಲಿಗರ ಗೌಡರ ಯುವಘಟಕ ಮಂಗಳೂರು ಇವರ ಆಶ್ರಯದಲ್ಲಿ ಮಹಾತ್ಮ ಗಾಂಧೀಜಿ ಅವರ 151 ನೆ ಜನ್ಮದಿನಾಚರಣೆ ಅಂಗವಾಗಿ ಕದ್ರಿ ಪದವು ಶಾಲಾ ಹೊರ & ಒಳ ಆವರಣದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಯುವ ಘಟಕದ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಮಾತನಾಡಿ ಗಾಂಧೀಜಿಯವರ ಸರಳತೆ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಮತ್ತು ಅವರ ಪರಿಕಲ್ಪನೆಗೆ...
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನ, ಮತ್ತು ಸೇವಾ ಭದ್ರತೆಗೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು ಸುಳ್ಯ ಸಮಿತಿ ವತಿಯಿಂದ ವಿವಿಧ ರೀತಿಯ ಪ್ರತಿಭಟನೆ ಹೋರಾಟಗಳು ನಡೆಯುತ್ತಿದೆ. ಸುಮಾರು ಹತ್ತು ದಿನಗಳಿಂದ ಈ ಹೋರಾಟಗಳು...
ಪಂಜ ಲಯನ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಪಂಜದ ಕೂತ್ಕುಂಜ ಕಾಲೋನಿಯಲ್ಲಿ ಸ್ವಚ್ಛತಾ ಸಂಕಲ್ಪ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬ್ ನ ಅಧ್ಯಕ್ಷರಾದ ಲಯನ್ ಕುಮಾರಸ್ವಾಮಿಯವರು ವಹಿಸಿದ್ದರು. ಮಾಜಿ ಪಂಚಾಯತ್ ಅಧ್ಯಕ್ಷ ಲಯನ್ ಕಾರ್ಯಪ್ಪ ಚಿದ್ಗಲ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಲಯನ್ ಬಾಲಕೃಷ್ಣ ಕುದ್ವ, ಕೋಶಾಧಿಕಾರಿ ಲಯನ್ ಕರುಣಾಕರ ಎಣ್ಣೆಮಜಲ್,ಐಪಿಪಿ ಲಯನ್ ಸುರೇಶ್...
ದೇವಚಳ್ಳ ಗ್ರಾಮದ ಅಡ್ಡನಪಾರೆ ದಿ.ಬಟ್ಯ ಅಜಲ ರ ಪುತ್ರ ಕುಸುಮಾಧರ ಅಡ್ಡನಪಾರೆ ಅಲ್ಪಕಾಲದ ಅಸೌಖ್ಯದಿಂದ ಅ.2 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಜ್ವರ, ವಾಂತಿ ಭೇದಿ ಕಾಣಿಸಿಕೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಮತ್ತೆ ಉಲ್ಬಣಿಸಿ ಮಂಗಳೂರಿನ ಖಾಸಗಿ ಆಸತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಕಾರಿಯಾಗಲಿಲ್ಲವೆಂದು ತಿಳಿದುಬಂದಿದೆ. ಅವರಿಗೆ 32 ವರ್ಷ ವಯಸ್ಸಾಗಿತ್ತು....
Loading posts...
All posts loaded
No more posts
